ಪುಟ:Kanakadasa darshana Vol 1 Pages 561-1028.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೪೨ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಸಾಹಿತ್ಯದ ಮೇಲೆ ಅವರ ಹಿಂದಿನ ಮತ್ತು ಅವರ ಸಮಕಾಲೀನ ಕವಿಗಳ ಪ್ರಭಾವ ೬೪೩ ವಿನೂತನ ಕೃತಿಯಾಗಿದೆ. ದ್ವಾರಕೆಯನ್ನು ವರ್ಣಿಸುವ ಸಂದರ್ಭದಲ್ಲಿ ಪಂಪ ಬನವಾಸಿಯನ್ನು ವರ್ಣಿಸಿದಂತೆ ಕನಕದಾಸರು ವಿಜಯನಗರವನ್ನು ವರ್ಣಿಸಿ ಈ ಕಾವ್ಯ ಪ್ರಾಚೀನ ಪರಂಪರೆ ಮತ್ತು ಸಂಸ್ಕೃತಿಗಳು ಕನ್ನಡಿಗರ ಸ್ಮೃತಿಯಲ್ಲಿ ಸದಾ ಹಸಿರಾಗಿರುವಂತೆ ಮಾಡಿದ್ದಾರೆ. ಶಂಬರನಂಥ ರಾಕ್ಷಸನ ಹೃದಯದಲ್ಲೂ ಇರುವ ಮಾನವೀಯತೆ, ಬಾಣಾಸುರನಂಥ ಸಾಹಸಿಯಲ್ಲಿಯೂ ಇರುವ ಅನನ್ಯ ಶಿವಭಕ್ತಿ ಇವುಗಳ ಮೂಲಕ ತಮ್ಮ ವಿಶ್ವಧರ್ಮದ ಸಂದೇಶವನ್ನು ಸಾರಿದ್ದಾರೆ. ರುಕ್ಕಿಣಿಯಂಥ ಶ್ರೀಕೃಷ್ಣ ಭಾರ್ಯೆಗೂ ಬಂಜೆತನ ಹೇಗೆ ಕಾಡುತ್ತಿತ್ತು ಎಂಬುದನ್ನು ವರ್ಣಿಸಲು ತೊಡಗುವಾಗ ಜಾನಪದ ಗೀತೆಗಳಲ್ಲಿ ಕಂಡು ಬರುವ ತಾಯ್ತನದ ಹಂಬಲದ ಗೀತೆಗಳ ಸವಿಯನ್ನು ಕಾವ್ಯದ ಮೂಲಕ ಉಣಬಡಿಸಿದ್ದಾರೆ. 'ಹಾಲಿಗೆ ಹಂಬಲಿಸುವನಲ್ಲ ಬಿಡದಂಬೆಗಾಲಿಕ್ಕಿ ತೊಳಲುವನಲ್ಲ' ಮೊದಲಾದ ಸಾಲುಗಳೂ “ಅತ್ತು ಕಾಡುವನಲ್ಲ ಮತ್ತೆ ಬೇಡುವನಲ್ಲ' ಮೊದಲಾದ ಸಾಲುಗಳನ್ನು ನೆನಪಿಸುತ್ತವೆ. ಶಿವ ಮನ್ಮಥನನ್ನು ಹಣೆಗಣ್ಣಿಂದ ಸುಡುವ ದೃಶ್ಯದ ವರ್ಣನೆಯಲ್ಲಿ ಹರಿಹರನ ಗಿರಿಜಾಕಲ್ಯಾಣದ ಪ್ರಭಾವವನ್ನು ಗುರುತಿಸಬಹುದು. ಬಾಣಾಸುರ ಹರನನ್ನು ಒಲಿಸಿಕೊಂಡು ವರವನ್ನು ಬೇಡುವಾಗ ತನ್ನನ್ನು ಗೆಲ್ಲುವಂತಹ ವೀರನನ್ನು ದಯಪಾಲಿಸು ಎಂದು ಕೇಳುವುದು ಆ ಕಾಲದ ಕ್ಷಾತ್ರಧರ್ಮವನ್ನು ಪ್ರತಿಬಿಂಬಿಸುವ ಘಟನೆಯಾಗಿದೆ. 