ಪುಟ:Kanakadasa darshana Vol 1 Pages 561-1028.pdf/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೬೮ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೀರ್ತನೆಗಳ ಶಬ್ಧಶಿಲ್ಪ ೫೬೯ ಬಳಸುವ ಕನ್ನಡ ಮಧ್ಯಕಾಲೀನ ಕನ್ನಡ ಕವಿಗಳೆಲ್ಲರಿಗೂ, ಅದರಲ್ಲೂ ದೇಸೀ ಬಂಧಗಳನ್ನು ಆಯ್ದುಕೊಳ್ಳುವವರಿಗೆ ಸಮಾನ. 'ಮೋಹನತರಂಗಿಣಿ'ಯ ಭಾಷೆಗೂ ಅಂಶಲಯದ ಯಾವುದೇ ಕನ್ನಡ ಕಾವ್ಯದ ಭಾಷೆಗೂ ಹೆಚ್ಚಿನ ವ್ಯತ್ಯಾಸಗಳು ಕಾಣುವುದಿಲ್ಲ. ಆದರೆ ಕೀರ್ತನೆಗಳನ್ನು ರಚಿಸುವಾಗ ಕನಕದಾಸರು ಕನ್ನಡವನ್ನು ವರ್ಗಾಂತರಿಸಿ ಬಳಸುತ್ತಾರೆ. ಕೀರ್ತನೆಗಳ ದೇವ-ಮಾನವ ಸಂಬಂಧವನ್ನು ಪ್ರತಿನಿಧಿಸುವ ನೆಲೆಯಲ್ಲಿ ಭಾಷೆ ಹೊಸ ಚಹರೆಗಳನ್ನು ಪಡೆದುಕೊಳ್ಳುತ್ತದೆ. ಈ ಸಂಬಂಧದ ನಿಗೂಢತೆಯೇ ಮುಂಡಿಗೆಗಳ ಭಾಷೆಯಲ್ಲಿ ಮೈದಳೆಯುವುದು. ಈ ಎಲ್ಲ ಕೀರ್ತನೆಗಳಲ್ಲೂ ಕನಕದಾಸರು ಈ ಮೀರುವಿಕೆಯನ್ನು ಸಾಧಿಸಿದ್ದಾರೆಂದು ಹೇಳಲಾಗದು. ಅಲ್ಲಿಯೂ ಪ್ರಮಾಣವಿಲ್ಲದ ಭಕ್ತಿಗಳಿಂದ, ಪಾರಂಪರಿಕ ಚಿಂತನೆಗಳಿಂದ ಸ್ಥಗಿತಗೊಂಡ, ಭಾವೋದ್ದೀಪಕವಲ್ಲದ ಸ್ತೋತ್ರಗಳ ಮಾದರಿ ತಲೆಹಾಕುವುದುಂಟು, ಆದರೆ ಮೀರುವಿಕೆ ಸಾಧ್ಯವಾಗುವಲ್ಲಿ ಮಾತ್ರ ಅವರ ಅನನ್ಯತೆ, ಅವರ ಕೀರ್ತನೆಗಳ ಭಾಷಿಕ ಸ್ವರೂಪದ ಮಹತ್ವ ಗೋಚರವಾಗುತ್ತದೆ. ಕೆಟ್ಟಕೂಗನು ಕೂಗಿ ಗುಳಿ ಬಾಯಾರುವಂಥ ಹೊಟ್ಟೆಗೇಡ ಮೃಗಗಳೆಲ್ಲ ಶ್ರೀವೈಷ್ಣವರೆ ಕೃಷ್ಣ | ೩. ಮಾಯಾಪಾಶದ ಬಲೆಯೊಳು ಸಿಕ್ಕಿ ತೊಳಲುವ ಕಾಯ ಪಂಚೇಂದ್ರಿಯ ಗತಿ ನಿನ್ನದು ಕಾಯಜಪಿತ ಕಾಗಿನೆಲೆಯಾದಿಕೇಶವ ರಾಯ ನೀನಲ್ಲದೆ ನರರು ಸ್ವತಂತ್ರರೆ || ಈ ಉದಾಹರಣೆಗಳು ಮೇಲಿನ ಮಾತನ್ನು ಸಮರ್ಥಿಸುವಂತಿವೆ. ಗಮನಿಸಬೇಕಾದ ಅಂಶವೊಂದಿದೆ. ಮೂರು ಕಡೆಗಳಲ್ಲಿ ಕಾಯುವಾತನ ನಿಜಕ್ಕಿಂತ, ಮೊರೆಹೋಗುವಾತನ ನಿಜವೇ ಮುಖ್ಯವಾದುದು. ಕಾಯುವವನ ಕ್ರಿಯಾಶೀಲತೆಯಾಗಲೀ, ಸ್ವಾತಂತ್ರ್ಯವಾಗಲೀ ಇಲ್ಲದ 'ಅಧೀನ' ಮಾನವಭಕ್ತನ ವಾಸ್ತವ ಈ ಕೀರ್ತನೆಗಳಲ್ಲಿ ರಾಚುತ್ತದೆ. ಈ ಮಾತಿಗೆ ಪೂರಕವಾಗಿ ಅವರ ಬೇರೆ ಬೇರೆ ಕೀರ್ತನೆಗಳಲ್ಲಿ ಬರುವ ಮೂರು ಉಲ್ಲೇಖಗಳನ್ನು ಗಮನಿಸಬಹುದು. 'ತಲ್ಲಣಿಸದಿರು ಕಂಡ್ಯಾ ತಾಳು ಮನವೇ 'ನೆಚ್ಚದಿರು ಸಂಸಾರ ನೆಲೆಯಲ್ಲವೀ ಕಾಯ' “ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ' ಈ ಸಾಲುಗಳು ಕಾಯುವವನ ಅಸ್ತಿತ್ವಕ್ಕಿಂತ ಮೊರೆಹೋಗುವವನ 'ತಲ್ಲಣ'ಗಳು ಮುಖ್ಯವಾಗುತ್ತವೆ. ಹಾಗಾಗಿ ಸ್ತೋತ್ರ ಸಾಹಿತ್ಯದ ನಂಬಿಕೆ ಇಲ್ಲಿ ಅಸಾಧ್ಯ. ಕೀರ್ತನೆಗಳು ಭಾಷಿಕ ರೂಪದಲ್ಲೇ ಹಾಗಾಗಿ ಸ್ತೋತ್ರಗಳಿಗಿಂತ ಭಿನ್ನ. ಈ ಸಂವಾದ ರೂಪದ ಕೀರ್ತನೆಗಳಲ್ಲಿ ಬರುವ 'ನೀನು' ಕೂತೂಹಲಕಾರಿ ಸಾಧ್ಯತೆಗಳನ್ನು ಹೊಂದಿದೆ. ಕೆಲವು ಕಡೆಗಳಲ್ಲಿ ನೀನು' ಕಾಯುವಾತನನ್ನು ಗಮನಿಸಿದರೆ, ಉಳಿದೆಡೆಗಳಲ್ಲಿ ಅದು ಭಕ್ತನ, ಮೊರೆಹೋಗುವವನ ಪ್ರತಿ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಈ ಪ್ರತಿವ್ಯಕ್ತಿತ್ವ ಇಡಿಯಾಗಿ ಮಾನವ ಕುಲವನ್ನು ಪ್ರತಿನಿಧಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಅದೂ ಅಂಥ ಅಪೇಕ್ಷೆಗಳನ್ನು ಪ್ರಕಟಿಸುತ್ತದೆ. ಕಥನಕಾರ ಕನಕದಾಸರಿಗೂ ಕೀರ್ತನಕಾರ ಕನಕದಾಸರಿಗೂ ಇರುವ ವ್ಯತ್ಯಾಸ ಭಾಷಿಕವಾಗಿ ಮೈದಳೆಯುವುದು ಮೇಲೆ ಹೇಳಿದ ನೆಲೆಗಳಲ್ಲಿ ಕಥನಕಾರರಾಗಿ ಅವರು ಚೆನ್ನಾಗಿ ತಾಲೀಮು ಮಾಡಿದ ಸಂಗೀತಗಾರನಂತೆ, ಆದರೆ ಕಲಿತಿದ್ದಕ್ಕೆ ಮಾತ್ರ ಮಿತಗೊಳ್ಳುವಂತೆ ತೋರುತ್ತಾರೆ. ಅಲ್ಲಿ ಅವರು