ಪುಟ:Kanakadasa darshana Vol 1 Pages 561-1028.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೪೪ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಸಾಹಿತ್ಯದ ಮೇಲೆ ಅವರ ಹಿಂದಿನ ಮತ್ತು ಅವರ ಸಮಕಾಲೀನ ಕವಿಗಳ ಪ್ರಭಾವ ೬೪೫ ರೋಚಕ ರಮಣೀಯವಾಗಿ ಪ್ರಾಚೀನ ಕಾಲದಿಂದ ಅರ್ವಾಚೀನದವರೆಗೂ ಸಾಗುತ್ತಾ ಬಂದಿದೆ. ರಾಜರುಗಳ ಸಪ್ತವ್ಯಸನಗಳಲ್ಲಿ ಒಂದಾದ ದ್ಯೋತವ್ಯಸನ ರಾಜರುಗಳ ಹಾಗೂ ಅವರನ್ನು ನಂಬಿದವರುಗಳ ಕಷ್ಟನಷ್ಟ ಪರಂಪರೆಯನ್ನೇ ತೆರೆಯುತ್ತದೆ ಎಂಬುದನ್ನು ಮನಮುಟ್ಟುವಂತೆ ವರ್ಣಿಸುವ ಈ ಕಥಾವಸ್ತು ಅನೇಕ ಬಗೆಯಲ್ಲಿ ಅನೇಕ ಕವಿಗಳಿಂದ ಚರ್ವಿತ ಚರ್ವಣವಾಗಿದ್ದರೂ ತನ್ನ ಹೊಸತನವನ್ನು ಕಳೆದುಕೊಂಡಿಲ್ಲ. ವ್ಯಾಸ ಮಹಾಭಾರತದ ವನಪರ್ವದಲ್ಲಿ ಇಪ್ಪತ್ತೆಂಟು ಅಧ್ಯಾಯಗಳಲ್ಲಿ ಹರಡಿರುವ ಈ ಕಥೆ, ಕುಮಾರವ್ಯಾಸನಲ್ಲಿ ಕೇವಲ ಮೂರು ಪದ್ಯಗಳಲ್ಲಿ ಮುಗಿದು ಹೋಗಿದೆ. ಕಾಳಿದಾಸ ಶಕುಂತಲೋಪಾಖ್ಯಾನವನ್ನು ಆಧರಿಸಿ ವಿಶ್ವವಿಖ್ಯಾತ ಶಾಕುಂತಲ ನಾಟಕವನ್ನು ರಚಿಸಿದಂತೆ ಕನಕದಾಸರು ನಳೋಪಾಖ್ಯಾನವನ್ನು ಆಧರಿಸಿ 'ನಳಚರಿತ್ರೆಯನ್ನು ರಚಿಸಿದ್ದಾರೆ. ಈ ಕೃತಿಗೆ ಅವರು ಹಿಂದಿನ ಅನೇಕ ಕವಿಗಳಿಗೆ ಆಭಾರಿ. ಆದರೆ ಅವರು ತುಂಬಾ ಋಣಿಯಾಗಿರುವುದು ಕುಮಾರವ್ಯಾಸನಿಗೆ-ವಸ್ತುವಿಗಲ್ಲ, ವಿನ್ಯಾಸಕ್ಕೆ, ಮೂಲ ಮಹಾಭಾರತದಲ್ಲಿ ಬರುವ ಉಪದೇಶಾತ್ಮಕ ವಿವರಗಳನ್ನು ಬಿಟ್ಟು ಕಥೆಯ ಹಂದರವನ್ನು ಮಾತ್ರ ಸ್ವೀಕರಿಸಿದ್ದಾರೆ ಕನಕದಾಸರು. ನಳ ದೂತದಲ್ಲಿ ಪುಷ್ಕರನಿಗೆ ಸೋಲುವುದು, ರಾಜ್ಯಪರಿತ್ಯಕ್ತನಾಗಿ ಹೆಂಡತಿಯೊಂದಿಗೆ ಕಾಡಿನಲ್ಲಿ ಅಲೆಯುವುದು, ಕಲಿಯ ಪ್ರಭಾವದಿಂದ ಉಟ್ಟ ಬಟ್ಟೆಯನ್ನೂ ಕಳೆದುಕೊಂಡು ಹೆಂಡತಿಯ ಸೀರೆಯಲ್ಲಿ ಅರ್ಧವನ್ನು ಪಡೆಯುವುದು, ಕಾರ್ಕೊಟಕನ ದಂಶನಕ್ಕೆ ಒಳಗಾಗಿ ವಿರೂಪಗೊಳ್ಳುವುದು, ತಲೆ ಮರೆಸಿಕೊಂಡು ಕೆಲವು ಕಾಲ ಇದ್ದು ನಂತರ ಅಶ್ವಹೃದಯನ್ನು ಋತುಪರ್ಣನಿಗೆ ಹೇಳಿಕೊಟ್ಟು ಅವನಿಂದ ಅಕ್ಷಹೃದಯವನ್ನು ಪಡೆದು ಪುಷ್ಕರನೊಂದಿಗೆ ಮತ್ತೆ ಜೂಜಾಡಿ ಕಳೆದುಕೊಂಡದ್ದೆಲ್ಲವನ್ನೂ ಹಿಂದಕ್ಕೆ ಪಡೆಯುವುದು ಇವೇ ಮೊದಲಾದ ರೋಚಕ ಸನ್ನಿವೇಶಗಳನ್ನೊಳಗೊಂಡ ಈ ಕಥೆ ವನವಾಸ ಮತ್ತು ಅಜ್ಞಾತವಾಸಗಳ ಪರಂಪರೆಯಲ್ಲಿ ಸಾಗಿ ಬಂದ ಮತ್ತೊಂದು ಕಥೆಯಾಗಿದೆ. ರಾಮಾಯಣದಲ್ಲಿ ರಾಮಲಕ್ಷ್ಮಣರಿಗೆ ವನವಾಸವಾದರೆ ಸೀತೆಗೆ ಲಂಕೆಯಲ್ಲಿ ಕೆಲವು ಕಾಲ ಅಜ್ಞಾತವಾಸ, ಹದಿನಾಲ್ಕು ವರ್ಷ ವನವಾಸದಿಂದ ಹಿಂದಿರುಗಿದ ಮೇಲೂ ಸೀತೆಗೆ ಅಜ್ಞಾತವಾಸ ತಪ್ಪಲಿಲ್ಲ, ಮತ್ತೆ ಕಾಡಿಗೆ ಹೋಗಬೇಕಾಗುತ್ತದೆ. ರಾಜರುಗಳ ಅವಿವೇಕವನ್ನು (ಅದು ದಶರಥ ಇರಬಹುದು, ಧೃತರಾಷ್ಟ್ರ ಇರಬಹುದು) ಎತ್ತಿ ಹಿಡಿಯುವ ಈ ಘಟನಾ ಪರಂಪರೆಯ ವಸ್ತುವನ್ನೊಳಗೊಂಡ ಈ ಕಥಾ ವಸ್ತು ಬೇರೆ ಬೇರೆ ರೂಪಧರಿಸಿ ನಮ್ಮ ಕಣ್ಮುಂದೆ ನಿಲ್ಲುತ್ತಾ ಬಂದಿದೆ. ಒಂದು ಮತ್ತೊಂದರಂತಿಲ್ಲ ಎಂಬ ಕಾರಣಕ್ಕಾಗಿ ಈ ವಸ್ತು ಚರ್ವಿತಚರ್ವಣ ಎನಿಸಿಲ್ಲ. ಕನಕದಾಸರು ಕುಮಾರವ್ಯಾಸನಿಗೆ ಹೊತ್ತಿರುವ ಋಣಭಾರವನ್ನು ಪರಿಶೀಲಿಸಬಹುದು. ಪರಂಪರಾಗತ ದೇವದೇವತೆಯರ ಸ್ತುತಿಯಿಂದ ಹಿಡಿದು ಫಲಶ್ರುತಿಯವರೆಗೆ ಇದರ ಹರಹಿದೆ. ಕುಮಾರವ್ಯಾಸ ಭಾರತ ನಳಚರಿತ್ರೆ ತಾಯೆ ಬಿನ್ನಹವಿಂದು ನಿಮ್ಮಯ ತಾಯೆ ಬಿನ್ನಹವಿಂದು ನಿಮ್ಮಯ ರಾಯಸೋತನು ಜೂಜಿನಲಿ ಕುರು ರಾಯ ಸೋತನು ಜೂಜಿನಲಿ ನಿ ರಾಯ ಗೆಲಿದನು ಕೋಶವನು ಗಜತುರಗರಥ ರ್ದಾಯದಲಿ ಪುಷ್ಕರನು ಗೆಲಿದನು ಸಹಿತ ಸಕಲ ರಾಜ್ಯವನು ನೋಯಲಾಗದು ಹಲವು ಮಾತೇ ನೋಯಲಾಗದು ಚಿತ್ತದಲಿ ನೆಲೆ ನಾ ಯುಧಿಷ್ಠಿರ ನೃಪತಿಸೋತನು ಬೀಯವಾದುದು ಸಿರಿಯುಯಿನ್ನಿದ ತಾಯೆ ಭೀಮಾರ್ಜುನ ನಕುಲಸಹದೇವ | ರಾಯತವ ನೀವ ನೀವೃಹಿತ|| ವಿಪ್ರ ಕೈಮುಗಿದು || (ಸಭಾಪರ್ವ, ಸಂಧಿ ೧೪-ಪದ್ಯ ೫೦.) (ಸಂಧಿ ೪-ಪದ್ಯ ೩೩) ಕುಮಾರವ್ಯಾಸ ಭಾರತ ನಳಚರಿತ್ರೆ ಅರಳಿದಂಬುಜವನಕೆ ಮಂಜಿನ ಕಮಲ ವನದಲಿ ಮಂಜು ಸುರಿದಾ ಸರಿಯು ಸುರಿವಂದದಲಿ ಕ್ರಮದ ಬಗೆಯಲಿ ಸತಿಯಳಿಗೆ ಮುಖ .................ಮುಖ ಕಮಲಬಾಡಿತು............... ಸರಸಿರುಹ ಬಾಡಿತು......... || (ಸಭಾಪರ್ವ-೧೪-೫೧) ಜನನವೇ ಪಾಂಚಾಲರಾಯನ ಜನನವೇ ವರ ಭೀಮರಾಯನ ಮನೆ ಮನೋವಲ್ಲಭರದಾರೆನೆ ಮನೆಯೊಳಗೆ ನಳಚಕ್ರವರ್ತಿಯೆ ಮನುಜಗಿನುಜರುಗಣ್ಯವೇಗೀರ್ವಾಣದಿಂ ಇನಿಯನಗ್ಗದ ವೀರಸೇನನೆ ಮಾವನಾಗಿರಲು ವನದೊಳಿಭಕರಿಗಳಿಗೆ ತಾ ನಿಜ ಎನಗೆ ಬಂದೆಡರೀ ವಿರಾಟನ ತನುವ ತೆರಬೇಕೆಂಬ ಕಾರಣ ವನಿತೆಯರುಗಳ ಮುಡಿಯ ಕಟ್ಟುವ ತನಗಿರಲು ನೀವೇನ ಮಾಡುವಿರೆಂದಳಿಂದುಮುಖಿ ||