ಪುಟ:Kanakadasa darshana Vol 1 Pages 561-1028.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೮ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ರಾವ ೬೫ ಈ ಘರ್ಷಣೆ ಅಲ್ಲಿಗೇ ಮುಗಿಯುವುದಿಲ್ಲ. ತನ್ನ ಬಗ್ಗೆ ತನ್ನೆದುರಿಗೇ ನಡೆಯುವ ಹೀಯಾಳಿಕೆಯನ್ನು ಎಂತಹ ಸಂಯಮಿಯೂ ಸಹಿಸಲಾರ. ರಾಗಿ ಅಲ್ಲಿ ನೆರೆದಿದ್ದ ಋಷಿಗಳ ಸಮೂಹ, ಸಾಕ್ಷಾತ್ ಶ್ರೀರಾಮ, ಇವರೆಲ್ಲರ ಸಮ್ಮುಖದಲ್ಲಿ ಅನುಚಿತವಾಗಿ ವರ್ತಿಸಿದಂತಾಗುತ್ತದೆಂದು ಸುಮ್ಮನಿದ್ದರೂ ಭತ್ತ ಕಾಲುಕೆರೆದು ಏನೆಲವೂ ನರೆದಲೆಗ ನೀನು ಸ ಮಾನನೆಯೆನಗಿಲ್ಲಿ ನಮ್ಮನು ದಾನವಾಂತಕ ಬಲ್ಲನಿಬ್ಬರ ಹೆಚ್ಚು ಕುಂದುಗಳ ಜಾನಕೀಪತಿ ಸನಿಹದಲಿ ಕುಲ ಹೀನ ನೀನು ಪ್ರತಿಷ್ಠ ಸುಡು ಮತಿ ಹೀನ ನೀನೆಂದೆನುತ ಖತಿಯಲಿ ಬೈದು ಭಂಗಿಸಿದ || ಇಂತಹ ಪ್ರಸಂಗದಲ್ಲಿಯೂ ಸುಮ್ಮನಿರುವುದು ಸಂಯಮವಾಗುವುದಿಲ್ಲ, ಹೇಡಿತನವಾಗುತ್ತದೆ. ಭತ್ತದ ಮೇಲಿನ ಮಾತುಗಳು ಕನಕದಾಸರ ಸಮಕಾಲೀನ ಸಾಮಾಜಿಕ ಸ್ಥಾನಮಾನಗಳ ಮೇಲೆ ಬೆಳಕು ಚೆಲ್ಲುತ್ತವೆ. ಕನಕ ಕಲಿಯಾಗಿ, ಕವಿಯಾಗಿ, ಸಂತನಾಗಿ ಬೆಳೆಯುತ್ತಾ ಕಡೆಯಪಕ್ಷ ಮಾನವೀಯತೆ ಮತ್ತು ಆತ್ಮಸಾಕ್ಷಿಯ ಹೃದಯದ ಕೃಷ್ಣದೇವರಾಯ, ವ್ಯಾಸರಾಯ ಇಂಥವರು ಆ ವ್ಯಕ್ತಿಗೆ ಸಲ್ಲಲೇಬೇಕಾದ ಸಾಮಾಜಿಕ ಗೌರವ ಸಲ್ಲಿಸಿದಾಗ ಹುಬ್ಬೇರುವ ವ್ಯಂಗ್ಯದ, ಕುಹಕದ ಭರ್ತ್ಸನೆಯ ಮಾತುಗಳನ್ನು ಕೇಳಿದಾಗ ಎಂತಹ ಸಾತ್ವಿಕ ಹೃದಯವೂ ನೋವಿನಿಂದ ಕುದಿಯದಿರದು. ಕನಕದಾಸರಿಗೂ ಅವರ ಜಾತಿ, ಅರ್ಹತೆಗಳನ್ನು ಕುರಿತು ಉತ್ತಮ ವರ್ಗದವರಿಂದ ಬಂದ ಬಿರುನುಡಿಗಳು ಮನ ನೋಯಿಸಿರಬೇಕು. ಸಹನೆಯ ಪರೀಕ್ಷೆಯನ್ನು ಮೀರಿ ಕೆರಳಿಸಿರಬೇಕು. ಆಗ ಅನಿವಾರ್ಯವಾಗಿ ನುಡಿಯ ಕೇಳುತ ಕನಲಿ ಕಂಗಳು ಕಿಡಿಮಸಗಿ ಖತಿಗೊಂಡು ನುಡಿದನು ಸಿಡಿಲು ಘರ್ಜನೆಯಂತೆ ಸಭೆಯಲಿ ಜರಿದನಾ ವಿಹಿಯ ನುಡಿಗೆ ಹೇಸದ ಭಂಡ ನಿನ್ನೊಳು ಕೊಡುವರೇ ಮಾರುತ್ತರವ ಕಡು ಜಡನಲಾ ನಿನ್ನೊಡನೆ ಮಾತೇಕೆಂದ ನರೆದಲಗ || ಕನಕದಾಸರು ಮೇಲಿನ ತಮ್ಮ ಮಾತುಗಳಲ್ಲಿ ಸಿಡಿದೇಳುತ್ತಿರುವ ಸಮಾಜದ ಕೆಳಸ್ತರದ ದನಿಯನ್ನು ಪ್ರತಿಬಿಂಬಿಸಿದ್ದಾರೆ. ತಲೆ ತಲಾಂತರಗಳಿಂದ ಬಗ್ಗೆ ಇನ್ನು ಬಗ್ಗಲಾರದೆ ಎದುರು ನಿಲ್ಲುವ ತೀರ್ಮಾನಕ್ಕೆ ಬಂದ ಸಮಾಜವೊಂದರ ಹೊಳಹನ್ನು ಈ ಮಾತುಗಳಲ್ಲಿ ಕಾಣಬಹುದಾಗಿದೆ. ಕನಲಿ ಖತಿಗೊಂಡು ಕಿಡಿಮಸಗಿದ. ಈ ಸಮಾಜದ ಸಿಡಿಲ ಘರ್ಜನೆ ಕೂಡ ನುಡಿಗೆ ಹೇಸದ ಭಂಡರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅವರಿಗೆ ಕ್ರಾಂತಿಯ ಬೆಂಕಿಯನ್ನು ನಂದಿಸಿ ಬೂದಿಮಾಡಿ ಬದಿಯ ಮಹಿಮೆಯನ್ನು ಕೊಂಡಾಡುವ ಕಲೆ ಕರಗತವಾಗಿರುವ ಕಡುಜಡರೊಂದಿಗೆ ವಾದ ಹೂಡುವುದರಿಂದ ಪ್ರಯೋಜನವೇನು ಎಂಬ ಕಟುಸತ್ಯ ಕೂಡ ಕವಿಗೆ ಗೊತ್ತಿದೆ. ಮುಂದೆ ನರೆದಲಗ ವಿಹಿಯರ ಮಧ್ಯೆ ಪರಸ್ಪರ ಒಂದು ವಾಗ್ಯುದ್ದವೇ ನಡೆಯುತ್ತದೆ. ವಿಹಿಗ ನರೆದಲಗನನ್ನು ಶೂದ್ರಾನ್ನವೆಂದರೆ ನರೆದಲಗ ವಿಹಿಯನ್ನು ನೀನು ಹೆಣನ ಬಾಯಿನ ತುತ್ತು ಎಂದು ಹೀಯಾಳಿಸುತ್ತದೆ. ಈ ವಾದದಲ್ಲಿ ಆ ಹೊತ್ತಿನ ಸಾಮಾಜಿಕ ಆಚರಣೆಗಳು ರೀತಿ ನೀತಿಗಳು ನಿರೂಪಿತವಾಗಿವೆ. ಹುಟ್ಟು ಸಾವಿನ ಆಚರಣೆ, ಮದುವೆಮುಂಜಿಗಳು, ಮಳೆಬೆಳೆ, ಬಡವ ಬಲ್ಲಿದ ಇತ್ಯಾದಿ ಅನೇಕ ಸಂಗತಿಗಳು ಈ ಜಗಳದ ನೆಪದಲ್ಲಿ ಹೊರಬೀಳುತ್ತವೆ. ರಾಮಧಾನ್ಯ ಚರಿತೆಯ ಈ ಭಾಗ ಉತ್ತಮವಾದ ನಾಟಕೀಯತೆಗೊಂದು ಒಳ್ಳೆಯ ಉದಾಹರಣೆಯಾಗಿದೆ. ಇದರೊಂದಿಗೆ ಆ ಕಾಲದ ಜನಾಂಗಗಳೊಳಗಿನ ಸಂಗತಿಗಳನ್ನು ಈ ಜಗಳದ ನೆಪದಲ್ಲಿ ಹೊರಗೆಡಹುವುದು ಕವಿಯ ಉದ್ದೇಶವಾಗಿರುವಂತೆ ತೋರುತ್ತವೆ. ಈ ಸಾಮಾಜಿಕ ರೀತಿ ನೀತಿಗಳಿಗಾಗಿ ಕೆಳಗಿನ ಉದಾಹರಣೆಗಳನ್ನು ನೋಡಬಹುದು. ಭತ್ತ : ಪರಿಮಳದ ಚಂದನದತರುವಿಗೆ ಸರಿಯೆ ವೊಣಗಿದ ಕಾಷ್ಠಗೋವದು ಕರೆದ ಹಾಲಿಗೆ ಕುರಿಯ ಹಾಲು ತರವೆ ಭಾವಿಸಲು ಪರಮ ಸಾಹಸಿ ವೀರಹನುಮಗೆ. ಮರದ ಮೇಲಣ ಕಪಿಯು ತಾನು ತರವೆ ಫಡ ನೀನೆನಗೆ ಸರಿಯೆ ಭ್ರಷ್ಟ ತೊಲಗೆಂದ || ರಾಗಿ : ಸತ್ತವರ ಪ್ರತಿಬಿಂಬರೂಪನು ಬಿತ್ತರಿಸಿ ಪಿತೃನಾಮಗಳ ನಿನ ಗಿತ್ತುಮೂವರ ಹೆಸರಿನಲ್ಲಿ ಕರೆಕರೆದು ದರ್ಭೆಯಲಿ ನೆತ್ತಿಯನು ಬಡಿ ಬಡಿದು ಕಡೆಯಲಿ