ಪುಟ:Kanakadasa darshana Vol 1 Pages 561-1028.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೭೨ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಪದಗಳಲ್ಲಿ ಸಂಗೀತ ೬೭೩ “ಸಂಗೀತಶಾಸ್ತ್ರ ಬಹುಧಾ ವಿರೋಧಃ ಸಂತೈವ ಲಕ್ಷೇಷು ಚ ಲಕ್ಷಣೇಷು' ಸ್ಥಿತಿ ಹೀಗಿದ್ದಿತೆನ್ನುವುದು ಪುಂಡರೀಕವಿಟ್ಟಲನ "ಷಡ್ರಾಗಚಂದ್ರೋದಯ' ದಿಂದಲೂ ತಿಳಿದು ಬರುತ್ತದೆ ('ಸಂತ್ಯಸ್ಮಿನ್ ಬಹುಧಾ ವಿರೋಧಾ ಗತಯೋ ಲಕ್ಷ್ಮೀಚ ಲಕ್ಷೆದಿತೇ) ಒಂದು ರೀತಿಯಿಂದ, ಮುಂದೆ “ಕಲ್ಪಿತ' ಎಂದೂ, 'ಪ್ರಚುರ ಪ್ರಯೋಗ ಎಂದೂ ನಿರ್ದೇಶನ ಮಾಡಿದ ರಾಗಗಳಲ್ಲೇ ಗೊಂದಲವಿದ್ದಿತೆಂದು ಊಹಿಸಿಕೊಳ್ಳಬಹುದು, ಕನಕದಾಸರಾಗಲಿ, ಪುರಂದರದಾಸರಾಗಲಿ ಈ ಗೊಂದಲದ ಸಮಯದಲ್ಲೇ ಇದ್ದವರು. ಆದರೆ ಗೊಂದಲ ಶಾಸ್ತ್ರಜ್ಞರ ಪಾಲಿಗೆ ಅಷ್ಟೆ, ದಾಸರಿಗಾಗಲಿ ಜನರಿಗಾಗಲಿ ಗೊಂದಲವೇನು ಇರಲಿಲ್ಲ ; ಜನರಿಗೆ ಈ ಗೊಂದಲ ಈ ಹೊತ್ತಿಗೂ ಇಲ್ಲವೆನ್ನಿ ! ಪುರಂದರದಾಸರು ಶಾಸ್ತ್ರಜ್ಞರು ; ಸಂಗೀತದ ಸಿದ್ದಾಂತ, ಪ್ರಯೋಗ ಎರಡನ್ನೂ ಬಲ್ಲವರು. ರಾಗಲಕ್ಷಣಗಳಿಗೂ ಲಕ್ಷಪ್ರಬಂಧಗಳಿಗೂ ಹೊಂದಾಣಿಕೆ ಏರ್ಪಡಲು ಹೆಣಗಿದರು. ಅವರ ಪದಗಳಲ್ಲಿ ಕಾಣಬರುವ ರಾಗ ಲಕ್ಷಣ ಬಹುಮಟ್ಟಿಗೆ ಶಾಸ್ತ್ರಸಮ್ಮತವಾದದ್ದೇ. ಆದರೆ ಕನಕದಾಸರ ಪದಗಳನ್ನು ನೋಡುವಾಗ ಅವೇನು ರಾಗಲಕ್ಷಣಗಳಿಗೆ ಲಕ್ಷ್ಯವೆಂದು ಸಿದ್ಧವಾದಂತೆ ತೋರುವುದಿಲ್ಲ. ಬಹುಶಃ ಕನಕದಾಸರು ಸಂಗೀತಶಾಸ್ತ್ರವನ್ನ ಕುರಿತು ತಲೆಕೆಡಿಸಿಕೊಂಡವರಲ್ಲ ; ಸ್ವರಸಾಧನೆಮಾಡಿ ಕ್ರಮದಂತೆ ಸಂಗೀತವನ್ನೂ ಕಲಿತಿರಲಾರರು. ಆದರೆ ರಾಗಭಾವದ ಸೊಗಸನ್ನು ಚೆನ್ನಾಗಿ ಅರಿತಿದ್ದವರು, ಅವರು ಪದಗಳನ್ನು ರಚಿಸಿದ ಚೌಕಟ್ಟೇ ಬೇರೆಯೆನ್ನಬಹುದು. ಆಗ ರಾಗವೆಂದರೆ ಶಾಸ್ತ್ರಜ್ಞರು ಲೆಕ್ಕಾಚಾರದಿಂದ ನಿರ್ಣಯ ಮಾಡಿದ ನಿರ್ದಿಷ್ಟ ಸ್ವರಸಂದೋಹ ಎಂಬ ಕಲ್ಪನೆಯೇನಿರಲಿಲ್ಲ : ರಂಜಕೋಜನಚಿತ್ತಾನಾಂ ಸರಾಗಃ ಕಥಿತೋ ಬುಧೈ?” ಎನ್ನುವ ಮಾತು ದಿಟವಾಗಿದ್ದಿತು (ಈಗಲೂ ಸಾಮಾನ್ಯ ಜನರಿಗೆ ಇದೇ ದಿಟ), ಜನರಿಗೆ ರುಚಿಸಿದ್ದು ತಾನೆ 'ರಂಜಕ?” ; ರಂಜಕವಾದುದಕ್ಕೆ “ಪ್ರಚುರ ಪ್ರಯೋಗ. ಇಂಥ ರಾಗಗಳು ಬಳಕೆಯಲ್ಲಿದ್ದುದನ್ನೆ ದಾಸರು ಹಿಡಿದು ತಮ್ಮ ಪದಗಳನ್ನು ರಚಿಸಿದರು. ಆ ರಾಗಗಳು ಪದಗಳಲ್ಲಿ ಕಾಣಿಸಿಕೊಳ್ಳುವುದು ಪದಗಳ ಭಾವವನ್ನು ಎತ್ತಿಹಿಡಿಯಲೆಂದಷ್ಟೆ ಅಲ್ಲಿ ಸಂಗೀತಕ್ಕೆ ಸೀಮಿತವಾದ ಸ್ಥಾನ. ಕನಕದಾಸರ ರಚನೆಗಳಲ್ಲಿ ಮೋಹನ ತರಂಗಿಣಿ ಯಂಥ ಸಾಂಗತ್ಯವನ್ನಾಗಲಿ, ರಾಮಧಾನ್ಯ ಚರಿತ್ರೆ, ನಳಚರಿತ್ರೆ, ಹರಿಭಕ್ತಿಸಾರಗಳಂಥ ಭಾಮಿನೀಷಟ್ಟದಿಗಳನ್ನಾಗಲಿ ಇಲ್ಲಿ ಎತ್ತಿಕೊಳ್ಳುವ ಅಗತ್ಯವಿಲ್ಲ. ಅವು ಮುಖ್ಯವಾಗಿ ಕಾವ್ಯಪ್ರಕಾರಗಳು, ಛಂದೋರೂಪದವು, ಅವುಗಳನ್ನು ರಾಗವಾಗಿ ಹಾಡುವುದು ಸಾಧ್ಯವಾದರೂ, ಹಾಡುವವರು ತಮಗೆ ಬೇಕಾದಂತೆ ಹಾಡಬಹುದು ; ಇಂಥದೇ ರಾಗ, ಇದೇ ತಾಳವೆಂಬ ನಿರ್ಬಂಧವೇನಿರದು. ಸಂಗೀತಪದ್ಧತಿಯಂತೆ ಹಾಡುವುದಕ್ಕಿಂತ ವಾಚನ ಮಾಡುವುದು ಇಲ್ಲಿ ಹೆಚ್ಚು ಪರಿಣಾಮಕಾರಿಯಾದೀತು. ಇವು ಗೇಯಕಾವ್ಯಗಳಲ್ಲ. ಇಲ್ಲಿ ಶಬ್ದಕ್ಕಿದ್ದಷ್ಟೆ ಬೆಲೆ, ಇನ್ನೂ ಹೆಚ್ಚಿನ ಬೆಲೆ ಅರ್ಥಕ್ಕಿದೆ. ಇಲ್ಲಿ ಕಾವ್ಯಾಲಂಕಾರಗಳೂ ಕೆಲಸ ಮಾಡುತ್ತವೆ. ಕಡೆಗೆ, ಹಾಡದೆ ಹಾಗೆಯೇ ಓದಿದಾಗಲೂ ಕಾವ್ಯದ ಸೊಗಸೇನು ಮರೆಯಾಗುವುದಿಲ್ಲ. ಅಲ್ಲಿನ ಪದಬಂಧ ವಾಚನಕ್ಕೆ ಅನುಕೂಲವಾಗಿದೆ, ಮನೋಜ್ಞವಾಗಿದೆ. ನಾವಿಲ್ಲಿ ಗಮನಿಸಬೇಕಾದುದು ಕನಕದಾಸರ ಪದಗಳನ್ನು, ಪುರಂದರದಾಸರಿಗೂ ಕನಕದಾಸರಿಗೂ ಇರುವ ಅಂತರವನ್ನು ನಾವು ಅರಿತುಕೊಳ್ಳಬೇಕು. ಪುರಂದರದಾಸರು ಕವಿಗಳಲ್ಲ, ಗಾಯಕರು. ಅವರು ಕನಕದಾಸರಂತೆ ಸ್ವತಂತ್ರ ಕಾವ್ಯ ಕೃತಿಗಳನ್ನೇನು ರಚಿಸಲಿಲ್ಲ ; ಅಷ್ಟುಮಾತ್ರವಲ್ಲ, ಅವರ ಪದಗಳಲ್ಲಿ ಕಾವ್ಯಾಲಂಕಾರಗಳನ್ನಾಗಲಿ ಛಂದೋರೂಪಗಳನ್ನಾಗಲಿ ನಾವು ಕಾಣುವುದು ಕಡಮೆಯೇ. ಸಾಮಾನ್ಯವಾಗಿ ಯತಿ, ಪ್ರಾಸ ಲಯ ಮೊದಲಾದುವುಗಳೇನೋ ಇರುತ್ತವೆ : ಆದರೆ ಅವನ್ನು ಕಾವ್ಯಕೃತಿಗಳೆನ್ನಲು ಬರುವುದಿಲ್ಲ. ಕನಕದಾಸರಾದರೆ ಸ್ವಭಾವದಿಂದಲೇ ಕವಿ ; ಕೃಷಿಯಿಂದಲೂ ಕವಿ, ಪದಗಳಲ್ಲೂ ಕವಿತ್ವದ ಪ್ರವೇಶ ಧಾರಾಳವಾಗಿ ಇದೆ. ಪುರಂದರದಾಸರ ತಾತ್ವಿಕ ನಿಲುವು. ಧರ್ಮದೃಷ್ಟಿ ಶಾಸ್ತ್ರ ಪರಿಚಯ ಇವೆಲ್ಲ ಪ್ರೌಢವೆನ್ನುವ ಬಗೆಗೆ ಸೇರುವುವು. ಕನಕದಾಸರ ಕಾವ್ಯಕೃತಿಗಳಲ್ಲಿ ಇವೆಲ್ಲವನ್ನು ನಾವು ಕಾಣುತ್ತೇವೆ. ಆದರೆ ಅವರ ಪದಗಳು ಬೇರೆ ಒಂದು ಗೋತ್ರಕ್ಕೆ ಸೇರಿದವು. ಬೇಕಿದ್ದರೆ ಅದನ್ನು ಜಾನಪದವೆನ್ನಿ. ಈಗ ಜಾನಪದ ಎನ್ನುವ ಮಾತು ಬಹುಮಟ್ಟಿಗೆ ರಾಜಕಾರಣದ ಧೋರಣೆಗೆ ಪಕ್ಕಾಗಿ ತನ್ನ ಮೂಲಾರ್ಥವನ್ನೂ ಸ್ವಾರಸ್ಯವನ್ನೂ ಸಾರ್ಥಕತೆಯನ್ನೂ ಕಳೆದುಕೊಂಡಿದೆ. ಸಮಾಜದ ಒಂದು ವರ್ಗಕ್ಕೆ ಸೇರಿದಂತೆ ಈ ಮಾತಿನ ಬಳಕೆಯನ್ನು ನಾವು ಈಗೀಗ ಕಾಣುತ್ತೇವೆ. ಆದರೆ ಜಾನಪದ CH