ಪುಟ:Kanakadasa darshana Vol 1 Pages 561-1028.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೫೬ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ರಾಮಧಾನ್ಯ ಚರಿತೆ ೬೫೭ ವಿನಯದಿಂದಲಿ ಕರೆಸಿ ತಾರೆಂ ದೆನಲು ಮೆರೆದರು ತಳುವದವರನು ತಂದು ಸಭೆಯೊಳಗೆ || ಕಥೆಯ ಈ ಭಾಗ ಮೂಲ ರಾಮಾಯಣದ್ದಾಗಿರದೆ ಕನಕದಾಸರ ಸ್ವಂತ ಸೃಷ್ಟಿಯಾಗಿದೆ. ಈ ಪರಿಕಲ್ಪನೆ ಕನಕದಾಸರಿಗೆ ಯಕ್ಷಗಾನದಿಂದ ಬಂದಿರಲೂಬಹುದು. ಜನಪದ ಸಾಹಿತ್ಯದಿಂದ ಬಂದಿರಲೂಬಹುದು.* ಸ್ವಂತ ಸೃಷ್ಟಿಯಾಗಿರಲೂಬಹುದು; ರಾಮಾಯಣದಿಂದ ಹೊರತಾದ ಈ ಉಪಕಥೆಯನ್ನು ಕವಿ ಇಲ್ಲಿ ಪ್ರಧಾನ ಕಥೆಯಾಗಿ ಮಾಡಿಕೊಂಡು ಅಂದಿನ ಸಾಮಾಜಿಕ ಪದ್ಧತಿಗಳಿಗೆ ಕನ್ನಡಿ ಹಿಡಿದಿದ್ದಾರೆ. ರಾಗಿ ರಾಮಸಂಪರ್ಕದಿಂದ ರಾಮಧಾನ್ಯವಾಗಿ ದೈವಸಾಕ್ಷಾತ್ಕಾರ ಹೊಂದಿದ ಈ ಕಥೆ ಕುರುಬ ಹುಡುಗ ಸಂತ ಕನಕದಾಸರಾಗಿ ದೈವಸಾನ್ನಿಧ್ಯಹೊಂದಿದ ಕಥೆಯೆಂಬುದರಲ್ಲಿ ಯಾವ ಅನುಮಾನವೂ ಕಂಡುಬರುವುದಿಲ್ಲ. ಋಷಿಗಳು ತಮ್ಮ ತಮ್ಮ ಶಿಷ್ಯರಿಗೆ ಹೇಳಿ ಎಲ್ಲ ರೀತಿಯ ಆಹಾರ ಧಾನ್ಯಗಳನ್ನು ತರಿಸಿದರಷ್ಟೆ ಅವರೆಲ್ಲ ಒಂದೊಂದೇ ಧಾನ್ಯವನ್ನು ತಂದು ರಾಮನ ಮುಂದಿರಿಸಿದರು. ಅಷ್ಟೇ ಅಲ್ಲ ತಮ ತಮಗೆ ಪ್ರಿಯವಾದ ಧಾನ್ಯವನ್ನೆ ಉತ್ತಮಧಾನ್ಯವೆಂದು ಹೊಗಳಿದರು. ರಾಮ ಅವುಗಳಲ್ಲಿ ಸತ್ವಯುತವಾದ ಒಂದೇ ಧಾನ್ಯವನ್ನು ತಿಳಿಸುವಂತೆ ಗೌತಮ ಮುನಿಯನ್ನು ಕೇಳಿಕೊಂಡ. ಗೌತಮಮುನಿ ನಮ್ಮ ದೇಶಕ್ಕೆ ನರೆದಲಗನೇ (ರಾಗಿ) ಅತ್ಯುತ್ತಮವಾದ, ಸತ್ವಯುತವಾದ ಧಾನ್ಯವೆಂದು ತನ್ನ ತೀರ್ಪನ್ನು ಹೇಳಿದ. ಇದರಿಂದ ಭತ್ತಕ್ಕೆ ಬಹಳ ಕೋಪಬಂದಿತು. ತನ್ನೆದುರಿಗೇ ಋಷಿಯೊಬ್ಬ ರಾಗಿಯನ್ನು ಮುಖ್ಯ ಧಾನ್ಯವೆಂದರೆ ಅದು ಹೇಗೆ ಸಹಿಸಲು ಸಾಧ್ಯ, ಭತ್ತ ಕೆರಳಿ ನುಡಿಯಿತು. ಲೇಸನಾಡಿದ ಮುನಿಪ ಗೌತಮ ದೋಷರಹಿತನು ಪಕ್ಷಪಾತವ ನೀಸು ಪರಿಯಲಿ ಮಾಡುವರೆ ಶಿವಯೆಂದನಾವಿಹಿಗ || ಎಲ್ಲ ಧರ್ಮದ ಸಾರವನು ನೀವ್ ಬಲ್ಲಿರರಿಯದೆ ಎಲ್ಲರನು ನೀ ವಿಲ್ಲಿ ನುಡಿವಯುಪೇಕ್ಷೆಯುಂಟೇ ಸಾಕದಂತಿರಲಿ ನೆಲ್ಲು ನಾನಿರೆ ಗೋಧಿ ಮೊದಲಾ ದೆಲ್ಲ ಧಾನ್ಯಗಳಿರಲು ಇದರಲಿ - ಬಲ್ಲಿದನು ನರೆದಲಗನೆಂಬುದಿದಾವ ಮತವೆಂದ || ಕನಕದಾಸರು