ಪುಟ:Kanakadasa darshana Vol 1 Pages 561-1028.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೮೨ ಕನಕ ಸಾಹಿತ್ಯ ದರ್ಶನ-೧ ಸಂಗೀತ ಮತ್ತು ಕನಕದಾಸರು ಬಿ. ವಿ. ಕೆ. ಶಾಸ್ತ್ರಿ ಬಂದಾರು, ಬರೆ, ನೋಡಬನ್ನಿರೆ' ಎಂಬ ಪದ ಸ್ವಾರಸ್ಯವಾದದ್ದು. ತ್ರಿಪದಿಯನ್ನು ಚತುಷ್ಪದಿಯಾಗಿ ಮಾರ್ಪಡಿಸಿಕೊಂಡು, ಡೊಳ್ಳಿನ ಕುಣಿತಕ್ಕೆ ಅಳವಡಿಸಿದ್ದಾರೆ. ದಶಾವತಾರವೈಭವವನ್ನು ಹಾಡುವ ಈ ಪದದ ಕಡೆಯ ಸೊಲ್ಲಿನಲ್ಲಿ ಸಂಗೀತವೆಂದರೆ ಹಾಡಿಕೆ, ವಾದ್ಯ ಕುಣಿತ ಮೂರೂ ಕೂಡುವುದನ್ನು ಕಾಣುತ್ತೇವೆ “ಡೊಳ್ಳಿನ ಮೇಲೆ ಕೈಯ ಬರಮಪ್ಪ ಹಾಕ್ಯಾನು ತಾಳವ ಶಿವನಪ್ಪ ತಟ್ಟಾನ್ ಮ್ಯಾ | ಒಳ್ಕೊಳ್ಳೆ ಪದಗಳ ಹನುಮಪ್ಪ ಹಾಡ್ಯಾನು ಚೆಲುವ ಕನಕಪ್ಪ ಕುಣಿದಾನ್ ಮ್ಯಾ | ಕುಣಿತದ ಪಾತ್ರವಿರದ ಪದಗಳಲ್ಲೂ ಅಭಿನಯವಂತೂ ಇದ್ದೇ ಇರುತ್ತದೆ. ನೃತ್ಯಕ್ಕೆ ಪ್ರಧಾನವಾದುದು ಅಭಿನಯ ತಾನೆ ? 'ಕೇಶವನೊಲುಮೆಯು ಆಗುವ ತನಕ | ಹರಿದಾಸರೊಳಿರುತಿರು ಹೇ ಮನುಜ', 'ತನು ನಿನ್ನದು, ಜೀವನ ನಿನ್ನದು ರಂಗ, ಅನು ದಿನದಲ್ಲಿ ಬಾಹೊ ಸುಖದುಃಖ ನಿನ್ನದಯ್ಯ, “ತಲ್ಲಣಿಸದಿರು ತಾಳು ಕಂಡ್ಯ ಮನವೆ, ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ' ಈ ಮೊದಲಾದ ಪದಗಳನ್ನು ಹಾಡುವಾಗ ಅಭಿನಯ ಮಾಡದಿದ್ದರೆ ಸೊಗಸುವುದಿಲ್ಲ. ಹೀಗೆಯೇ “ಏನೆಂದಳೇನೆಂದಳೋ, ನಿನ್ನೊಳು ಸೀತೆ ಹನುಮಯ್ಯ', 'ಬಾಗಿಲನು ತೆಗೆದು ಸೇವೆಯನು ಕೊಡು, ಹರಿಯೆ', 'ತೊರೆದು ಜೀವಿಸಬಹುದೆ, ಹರಿ, ನಿನ್ನ ಚರಣ' ಮುಂತಾದ ಪದಗಳಲ್ಲಿ ರಾಗಭಾವವೂ ಅಭಿನಯ ಸಾಮಗ್ರಿಯೂ ಸೊಗಸಾಗಿ ಸೇರಿಬರುತ್ತವೆ. ಐವತ್ತು-ಅರವತ್ತು ವರುಷಗಳ ಹಿಂದೆ ಪ್ರೈಮರಿ ಶಾಲೆಗಳಲ್ಲಿ ಪ್ರತಿ ದಿನವೂ ತರಗತಿಗಳು ಪ್ರಾರಂಭವಾಗುವ ಮುನ್ನ ನಡೆಯುತ್ತಿದ್ದ ಪ್ರಾರ್ಥನೆಯಲ್ಲಿ ನಮಗೆ ಉತ್ಸಾಹ ಕೊಡುತ್ತಿದ್ದ ಒಂದು ಹಾಡು-'ಈಶ ನಿನ್ನ ಚರಣ ಭಜನೆ' ಎಂದು ಪ್ರಾರಂಭವಾಗುತ್ತಿತ್ತು. ನಮ್ಮ ಉತ್ಸಾಹಕ್ಕೆ ಕಾರಣವಾಗಿದ್ದುದು ಅದರ ನಡೆ, ತಿಶ್ರದಲ್ಲಿದೆ. “ಮಾರ್ಚಿಂಗ್ ಟ್ಯೂನ್” ರೀತಿ ನಮಗೆ ಅನುಭವವಾಗುತ್ತಿತ್ತು. ಇದರ ಜೊತೆಗೆ ಕೊನೆಯ ಸಾಲಿನಲ್ಲಿ-'ಶ್ರೀಶಕೇಶವಾ ಅಥವಾ ಬಿಡಿಸು ಮಾಧವ' ಎಂಬ ಕಡೆಯ ಭಾಗವನ್ನು ಒಕ್ಕೊರಲಿನಿಂದ ಒತ್ತಿ ಒಗೆಯುವಂತೆ ಹಾಡುತ್ತಿದ್ದೆವು. ಆ ರೀತಿಹಾಡುವುದು ನಮಗೆ ಒಂದು ಖುಷಿ. ಮುಂದೆ ಮಿಡ್ಸ್ ಸ್ಕೂಲ್ ಸೇರಿದ ಮೇಲೆ ಪ್ರಾರ್ಥನೆಯಲ್ಲಿ ಇನ್ನೊಂದು ಹಾಡು- 'ದೀನ ನಾನು ಸಮಸ್ತ ಲೋಕಕೆ ದಾನಿ ನೀನು...' ಇತ್ಯಾದಿ. ಇಲ್ಲಿ ಕೊನೆಯ ಸಾಲಿನ “ರಕ್ಷಿಸು ನಮ್ಮನನವರತ' ಬಂದಾಗ ಹಾಡುತ್ತಿದ್ದವರೂ ಹಾಡದಿದ್ದವರೂ ಎಲ್ಲರೂ ಸೇರಿಕೊಂಡು ಒಟ್ಟಿಗೆ ಸೇರಿ ಸೂರು ಅಲ್ಲಾಡುವ ಹಾಗೆ 'ರಕ್ಷಿಸು ನಮ್ಮನನವರತ ಎಂದು ಕೂಗುತ್ತಿದ್ದುದು ನಮಗೇ ಒಂದು ಸಂತೋಷ, ಹುರುಪು. ಇದೇ ಕಾಲದಲ್ಲಿ ನಮ್ಮ ಉಪಾಧ್ಯಾಯರೊಬ್ಬರ ಮನೆಯಲ್ಲಿ ಪ್ರತಿ ಶನಿವಾರ ಭಜನೆ. ಅವರ ವಿದ್ಯಾರ್ಥಿಗಳಾದ ನಾವು ಕೆಲವರು ಅದರಲ್ಲಿ ಪಾಲುಗೊಳ್ಳುತ್ತಿದ್ದು ಹಾಡುತ್ತಿದ್ದ ಕೀರ್ತನೆಗಳಲ್ಲಿ ಒಂದು-ಕೇಶವನೊಲುಮೆಯು ಆಗುವ ತನಕ, ಒಟ್ಟಿಗೆ ಮಂತ್ರ ಹೇಳುವ ರೀತಿಯಲ್ಲಿ ಆದರೆ ಒಂದು ಲಯವನ್ನು ಅನುಸರಿಸಿ ಹಾಡುತ್ತಿದ್ದೆವು. ಅದರಲ್ಲಿ ಕೆಲವು ಸಾಲುಗಳನ್ನು ಹಾಡುವಾಗ ಸ್ವಲ್ಪ ಹುರುಪು ಹೆಚ್ಚುತ್ತಿತ್ತು ಮತ್ತು ಆ ಸಾಲುಗಳು ಇಷ್ಟು ವರುಷಗಳಾದರೂ ನೆನಪಿನಲ್ಲಿವೆ. ನಿದರ್ಶನವಾಗಿ ನ್ಯಾಯವ ಬಿಟ್ಟನ್ಯಾಯವ ಪೇಳುವ ನಾಯಿಗೆ ನರಕವು ತಪ್ಪಿತೆ ತಾಯಿ ತಂದೆಗಳ ಬಲು ನೋಯಿಸಿದ ಕನಕದಾಸರ ಪದಗಳನ್ನು ಹಾಡುವಾಗ, ಪುರಂದರದಾಸರೆಂದಂತೆ, 'ತಿಳಿದು ಪಾಡಲಿಬೇಕು'. ಅವರ ಪದಗಳಲ್ಲಿ ಮಾತಿನ ಸೊಗಸು, ಲಯದ ಬಿಗಿ, ರಾಗದ ಸ್ವಾರಸ್ಯ, ಅಭಿನಯದ ಸೌಕರ್ಯ ಎಲ್ಲವೂ ಇವೆ. ಇವುಗಳಲ್ಲಿ ಯಾವುದೊಂದನ್ನು ಕೈಬಿಟ್ಟರೂ ಒಟ್ಟಾರೆ ಅಂದ ಕೆಡುತ್ತದೆ. ಅವರು ತಮ್ಮ ಮೋಹನ ತರಂಗಿಣಿ ಸಾಂಗತ್ಯವನ್ನು ಕುರಿತು ಹೇಳಿಕೊಂಡಿರುವ ಹೆಗ್ಗಳಿಕೆ ಅವರ ಪದಗಳಿಗೂ ಧಾರಾಳವಾಗಿ ಅನ್ವಯಿಸುತ್ತದೆ. 'ಹರಿಶರಣರಪೆಚ್ಚು ಬುಧಜನರಿಗೆ ಮೆಚ್ಚು ದುರಿತವನಕೆ ಕಾಲ್ಕಿಚ್ಚು ವಿರಹಿಗಳಿಗೆದೆ ಗಿಚ್ಚು ವೀರರ್ಗೆಪುಚ್ಚು ಕೇಳ್ವರಿಗಿದು ತನಿಬೆಲ್ಲದಚ್ಚು *