ಪುಟ:Kanakadasa darshana Vol 1 Pages 561-1028.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೨೪ ಕನಕ ಸಾಹಿತ್ಯ ದರ್ಶನ-೧ ಕನ್ನಡ ಸಾಹಿತ್ಯದಲ್ಲಿ ಕನಕದಾಸರ ಸ್ಥಾನ ೬ ೨೫ ನಿಜವಾದರೂ, ಈ ಈರ್ವರೂ ಅದನ್ನು ಸ್ವಲ್ಪಮಟ್ಟಿಗೆ ಸುಳ್ಳಾಗಿಸಿದ್ದಾರೆ. ಮೃದು ಮಧುರ ಭಾವನೆಗಳ ಅಭಿವ್ಯಕ್ತಿಗೆ ಹೇಳಿ ಮಾಡಿಸಿದಂತೆಯೇ, ಯುದ್ದವರ್ಣನೆಗೂ ಹೊಂದಿಕೊಳ್ಳಬಲ್ಲದೆಂಬುದನ್ನು ಸಾಬೀತು ಮಾಡಿದ್ದಾರೆ. ಶೃಂಗಾರ ವರ್ಣನೆಯಲ್ಲಿ ರತ್ನಾಕರ ವರ್ಣಿ, ಕುಮಾರ ವ್ಯಾಸ, ನಂಜುಂಡ ಕವಿಗಳೊಂದಿಗೆ ಸ್ಪರ್ಧಿಸಿರುವಂತೆಯೇ, ಯುದ್ಧವರ್ಣನೆಯಲ್ಲಿಯೂ ಕನಕದಾಸರು ಗಮನ ಸೆಳೆದಿದ್ದಾರೆ. ಕುಂಭಾಂಡನಿಗೂ-ಅನಿರುದ್ಧನಿಗೂ ನಡೆಯುವ ಯುದ್ಧವರ್ಣನೆಯ ಚಿತ್ರ ಕನಕದಾಸರಲ್ಲಿ ಹೀಗೆ ಬರುತ್ತದೆ : ಬಾಗಿಲ ತಿವಿದು ನೂಂಕುವ ದಂತಶಿರವ ವಿ ಭಾಗಿಸಿ ಕೂರ್ಗಣೆಯಿಂದ ತಾಗಿಸಿಜೋದರ ತಲೆಯನಾಗಕಾಗಿಪ ಸಾಗಿಸಿದನು ಕೇಳ ಕೆಳದಿ | ತುಂಡುಗಳ್ ತುಟಿಗಚ್ಚಿ ಗಗನದೊಳ್ ಮಾತಾಡೆ ಮುಂಡಗಳ್ ನೆಲೆದೊಳು ಕುಣಿಯೆ | ಕೊಂಡಾಡುತಿರ್ದುವು ಕುಶಲದಿ ಕುಸುಮ ಕೋ ದಂಡಾತ್ಮಜನ ಪೌರುಷವ ಅಜವಿಂಡ ಹೊಕ್ಕ ಹೆಬ್ಬುಲಿಯಂತೆ ಸೊಕ್ಕಿದ ಗಜವಿಂಡ ಸಿಂಹ ಹೊಕ್ಕಂತೆ ಭುಜಗ ಸಮೂಹವ ಖಗರಾಜ ಹೊಕ್ಕಂತೆ ಕುಜನರ ಕುಟ್ಟಿಹಾಯ್ದಿದನು || ಮತ್ತೊಂದೆಡೆ ಬಂದುದು ಯಾದವ ಬಲ ನೆಲನೀದಂತೆ' ಎಂಬಂತಹ ಉಪಮೆಗಳ ಮಾಲೆಯಲ್ಲಿ ರಣರಂಗದ ಚಿತ್ರವನ್ನು ಸೊಗಸಾಗಿ ತಂದಿದ್ದಾನೆ. ಕಂದ-ವೃತ್ತಗಳಲ್ಲಿಯಂತಹ ಅಥವಾ ಷಟ್ಟದಿಯಲ್ಲಿಯಂತಹ ಬಿರುಸನ್ನು ಇಲ್ಲಿ ಕಾಣದೆ ಹೋದರೂ, ಸಾಂಗತ್ಯದಂತಹ ಸರಳ ಛಂದಸ್ಸಿನಲ್ಲಿಯೂ ಕವಿ ಪ್ರತಿಭೆಯನ್ನು ತೋರಿ ಪರಿಣಾಮಕಾರಿಯಾಗಿಸಿರುವುದು ಪ್ರಶಂಸನೀಯ. ನಂಜುಂಡನೊಂದಿಗೆ ಕನಕದಾಸರನ್ನು ತೂಗಿ ನೋಡುವುದಾದರೆ ಈ ವಿಷಯದಲ್ಲಿ ಇಬ್ಬರೂ ಸಮಬಲರಾಗಿಯೇ ನಿಲ್ಲುತ್ತಾರೆ : ಬಿಡಲು ಮೈಯ್ದಡವಿ ಗಿಡಗ ಗಿಳಿವಿಂಡ ಕೆಡಹಿ ಕೊಡಹಿ ಕೋಲುವಂತೆ ಬಿಡದೆ ಕೊಂದವು ರಿಪುಗಳನು || ಕರಿಯ ಹಿಂಡನು ಕೇಸರಿ ಕದಳೀವನಾಂ ತರವ ಕಾಡಾನೆ ಪೊಕ್ಕಂತೆ ಧುರ ಧರಣಿಯೊಳು ಕೊಂದನು ಬರಿಕಯನು ಸುರತಾಳಬಲವನಾರಾಮ || ಕಾಕತೀಯ ರುದ್ರನು ದಂಡೆತ್ತಿ ಬಂದನೆಂಬ ವಿಷಯವನ್ನು ತಿಳಿದು ಕಂಪ ರಾಜನು ಕೋಪಗೊಳ್ಳುವ ಬಗೆಯನ್ನು ನಂಜುಂಡ ಕವಿ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾನೆ : “ಮೀಸೆ ಕುಣಿಯೆ ಮೈಯ್ಯ ರೋಮ ಕಾರಿಡೆ ಕಣ್ಣು | ಸೂಸೆ ಕಿಡಿಯ ಮೊಗ ಹೊಗೆಯೆ, ಘಾಸಿಯಾಗಲು ಗಂಟಿನಿಂ ಪುರ್ಬು ನೃಪಕ | ಟಾಸುರವನು ತಾಳಿದನು ” ದೇಪರಾಜನ 'ಸೊಬಗಿನ ಸೋನೆ', ಕನಕದಾಸರ 'ಮೋಹನತರಂಗಿಣಿ' ಯಂತೆಯೇ ಶೃಂಗಾರ ಕಾವ್ಯ, ಕವಿ ತನ್ನ ಕೃತಿಯ ಬಗೆಗೆ 'ಜಾಣರ ಮೆಚ್ಚು' "ರಸಿಕರ ರಸಾಯನ' ಎಂದು ಮುಂತಾಗಿ ಕರೆದುಕೊಂಡಿದ್ದಾನೆ. ಇದೂ ಕೂಡ ಸಾಂಗತ್ಯ ಕೃತಿಯೇ. ಆದರೆ ಕವಿ ತಾನೇ ಹೇಳಿಕೊಂಡಿರುವಷ್ಟು ಉತ್ತಮ ಕೃತಿಯೇನೂ ಅಲ್ಲ. 'ರಸಿಕರ ರಸಾಯನ' ಎಂದು ಕವಿ ಹೇಳಿಕೊಂಡಿದ್ದರೂ, ಅದು ಹಲವು ಅನೌಚಿತ್ಯಗಳಿಂದಾಗಿ ಸೊರಗಿದೆ. ಹದಿನೆಂಟು ವರ್ಣನೆಗಳನ್ನು ತನ್ನ ಕಾವ್ಯದಲ್ಲಿ ತಂದರೂ ಕನಕದಾಸರು, ಲಾಲಿತ್ಯದ ಭಾಷಾ ಬಳಕೆಯಿಂದಾಗಿ ರಸಿಕರ ಎದೆ ಮಿಡಿಯುವಂತೆ ಮಾಡಿದ್ದಾರೆ. ಆದರೆ ದೇವರಾಜ ಅದರಲ್ಲಿ ಸಿಕ್ಕಿಹಾಕಿಕೊಳ್ಳುವುದರ ಜೊತೆಗೆ ಭಾಷಾ ಪ್ರೌಢಿಮೆಯಿಂದ ಕಾವ್ಯವನ್ನು ಬಳಲಿಸಿದ್ದಾರೆ. ಆ ವಿಷಯದಲ್ಲಿ ಕನಕದಾಸರು ಜಾಣರು. ಭಾವಕ್ಕೆ ತಕ್ಕ ಭಾಷಾ ಬಳಕೆ ಅವರ ಯಶಸ್ಸಿನ ಗುಟ್ಟು ಇಲ್ಲಿ ದೇವರಾಜ ಪ್ರತಿಭೆಗಿಂತ ಪಾಂಡಿತ್ಯವನ್ನು ಹೆಚ್ಚಾಗಿ ಮೆರೆದಿದ್ದರೆ, ಅಲ್ಲಿ ಕನಕದಾಸರು ಪಾಂಡಿತ್ಯವನ್ನು ಬದಿಗೊತ್ತಿ ಪ್ರತಿಭೆಯನ್ನು ಧಾರಾಳವಾಗಿ ಮೆರೆದಿದ್ದಾರೆ. 'ಸೊಬಗಿನ ಸೋನೆ'ಯ ಕಥೆ 'ಮೋಹನ ತರಂಗಿಣಿ'ಯ ಕಥೆಯಂತೆ ಒಳ್ಳೆಯದೇ ಆದರೂ, ನಿರ್ವಹಣೆ ಹಾಗೂ ಔಚಿತ್ಯ ಪ್ರಜ್ಞೆಯ ಕೊರತೆಯಿಂದಾಗಿ ಕಾವ್ಯ ಕಳೆಗುಂದಿದೆ. ಕವಿ ಔಚಿತ್ಯ ಪ್ರಜ್ಞೆಯನ್ನು ಕಳೆದುಕೊಂಡಾಗ ಕಾವ್ಯ ಏನಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿ. ಕನಕದಾಸ, ಕುಮಾರವ್ಯಾಸ, ರತ್ನಾಕರವರ್ಣಿ ಹಾಗೂ ನಂಜುಂಡಕವಿಈ ನಾಲ್ವರೂ ಕನ್ನಡದ ಜನಪ್ರಿಯ ಕವಿಗಳೆ, ಇವರಲ್ಲಿ ರತ್ನಾಕರವರ್ಣಿ 'ಭರತೇಶ ವೈಭವ'ದಲ್ಲಿ ಯೋಗ-ಭೋಗ ಸಮನ್ವಯವನ್ನು ಒಬ್ಬ ಚಕ್ರವರ್ತಿಯ ಕಥೆಯ da ಕಡುಗಲಿ ರಾಮನೆನಲು ಕೂರ್ಗಣೆಗಳು