ತಮ್ಮ ಸಾಧನೆಯ ಹಾದಿಯಲ್ಲಿ ಅನುಭವಿಸಿದ ಸಾಮಾಜಿಕ ತೊಡರುಗಳನ್ನು ರಾಮಧಾನ್ಯ ಪ್ರಸಂಗದ ಮೂಲಕ ಅಭಿವ್ಯಕ್ತಿಗೊಳಿಸಿ ದ್ದಾರೆಂಬುದರಲ್ಲಿ ಅನುಮಾನವಿಲ್ಲ. “ಕನಕದಾಸನ ಮೇಲೆ ದಯಮಾಡಲು ವ್ಯಾಸಮುನಿವಠಿಕರೆಲ್ಲರು ದೂರುತಿಹರು” ಎಂಬ ಕನಕದಾಸರ ಕೀರ್ತನೆಯೊಂದರ ಆರಂಭದ ಸಾಲುಗಳನ್ನು ಗಮನಿಸಬಹುದು. ತೀರ್ಥವನು ಕೊಡುವಾಗ ಕನಕನ್ನ ಕರೆಯೆನಲು ಧೂರ್ತರಾಗಿದ್ದ ವಿದ್ವಾಂಸರೆಲ್ಲ ಸಾರ್ಥಕವಾಯಿತು ಇವರ ಸನ್ಯಾಸಿತನವೆಲ್ಲ ಪೂರ್ತ್ಯಾಗಲೆಂದು ಯತಿ ನಗುತಲಿಹನು || ಮೇಲಿನ ಮಾತುಗಳಲ್ಲಿ ಗೌತಮ, ವ್ಯಾಸರಾಯ, ಕನಕದಾಸ ಮತ್ತು ಮಠಿಕರನ್ನು ನೇರವಾಗಿ, ನಿಚ್ಚಳವಾಗಿಯೇ ಗುರುತಿಸಬಹುದಾಗಿದೆ. ತಾನು ಹೋದಲ್ಲೆಲ್ಲಾ ಶೂದ್ರ ಅನ್ನಿಸಿಕೊಂಡದ್ದರ ಪ್ರತಿಧ್ವನಿಯೇ ರಾಮಧಾನ್ಯ ಕಥೆಯಲ್ಲಿ ಮಿಡಿದಿದೆ ಎಂಬುದರಲ್ಲಿ ಸಂಶಯವಿಲ್ಲ. ವ್ಯಾಸರಾಯ ಗೌತಮನಾಗಿ ನರೆದಲಗ ಕನಕನಾಗಿ ಮಠಿಕರು ವೀಹಿಯಾಗಿ ಈ ಕಾವ್ಯದಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಕ್ರಿಯೆ ಮತ್ತು ಪ್ರತಿಕ್ರಿಯೆಗಳನ್ನು ರಾಮಾಯಣದ ಕಥೆಯೊಳಗೆ ತಂದಿರುವುದರ ಔಚಿತ್ಯದ ಬಗ್ಗೆ ಕೆಲವರಿಗಾದರೂ ಸಂಶಯ ಉಂಟಾಗಬಹುದು. ರಾಮಾಯಣದ ಲೋಪಗಳಿಗೂ ಕವಿ ಇಲ್ಲಿ ಉತ್ತರ ಕೊಡುತ್ತಿದ್ದಾನೆ ಅನ್ನಿಸದಿರದು. ಉದಾಹರಣೆಗೆ ಶಂಭೂಕನು ತಪಸ್ಸಿಗೆ ಅರ್ಹನಲ್ಲ ಎಂಬುದು ರಾಮಾಯಣದ ಬ್ರಾಹ್ಮಣರ ವಾದ. ರಾಗಿ ಶೂದ್ರಾನ್ನವಾದುದರಿಂದ ಲೋಕದಲಧಿಕ ಭೋಜನವಲ್ಲವೆಂಬುದು ಅಕ್ಕಿಯ ವಾದ. ಕನಕದಾಸ ಕುರುಬನಾದುದರಿಂದ ಕಾವ್ಯ ರಚನೆಗೆ ಅರ್ಹನಲ್ಲ, ವ್ಯಾಸರಾಯನಿಂದ ತೀರ್ಥ ಪಡೆಯಲು ಅರ್ಹನಲ್ಲ ಎಂಬುದು ಮಠಿಕರ ವಾದ. ಈ ಮತೀಯ ಭಾವನೆಗಳಿಗೆ ಮಾರ್ದನಿಯೇ ರಾಮಧಾನ್ಯ ಚರಿತೆ.

  • ಯಕ್ಷಗಾನ ಧೂಮ್ರಪತ್ರ ಪ್ರಸಂಗ, ಪಲಾಂಡುಚರಿತೆ ಹೊಗೆಸೊಪ್ಪು ಮತ್ತು ಈರುಳ್ಳಿ ಬಗೆಗಿನ ಕಥೆಗಳನ್ನು ಉದಾಹರಣೆಗೆ ನೋಡಬಹುದು. ಪುರಂದರದಾಸರ ರಾಗಿಯ ತಂದಿರಾ, ರಾಗಿಯ ಕೊಳ್ಳಿರೋ ಕೀರ್ತನೆಗಳನ್ನು ಕಾಣಬಹುದು. ಜನಪದ ಸಾಹಿತ್ಯದಲ್ಲಿ ಆಹಾರ ಧಾನ್ಯಗಳು ನಾಯಕರಾಗುವ ಅನೇಕ ಉದಾಹರಣೆಗಳು ದೊರೆಯುತ್ತವೆ. ಅವರೆಯನ್ನು ಪಾಂಡವರೆ ಬಿತ್ತಿ ಅದರ ರೂಪದಲ್ಲಿ ಉಳಿದಿದ್ದಾರೆ ಮುಂತಾದ ಕಲ್ಪನೆಗಳನ್ನು ನೋಡಬಹುದು.