ಪುಟ:Kanakadasa darshana Vol 1 Pages 561-1028.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೯೨ ಕನಕ ಸಾಹಿತ್ಯ ದರ್ಶನ-೧ ಸಂಗೀತ ಮತ್ತು ಕನಕದಾಸರು ta ದೇಶಾಕ್ಷಿ, ಗುರ್ಜರಿ, ದೇವಗಾಂಧಾರಿ ಗುಂಡಕ್ರಿಯೆ, ಅರಭಿ, ಸಾಮಂತ, ಮಲಹರಿ ರಾಗಗಳಲ್ಲಿ ಕೈವಾರಿಸಿ ಖಳನ ಪಾಡಿದರು. ಇವೆಲ್ಲಾ ಪ್ರಾಚೀನ ರಾಗಗಳು ಅಂದು, ವಿಜಯನಗರ ಕಾಲದಲ್ಲಿ ಪ್ರಚಲಿತವಿದ್ದುವು. ಇಲ್ಲಿ ಕನಕದಾಸರು ಅಂದು ಪ್ರಚಲಿತವಿದ್ದ ಸಂಗೀತದ ಬಗೆಗೆ ಒಂದು ಸ್ಕೂಲ ಚಿತ್ರ ನೀಡಿದ್ದಾರೆ. ಅವರ ಮೋಹನ ತರಂಗಿಣಿಯಲ್ಲಿ ಕೃಷ್ಣನ ದ್ವಾರಕಾನಗರ ಮತ್ತು ಬಾಣಾಸುರನ ಶೋಣಿತಪುರದ ವರ್ಣನೆಯಿಂದ ಕೂಡಿದ್ದರೂ, ಆ ವರ್ಣನೆಯೆಲ್ಲಾ ಅಂದು ಅವರು ಕಂಡ ಸುತ್ತಲಿನ ಪ್ರಪಂಚದ ವರ್ಣನೆಯೇ. ಬಹುತೇಕ ವಿಜಯನಗರದ ವರ್ಣನೆಯೇ. ಬೆಟಗೇರಿ ಕೃಷ್ಣಶರ್ಮರು ಇದೇ ಅಭಿಪ್ರಾಯಪಟ್ಟಿದಾರೆ ಅವರ “ಕರ್ಣಾಟಕ ಜನಜೀವನದಲ್ಲಿ. ಈ ಪುಸ್ತಕ ರಚನೆಯಲ್ಲಿ ಮೋಹನ ತರಂಗಿಣಿಯನ್ನು ಧಾರಾಳವಾಗಿ ಆಧರಿಸಿದ್ದಾರೆ. ಕನಕದಾಸರ ಈ ವರ್ಣನೆಗಳಲ್ಲಿ ಅಂದು ಪ್ರಚಲಿತವಿದ್ದ ಸಂಗೀತದ ಆಕಾರವೇ ಅಲ್ಲದೆ ಈ ಕಲೆಯಲ್ಲಿ ಅವರಿಗಿದ್ದ ಗಾಢವಾದ ಜ್ಞಾನದ ಅರಿವುಂಟಾಗುತ್ತದೆ. ಅವರು ಬಳಸಿರುವ ತಾಂತ್ರಿಕ ಶಬ್ದಗಳು ಮತ್ತು ಸಂದರ್ಭಗಳನ್ನು ಗಮನಿಸಿದಲ್ಲಿ ಕನಕದಾಸರಿಗೆ ಸಂಗೀತಕಲೆಯ ಒಳ್ಳೆಯ ಪರಿಚಯ ಇದ್ದುದು ಕಂಡುಬರುತ್ತದೆ. ಸಂಗೀತ ತಿಳಿಯದವರಿಗೆ ಆ ಶಬ್ದಗಳನ್ನು ಉಚಿತ ಸಂದರ್ಭಗಳಲ್ಲಿ ಬಳಸಲು ಸಾಧ್ಯವಾಗುತ್ತಿರಲಿಲ್ಲ. ರಾಗಗಳೇ ಅಲ್ಲದೆ ಕನಕದಾಸರು ಅಂದು ಬಳಕೆಯಲ್ಲಿದ್ದ ಅನೇಕ ವಾದ್ಯಗಳ ಹೆಸರುಗಳನ್ನೂ ಹೇಳಿದಾರೆ-ರಾವಣಹಸ್ತ, ಕಿನ್ನರಿ, ಸ್ವರಮಂಡಲ, ರುದ್ರವೀಣೆ, ಧನುರ್ವೀಣೆ, ಕೂರ್ಮವೀಣೆ, ಆಹುಜ, ಮದ್ದಳೆ ...