ಪುಟ:Kanakadasa darshana Vol 1 Pages 561-1028.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೧ ಕನಕದಾಸರ ರಾಮಧಾನ್ಯ ಚರಿತೆ ೬೬೩ ಇಷ್ಟೆಲ್ಲ ವಿಚಾರವಾದಿಯಾದ ನರೆದಲಗ ಅರ್ಥಾತ್ ಕನಕದಾಸರ ಮುಂದಿನ ಸ್ಥಿತಿಯನ್ನು ನೋಡಿ, ಈ ಜನ ಹೇಗೆ ಮತ್ತೆ ಅವರನ್ನು ತಮ್ಮ ಅಧೀನಕ್ಕೆ ತೆಗೆದುಕೊಂಡರೆಂಬುದು ನಮ್ಮ ಸಾಮಾಜಿಕ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ನಮ್ಮ ಹಿಂದಿನ ಕೆಳಸ್ತರದ ಜನರ ಮುಖಂಡರಂತಾಗಿದೆ. ಹರುಷದೋರಿದ ಮನದಿ ನಲಿವುತ ನರೆದಗಲನೈತಂದು ರಾಮನ ಸಿರಿಚರಣಕಭಿನಮಿಪೆ ದೇವಾಸುರರು ಕೊಂಡಾಡೆ ಹರಸಿ ಮುತ್ತಿನ ಸೇನೆಯನು ಭೂ ಸುರರು ಮಂತ್ರಾಕ್ಷತೆಯನಿತ್ತುವ ಚರಿಸಿದರು ರಾಗಿಯನು ಪೊಗಳಿದರಲ್ಲಿ ಮುನಿವರರು || ಯಾವ ವಿಹಿಗನನ್ನು ನರೆದಲಗ ಈವರೆಗೆ ಅಲ್ಲಗಳೆದು ಜಯಗಳಿಸಿತೋ ಅದು ಮತ್ತೆ ಅದೇ ಕಾಲಿಗೆ ಬಿದ್ದು ಅದೇ ವಿಹಿಗ ಮಂತ್ರಾಕ್ಷತೆಯಾಗಿ ತಲೆಯ ಮೇಲೆ ಕುಳಿತದ್ದು ಎಂತಹ ವಿಪರ್ಯಾಸ. ಈ ಸಂದರ್ಭದ ಇನ್ನೊಂದು ಚಿತ್ರವನ್ನೂ ಉಲ್ಲೇಖಿಸಬೇಕು. ಕನಕದಾಸರ ರಾಜಕೀಯ ಪ್ರಜ್ಞೆಗೆ ಈ ಘಟನೆ ಸಾಕ್ಷಿಯಾಗುತ್ತದೆ. ಸಭೆಯಲ್ಲಿ ತನಗೆ ಆದ ಮಾನಭಂಗದಿಂದ ತಲೆತಗ್ಗಿಸಿ ಕುಳಿತ ವಿಹಿಗನಿಗೆ ರಾಮ ಹೀಗೆ ಹೇಳುತ್ತಾನೆ.: ಮರುಳೆ ಬಾರೆ ವಿಹಿಯೆ ಮನದಲಿ ಕೊರಗಿ ಚಿಂತಿಸಲೇಕೆ ನಾವೀ ನರೆದಲಗನತಿಶಯವ ಮಾಡಿದೆವೆಂದು ಕನಲಿದೆಯ ಧರೆಗೆ ಹೊದ್ದಿದ ಕಾಮಗಾಲದಿ ಕರುಣದಿಂ ನಡೆ ತಂದು ಲೋಕವ ಹೊರೆವನದು ಕಾರಣವೆ ಪತಿಕರಿಸಿದೆವು ಕೇಳೆಂದ || ರಾಮಧಾನ್ಯ ಚರಿತೆಯ ಮೇಲಿನ ಪದ್ಯಗಳು ಸ್ಪಷ್ಟಪಡಿಸುತ್ತವೆ. ರಾಗಿಯೇ ಅತ್ಯುತ್ತಮವಾದ ಧಾನ್ಯ ಎಂದು ಹರಿವಿರಿಂಚಿಗಳ ಎದುರೇ ತೀರ್ಮಾನವಾದರೂ ಬತ್ತವನ್ನು ಬಿಟ್ಟು ಕೊಡಲು ರಾಮ ತಯಾರಿಲ್ಲ. ಏನೋ ಕ್ಷಾಮಕಾಲದಲ್ಲಿ ಶ್ರೀಸಾಮಾನ್ಯರನ್ನು ರಕ್ಷಿಸುತ್ತದೆ ಎಂಬ ಕಾರಣಕ್ಕಾಗಿ ರಾಗಿಯನ್ನು ಹೊಗಳಿದೆವಲ್ಲದೆ ಬೇರೆಯಲ್ಲ ಎಂದು ಅಂತರಂಗದಲ್ಲಿ ಬತ್ತಕ್ಕೆ ಹೇಳುವ ರಾಮನ ಪಾತ್ರ ಓಟಿಗಾಗಿ ಶ್ರೀಸಾಮಾನ್ಯರನ್ನು ನೀವೇ ಧಣಿಗಳು ಎಂದು ಕೊಂಡಾಡುವ ನಮ್ಮ ಇಂದಿನ ರಾಜಕಾರಣಿಗಳಿಗೂ ರಾಮನಿಗೂ ಅಷ್ಟೇನೂ ವ್ಯತ್ಯಾಸ ಕಾಣುವುದಿಲ್ಲ. ರಾಗಿ ಮತ್ತು ಬತ್ತದ ಈ ಪ್ರಸಂಗ ರಾಮಧಾನ್ಯ ಚರಿತೆಯ ಪ್ರಮುಖವಾದ ಅಂಗವೆಂದರೆ ತಪ್ಪಲ್ಲ. ಈ ಇಡೀ ಪ್ರಸಂಗ ಅತ್ಯಂತ ನಾಟಕೀಯವಾಗಿದ್ದು ಸಮಕಾಲೀನ ಸಮಾಜದ ಒಂದು ವರ್ಗ ವೈದೃಶವನ್ನು ನೀಡುತ್ತದೆ. ಕುರುಬ ಜನಾಂಗದ ಹಕ್ಕ ಬುಕ್ಕರು ಕಟ್ಟಿದ ವಿಜಯನಗರ ಸಾಮ್ರಾಜ್ಯದಲ್ಲಿಯೆ ಅದೇ ಜನಾಂಗಕ್ಕೆ ಸೇರಿದ ಕನಕದಾಸರೇ ಶೂದ್ರ ಎನಿಸಿಕೊಳ್ಳಬೇಕಾದುದೇ ಒಂದು ಸಾಮಾಜಿಕ ವಿಪರ್ಯಾಸ ಮತ್ತು ಈ ದೇಶದ ದೊಡ್ಡದುರಂತವೆಂಬುದರಲ್ಲಿ ಎರಡನೆಯ ಮಾತಿಲ್ಲ. ನಮ್ಮ ದೇಶದ ಸಾಮಾಜಿಕ ಇತಿಹಾಸವನ್ನು ಗಮನಿಸಿದ ಯಾರಿಗಾದರೂ ಶ್ರೀಸಾಮಾನ್ಯನ ಮೂಗಿಗೆ ತುಪ್ಪಹಚ್ಚಿ ಹೇಗೆ ದುಡಿಸಿಕೊಳ್ಳಲಾಗಿದೆ ಎಂಬುದು ತನಗೆ ತಾನೆ ಅನಾವರಣಗೊಳ್ಳುತ್ತಾ ಹೋಗುತ್ತದೆ. ಕನಕದಾಸರಿಗೆ ಸೇವೆಯಲ್ಲಿ ಉನ್ನತ ಹುದ್ದೆಯಿತ್ತಷ್ಟೆ. ಆ ಹುದ್ದೆಗೆ ಬೇರೆ ಉತ್ತಮವರ್ಗದವರೂ ಪ್ರಯತ್ನ ಪಟ್ಟಿರಬೇಕು. ಪರಿಸ್ಥಿತಿಯ ಒತ್ತಡ ಮತ್ತು ಅರ್ಹತೆಯ ಕಾರಣಗಳಿಂದಾಗಿ ಕನಕದಾಸರೆ ಆ ಪದವಿಗೆ ಆಯ್ಕೆಯಾಗಿರಬೇಕು. ರಾಮಧಾನ್ಯ ಚರಿತೆಯಲ್ಲಿನ ರಾಗಿಯ ಪ್ರಸಂಗಕ್ಕೂ ಕನಕದಾಸರ ಜೀವನಕ್ಕೂ ನಿಕಟವಾದ ಹೋಲಿಕೆ ಯಿರುವುದನ್ನೂ ಇಲ್ಲಿ ಕಾಣಬಹುದು. ರಾಮಾದಿಗಳು ಲಂಕೆಯಿಂದ ಕಪಿಸೇನೆಯೊಂದಿಗೆ ಬರುವ ವರ್ಣನೆಯಲ್ಲಿ ಕೃಷ್ಣದೇವರಾಯ ಸೇನೆಯೊಂದಿಗೆ ಬರುವ ಚಿತ್ರವನ್ನು ಕವಿ ಮನದಲ್ಲಿಟ್ಟುಕೊಂಡೇ ರಚಿಸಿದ್ದಾನೆ. ವೇದಿಕೆಯ ಮೇಲೆ ಸಂಬಂಧಾತೀತರಾಗಿ ಜಾತ್ಯತೀತರಾಗಿ ಮಾತನಾಡುವ ಜನರೇ ಹೇಗೆ ಅಂತರಂಗದಲ್ಲಿ ತಮ್ಮ ಜಾತಿಯ ಜನರ ಪರವಾಗಿರುತ್ತಾರೆಂಬುದಕ್ಕೆ ಈ ಪ್ರಸಂಗವೊಂದು ಜ್ವಲಂತ ಉದಾಹರಣೆಯಾಗಿ ನಿಲ್ಲುತ್ತದೆ. ರಾಮಧಾನ್ಯ ಚರಿತೆಯಲ್ಲಿ ಕನ್ನಡ ನಾಡಿನ ಸಮಕಾಲೀನವಾದ ಅನೇಕ ಸಂಗತಿಗಳು ರೀತಿನೀತಿಗಳನ್ನು ಗುರುತಿಸಬಹುದು. ಕವಿ ಅಪ್ರಯತ್ನಪೂರ್ವಕವಾಗಿ ದೀನರಲಿ ದಾರಿದ್ರ ಜನದಲಿ ನೀನು ನಿರ್ದಯನೆಂದೆವಲ್ಲದೆ ಹೀನಗಳೆದವರಲ್ಲ ನಿನ್ನನು ನಾವು ಸಭೆಯೊಳಗೆ ಮಾನುಷನು ನಮ್ಮೆಡೆಗೆ ನೀ ಸುರ ಧೇನುವಿನ ಸಮ ನಿನ್ನ ಚಿತ್ರದಿ | ಹಾನಿದೋರಲದೇಕೆ ಬಿಡು ಬಿಡು ಚಿಂತೆ ಯಾಕೆಂದ | ಕನಕದಾಸರಿಗೆ ಅಪಾರವಾದ ರಾಜಕೀಯ ಜ್ಞಾನವಿತ್ತೆಂಬುದನ್ನು