ಪುಟ:Kanakadasa darshana Vol 1 Pages 561-1028.pdf/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೬೬ ಕನಕ ಸಾಹಿತ್ಯ ದರ್ಶನ-೧ ಭಾಷೆಯ ದೃಷ್ಟಿಯಿಂದ ಕುಮಾರವ್ಯಾಸನಿಗೆ ಕನಕದಾಸರು ಋಣಿ ಎಂದು ವಿದ್ವಾಂಸರ ಅಭಿಪ್ರಾಯ. ಇಟ್ಟಿಗೆ ಸಿಮೆಂಟು, ಕಬ್ಬಿಣ ಮಾರುಕಟ್ಟೆಯಲ್ಲಿ ದೊರೆಯುತ್ತದೆ ನಿಜ. ಆದರೆ ಅದರಿಂದ ಒಂದು ಕಲಾತ್ಮಕ ಭವನ ಕಟ್ಟುವುದು ವ್ಯಕ್ತಿಗತ ಪ್ರತಿಭೆ. ಕನಕದಾಸರು ಅಂತ ಪ್ರತಿಭಾ ಸಂಪನ್ನರು ಎಂಬುದರಲ್ಲಿ ಎರಡನೆಯ ಮಾತಿಲ್ಲ. ಅವರ ಕಾವ್ಯಗಳು ಮತ್ತು ಕೀರ್ತನೆಗಳನ್ನು ಗಮನಿಸುವ ಯಾರಿಗಾದರೂ ಈ ಸತ್ಯ ಅರಿವಾಗದಿರದು. ಈ ದೃಷ್ಟಿಯಿಂದ ಕನಕದಾಸರ ರಾಮಧಾನ್ಯ ಚರಿತೆ ಹದಿನೈದನೆಯ ಶತಮಾನದ ಒಂದು ಸಾಮಾಜಿಕ ಆಂದೋಲನದ ಜೀವಂತ ಪ್ರತಿನಿಧಿಯಾಗಿ ನಿಲ್ಲುತ್ತದೆಂಬುದರಲ್ಲಿ ಸಂದೇಹವಿಲ್ಲ. ಮೌಲ್ಯದರ್ಶನ