ಇತ್ಯಾದಿ. ಇದರಲ್ಲಿ ಇಂದು ರಾವಣಹಸ್ತ ನಮ್ಮಿಂದ ಮರೆಯಾಗಿದೆ. ಆದರೆ ರಾಜಸ್ಥಾನದ ಜಾನಪದ ಮೇಳಗಳಲ್ಲಿ ಕಂಡುಬರುತ್ತದೆ. ಕಿನ್ನರಿಯೂ ಹಾಗೆಯೇ, ಒಂದು ಕಾಲದಲ್ಲಿ ಕರ್ನಾಟಕದಲ್ಲಿ ಕಿನ್ನರಿಯೂ ಪ್ರಧಾನ ತಂತ್ರೀ ವಾದ್ಯವಾಗಿತ್ತು. ಇಂದಿನ ವೀಣೆಯ ಸ್ಥಾನವನ್ನು ಪಡೆದಿತ್ತು. ಆದರೆ ಇಂದು ಜಾನಪದ ಸಂಗೀತದಲ್ಲಿ ಕೆಲವೆಡೆಗಳಲ್ಲಿ ಉಳಿದುಕೊಂಡಿದೆ. ರುದ್ರವೀಣೆ ಮತ್ತು ಸ್ವರಮಂಡಲಗಳೂ ಇನ್ನೂ ಬಳಕೆಯಲ್ಲಿವೆ. ಧನುರ್ವಿಣೆ ಮತ್ತು ರಾವಣಹಸ್ತ ಎರಡೂ ಹೆಚ್ಚು ಕಡಿಮೆ ಒಂದೇ ಬಗೆಯ ವಾದ್ಯಗಳು. ಕೂರ್ಮವೀಣೆ ಇಂದು ಭಾರತದಲ್ಲಿ ಮಾಯವಾಗಿದೆ. ಆದರೆ ಆಗೇಯ ಏಷ್ಯದ ಅದರಲ್ಲಿಯೂ ಇಂಡೋನೇಸಿಯಾ ಸಂಗೀತದಲ್ಲಿ ಕಂಡುಬರುತ್ತದೆ. ಆಹುಜವೂ ಭಾರತೀಯ ಸಂಗೀತ ಕ್ಷೇತ್ರದಿಂದ ಮರೆಯಾಗಿದೆ. ಆದರೆ ಮದ್ದಳೆಯು ಇನ್ನೂ ಯಕ್ಷಗಾನಗಳಲ್ಲಿ ಬಳಕೆಯಲ್ಲಿದೆ. ಈ ವಿವರಗಳನ್ನು ಕೊಡುವ ಉದ್ದಿಶ್ಯವಿಷ್ಟೆ, ಕನಕದಾಸರಿಗೆ ಸಂಗೀತದಲ್ಲಿ ಇದ್ದ ತಿಳುವಳಿಕೆಯನ್ನು ಮನವರಿಕೆ ಮಾಡಿಕೊಡುವುದೇ ಅಲ್ಲದೇ ಈ ತಿಳುವಳಿಯು ಕೇವಲ ಶಾಸ್ತ್ರಗ್ರಂಥಗಳನ್ನು ಆಧರಿಸಿ ಉದಾಹರಿಸುವಂತಹುದಲ್ಲ. ಅಂದಿನ ನಿಜ ಸ್ಥಿತಿಯ ಬಗೆಗೆ ಇದ್ದ ತಿಳುವಳಿಕೆ, ಸಂಗೀತದ ಸಜೀವ ಸ್ವರೂಪವನ್ನು ತೋರುವಂತಹುದು ಎಂಬ ಅಂಶವನ್ನು ಸ್ಪಷ್ಟಪಡಿಸುವುದು. ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿ ಇದೆ. ಅದು ಈ ಸಂಗೀತಜ್ಞಾನದ ಉದ್ದಿಶ್ಯ, ಕನಕದಾಸರ ಸಂಗೀತಜ್ಞಾನವು ಕೇವಲ ಕಚೇರಿಗಳಿಗೆ ಅಥವಾ ಪ್ರೌಢಿಮೆಯ ಪ್ರದರ್ಶನಮಾಡಲು ಬೆಳೆಯಿಸಿಕೊಂಡುದಲ್ಲ. ಅದರ ಬಳಕೆಅವರ ತತ್ವಜ್ಞಾನ ನೀತಿಬೋಧ ಗಳ ಪ್ರಚಾರ ಮಾಧ್ಯಮವಾಗಿ ಉಪಯೋಗಿಸಿಕೊಂಡರು. ಹಾಡಿನ ರೂಪದಲ್ಲಿ ಸಂಗೀತವು ಭಾರತೀಯ ಸಮಾಜದಲ್ಲಿ ಪ್ರಾಚೀನಕಾಲದಲ್ಲಿ ರಕ್ತಗತವಾಗಿದೆ. ಒಂದು ಪದ್ಯವನ್ನು ಹೇಳಬೇಕಾದರೂ ರಾಗ ಸಹಿತ ಹಾಡುವ ರೀತಿಯಲ್ಲಿ ಕನಕದಾಸರು ತಮ್ಮ ಸಂಗೀತಜ್ಞಾನವನ್ನು ಈ ವಿಧದಲ್ಲಿ ಬಳಸಿಕೊಂಡರು. ತಾವು ರಚಿಸಿದ ನೂರಾರು ಕೀರ್ತನೆಗಳನ್ನು ರಾಗಬದ್ಧವಾಗಿ ಹಾಡಿ ಜನರ ಮನಗಳಲ್ಲಿ ಸಂಗೀತದ ಬೀಜವನ್ನು ಬಿತ್ತಿದರು. ಹರಿದಾಸ ಪಂಥದಲ್ಲಿ ಹಲವಾರು ಮಂದಿ ಪ್ರಸಿದ್ದರಾದವರು. ಅವರೆಲ್ಲಾ ಕೀರ್ತನೆಗಳನ್ನು ರಚಿಸಿ ಹಾಡಿ ತಮ್ಮ ಅಂತರಂಗಭಕ್ತಿಯನ್ನು ಅಭಿವ್ಯಕ್ತಪಡಿಸಿದ್ದಾರೆ. ಅವರಲ್ಲಿ ಬಹು ಮಂದಿಯ ಪ್ರಭಾವ ಒಂದು ಪ್ರಾಕಾರಕ್ಕೆ ಮಾತ್ರ ಸೀಮಿತವಾಯಿತು. ಆದರೆ ಪುರಂದರದಾಸ ಮತ್ತು ಕನಕದಾಸರ ಸ್ಥಿತಿ ಹಾಗಲ್ಲ, ಸಮಾಜದ ವಿವಿಧ ವರ್ಗಗಳಲ್ಲೆಲ್ಲಾ ವ್ಯಾಪಕರಾದವರು. ಕರ್ನಾಟಕದ ವಿವಿಧ ಮೂಲೆಗಳಲ್ಲಿದ್ದ ಭಜನ ಮಂದಿರಗಳಲ್ಲಿ, ಬಹುತೇಕ ಮನೆಗಳಲ್ಲಿ ಮೊಳಗುತ್ತಿದ್ದುದ್ದು ಈ ಇಬ್ಬರು ರಚಿಸಿದ ಕೀತರ್ನೆಗಳೇ. ಇದಕ್ಕೆ ಕಾರಣ ಇವರಿಬ್ಬರೂ ಲೋಕಸಂಚಾರಿಗಳು, ರಸವತ್ತಾದ ರಾಗಪೋಷಣೆಯಿಂದ ಭಾವಪೂರಿತವಾಗಿ ಅವರು ಹಾಡುತ್ತಿದ್ದ ಕೀರ್ತನೆಗಳು ಜನಗಳ ಕಿವಿಗೆ ಹಿತವೆನಿಸಿ, ಅವರನ್ನು ಆಕರ್ಷಿಸಿ. ಪ್ರತಿಪಾದಿಸಿದ ವಿಷಯಗಳಸಹಿತವಾಗಿ ಜನತೆಯ ಮನಸ್ಸಿನಲ್ಲಿ ನೆಲೆಸಿದುವು. ಕಲೆಯು ಜನತೆಯ ಮಧ್ಯೆ ಜೀವಂತವಾಗಿ ಬೆಳೆಯಲು ಕಾರಣರಾದರು. ಪುರಂದರದಾಸರು ಕರ್ನಾಟಕದ ಹೊರಗಡೆಯೂ ಇಡೀ ದಕ್ಷಿಣಭಾರತದಲ್ಲಿ ಸಂಚರಿಸಿ ವಿಜಯನಗರದಲ್ಲಿ ಹೊಸ ವರ್ಚಸ್ಸಿನಿಂದ ವೃದ್ಧಿಯಾದ ಪರಂಪರಾನುಗತ ರಾಗಗಳೂ ಮತ್ತು ನಿರ್ಮಿತವಾದ ಹೊಸ