'ಓಡಿಂ ಬೇಡಿಂ ಇದು ಚಾಗದ ಬೀರರ ಮಾತು ಕರ್ಣನಾ' ಎಂದು ಪಂಪ ಹೇಳಿದಂತೆ ಕೃಷ್ಣದೇವರಾಯನ ಕಾಲದ ವೀರ ಮತ್ತು ಚಾಗಗಳನ್ನು ಬಿಂಬಿಸುವ ಒಂದು ಪ್ರಸಂಗದಂತೆ ಈ ಸನ್ನಿವೇಶ ಕಂಡು ಬರುತ್ತದೆ. ಬಾಣಾಸುರನ ಮಗಳು ಉಷೆ ತನ್ನ ಸಖಿ ಚಿತ್ರಲೇಖೆಯೊಂದಿಗೆ ತಾನು ಕಂಡ ಕನಸಿನ ಮದನನನ್ನು ಕುರಿತು ವರ್ಣಿಸಿದಾಗ, ಅವಳು ಅನೇಕ ಚಿತ್ರಪಟಗಳನ್ನು ಬರೆದು ಕೊನೆಗೆ ಅನಿರುದ್ಧನ ಚಿತ್ರವನ್ನು ಬರೆದಾಗ ಉಷೆ ಇವನೇ ತನ್ನನ್ನು ಕನಸಿನಲ್ಲಿ ರಮಿಸಿದವನೆಂದು ಗುರುತಿಸುವ ದೃಶ್ಯದಲ್ಲಿ ಪಂಪನ ಆದಿಪುರಾಣದ ಶ್ರೀಮತೀ ಸ್ವಯಂವರ ಸಂದರ್ಭದಲ್ಲಿ ಪಂಡಿತೆ ಎಂಬ ದಾದಿ ಅವಳು ಸ್ವರ್ಗದಲ್ಲಿ ಸ್ವಯಂಪ್ರಭೆಯಾಗಿದ್ದಾಗ ಲಲಿತಾಂಗನೊಂದಿಗೆ ಅನುಭವಿಸಿದ ವಿಶಿಷ್ಟ ಏಕಾಂತ ಸುಖ ಚಿತ್ರಗಳನ್ನು ಚಿತ್ರಪಟದಲ್ಲಿ ಬರೆದು ಅದನ್ನು ತೂಗು ಹಾಕಿ ಕೊನೆಗೆ ವಜ್ರಜಂಘನನ್ನು ಪತ್ತೆ ಮಾಡಿ ಶ್ರೀಮತಿಯೊಂದಿಗೆ ಕೂಡಿಸಿದ ಚಿತ್ರ ನೆನಪಾಗುತ್ತದೆ. ಆದರೆ ಅಲ್ಲಿ ಬರುವ ಶೈಲೂಷ ವೇಷಗಳನ್ನು ಧರಿಸಿದ ಅಲೀಕ ದುರ್ದಂತರ ವಿಫಲ ಪ್ರಯತ್ನದ ನಾಟಕೀಯ ಸನ್ನಿವೇಶ ಇಲ್ಲಿ ಇಲ್ಲ. ದ್ವಾರಕಾ ಶ್ರೀಕೃಷ್ಣನ ವಾಸ ಸ್ಥಾನವಾದರೆ ವಿಜಯನಗರ ಶ್ರೀಕೃಷ್ಣದೇವರಾಯನ ವಾಸಸ್ಥಾನ. ಇಲ್ಲಿಯ ಸದೃಶೀಕರಣ ವಿಶಿಷ್ಟವಾಗಿದೆ. ಪೌರಾಣಿಕ ವಿಷಯಗಳನ್ನೂ ಸಮಕಾಲೀನಗೊಳಿಸುವುದಲ್ಲದೆ Mythಗೆ ಭೂಮಿಯ ತೊಡವನ್ನು ತೊಡಿಸಿ ಸಹಜಗೊಳಿಸಿದ್ದಲ್ಲದೆ ಸಮಕಾಲೀನ ಇತಿಹಾಸವನ್ನೂ ಕಾವ್ಯದಲ್ಲಿ ಅಳವಡಿಸಿ ಪಂಪಾದಿ ಚಂಪೂ ಕವಿಗಳಂತೆ ಇತಿಹಾಸ ಕಾವ್ಯವನ್ನು ರಚಿಸಿದ್ದಾರೆ, ಕನಕದಾಸರು, ಮಾರ್ಗಕಾವ್ಯವಲ್ಲದೆ ದೇಸಿಯಲ್ಲೂ ಇತಿಹಾಸ ಕಾವ್ಯ ರಚನೆ ಮಾಡಬಹುದೆಂಬುದನ್ನು ಸಾಬೀತುಗೊಳಿಸಿದ್ದಾರೆ. “ಕನಕದಾಸರ ಕೃತಿಗಳ ನಿಜವಾದ ವಿಶೇಷತೆ ಇರುವುದು ಅವುಗಳು ಪ್ರಕಟಿಸುವ ಸಮಕಾಲೀನ ಜೀವನದ ಚಿತ್ರಣದಲ್ಲಿ, ಸಾಮಾಜಿಕ ಪ್ರಜ್ಞೆ ಎಂದರೆ ಕೇವಲ ರಾಜ ಮಹಾರಾಜರ ಭೋಗ-ವೈಭವ ಜೀವನ ಪ್ರಜ್ಞೆ ಎನ್ನುವ ಭ್ರಮೆಯ ಗರಬಡಿದ ಎಷ್ಟೋ ಕವಿಗಳ ರಚನೆಯಿಂದ ಬೇಸತ್ತವರಿಗೆ ಕನಕದಾಸರ ಕೃತಿಗಳಲ್ಲಿ ಸಮಕಾಲೀನ ಜೀವನದ ಯಥಾವತ್ತಾದ ಸಹಜ ವರ್ಣನೆಗಳನ್ನು ಕಂಡು ನಿಜಕ್ಕೂ ಸಂತೋಷವಾಗುತ್ತದೆ” ನಳ ಚರಿತ್ರೆ : ಮಹಾಭಾರತದ ನಳೋಪಾಖ್ಯಾನ ಮತ್ತು ಶ್ರೀ ಹರ್ಷನ ನೈಷಧಗಳನ್ನು ಹಿನ್ನೆಲೆಯಾಗುಳ್ಳ 'ನಳಚರಿತ್ರೆ' ಕನಕದಾಸರ ಅಧ್ಯಯನಶೀಲ ಸಂಶೋಧನಾದೃಷ್ಟಿ ಮತ್ತು ವ್ಯಕ್ತಿವಿಶಿಷ್ಟ ಪ್ರತಿಭೆಗಳ ಸಂಗಮವಾಗಿದ್ದರೂ ಭಾಮಿನೀ ಷಟ್ಟದಿಯ ಅನುಕರಣೆಯಿಂದ ಹಿಡಿದು ವಸ್ತು ನಿರ್ವಹಣೆ, ಶೈಲಿಯವರೆಗೂ ಹಬ್ಬಿರುವ ಕುಮಾರವ್ಯಾಸನ ನೇರ ಪ್ರಭಾವಕ್ಕೆ ಒಂದು ಸ್ಪಷ್ಟ ನಿದರ್ಶನವಾಗಿದೆ. - “ನಳೋಪಾಖ್ಯಾನ' ಮಹಾಭಾರತಕ್ಕಿಂತ ಪ್ರಾಚೀನವಾದ ಜಾನಪದ ಕಥೆಯೆಂದೂ, ಇದು ಸೋಮದೇವನ ಕಥಾಸರಿತ್ಸಾಗರ, ಗುಣಾಡ್ಯನ ಬೃಹತ್ಕಥೆ, ಶಾತಪಥ ಬ್ರಾಹ್ಮಣ, ಋಗೈದ ಇವುಗಳಿಂದ ಪ್ರಭಾವಿತವಾದ, ಆರ್ಯೇತರ ಬುಡಕಟ್ಟಿನ ರಾಜರಾಣಿಯರ ಪ್ರೇಮಕಥೆಯ ಒಂದು ಪ್ರಕಟಿತ ರೂಪವೆಂದೂ ಸಾಧಾರವಾಗಿ 'ನಳಚರಿತ್ರೆ'ಯ ಸಂಪಾದಕರಾದ ಡಾ. ದೇ. ಜ. ಗೌ ಅವರು ವಿಸ್ತಾರವಾಗಿ ಪ್ರತಿಪಾದಿಸಿದ್ದಾರೆ. ಮಾನವ ತನ್ನ ಮೌಲ್ಯ ನಿಷ್ಠೆಯಿಂದ ದೇವತೆಗಳನ್ನೂ ಹಿಂದಿಕ್ಕಬಲ್ಲನೆಂಬ ಮತ್ತು ಪ್ರೇಮ ಶುದ್ಧವಾಗಿದ್ದಲ್ಲಿ ಅಮರವಾದದ್ದೆಂಬ, ಅರಸನಾದವನು ಆಳಾಗಲೂ ಬಲ್ಲನೆಂಬ, ಮೌಲ್ಯಗಳನ್ನು ಪ್ರತಿಪಾದಿಸುವ ಈ ಕಥಾವಸ್ತು ತನ್ನ ಘಟನೆಗಳ ಬಾಹುಳ್ಯ ಮತ್ತು ವೈವಿಧ್ಯದಿಂದ 4. ಕನಕದಾಸರ ವಿಶಿಷ್ಟತೆ-ಜಿ. ಎಸ್. ಎಸ್.-ಪು. 107 5. ನಳಚರಿತ್ರೆ, ಸಂ. : ದೇಜಗೌ ಮುನ್ನುಡಿ, ವಿಶ್ವಕನ್ನಡ ಸಮ್ಮೇಳನ ಪ್ರಕಟಣೆ, 1985.