ಪುಟ:Kanakadasa darshana Vol 1 Pages 561-1028.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೪ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಸಾಹಿತ್ಯದ ಮೇಲೆ ಅವರ ಹಿಂದಿನ ಮತ್ತು ಅವರ ಸಮಕಾಲೀನ ಕವಿಗಳ ಪ್ರಭಾವ ೬೪೭ ತನುವ ತಿಗುರುವಕಾಲನೊತ್ತುವ ಕೆಲಸ (೫-೪೯) ದುತ್ತಾಹ || (ವಿರಾಟಪರ್ವ ೩-೬೦) ಇನ್ನು ಹುಟ್ಟದೆಯಿರಲಿ ನಾರಿಯ ಏನನೆಂಬೆನು ತನ್ನ ಪುಣ್ಯದ ರೆನ್ನವೊಲು ಭಂಗಿತರು ಭುವನದೊ ಹಾನಿಯನು ಎಲೆ ತಾಯೆ ಲೋಕದ ಭಿನ್ನು ಜನಿಸಲು ಬೇಡಗಂಡರು ಭೀಮಸನ್ನಿಭರು ಮಾನಿನಿಯೊಳಾರುಂಟುಎನ್ನವೋಲ್ ಎನ್ನವೊಲು ಪಾಂಡವರವೊಲ ಸಂ ತೊಳಲಿ ಬಳಲಿದರು ಪನ್ನ ದುಃಖಿಗಳಾರು ನವೆದರು ದಾನವಾನರರೊಳಗೆ ಕಾಣೆ ಸ ಮುನ್ನಿನವರೊಳಗೆಂದು ದೌಪದಿ ಹಿರಿದುಹಲು ಮಾನವನು ನಳನೃಪಗೆಯಿದ ಬಿದಳು || ಕೇನ ಮಾಡುವೆನೆನುತ ಕಂಬನಿದುಂಬಿದಳು ತರುಣಿ || (ವಿರಾಟ ಪರ್ವ ೩-೫೭) 'ಅಪಜಯ ನಾರಿಯ ಸೆರಗ ಹಿಡಿದನು' ಎಂಬಂಥ ರೂಪಕವನ್ನು ಹಾಗೆ ಭಟ್ಟಿಯಿಳಿಸಿದ್ದಾನೆ. “ನೆಳಲುತನುವಿನ ಬಳಿಯೊಳಲ್ಲದೆ ಚಲಿಸುವುದೆ, ಮೂಗಿನಲಿ ಬೆರಳಿಟ್ಟು ಮುಕುಟವ ತೂಗಿದನು, ದಿನಪನಿದಿರಲಿ ತಮದ ಹಾವಳಿಯೆ, ಮದಕರಿಗೆ ನೊರಜಂತರವೆ' ಇತ್ಯಾದಿ ಅನೇಕ ಪದಪುಂಜಗಳೂ, ವಾಕ್ಯಪುಂಜಗಳು ಹೇರಳವಾಗಿ ಕುಮಾರವ್ಯಾಸನಿಂದ ಕನಕದಾಸರ ಬುಟ್ಟಿಗೆ ಬಿದ್ದಿವೆ. ಕನಕದಾಸರ ಕೈ ಕುಮಾರವ್ಯಾಸನ ಬೊಕ್ಕಣದಲ್ಲಿ ಎಂಬ ಮಾತು ಸತ್ಯವಾಗಿದೆ. ಇಷ್ಟೆಲ್ಲ ಋಣಭಾರವನ್ನು ಒಪ್ಪಿಕೊಂಡೂ ನಳಚರಿತ್ರೆ ಒಂದು ಸ್ವತಂತ್ರ ಕೃತಿಯಂತೆ ನಮ್ಮ ಮನ ಸೆಳೆಯುವುದು ಅಲ್ಲಲ್ಲಿ ಮೂಡಿರುವ ಸ್ಪೋಪಜ್ಞತೆಯ ತಂಗುದಾಣಗಳಿಂದ. ದಮಯಂತಿಯನ್ನು ನೋಡಿ ಬಣಜಿಗರು 'ಆರಿವಳು ವನಲಕ್ಷ್ಮಿಯೋ ಸುರನಾರಿಯೋ ಮಾರಾಂಗನೆಯೊ' ಎಂದು ಭಯಗೊಂಡು ಓಡಿದ ದೃಶ್ಯ, ಕಾರ್ಕೊಟಕ ಕಡಿದಾಗ ಸುಂದರನಾಗಿದ್ದ ನಳನೃಪ 'ದೊಡ್ಡ ಹೊಟ್ಟೆಯ ಗೂನುಬೆನ್ನಿನ ಅಡ್ಡ ಮೋರೆಯ ಗಂಟು ಮೂಗಿನ, ದೊಡ್ಡ ಕೈ ಕಾಲುಗಳವುದುರಿದ ರೋಮ ಮೀಸೆಗಳ, ಜಿಡ್ಡುದೇಹದ ಗುಜ್ಜು ಗೊರಲಿನ ಗಿಡ್ಡು ರೂಪಿನ ಹರಕು ಗಡ್ಡದ ಹೆಡ್ಡನಾದ ಕುರೂಪಿತನದಲಿ ನೃಪತಿ ವಿಷದಿಂದ ಇಂಥ ವರ್ಣನೆಗಳು ಕನಕದಾಸರ ಸ್ಪೋಪಜ್ಞತೆಗೆ ನಿದರ್ಶನವಾಗಿವೆ. ಅವರ ಕೀರ್ತಿ ಪ್ರತಿಷ್ಠಾಪನೆಗೆ ನಳಚರಿತ್ರೆಯೊಂದೇ ಸಾಕು. ಗದುಗಿನ ಭಾರತದಷ್ಟೇ ನಳ ಚರಿತ್ರೆಯೂ ಜನಮಾನ್ಯತೆ ಪಡೆದಿದೆ.”೬ ಎಂಬ ಮಾತನ್ನು ಒಪ್ಪಬಹುದಾಗಿದೆ. ರಾಮಧಾನ್ಯಚರಿತ್ರೆ : ಕನಕದಾಸರ ಸ್ವತಂತ್ರ ರಚನೆಯೆಂದು ಕಂಡುಬರುವ ಈ ಕೃತಿ ಅವರ ಕವಿತಾಶಕ್ತಿಯನ್ನು ವಿಜೃಂಭಿಸುವ ಕುಶಲ ಕರ್ಮವೇನಲ್ಲ. 'ರಾಗಿ ಎಂಬ ಶಬ್ದಕ್ಕೆ ರಾಘವ ಎಂಬುದು ಮೂಲವಿರಬಹುದೆಂಬಂತೆ ಭಾವಿಸಿದ ಅಪನಿಷ್ಪತ್ತಿಯ ನೆಲೆಗಟ್ಟಿನ ಮೇಲೆ ಕಟ್ಟಿದ ಸ್ವಚ್ಛಂದ ಕಲ್ಪನೆ ಇದರ ವಸ್ತು. ರಾಗಿಯ ಮಹಾತ್ಯೆಯನ್ನು ಎತ್ತಿ ಹಿಡಿಯಲು ಉದ್ದೇಶಪೂರ್ವಕವಾಗಿ ಹೆಣೆದ ಕತೆ ಇದು.” “ಸಾಮಾನ್ಯ ಜಾನಪದ ಕಥೆಯ ಹಿನ್ನೆಲೆಯಿಂದ ಸಾಂಗತ್ಯದಲ್ಲೋ, ಅಥವಾ ಕೀರ್ತನೆಯ ಧಾಟಿಯಲ್ಲೋ ಬರೆದು ಇನ್ನೂ ಜನಪ್ರಿಯವನ್ನಾಗಿ ಮಾಡಬಹುದಾಗಿದ್ದ ಈ ವಸ್ತುವನ್ನು ಕನಕದಾಸರು