ಪುಟ:Kanakadasa darshana Vol 1 Pages 561-1028.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೧೮ ಕನಕ ಸಾಹಿತ್ಯ ದರ್ಶನ-೧ ಕನ್ನಡ ಸಾಹಿತ್ಯದಲ್ಲಿ ಕನಕದಾಸರ ಸ್ಥಾನ ಅದ್ವಿತೀಯ ಎಂಬುದು ನಿಜವಾದರೂ ಅನಂತರ ಕವಿಗಳ ಸ್ಪೋಪಜ್ಞತೆಯನ್ನು ತಳ್ಳಿಹಾಕುವಂತಿಲ್ಲ. ಕನಕದಾಸರು ಕುಮಾರವ್ಯಾಸನ ಪ್ರಭಾವಕ್ಕೆ ಪ್ರತ್ಯಕ್ಷವಾಗಿಯೋಪರೋಕ್ಷವಾಗಿಯೋ ಒಳಗಾಗಿದ್ದರೂ ಅವನು ತನ್ನ ಸ್ವಂತಿಕೆಯನ್ನು ಮೆರೆದಿದ್ದಾನೆ. ಅದನ್ನು ಕನಕದಾಸರ ಹರಿಭಕ್ತಿಸಾರ'ದಂತೆಯೇ ಅವರ 'ನಳಚರಿತ್ರೆಯಲ್ಲಿಯೂ ಕಾಣಬಹುದು. ಪಂಪ, ಕುಮಾರವ್ಯಾಸರಂತಹ ಕವಿಗಳನ್ನು ಅನುಕರಿಸುವುದು ಸುಲಭವಲ್ಲ-ತದ್ರೂ ಅಲ್ಲ. ಆದರೆ ಹಾಗೆ ಅನುಕರಿಸಿ ತಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳುವುದು ದೊಡ್ಡ ವಿಷಯ. ಆ ದೊಡ್ಡಸ್ತಿಕೆಯನ್ನು ಕನಕದಾಸರ ಈ ಎರಡು ಕೃತಿಗಳಲ್ಲಿಯೂ ಕಾಣಬಹುದು. ಅತ್ಯಂತ ಜನಪ್ರಿಯವಾದ 'ನಳಚರಿತ್ರೆ' ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕಾಣಿಸಿಕೊಂಡಿದ್ದು ಬಹು ಮೆಚ್ಚಿಗೆ ಗಳಿಸಿದ ಕಥೆಯಾಗಿದೆ. ಇಷ್ಟೊಂದು ಜನಪ್ರಿಯವಾದ ಈ ಕಥೆ ಹದಿಮೂರನೆಯ ಶತಮಾನದಲ್ಲಿಯೇ ಕನ್ನಡದಲ್ಲಿ ಚೌಂಡರಸನಿಂದ ರಚನೆಗೊಂಡರೂ, ಚೌಂಡರಸನ ಈ 'ನಳಚಂಪು' ಅಷ್ಟೊಂದು ಜನಪ್ರಿಯವಾಗಲಿಲ್ಲ. ಸುಮಾರು ಎಂಟುನೂರು ಪದ್ಯಗಳನ್ನುಳ್ಳ ಈ ಚಂಪೂ ಕೃತಿ ಕಥೆಯ ಸ್ವಾರಸ್ಯಕ್ಕೆ ತಕ್ಕಂತೆ ಅರಳದೆ, ವರ್ಣನೆಗಳ ಭಾರದಲ್ಲಿ ಸೊರಗಿದೆ. ಪಾತ್ರಗಳ ಪೋಷಣೆಯೂ ಹೇಳಿಕೊಳ್ಳುವಂತಹುದೇನಲ್ಲ. ಚಂಪುವಿನ ಬಿಗಿಯಲ್ಲಿ ಬೀಗಿ, ಪ್ರೌಢತೆಯನ್ನಷ್ಟೇ ಮೆರೆದಿದೆ. - ನಳಚರಿತೆಯ ವಸ್ತುವೇ ಅತ್ಯಂತ ಆಕರ್ಷಕವಾದುದು. ಸ್ವಾರಸ್ಯದಿಂದ ಕೂಡಿದುದು, ನಿಪುಣ ಕವಿಯ ಕೈಯಲ್ಲಿ ಅದು ಹೇಗೆ ಬೇಕಾದರೂ ಅರಳಿ ಪ್ರಶಂಸೆಗೆ ಪಾತ್ರವಾಗಬಲ್ಲ ಸತ್ವವುಳ್ಳದ್ದು, ಸಂಸ್ಕೃತ ಮಹಾಭಾರತದ ವನಪರ್ವದಲ್ಲಿ ವಿಸ್ತಾರವಾಗಿ ಹರಡಿರುವ ನಳೋಪಾಖ್ಯಾನವೇ ಕನಕದಾಸರ 'ನಳಚರಿತ್ರೆ'ಗೆ ಆಕರ. ಇದರ ಮೂಲ ಹಾಗೂ ಪೂರ್ವಕವಿಗಳಿಂದ ರಚನೆಗೊಂಡ ಕೃತಿಗಳನ್ನು ಕನಕದಾಸರು ನೋಡಿದ್ದರೂ, ತಮ್ಮದೇ ಆದ ವಿಶಿಷ್ಟ ಮುದ್ರೆಯನ್ನು ಅವರು ಈ ಕೃತಿಯಲ್ಲಿ ಒತ್ತಿದ್ದಾರೆ. ಮೂಲದಲ್ಲಿಲ್ಲದ ಎಷ್ಟೋ ಸ್ವಾರಸ್ಯವನ್ನು ತಮ್ಮ ಕಾವ್ಯದಲ್ಲಿ ತರುವುದರ ಮೂಲಕ ಅದನ್ನೊಂದು ಪರಿಪೂರ್ಣ ಸ್ವತಂತ್ರ ಕೃತಿಯನ್ನಾಗಿ ಮಾಡಿದ್ದಾರೆ. ಅವರು ಅನೇಕ ವಿಷಯಗಳಲ್ಲಿ ಹಿಂದಿನ ಕವಿಗಳಿಗೆ ಬಹುಮಟ್ಟಿಗೆ ಋಣಿ ಎಂದು ಹೇಳಬಹುದಾದರೂ, ಅವರ ಸ್ವತಂತ್ರ ಪ್ರತಿಭೆ ಮತ್ತು ಕಲ್ಪನಾ ಚಮತ್ಕಾರಗಳು ಕಾವ್ಯದಲ್ಲೆಲ್ಲ ಪ್ರಕಾಶಿಸುತ್ತವೆ. ರಂಭೆಯೇ ಮೊದಲಾದ ಅಪ್ಪರ ಸ್ತ್ರೀಯರು ಇಂದ್ರಾಜ್ಞೆಯ ಮೇರೆಗೆ ನಳನಿಗೆ ಮುಂಚೆಯೇ ದಮಯಂತಿಯ ಬಳಿಗೆ ಬಂದರೆಂಬುದು ದಾಸರ ಸ್ವಕಪೋಲಕಲ್ಪನೆ. ದಮಯಂತಿಯ ಪ್ರೇಮೋತ್ಕರ್ಷವನ್ನೂ, ನಳನೃಪನ ಪ್ರಾಮಾಣಿಕತೆಯನ್ನೂ ಪರೀಕ್ಷಿಸುವ ಸಲುವಾಗಿ ಈ ಸಂದರ್ಭವನ್ನು ಕವಿ ಸೃಷ್ಟಿಸಿಕೊಂಡಂತೆ ಕಾಣುತ್ತದೆ. ದಮಯಂತಿ ಯಾಗಪುತ್ರಿಯೆಂದು ಹೇಳುವಲ್ಲಿ ಅಲೌಕಿಕವಾದ ಶಕ್ತಿಯ ಪ್ರಭಾವವಲಯದಲ್ಲಿ ಕಥೆಯನ್ನು ನಡೆಸುವ ಉದ್ದೇಶ ಕವಿಗಿತ್ತೆಂದು ಹೇಳಬಹುದಾಗಿದೆ. ಹೆಬ್ಬಾವಿನ ಪ್ರಸಂಗವಂತೂ ಕವಿಯ ಕಲ್ಪನಾ ಪ್ರತಿಭೆಗೆ ದ್ಯೋತಕವಾಗಿದೆ. ಇಲ್ಲಿಯ ದಮಯಂತಿ ಕ್ರೂರಿಯಲ್ಲ, ದ್ವೇಷಶಿಲೆಯಲ್ಲ. ಕೃತಘಳಲ್ಲ, ಶೀಘ್ರ ಕೋಪಿಯಲ್ಲ. ಹೆಸರಿಗೆ ತಕ್ಕಂತೆ ಸಂಯಮಶೀಲೆ ಎಂಬ ಅವಳ ಸಹಜಸ್ವರೂಪ ಈ ಪ್ರಕರಣದಲ್ಲಿ ಎದ್ದು ಕಾಣುತ್ತದೆ” ಎಂಬ ವಿಮರ್ಶಕರ ಮಾತು ಸ್ವೀಕಾರಾರ್ಹವಾಗಿದೆ. ಕವಿ ಕಾವ್ಯದುದ್ದಕ್ಕೂ ಸ್ವಂತಿಕೆಯನ್ನು ಮೆರೆದಿದ್ದಾನೆ. ಕನಕದಾಸರು ತಮ್ಮ ಸಹಜ ಪ್ರತಿಭೆಯಿಂದ ಇದನ್ನೊಂದು ಸರಳ-ಸುಂದರ ಕಾವ್ಯವನ್ನಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿ ಬರುವ ವರ್ಣನೆಗಳು, ಪಾತ್ರಚಿತ್ರಣ, ಕಥಾನಿರ್ವಹಣ ರೀತಿ, ಅದಕ್ಕೆ ತಕ್ಕ ಭಾಷೆ-ಇವುಗಳಲ್ಲಿ ತಮ್ಮ ಕಾವ್ಯ ಕಲೆಯನ್ನು, ವಿಶಿಷ್ಟ ಪ್ರತಿಭೆಯನ್ನು ತೋರಿದ್ದಾರೆ. 'ಭಾಮಿನಿ ಷಟ್ಟದಿ' ಇಲ್ಲಿ ಅವರ ಪ್ರತಿಭೆಯ ಪುಂಗಿನಾದಕ್ಕೆ ತಕ್ಕಂತೆ ನರ್ತಿಸಿದೆ. ಉಪಮೆಗಳ ಸಂದರ್ಭದಲ್ಲಿ ಕುಮಾರವ್ಯಾಸನ ಪ್ರಭಾವಕ್ಕೆ ಹೆಚ್ಚು ಒಳಗಾಗಿರುವುದು ಅಲ್ಲಲ್ಲಿ ಸ್ಪಷ್ಟವಾದರೂ ಮಿಕ್ಕ ವಿಷಯದಲ್ಲಿ ಅದನ್ನು ಮರೆಸಿ, ಕಾವ್ಯಪ್ರತಿಭೆಯನ್ನು ತೋರುವ ಶಕ್ತಿ ಕನಕದಾಸರಲ್ಲಿ ಕಂಡುಬರುತ್ತದೆ. ಒಂದು ಕಡೆ ದಮಯಂತಿಯನ್ನು ಕವಿ ಹೀಗೆ ಬಣ್ಣಿಸುತ್ತಾನೆ : ಮಿಸುನಿಯೋಲೆಯ ಢಾಳ ಕದಪಿನೊ ಆಸೆಯೆ ಮೇಲುದು ಜಾರೆ ಕುಚಭರ ಕುಸಿಯೆ ನಡುವಲ್ಲಾಡೆ ಮಸಗಿದ ಮಂದಹಾಸದಲಿ || ಎಸೆವ ಸೋರ್ಮುಡಿ ಭಾರದಲಿ ಬಾ ಗಿಸಿದ ಕೊರಳಿನ ಕೈಯ ವೀಣೆಯ ಬಿಸರುಹಾಕ್ಷಿಯ ಸೊಬಗ ಬಣ್ಣಿಸಲರಿಯೆ ನಾನೆಂದ || ಕುಡಿತೆಗಂಗಳ ಸಿರಿಮುಡಿಯ ಬಡ ನಡುವ ಸೆಳೆವತಿ ಬೆಡಗಿನಲಿ ಹೊಂ ಗೊಡ ಮೊಲೆಯ ವೈಯ್ಯಾರದುಡುಗೆಯ ಸಿರಿಯ ಸಡಗರದ || ತೊಡರ ಝಣಝಣ ರವದ ಮೆಲ್ಲಡಿ