ಪುಟ:Kanakadasa darshana Vol 1 Pages 561-1028.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೧ ಕನಕದಾಸರ ರಾತ ೬೬೧ ತುತ್ತನಿಡುವರು ಪಶುಗಳಿಗೆ ನೀ ನೆತ್ತಿದೆಯಲ್ಲಾ ತಮವ ಸುಡಬೇಕೆಂದ ನರೆದಲಗ || ರಾಮಧಾನ್ಯ ಚರಿತೆಯ ಕಥೆ ಈ ಹಂತದಲ್ಲಿ ಬೇರೊಂದು ತಿರುವನ್ನು ಪಡೆಯುತ್ತದೆ. ನರೆದಲಗನ ವಾದವನ್ನು ಕೇಳಿ ಅಲ್ಲಿ ನೆರೆದ ಮುನಿಗಳು ಸ್ತಬ್ಧರಾಗುತ್ತಾರೆ, ಮಾತಿಲ್ಲದವರಾಗುತ್ತಾರೆ. ಆದರೆ ನರೆದಲಗ ಅವರನ್ನು ಕುರಿತು “ನಮಗೇನು ಬುದ್ದಿಯನರುಹುವಿರಿ” ಎಂದು ಸಭೆಗೆ ಸವಾಲೆಸೆವಾಗ ಮಸೆದುದಿತ್ತಂಡಕ್ಕೆ ಮತ್ಸರ ಪಿಸುಣಬಲರತಿ ನಿಷ್ಣುರರು ವಾ ದಿಸಲು ಕಂಡನು ನೃಪತಿ ಮನದಲ್ಲಿ ನೋಡಿ ನಗುತ್ತ ಹಿಸುಣರಿವದಿರ ಮತ್ಸರವ ಮಾ ಣಿಸುವ ಹದನೇನೆನುತ ಯೋಚಿಸಿ ಯಸುರ ಮುನಿಪರ ನೋಡೆ ಗೌತಮ ಮುನಿಪಗಿಂತೆಂದ ರಾಮನಿಗೆ ಈ ಮತ್ಸರದ ದಳ್ಳುರಿಯನ್ನು ಕಂಡು ಆಶ್ಚರ್ಯವಾಯಿತು. “ಮಸೆದುದಿತ್ತಂಡಕ್ಕೆ ಮತ್ಸರ' ಎಂಬ ಮಾತು ವರ್ಣಸಂಘರ್ಷದ ಅನಾಹುತ ಪರಂಪರೆಯ ಮುನ್ನುಡಿಯಂತಿದೆ. ಈ ಹೊತ್ತಿಗೂ ವೇದಿಕೆಯ ಮೇಲೆ ಜಾತ್ಯಾತೀತ ಭಾಷಣ ಬಿಗಿದು ಒಳಗೆ ಇತರ ಜಾತಿಗಳ ಬಗ್ಗೆ ಮಸೆಯುವ ಇಂದಿನ ಸಮಾಜಕ್ಕೂ ಇದು ಅನ್ವಯಿಸುತ್ತದೆ. ತಮ್ಮ ತಮ್ಮ ಧರ್ಮದ ಬಗ್ಗೆ, ತಮ್ಮ ತಮ್ಮ ಜಾತಿಗಳ ಬಗ್ಗೆ ಈ ಜನರಿಗಿರುವ ಭಾವನೆಗಳಿಗೆ ಮುಕ್ತಾಯ ಹೇಳಲೇಬೇಕೆಂದು ಯೋಚಿಸಿದ ರಾಮ ಪರಿಹಾರೋಪಾಯವೊಂದನ್ನು ತಾನೆ ಸೂಚಿಸಿದ. ಅರಸುಗಳು ನಾವೆಲ್ಲ ಭೂಮೀ ಸುರರು ನೆರದಿಹ ದಾನವರು ವಾ ಸರರು ನಮಗೀ ನ್ಯಾಯವನ್ನು ಪರಿಹರಿಸಲಳವಲ್ಲ ಕರಸುವೆವು ಹರಿಹರ ವಿರಿಂಚಾ ದ್ಯರನಯೋಧ್ಯೆಗೆ ಇವರ ಗುಣವಾ ಧರಿಸಿ ಪೇಳ್ವರು ನಯದೊಳೆಂದನು ರಾಮ ನಸುನಗುತ | ಪರಮ ಧಾನ್ಯದೊಳಿಬ್ಬರೇ ಇವರಿ ರಲಿ ಸೆರೆಯೊಳಗಾರುತಿಂಗಳು ಹಿರಿದು ಕಿರಿದೆಂಬಿವರ ಪೌರುಷವರಿಯಬಹುದಿನ್ನು || ಶ್ರೀರಾಮನ ಈ ತೀರ್ಮಾನದಂತೆ ವಿಹಿಗ ಮತ್ತು ನರೆದಲಗರನ್ನು ಸೆರೆಯಲ್ಲಿಡಲಾಯಿತು. ರಾಮ ಅಯೋಧ್ಯೆಗೆ ತನ್ನ ಪಯಣವನ್ನು ಮುಂದುವರಿಸಿದ, ಮುಂದೆ ಅಲ್ಲಿನ ಕೆಲಸಕಾರ್ಯಗಳು ಅನಂತರ ಪಟ್ಟಾಭಿಷೇಕ ಮುಂತಾದವೆಲ್ಲ ನಡೆಯುವ ಹೊತ್ತಿಗೆ ಏಳು ತಿಂಗಳುಗಳೇ ಕಳೆದವು. ಆಗ ರಾಮ ಸೆರೆಯಲ್ಲಿದ್ದ ವಿಹಿಗ, ನರೆದಲಗರನ್ನು ನೆನೆದು ಅಯೋಧ್ಯೆಗೆ ಕರೆತರಲು ಹನುಮಂತನಿಗೆ ಸೂಚಿಸಿದ, ಅದರಂತೆ ಅವರಿಬ್ಬರನ್ನು ಅಯೋಧ್ಯೆಗೆ ಕರೆತಂದರು. ಎಂದಿನಂತೆ ಸಭೆ ಸೇರಿತು. ಹರಿಹರವಿರಿಂಚಾದಿಗಳು ಸಹ ಬಂದರು ವಸುಗಳಮರರು ಭುಜಂಗಾಮರ ರಸುರ ಕಿನ್ನರ ಯಕ್ಷ ರಾಕ್ಷಸ ಶಶಿರವಿಗಳಾದಿತ್ಯ ವಿದ್ಯಾಧರರು ಗುಹ್ಯಕರು ವಸುಧೆಯಮರರು ಕ್ಷತ್ರಿಯರು ಜೋ ಯಿಸರು ವೈಶ್ಯಚತುರ್ಥರುನ್ನತ ಕುಶಲ ವಿದ್ಯಾಧಿಕರು ನೆರೆದು ನೃಪನ ಸಭೆಯೊಳಗೆ || ರಾಮನು ಅಲ್ಲಿ ನೆರೆದಿದ್ದ ಘನತಪೋಮಹಿಮರನ್ನು ಕುರಿತು ಮನವ ವಂಚಿಸಲಾಗದೀ ಧರ್ಮವ ತಿಳಿದು ಹೇಳಿ ಎಂದು ಕೇಳಿದ, ಆದರೆ ಋಷಿಗಳಿಂದ ಅದು ಸಾಧ್ಯವಾಗಲಿಲ್ಲ. ಅವರು ಅನಿಮಿಷನತ್ತ ನೋಡಿದರು. ಆಗ ಜಂಬಾರಿ ನಸುನಗುತ ಸಾರ ಹೃದಯನು ನರೆದಲಗ ನಿಸಾರನೀ ವಿಹಿ ಎಂದು ತೀರ್ಮಾನ ಹೇಳಿದ. ನಾರದ "ಅಹುದು ಸುರಪನ ಮಾತು ನಿಶ್ಚಯವಹುದು ನರೆದಲಗನೆ ಸಮರ್ಥನು, ಬಹಳ ಬಲಯುತ ಸೆರೆಗೆ ತಳ್ಳಲು ಕಾಂತಿಗೆಡಲಿಲ್ಲ” ಎಂದು ಇಂದ್ರನ ತೀರ್ಮಾನವನ್ನು ಅನುಮೋದಿಸಿದನು. ನಾರದನೂ ಎಲ್ಲ ನವಧಾನ್ಯದಲಿ ಈತನೆಲ್ಲ ಬಲ್ಲಿದನು ಹುಸಿಯಲ್ಲ ಬಡವರ ಬಲ್ಲಿದನಾರೈದು ಸಲುಹುವನಿನಗೆ ಸರಿಯುಂಟೆ ನೆಲ್ಲಿನಲಿ ಗುಣವೇನು ಭಾಗ್ಯದಿ ಬಲ್ಲಿದರ ಪತಿಕರಿಸುವನು ಅವ ನಲ್ಲಿ ಸಾರವ ಕಾಣೆಯೆಂದನು ಕಪಿಲಮುನಿ ನಗುತ || ಸುರರು ಮುನಿಗಳೆಲ್ಲರೂ ನರೆದಲಗನನ್ನೆ ಶಕ್ತನೆಂದು ಮೆಚ್ಚಿದುದರಿಂದ ರಾಮನಿಗೆ ಸಂತೋಷವಾಗಿ ಕರೆದು ಕೊಟ್ಟನು ತನ್ನ ನಾಮವ ಧರೆಗೆ ರಾಘವನೆಂಬ ಹೆಸರಾ ಝರದೆ ವಿಹಿ ನಾಚಿದನು ಸಭೆಯಲಿ ಶಿರವ ಬಾಗಿಸಿದ ||