ಯಾಕೆ ಇಂಥ ಪೌರಾಣಿಕ ಗಡಿಬಿಡಿಯ ಹಿನ್ನೆಲೆಯಲ್ಲಿ ಅದೂ ಷಟ್ಟದಿಯಲ್ಲಿ ಬರೆದರು ಎನ್ನುವ ಪ್ರಶ್ನೆಯೇ ಇದರ ವಿಶಿಷ್ಟತೆಯಾಗಿ ಕಾಡುತ್ತದೆ !' ಎಂಬ ವಿಮರ್ಶೆ ಕರಾರುವಾಕ್ಕಾಗಿದೆ. ಉತ್ತಮ ಜಾತಿಯವರು ಶ್ರೀಮಂತರು ಇವರ ಪೊಳ್ಳುತನ ಮತ್ತು ಬಡವರ ಗಟ್ಟಿತನ ಇವುಗಳನ್ನು ಪ್ರತಿಪಾದಿಸಲೆಂದೇ ಈ ಕೃತಿ ರಚನೆಯಾಗಿದೆ ಎಂದು ಭಾವಿಸುವ ವಿಮರ್ಶಕರೂ ಉಂಟು. ಆದರೆ ಪುರಾಣ ಮತ್ತು ಕಲಕತೆಗಳ ಸಮ್ಮಿಶ್ರಣ ಪ್ರತಿಭೆಯ ಕೊರತೆಯಿಂದಾಗಿ ಬಂದು ಸಾಮಾನ್ಯ ಸಂವಾದವಾಗಿ ನಮ್ಮ ಮುಂದೆ ನಿಲ್ಲುತ್ತದೆಯೇ ಹೊರತಾಗಿ ಹೊಸದೇನನ್ನೂ ಹೇಳುವುದಿಲ್ಲ. ಹರಿಭಕ್ತಿಸಾರ : ಪಾರಾಯಣ ಕಾವ್ಯವಾದ ಹರಿಭಕ್ತಿಸಾರ ೧೧೦ ನುಡಿಗಳ “ರಕ್ಷಿಸು ನಮ್ಮನನವರತ' ಎಂದು ಪ್ರತಿಪದ್ಯದಲ್ಲೂ ಕೊನೆಯಾಗುವ ಒಂದು ಕಾವ್ಯ. ಹರಿಹರನ 'ರಕ್ಷಾಶತಕ'ವನ್ನು ಹೋಲುವಂತೆ ಕಾಣುವ ಈ ಕೃತಿ ಭಾಮಿನಿ ಷಟ್ಟದಿಯಲ್ಲಿ ರಚಿತವಾಗಿದೆ ಎಂಬುದನ್ನು ಬಿಟ್ಟರೆ ಕಾವ್ಯಮಯತೆಯಿಂದಾಗಿ ನಮ್ಮನ್ನು ಸೆಳೆಯುವಂಥದ್ದಲ್ಲ. ಒಬ್ಬ ಭಕ್ತನ ಹೃದಯದ ಆರ್ತನಾದವನ್ನು ಇದರಲ್ಲಿ ಗುರುತಿಸಬಹುದು. ಹರಿಹರನ ಭಕ್ತಿಯ ಪರಾಕಾಷ್ಠೆಯನ್ನು ಹೋಲುವ ಕೆಲವು ಪದ್ಯಗಳು ಸಹನೀಯವಾಗಿವೆ. ರಾಮಾಯಣ, ಭಾರತ, ಭಾಗವತಗಳ ಕತೆಗಳ ಮೂಲಕ ಹರಿಪಾರಮ್ಯವನ್ನು ಕುರಿತು ಹೇಳುವ ಈ ಸೋತ್ರಮಾಲಿಕೆ ಭರ್ತೃಹರಿ, ಹರಿಹರಾದಿಗಳಿಗೆ ಋಣಿಯಾಗಿರುವಂತೆ ಕಾಣುತ್ತದೆ. 6. ನಳಚರಿತ್ರೆ-ದೇ. ಜ. ಗೌ.-ಮುನ್ನುಡಿ ಪುಟ. 29 | 7. ಕನಕದಾಸರ ವಿಶಿಷ್ಟತೆ-ಜಿ. ಎಸ್. ಎಸ್.-ಪುಟ. 106