ಪುಟ:Kanakadasa darshana Vol 1 Pages 561-1028.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೩೪ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಸಾಹಿತ್ಯದ ಮೇಲೆ ಅವರ ಹಿಂದಿನ ಮತ್ತು ಅವರ ಸಮಕಾಲೀನ ಕವಿಗಳ ಪ್ರಭಾವ ಎಂ. ವಿ. ಶ್ರೀನಿವಾಸಮೂರ್ತಿ ಗ್ರಂಥಋಣ ೧. ಕನಕ ಸಾಹಿತ್ಯ ಚರಿತ್ರೆ-ರಂ. ಶ್ರೀ. ಮುಗಳಿ ಜನಪ್ರಿಯ ಕನ್ನಡ ಸಾಹಿತ್ಯ ಚರಿತ್ರೆ-ತ. ಸು. ಶಾಮರಾಯ ೩. ನಳಚರಿತ್ರೆ-(ಸಂ.) ದೇ. ಜವರೇಗೌಡ ರಾಮಧಾನ್ಯ ಚರಿತೆ-(ಸಂ.) ದೇ. ಜವರೇಗೌಡ ೫. ಮೋಹನ ತರಂಗಿಣಿ ಸಂಗ್ರಹ-(ಸಂ.) ಬಿ. ಎಸ್. ಸಣ್ಣಯ್ಯ ೬ ಜನಪ್ರಿಯ ಕನಕ ಸಂಪುಟ-(ಸಂ.) ದೇ. ಜವರೇಗೌಡ ೭ ಹರಿದಾಸ ಸಾಹಿತ್ಯ-ಆರ್. ಎಸ್. ಪಂಚಮುಖಿ ೮. ಹರಿದಾಸ ಹೃದಯ-ಜಿ. ವರದರಾಜರಾವ್ ೯. ದಾಸಸಾಹಿತ್ಯ ದರ್ಶನ-(ಸಂ.)ಎಚ್ಚೆಸ್ಕೆ ೧೦. ಕನಕದಾಸರು-ಎಸ್. ಕೆ. ರಾಮಚಂದ್ರರಾವ್ ೧೧. ಪರಿಶೀಲನ-ಜಿ. ಎಸ್. ಶಿವರುದ್ರಪ್ಪ ೧೨. ಕನಕಸುಧೆ-ಪರಮೇಶ ೧೩. ಕರ್ನಾಟಕ ಜನಜೀವನ-ಬೆಟಗೇರಿ ಕೃಷ್ಣಶರ್ಮ ೧೪. ಹರಿದಾಸ ಸಾಹಿತ್ಯ ಸಾರ-ಜಿ. ವರದರಾಜರಾವ್ ೧೫. ಕನಕಕಿರಣ-(ಸಂ.) ಕಾ. ತ. ಚಿಕ್ಕಣ್ಣ ೧೬. ಕವಿ ಕನಕದಾಸರು-ಕಟ್ಟಿ ಶೇಷಾಚಾರ್ಯ ೧೭. ಕವಿ ರಶ್ಮಿ-ಎನ್. ಬಿ. ಮುತಾಲಕರ ೧೮. ಕನ್ನಡ ವಿಶ್ವಕೋಶ. ಪರಂಪರೆ ಮತ್ತು ಸ್ಪೋಪಜ್ಞತೆಯನ್ನು ಕುರಿತ ತಮ್ಮ ಪ್ರಸಿದ್ಧ ಲೇಖನದಲ್ಲಿ ಹೆಸರಾಂತ ಕವಿ, ವಿಮರ್ಶಕ ಟಿ. ಎಸ್. ಎಲಿಯಟ್ ಅವರು ಪ್ರತಿಯೊಬ್ಬ ಕವಿಗೂ ತನ್ನ ಹಿಂದಿನ ಸಾಹಿತ್ಯ ಪರಂಪರೆಯ ಋಣಭಾರ ಸಾಕಷ್ಟಿರುವುದನ್ನು ಕುರಿತು ಕೆಲವು ಮೌಲಿಕ ವಿಚಾರಗಳನ್ನು ಪ್ರತಿಪಾದಿಸಿದ್ದಾರೆ. ಕಲೆಯ ಭಾವ ಅವೈಯಕ್ತಿಕ (ವೈಯಕ್ತಿಕವಾದುದಲ್ಲ), ಕವಿ ತನ್ನನ್ನು ತಾನು, ತಾನು ಸೃಷ್ಟಿಸುತ್ತಿರುವ ಕಲಾನಿರ್ಮಿತಿಗೆ ಅಧೀನಪಡಿಸಿಕೊಂಡಲ್ಲದೆ ಈ ಅವೈಯಕ್ತಿಕ ಸ್ಥಿತಿಯನ್ನು ತಲುಪಲು ಸಾಧ್ಯವಿಲ್ಲ. ತಾನು ಏನನ್ನು ಸೃಷ್ಟಿಸಬೇಕಾಗಿದೆ ಎಂಬುದು ಅವನಿಗೆ ತಿಳಿಯುವುದು, ಅವನು ತನ್ನನ್ನು ತಾನು ಸಮಕಾಲೀನ ಬದುಕಿನ ವಿವರಗಳಲ್ಲಿ ತೊಡಗಿಸಿಕೊಂಡಾಗ ಮಾತ್ರವಲ್ಲ, ತನ್ನ ಗತಕಾಲದ ಜೀವಂತ ಬದುಕಿನ ಅನುಭವಗಳನ್ನು ತನ್ನ ಸೃಷ್ಟಿಯಲ್ಲಿ ಅಳವಡಿಸಿಕೊಂಡಾಗ ಮಾತ್ರ. ಕನ್ನಡ ಸಾಹಿತ್ಯದಲ್ಲಿ ಸಮಕಾಲೀನ ಮತ್ತು ಪರಂಪರಾಗತ ಮೌಲ್ಯಗಳೆರಡಕ್ಕೂ ಒಟ್ಟಿಗೇ ಸ್ಪಂದಿಸಿ ಸಾಮಾನ್ಯ ಜನತೆಯ ಹಿತಕ್ಕಾಗಿ ದುಡಿದ ಎರಡು ತಂಡಗಳು ಪ್ರಮುಖವಾಗಿ ಎದ್ದು ಕಾಣುತ್ತವೆ. ಶರಣರು ಮತ್ತು ದಾಸರು ಹಿಂಡು ಹಿಂಡಾಗಿ ಈ ಮೌಲಿಕ ಕ್ರಾಂತಿಗಳಲ್ಲಿ ತಮ್ಮನ್ನು ತಾವು 1. The emotion of art is impersonal. And the Poet cannot reach this impersonality without surrendering himself wholly to the work to be done. And he is not likely to know what is to be done unless he lives in what is merely the present, but the present moment of the past, unless he is conscious, not of what is dead, but of what is already living ‘Tradition and Individual Talent' - Selected Prose : T. S. Eliot, Ed John : Hayward Faber and Faber, 1959 p. 30.