ಪುಟ:Kanakadasa darshana Vol 1 Pages 561-1028.pdf/೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೬೬ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೀರ್ತನೆಗಳ ಶಬ್ಧಶಿಲ್ಪ ೫೭ | | ಆವರ್ತವಾಗಬೇಕೆಂಬ, ಆಗುವುದೆಂಬ ಬಯಕೆ ಇಲ್ಲಿದೆ, ಈ ವ್ಯಾಖ್ಯಾನ ನೇರವಾಗಿ ಕೀರ್ತನೆಯ ಪಲ್ಲವಿಯ ಹೇಳಿಕೆಯನ್ನು ಸಮರ್ಥಿಸುತ್ತಿರುತ್ತದೆ. ಕಥನವನ್ನು ಎಲ್ಲ ಕಡೆಯೂ ಹೀಗೆ ಕ್ರಿಯಾಶೀಲವನ್ನಾಗಿಸಲು ಕನಕದಾಸರಿಗೆ ಸಾಧ್ಯವಾಗುವುದಿಲ್ಲ. ಇದು ಆ ಕ್ರಮದ ಮಿತಿಯೂ ಹೌದು ಎಂಬುದನ್ನು ಗಮನಿಸಬೇಕು. 'ಹರಿಭಕ್ತಿಸಾರ'ದ ಮೊದಲ ಹದಿನೈದು ಭಾಮಿನಿ ಷಟ್ಟದಿಗಳ ರಚನೆಯನ್ನು ಗಮನಿಸೋಣ ಉದಾಹರಣೆಗೆ : ಅನುಪಮಿತ ಚಾರಿತ್ರ ಕರುಣಾ ವನ, ಭಕ್ತ ಕುಟುಂಬ ಯೋಗೀ ಜನ ಹೃದಯ ಪರಿಪೂರ್ಣ ನಿತ್ಯಾನಂದ ನಿಗಮನುತ ವನಜನಾಭ ಮುಕುಂದ ಮುರಮ ರ್ದನ ಜನಾರ್ದನ ಜಗತ್ಪಾ ವನ ಸುರಾರ್ಚಿತದೇವ ರಕ್ಷಿಸು ನಮ್ಮನನವರತ || ಈ ಷಟ್ಟದಿಗಳಲ್ಲಿ ಇಸು, ನಮ್ಮನು ಎಂಬ ಕನ್ನಡದ ಅಂಶಗಳಿವೆ ; ಜೊತೆಗೆ 'ರಕ್ಷಿಸು ನಮ್ಮನನವರತ' ಎಂಬ ವಾಕ್ಯ ಕನ್ನಡದ ವಾಕ್ಯರಚನೆಗೆ ಅನುಗುಣವಾಗಿದೆ. ಇಷ್ಟನ್ನು ಹೊರತುಪಡಿಸಿದರೆ ಉಳಿದ ಭಾಗವೆಲ್ಲ ಸಂಸ್ಕೃತ ಸಮಾಸ ಪದಗಳಿಂದ ತುಂಬಿದೆ. ಈ ಸಮಾಸಪದಗಳಲ್ಲಿ ಉಚ್ಛಡಣೆಗಳು ; ಸ್ತೋತ್ರಗಳು. ಈ ಸಮಾಸಪದಗಳಲ್ಲಿ ಭಾಷೆಗೆ ಉದ್ದೀಪನ ಶಕ್ತಿ ಇಲ್ಲ. ಅಂದರೆ ಆ ಪದಗಳು ಈಗಾಗಲೇ ಸಾಂಸ್ಕೃತಿಕವಾಗಿ ಪಡೆದಿರುವ ಅರ್ಥಪರಂಪರೆಗೆ ಮಾತ್ರ ಸೀಮಿತಗೊಳ್ಳುತ್ತವೆ. ಆದರೆ ಮುಂದಿನ ಷಟ್ಟದಿಗಳನ್ನು ನೋಡಿ : ಈಗಲೇ ಈ ದೇಹವಿನ್ಯಾ ವಾಗಲೋ ನಿಜವಿಲ್ಲವೆಂಬುದ ಗೀಗ ತಿಳಿಯದೆ ಮಡದಿಮನೆ ಮನೆವಾರ್ತೆಯೆಂದೆಂಬ ರಾಗ ಲೋಭದಿ ಮುಳುಗಿ ಮುಂದಣ ತಾಗುಬಾಗುಗಳಿರಿಯ ನಿನ್ನ ಸ | ಮಾಗಮವ ಬಯಸುವೆನು ರಕ್ಷಿಸು ನಮ್ಮನನವರತ || ಇಲ್ಲಿ ಸಂಸ್ಕೃತ ಪದಗಳಿಲ್ಲವೆಂದಲ್ಲ. ದೇಹ, ನಿಜ, ವಾರ್ತೆ, ರಾಗ, ಲೋಭ, ಸಮಾಗಮ ಮುಂತಾದ ಪದಗಳಿವೆ. ಆದರೆ ಇಡೀ ಷಟ್ಟದಿ ಸಂವಾದದ ಧಾಟಿಯನ್ನು ಪಡೆದುಕೊಳ್ಳುತ್ತದೆ. ದ್ವಿತೀಯ ಪುರುಷ ಸರ್ವನಾಮದ ರೂಪಗಳುಈ ಷಟ್ಟದಿಯಲ್ಲಿ 'ನಿನ್ನ' ಬಳಕೆಯಾಗದ ಷಟ್ಟದಿಗಳು ಬಹುಮಟ್ಟಿಗೆ ಇಲ್ಲವೇ ಇಲ್ಲ. ಅಂದರೆ ಈ ರಚನೆಗಳು ಸ್ತುತಿಸುವಾತ ಸ್ತುತ್ಯನನ್ನ ನೇರವಾಗಿ ಮುಖಮುಖಿಯಾಗಿ ಮಾತನಾಡಿಸುವ ಮಾದರಿಯನ್ನು ಅನುಸರಿಸುತ್ತವೆ. ಮೊದಲ ಹದಿನೈದು ಷಟ್ಟದಿಗಳಲ್ಲಿ 'ಸ್ತುತ್ಯನಾದವನು ಸ್ಥಗಿತ, ಪರಂಪರಾಗತ ಚಿಂತನೆಯ ಚೌಕಟ್ಟನೊಡನೆ ಲಭ್ಯನಾದವನು. ಆದರೆ 'ಸಂವಾದ' ಧಾಟಿಯ ಷಟ್ಟದಿಗಳಲ್ಲಿ 'ಸ್ತುತ್ಯನಾದವನು ಚಲನಶೀಲ, ಅವನೊಡನೆ ಭಕ್ತನ ಮಾತು ಕತೆ ನಡೆಯುತ್ತದೆ. ಈ ಸಂವಾದದ ಧಾಟಿಯೇ ಕನಕದಾಸರ ಕೀರ್ತನೆಗಳ ಮುಖ್ಯ ನೆಲೆಯಾಗಿದೆ. 'ಕಾಯುವಾತ' ಹಾಗೂ 'ಮೊರೆ ಹೋಗುವಾತ' ಇವರು ಈ ಸಂವಾದದ ಮುಖ್ಯ ಪಾತ್ರಧಾರಿಗಳು. ಇವರಿಬ್ಬರ ಸಂದರ್ಭಗಳನ್ನು, ಸ್ವರೂಪಗಳನ್ನು ಭಾಷೆಯ ಮೂಲಕ ಕಟ್ಟಿಕೊಡುವುದು, ನಿಜಗೊಳಿಸುವುದು ಕೀರ್ತನೆಗಳ ಮುಖ್ಯ ಆಸಕ್ತಿಯಾಗುತ್ತದೆ. 'ಕಾಯುವಾತ-ಇಲ್ಲಿ ದೇವರು-ನನ್ನು ಕೀರ್ತನೆಗಳು ಮಂಡಿಸುವುದು, ಲಭ್ಯ ಕಥಾನಕಗಳನ್ನು ಸೂಕ್ತವಾಗಿ ಬಳಸಿಕೊಳ್ಳುವ ಮೂಲಕ ಹಾಗೂ ವ್ಯಾಖ್ಯಾನಗಳ ಮೂಲಕ. ಇದರ ಮಾದರಿಗಳನ್ನು ಈಗಾಗಲೇ ನೋಡಿದ್ದೇವೆ. ಆದರೆ 'ಮೊರೆಹೋಗುವಾತ'ಇಲ್ಲಿ ಭಕ್ತನನ್ನು ಭಾಷೆಯ ಮೂಲಕವೇ ಗ್ರಹಿಸಿ ನಿಜವಾಗಿಸುವ ಕ್ರಮ ಕೀರ್ತನೆಗಳಲ್ಲಿ ಕಾಣುತ್ತದೆ. ಕ್ಷೀರದೊಳದ್ದು ನೀರೊಳಗದ್ದು ಹೇರನೊಪ್ಪಿಸಿದ ಮೇಲೆ ಸುಂಕ ಯಾವುದೋ ದೇವಾ | ಈ ಸಾಲುಗಳಲ್ಲಿ ಮೊರೆಹೋಗುವಾತನ ಸಂದರ್ಭವನ್ನು ಅಸಹಾಯಕತೆ ಮತ್ತು ಶರಣ ಭಾವವನ್ನು ರೂಪಿಸಿ ಕೊಡಲಾಗಿದೆ. ಮತ್ತೆಮತ್ತೆ ಕನಕದಾಸರ ಕೀರ್ತನೆಗಳಲ್ಲಿ ಈ ಬಗೆಯೇ ಆವರ್ತಗೊಳ್ಳುತ್ತ ಹೋಗುತ್ತದೆ. ೧. ಜನನಿಯ ಜಠರದಿ ನವಮಾಸವು ಘನತೆ ನೀ ಪೋಷಿಸುತಿರಲೆನ್ನ ಜನಿಸಲಾರೆನೆ ಜನಿಸೆಂದಿಕ್ಕಳದಿಂದ ವನಜಾಕ್ಷ ನೂಕಿದವನು ನೀನಲ್ಲವೆ ಕೃಷ್ಣ || - ೨. ಪಟ್ಟೆನಾಮವ ಬಳಿದು ಪಾತ್ರೆ ಕೈಯಲ್ಲಿ ಹಿಡಿದು ಗುಟ್ಟಿನಲಿ ರಹಸ್ಯವ ಗುರುತರಿಯದೇ