ಪುಟ:Kanakadasa darshana Vol 1 Pages 561-1028.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೯೮ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳಲ್ಲಿ ಜಾನಪದ ಅಂಶಗಳು ೬೯೯ ಆಯಾಮವನ್ನೂ ಒದಗಿಸಿದೆ. ಜನಪದ ಜೀವನದ ಸಮೃದ್ದ ಅನುಭವಗಳನ್ನು ದಟ್ಟವಾಗಿ ತಮ್ಮ ರಚನೆಗಳಲ್ಲಿ ತುಂಬಿಕೊಟ್ಟಿರುವುದರಿಂದ ಇವರ ಸಾಹಿತ್ಯ ಹೆಚ್ಚು ಸತ್ವಪೂರ್ಣವೂ ವೈಶಿಷ್ಟ್ಯಪೂರ್ಣವೂ ಆಗಿದೆ. ಪ್ರತಿಭಾಸಂಪನ್ನರಾದ ಕನಕದಾಸರು ಕೇವಲ ಕೀರ್ತನೆಗಳಿಗೆ ಮಾತ್ರವೇ ತಮ್ಮ ಸಾಹಿತ್ಯ ನಿರ್ಮಿತಿಯನ್ನು ಸೀಮಿತಗೊಳಿಸಿದವರಲ್ಲ. ಸತ್ವಪೂರ್ಣವಾದ ಕಾವ್ಯಗಳನ್ನು ರಚಿಸುವುದರ ಮೂಲಕ ತಮ್ಮ ಹೆಗ್ಗಳಿಕೆಯನ್ನು ಮೆರೆದಿದ್ದಾರೆ. 'ರಾಮಧಾನ್ಯ ಚರಿತೆ', 'ನಳಚರಿತ್ರೆ' ಮತ್ತು 'ಮೋಹನ ತರಂಗಿಣಿ' ಈ ಮೂರೂ ಕಾವ್ಯಗಳು ಕಥಾವಸ್ತುವಿನ ದೃಷ್ಟಿಯಿಂದ ಗಮನಾರ್ಹವಾದುವು. ಸುಪ್ರಸಿದ್ದ ಕಥಾನಕಗಳನ್ನು ಕೈಬಿಟ್ಟು, ಜನಪದ ಕಥೆಗಳ ಚೌಕಟ್ಟಿಗೆ ಒಳಪಡುವ, ಬಹುಬೇಗ ಜನರ ಮನಸ್ಸನ್ನು ಸೂರೆಗೊಳ್ಳಬಹುದಾದ ವಸ್ತುಗಳನ್ನು ಆಯ್ಕೆಮಾಡಿಕೊಂಡಿರುವುದರಲ್ಲೇ ಅವರ ಜಾಣೆಯನ್ನು ಗುರುತಿಸಬಹುದಾಗಿದೆ. 'ಹರಿಭಕ್ತಿಸಾರ ಮತ್ತು ಕೀರ್ತನೆಗಳು ಭಾಗವತ ಪಂಥದ ದೃಷ್ಟಿದೋರಣೆಗಳನ್ನು ಹೆಚ್ಚಾಗಿ ಮೈಗೂಡಿಕೊಂಡು ರಚಿತವಾದ ಸಾಹಿತ್ಯವೆನಿಸಿ ಭಕ್ತಿ, ಜ್ಞಾನ, ವೈರಾಗ್ಯಗಳನ್ನು ಬೋಧಿಸುತ್ತವೆ. ಪರಮ ಭಾಗವತರಾದ ಕನಕದಾಸರ ಕೃತಿಗಳಲ್ಲಿ ವಿಷ್ಣು ಪಾರಮ್ಯದ ದೃಷ್ಟಿಯೇ ಪ್ರಧಾನವಾದರೂ ಅದು ಕೇವಲ ಪ್ರಚಾರ ಸಾಹಿತ್ಯವಾಗಿಲ್ಲ. ಕಲೆಯಾಗಿ ಮೈವೆತ್ತಿರುವುದರಿಂದ ಅವರು ಕೀರ್ತನಕಾರರಲ್ಲಿ ಒಂದು ಪ್ರಮುಖ ಸ್ಥಾನವನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ಕನಕದಾಸರು ತಮ್ಮ ಕಾವ್ಯಗಳಲ್ಲಿ ತುಂಬಿಕೊಟ್ಟಿರುವ ದಟ್ಟವಾದ ಜೀವನಾನುಭವ, ಕೌಶಲಪೂರ್ಣವಾದ ಕತೆಗಾರಿಕೆ, ಮನೋಜ್ಞವಾದ ವರ್ಣನೆಗಳು ಸರಳವೂ ಸುಲಭವೂ ಆದ ಶೈಲಿ ಒಂದು ಕಡೆ ಅವರ ವೈಶಿಷ್ಟ್ಯಕ್ಕೆ ಕಾರಣವಾದರೆ, ಇನ್ನೊಂದು ಕಡೆ ಅವರ ಕೀರ್ತನೆಗಳಲ್ಲಿ ಹಾಸುಹೊಕ್ಕಾಗಿರುವ ಜನಪದ ಜೀವನದ ಬಗೆಬಗೆಯ ಅನುಭವಗಳು ಕನಕರ ಹಿರಿಮೆಯನ್ನು ಸಾರುತ್ತವೆ. ಕನಕರ ಕೀರ್ತನೆಗಳಲ್ಲಿ ಕಂಡುಬರುವ ಜನಪದ ಸಂಸ್ಕೃತಿಯ ನೈಜಚಿತ್ರಣ ಅವರ ಕೀರ್ತನೆಗಳ ಸತ್ವವನ್ನೂ, ವೈವಿಧ್ಯವನ್ನೂ ಹೆಚ್ಚಿಸಿವೆ ಎನ್ನಬಹುದು. ೩. ಜನಪದ ಕಲೆಗಳ ಪ್ರಭಾವ ೪. ಜನಪದ ಸಂಪ್ರದಾಯಗಳ ಪ್ರಭಾವ ೫. ಜನಪದ ಗಾದೆ ಒಗಟುಗಳ ಪ್ರಭಾವ ಕನಕದಾಸರು ಸಾಮಾನ್ಯವರ್ಗದಿಂದ ಬಂದವರು. ಜನರ ಕಲೆಗಳನ್ನು, ಹಾಡುಗಳನ್ನು ಹತ್ತಿರದಿಂದ ಕಂಡವರು, ಕೇಳಿ ನಲಿದವರು. ಜನಪದ ಗೀತೆಯ ಪ್ರಮುಖ ಪ್ರಕಾರಗಳಾದ ಕೋಲಾಟದ ಪದಗಳು, ಡೊಳ್ಳುಪದಗಳೂ, ತತ್ವಪದಗಳು ಅವರನ್ನು ವಿಶೇಷವಾಗಿ ಆಕರ್ಷಿಸಿವೆ. ಅವುಗಳ ಅರ್ಥಸೌಂದರ್ಯಕ್ಕೆ, ಲಯಮಾಧುರ್ಯಕ್ಕೆ ಅವರು ಮಾರುಹೋಗಿದ್ದಾರೆ. ತಾವೇ ಹಾಡಿದ್ದಾರೆ, ಕುಣಿದಿದ್ದಾರೆ, ಸವಿದಿದ್ದಾರೆ. ಆದುದರಿಂದ ಅವರ ಎಲ್ಲ ಕೀರ್ತನೆಗಳಲ್ಲೂ ಇಂಥ ಜಾನಪದೀಯ ರಚನೆಗಳ ಪ್ರಭಾವ ದಟ್ಟವಾಗಿ ಮೈಗೂಡಿಕೊಂಡಿದೆ. ವಿವಿಧ ಸಂಪ್ರದಾಯದ ಜನಪದ ಕಲಾಮೇಳಗಳನ್ನು ಹಾಡುಗಾರಿಕೆಯ ಸಂಪ್ರದಾಯಗಳನ್ನು ಅವರು ಬಲ್ಲವರಾಗಿದ್ದಾರೆ ಅವರ ಕೀರ್ತನೆಗಳಿಗೆ ಜನಪದ ಕವಿಗಳು ಋಣಿಯಾಗಿದ್ದಾರೆ. ಒಂದೆರಡು ನಿದರ್ಶನಗಳನ್ನು ಇಲ್ಲಿ ನೋಡಬಹುದು: ನಮ್ಮಮ್ಮ ಶಾರದೆ ಉಮಾಮಹೇಶ್ವರಿ ನಿಮ್ಮೊಳಗಿಹನ್ಯಾರಮ್ಮ || ಎಂಬ ಪಲ್ಲವಿಯಿಂದ ಆರಂಭವಾಗುವ ಹಾಡು ನೀಲಗಾರ ಸಂಪ್ರದಾಯದಲ್ಲಿ ಗುರುತಿಸಲ್ಪಟ್ಟಿದೆ. ಮಂಟೇಸ್ವಾಮಿ ಸಂಪ್ರದಾಯದ ನೀಲಗಾರರು ತಮ್ಮ ಧಾರ್ಮಿಕ ಕಾವ್ಯವಾದ 'ಮಂಟೇಸ್ವಾಮಿ ಕಾವ್ಯ'ದ ಗಣಸ್ತುತಿಯನ್ನು ಈ ಹಾಡಿನಿಂದಲೆ ಆರಂಭಿಸುತ್ತಾರೆ. ಕನಕದಾಸರು ನೀಲಗಾರ ಸಂಪ್ರದಾಯವನ್ನು ಕಂಡವರು. ಏಕೆಂದರೆ ಈ ಸಂಪ್ರದಾಯ ಮೈಸೂರು, ಬೆಂಗಳೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಪ್ರಚಲಿತವಾಗಿದೆ. ಈ ಜನಪ್ರಿಯ ಗೀತೆ ಬಾಯಿಂದ ಬಾಯಿಗೆ ಹರಿದು ಜನಪದ ಕಾವ್ಯ ಸಂಪ್ರದಾಯವೊಂದರಲ್ಲಿ ಬೆರೆತುಹೋಗಿರುವುದು ಇಲ್ಲಿ ಗಮನಾರ್ಹ, ಮಂಟೇಸ್ವಾಮಿ ಕಾವ್ಯದ ಆರಂಭದ ಗಣಸ್ತುತಿ ಹೀಗಿದೆ ಅಮ್ಮಮ್ಮ ಸರಸ್ವತಿ ಚಿನ್ಮಯ ಮೂರುತಿ ನಿಮ್ಮೊಳಗಿವನಾರಮ್ಮ-ಕಾಮಸುತನ ವೈರಿ ಸಂಡಿಲ ಬೆನುಮಯ್ಯ-ನಮ್ಮಯ್ಯ ಗಣನಾಯಕ ಉಟ್ಟುಪಟ್ಟಿದಟ್ಟಿ ಬಿಗಿದುಟ್ಟ ಚಲ್ಲಣ ದಿಟ್ಟ ತಾ ಇವನಾರಮ್ಮ || ಕನಕದಾಸರ ಕೀರ್ತನೆಗಳಲ್ಲಿನ ಜಾನಪದ ಅಂಶಗಳನ್ನು ಈ ಕೆಳಕಂಡಂತೆ ವರ್ಗಿಕರಿಸಿಕೊಳ್ಳಬಹುದು : ೧. ಜನಪದ ಗೀತೆಗಳ ಪ್ರಭಾವ ೨. ಜನಪದ ಸಂಗೀತದ ಪ್ರಭಾವ