ಪುಟ:Kanakadasa darshana Vol 1 Pages 561-1028.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೯೦ ಕನಕ ಸಾಹಿತ್ಯ ದರ್ಶನ-೧ ಸಂಗೀತ ಮತ್ತು ಕನಕದಾಸರು ೬೯೧ ಗುಂಡಕ್ರಿಯೆಗಳಲಿ | ಆರಭಿ ಸಾಮಂತ ಮಲಹರಿಯಿ೦ದೆ | ಕೈವಾರಿಸಿ ಖಳನ ಪಾಡಿದರು' ಎಂದು ಇನ್ನೂ ಹೆಚ್ಚಿನ ಮಾಹಿತಿಯಿಂದ ಕೂಡಿದ ವರ್ಣನೆ ಇದೆ. ಇನ್ನು ಸಂಧಿ ಇಪ್ಪತ್ತೇಳರಲ್ಲಿ- 'ನೃತ್ಯದವರು ತಾಳಮೇಳ ಸಹಿತ ಬಂದು ಮತ್ತೇಭ | ಗಮನೆಯರಿರ್ದಡೆಗೆ | ವರರುದ್ರವೀಣೆ ಧನುರ್ವೀಣೆಗೆ ಜಂತ್ಯ ತುಂಬುರು ವೀಣೇ, ಕೂರ್ಮವೀಣೆಗಳ ಸ್ವರಮಂಡಲ ಮುಖ್ಯ ತಂತ್ರೀವಾದ್ಯದ ಹೆಣ್ಣು ನೆರೆದುದು ಕೋಮಲವೆರಲಿಂದ ತಂತಿಯ ಮುಟ್ಟಿ ರಾಮ ಕ್ರಿಯೆಯ ಬಾರ್ಜಿಸಿದರು... ಹೀಗೆ ಸಂಗೀತದ ವಿವರಣೆಗಳಿವೆ. ಇವು ನಾನಾ ಸಂದರ್ಭಗಳಲ್ಲಿ ಬಂದಿವೆ. ವಾರಾಂಗನೆಯರ ಮನೆಗಳು, ಉಷೆಯ ಅಂತಃಪುರ ಬಾಣಾಸುರನ ಅರಮನೆ ಮೊದಲಾದ ಸಂದರ್ಭಗಳಲ್ಲಿ ಈ ಸಂಗೀತದ ವರ್ಣನೆ ಕಂಡುಬರುತ್ತದೆ. ಅನಿರುದ್ದನ ನಗರ ಶೋಧನೆಯ ಸಂದರ್ಭದಲ್ಲಿ ಕಂಡುಬರುವಸ್ವಸ್ತೀಯರುಗಳ ಮೇಲಿನ ಭ್ರಾಂತಿ ಬಿಡಿಸುವ ಹಸ್ತಿನಿಯರು ಭರತಶಾಸ್ತ್ರದಲ್ಲಿ ಪ್ರೌಢಯರು ಒಬ್ಬಳು ಅನುಪಮ ಗಾಯಕಿ, ತನ್ನ ಪ್ರೌಢಿಮೆಯ ಬಗೆಗೆ ಹೆಮ್ಮೆ. ಇನ್ನೊಬ್ಬಳೂ ಅಂತೆಯೇ ಆದರೆ ವೀಣಾವಾದಕಿ, ಮುಂದಿನ ಸಾಲುಗಳು ಇವರ ಗಾನ ಅಥವಾ ವಾದನ ಕ್ರಿಂಯೆಯನ್ನು ವಿವರಿಸುವುದು. “ಆಯತವಿಡುವಸುಸ್ವರ' ಇತ್ಯಾದಿ ಸಾಲುಗಳು ರಾಗಾಲಾಪನೆಗೆ ಸಂಬಂಧಪಟ್ಟವು. ಆಯತ, (ಆಯಿತ್ತ ಎನ್ನುವುದೂ ಉಂಟು) ರಾಗವಿಸ್ತಾರದ ಮೊದಲನೆಯ ಹಂತ, ರಾಹ ಸ್ವರೂಪವನ್ನು ಸ್ಕೂಲವಾಗಿ ಪರಿಚಯ ಮಾಡಿಸುವುದು ರಾಗಾಲಾಪನೆಯ ಈ ಹಂತಕ್ಕೆ ಶಾಸ್ತ್ರಗ್ರಂಥಗಳಲ್ಲಿ ಆಕ್ಷಿಪ್ತಿಕ ಎನ್ನುತ್ತಾರೆ. ಈ ಶಬ್ದದ ದೇಶೀಯ ರೂಪಾಂತರ ಆಯತ. ಮುಂದೆ ವಿಡುಪು ಎಂದಿದೆ. ಅದು ಎಡುಪು ಎಂದಿರ ಬೇಕು. ರಾಗಾಲಾಪನೆಯ ಮೊದಲನೆಯ ಆಕ್ಷಿಪಿಕಾ ಹಂತವಾದ ನಂತರ ಎರಡನೆಯದು ರಾಗವರ್ಧನಿ. ಇಲ್ಲಿ ರಾಗವು ಬಹು ಮುಖವಾಗಿ ಅರಳುತ್ತದೆ. ಅದರ ಆಕರ್ಷಣೀಯ ಹಾಗೂ ರುಚಿಕರ ಅಂಶಗಳನ್ನೆಲ್ಲಾ ಸ್ಪಷ್ಟಪಡಿಸುವ ಕ್ರಿಯ-ರಾಗವರ್ಧನಿ, ಇದರ ದೇಶೀಯ ರೂಪಎಡುಪು. ಒಟ್ಟಿನಲ್ಲಿ ಈ ಜಾಣೆಯರು ಷಡ್ಡಪಂಚಮದ ಉತ್ತಮ ಹೊಂದಾಣಿಕೆಯಿಂದ ರಾಗವನ್ನು ಪೋಷಿಸಿ ಅನಿಬದ್ದ ರಾಯ ಮುಂತಾದ ಪ್ರಕಾರಗಳಿಂದ ಹಾಡಿ ರಾಗದ ಅಂದವನ್ನು ಎತ್ತಿ ತೋರಿದರು. ಅದರಂತೆ ವಾದ್ಯಗಳನ್ನು ನುಡಿಸುವ ಹೆಂಗಳೆಯರ ಮೇಳವೂ ಇದ್ದಿತುಬಹುಶಃ ಗಾಯಕಿಯರಿಗೆ ಒತ್ತಾಸೆಯಾಗಿ, ಅವರು ನುಡಿಸುತ್ತಿದುದೂ ವಿಧವಿಧ ತಂತ್ರೀವಾದ್ಯ ರಾಮಹಸ್ತ, ಕಿನ್ನರಿ, ಸ್ವರಮಂಡಲ ಇವರ ಲಯಕ್ಕೆ ಒತ್ತಾಸೆಯಾಗಿ ನುಡಿಸಲಾದ ವಾದ್ಯಗಳು ಆವುಜ, ಮದ್ದಳೆ, ಉಡುಕು. ಇನ್ನೊಂದು ಅಂತಹದೇ ಸಂದರ್ಭ, ರಾಜಕುಮಾರಿ ಉಷೆಯ ಅಂತಃಪುರದಲ್ಲಿ ಗೆಳತಿಯರೊಂದಿಗೆ ಮನರಂಜನೆ ಮಾಡಿಕೊಳ್ಳುತ್ತಿದ್ದ ಸಂದರ್ಭ-ನೃತ್ಯದವರು. ತಾಳಮೇಳ ಸಹಿತ ಬಂದಿದಾರೆ. ಅನಂತರ ರುದ್ರವೀಣೆ, ಧನುರ್ವೀಣೆ, ತುಂಬುರುವೀಣೆ, ಕೂರ್ಮವೀಣೆ, ಸ್ವರಮಂಡಲವೆ ಮುಂತಾದ ವಾದ್ಯಗಳನ್ನು ನುಡಿಸುವ ಹೆಣ್ಣುಗಳು ಬಂದಿದಾರೆ. ಕೋಮಲ ಕೈಗಳಿಂದ ತಂತಿಯನ್ನು ಮುಟ್ಟಿ ಒಬ್ಬ ಚದುರೆ ರಾಮಕ್ರಿಯ ರಾಗವನ್ನು ನಿರೂಪಿಸುತ್ತಾಳೆ. ಇದಕ್ಕಿಂತ ಹೆಚ್ಚಿನ ಸ್ವಾರಸ್ಯ ಸಂದರ್ಭ-ಬಾಣಾಸುರನನ್ನು ಎಬ್ಬಿಸುವುದು. ರಾಜಕಾರ್ಯವನ್ನೆಲ್ಲಾ ಮುಗಿಸಿ ರಾತ್ರಿಯೆಲ್ಲಾ ಸುಖವಾಗಿ ನಿದ್ರೆಮಾಡಿದ ಬಾಣಾಸುರನ ಮಲಗುವ ಮನೆಯ ಬಳಿಗೆ ಬಂದರು-ಪುಷಸುಗಂಧಿಯರುಬಾಣನ ಉಪವಡವನು ಪಾಡುವೊಡೆ, ಉಪವಡ ಎಂದರೆ ಸುಪ್ರಭಾತ, ಹಿಂದೆ ರಾಜ ಮಹಾರಾಜರನ್ನು ಮೃದುವಾಗಿ ಹಾಡಿ ನಿದ್ದೆಯಿಂದೆಬ್ಬಿಸುವ ಸಂಪ್ರದಾಯವಿದ್ದಿತು. ಆ ಹಾಡುಗಳನ್ನು ಉಪ್ಪವಡಗಳೆನ್ನುತ್ತಿದ್ದರು. ಈ ಪ್ರಮದೆಯರು ದಂಡಿಗೆಯನ್ನು ಸರಿಯಾಗಿ ಶ್ರುತಿಮಾಡಿ ಹಿಡಿದುಕೊಂಡು ಹಾಡಲಾರಂಭಿಸಿದರು. ಅವರು ಹಾಡಿದ ವಿಧಾನವು ಏನೆಂದರೆ ಶುದ್ದ, ಸಾಳಗ, ಸಂಕೀರ್ಣ ವಿಧದಿಂದ. ಅಂದರೆ ಈ ವರ್ಗಗಳಿಗೆ ಸೇರಿದ ರಾಗಗಳನ್ನು ಹಾಡಿದರು. ಕರ್ನಾಟಕ ಸಂಗೀತದಲ್ಲಿ ಇಂದು ರಾಗಗಳನ್ನು ವಿಂಗಡಿಸಲು ಉಪಯೋಗದಲ್ಲಿರುವುದು ೭೨ ಮೇಳ ಪದ್ಧತಿ. ಅಂದರೆ ೭೨ ಪ್ರಧಾನ ರಾಗಗಳು ಮತ್ತು ಅವುಗಳಿಂದ ಹುಟ್ಟಿದ ಇತರ ರಾಗಗಳು. ಈ ಪದ್ಧತಿಯನ್ನು ರೂಪಿಸಿದವನು ವೇಂಕಟಮುನಿ. ೧೭ನೆಯ ಶತಮಾನದವನು. ಆದರೆ ಈ ಪದ್ಧತಿ ರೂಪಿತವಾಗುವುದಕ್ಕೂ ಹಿಂದೆ ಬೇರೆ ಬೇರೆ ರಾಗ ವರ್ಗಿಕರಣ ಪದ್ಧತಿ ಇದ್ದಿತು. ಅದರಲ್ಲಿ ಒಂದು ಶುದ್ಧಸಾಳಗ ಅಥವಾ ಛಾಯಾಲಗ ಮತ್ತು ಸಂಕೀರ್ಣ ಆಯಾ ಹೆಸರೇ ಸೂಚಿಸುವಂತೆ ಮೊದಲನೆಯದರಲ್ಲಿ ಹಿಂದಿನಿಂದ ನಿಜರೂಪವನ್ನು ಉಳಿಸಿಕೊಂಡು ಬಂದ ರಾಗಗಳು' ಎರಡನೆಯದರಲ್ಲಿ ಸ್ವಲ್ಪ ಬೇರೆ ರಾಗದ ಛಾಯೆಯುಳ್ಳ ರಾಗಗಳು, ಮೂರನೆಯದರಲ್ಲಿ ಎರಡೂ ಮೂರು ಕಲೆತಕೊಂಡ ರಾಗಗಳೂ ಇದ್ದುವು. ಇದು ಪ್ರಾಚೀನ ಪದ್ಧತಿ. ಈ ಗಾಯಕಿಯರು ಈ ಮೂರೂ ವಿಭಾಗಗಳಿಂದ ಆಯಿದ ರಾಗಗಳನ್ನು ಹಾಡುತ್ತಾರೆ. ಅದಕ್ಕೆ ಪ್ರಾಚೀನ ೧೦೮ ತಾಳಗಳಿಂದ ಆಯ್ದ ತಾಳಗಳ ಚೌಕಟ್ಟಿನಲ್ಲಿ ರಚಿತವಾದ ಗೀತಗಳನ್ನು ವಿಧವಿಧವಾದ- ನಾರಣಿ ಅಥವಾ ನಾರಾಯಣಿ.