ಪುಟ:Kanakadasa darshana Vol 1 Pages 561-1028.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೯ ಕನಕ ಸಾಹಿತ್ಯ ದರ್ಶನ-೧ ಇಂದಿನ ಶಾಸ್ತ್ರೀಯ ಸಂಗೀತ ಕ್ಷೇತ್ರದ ಸ್ಥಿತಿಯನ್ನು ನೋಡಿದಲ್ಲಿ ಕನಕದಾಸರಂತಹ ಮಹನೀಯರ ಸೇವೆಯ ಮಹತ್ವವು ಅರ್ಥವಾಗುವುದು. ಇಂದು ಅದು ಜನತೆಯ ಸಂಪರ್ಕ ತಪ್ಪಿ ಬೇರಿಲ್ಲದ ಮರದಂತಾಗಿದೆ, ಸಮಾಜದ ಒಂದು ಪದರಕ್ಕೆ ಸೀಮಿತವಾಗಿ, ಕೃತಕಶಕ್ತಿವರ್ಧಕಗಳನ್ನು ಅಪೇಕ್ಷಿಸುವಂತೆ ಆಗಿದೆ. ಈ ಹಿನ್ನೆಲೆಯಲ್ಲಿ ತಲತಲಾಂತರದಿಂದ ಬಂದ ಸಂಗೀತವನ್ನು ಜನತೆಯ ಬದುಕಿನ ಅಂಗವಾಗಿ ಮಾಡಿ ಸಜೀವ ಕಲೆಯಂತೆ ಬೆಳೆದು ಬರಲು ಕಾರಣರಾದ ಕನಕದಾಸರ ಸೇವೆ ಸ್ಮರಣೀಯವಾದುದು. ಕನಕದಾಸರ ಕೃತಿಗಳಲ್ಲಿ ಜಾನಪದ ಅಂಶಗಳು ಡಾ. ಜೀ. ಶಂ. ಪರಮಶಿವಯ್ಯ ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ವಚನಸಾಹಿತ್ಯ ಮೊದಲನೆಯ ಘಟ್ಟದಲ್ಲಿ ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸಿದಂತೆಯೇ ಎರಡನೆಯ ಘಟ್ಟದಲ್ಲಿ ದಾಸಸಾಹಿತ್ಯ ಸ್ಪಂದಿಸುತ್ತದೆ. ದೃಷ್ಟಿ, ಧೋರಣೆ ಮತ್ತು ಪ್ರೇರಣೆಗಳಲ್ಲಿ ಈ ಎರಡು ಪಂಥಗಳಲ್ಲೂ ಮಿಡಿದಿರುವುದು ಒಂದೇ ನಾಡಿ, ಭಕ್ತಿ, ಜ್ಞಾನ, ವೈರಾಗ್ಯಗಳನ್ನು ಜನರಲ್ಲಿ ಬಿತ್ತುತ್ತ ಸಮಾಜದ ಅಂಕುಡೊಂಕುಗಳನ್ನು ವಿಡಂಬಿಸುತ್ತ, ತಮ್ಮನ್ನೂ ಆತ್ಮ ವಿಮರ್ಶೆಗೆ ಗುರಿಪಡಿಸಿಕೊಳ್ಳುತ್ತ ವಚನಕಾರರೂ ಕೀರ್ತನಕಾರರೂ ತಮ್ಮ ಉದ್ದೇಶ ಸಾಧನೆಗೆ ಪೂರಕವಾಗುವ ಸಾಹಿತ್ಯವನ್ನು ಸೃಷ್ಟಿಮಾಡಿದರು. ಬಹುಪಾಲು ಸಾಮಾನ್ಯ ವರ್ಗದಿಂದಲೇ ಬಂದ ಇವರು ಸಾಹಿತ್ಯದಲ್ಲಿ ಸರಳತೆಯನ್ನು ಸಾಧಿಸಿ ಅದನ್ನು ಜನಸಾಮಾನ್ಯರ ಬಾಗಿಲಿಗೇ ಒಯ್ದರು. ಬದುಕಿನ ನಿಗೂಢ ಸತ್ಯಗಳನ್ನು ವಚನ ಹಾಗೂ ಕೀರ್ತನ ಮಾರ್ಗಗಳಿಂದ ಭೇದಿಸಿ ಜನತೆಗೆ ಆಕ್ರೋನ್ನತಿಯ ಮಾರ್ಗವನ್ನು ತೋರಿದರು. ಹೀಗೆ ಮಾಡುವಾಗ ಅವರ ಸಾಹಿತ್ಯ ನಿರ್ಮಿತಿಗೆ ಮೂಲ ಪರಿಕರವಾದದ್ದು ಜನಸಾಮಾನ್ಯರ ಬದುಕು, ಜನಜೀವನವನ್ನು ಹತ್ತಿರದಿಂದ ನೋಡಿ ಅದನ್ನು ತಮ್ಮ ಸಾಹಿತ್ಯದಲ್ಲಿ ಸೂರೆಮಾಡಿದರು. ಜನಪದ ಸಂಸ್ಕೃತಿ ಗಾಢವಾಗಿ ಈ ಎರಡೂ ಸಾಹಿತ್ಯ ದೃಷ್ಟಿಯಲ್ಲಿ ಬೆನ್ನೆಲುಬಾಗಿ ನಿಂತಿರುವುದರಿಂದಲೇ ಅದರ ಸೊಗಡು ಹೆಚ್ಚಿದೆ ; ಸೊಗಸು ಇಮ್ಮಡಿಸಿದೆ. ವಚನ ಹಾಗೂ ಕೀರ್ತನ ಸಾಹಿತ್ಯದಲ್ಲಿ ಸಾಮಾನ್ಯತಾಶ್ರೀ ಪಡೆದುಕೊಂಡ ಈ ಸ್ಥಾನ ಆ ಸಾಹಿತ್ಯಕ್ಕೆ ಒಂದು ಅರ್ಥಪೂರ್ಣತೆಯನ್ನು ತಂದುಕೊಟ್ಟಿದೆ. ದಾಸಪರಂಪರೆಯ ಪ್ರಮುಖ ಕೀರ್ತನಕಾರರಾದ ಕನಕದಾಸರು ಜನಸಾಮಾನ್ಯ ವರ್ಗದಿಂದ ಬಂದ ಒಬ್ಬ ಸಂತಕವಿ. ಇವರ ಬದುಕಿನ ಹಿನ್ನೆಲೆ ಬಾಳಿ ಬದುಕಿದ ಪರಿಸರ ಇವರ ಸಾಹಿತ್ಯಕ್ಕೆ ಹೊಸ ಶಕ್ತಿಯನ್ನೂ, ಹೊಸ