ಪುಟ:Kanakadasa darshana Vol 1 Pages 561-1028.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೦೨ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳಲ್ಲಿ ಜಾನಪದ ಅಂಶಗಳು ೭೦೩ ಅಷ್ಟಮದ ಮತ್ಸರಗಳೆಂಬ ಟಗರುಗಳು ದೃಷ್ಟಿಜೀವಾತ್ಮನೆಂಬ ಆಡು ಸೃಷ್ಟಿಸಿದ್ದವೆಂತೆಂಬುವಾ ಹೋತಗಳು ಕಟ್ಟಿಕೋಲಿನಲಿ ಇರುತಿರುವ ನಮ್ಮಜ್ಞ || ಕೋಲನ್ನು ಹಿಡಿದ ಆದಿಕೇಶವನೆಂಬ “ಅಜ್ಜ' ಮರವೆಯಲಿ ಯಮನೆಂಬ ತೋಳ ಹೊಕ್ಕು ತರುಬಿ ಹಿಂಜಾಲದಲಿ ಕುರಿಯ ಮುರಿವುದ ಕಂಡು ಅರಿತೂ ಅರಿಯದ ಹಾಗೆ ಇರುತ್ತಾನೆ. ಇವನು ಅಷ್ಟು ಪ್ರಾಣಿಗಳಿಗೂ ಅಂಬಲಿ ಮಾಡಿ ಹೊಟ್ಟೆತುಂಬುವ ಹಾಗೆ ಎರೆಯುತ್ತಾನೆ. ಜೀವ ದೈವಗಳ ಸಂಬಂಧವನ್ನು ಚಿತ್ರಿಸುವಲ್ಲಿ ಕನಕದಾಸರು ಕುರಿಯ ಹಿಂಡಿನ ಪ್ರತಿಮೆಯನ್ನು ಅತ್ಯಂತ ಸಾರ್ಥಕವಾಗಿ ಇಲ್ಲಿ ಬಳಸಿಕೊಂಡಿದ್ದಾರೆ ಎಂಬುದು ಮುಖ್ಯವಾಗಿರುವಂತೆಯೇ, ಆ ವೃತ್ತಿಯ ಸಮಗ್ರ ವಿವರಗಳ ದಟ್ಟ ಅನುಭವವೂ ಇರುವುದು ಶ್ರುತವಾಗುತ್ತದೆ. ಜನಪದ ಜೀವನದ ಇಂಥ ನೈಜ ಚಿತ್ರಣವನ್ನು ನೀಡಲು ಕುರುಬನಾದ ಕನಕನಿಗೆ ಮಾತ್ರ ಸಾಧ್ಯ ಎಂಬುದರಲ್ಲಿ ಅನುಮಾನವಿಲ್ಲ. ಕನಕದಾಸರಿಗೆ ಜೀವನದ ವಿವಿಧ ಕ್ಷೇತ್ರಗಳ ಅನುಭವ ದಟ್ಟವಾಗಿರುವುದು ಅವರ ಇತರ ಕೀರ್ತನೆಗಳಲ್ಲಿ ಕಂಡುಬರುತ್ತದೆ. ಎಲ್ಲಾರೂ ಮಾಡುವುದು ಹೊಟ್ಟೆಗಾಗಿ' ಎಂಬ ಕೀರ್ತನೆ ಹೊಟ್ಟೆಯಪಾಡಿನ ವಿವಿಧ ವೃತ್ತಿಗಳನ್ನು ಸುರುಳಿ ಸುರುಳಿಯಾಗಿ ಬಿಚ್ಚಿತೋರಿಸುತ್ತದೆ. ಜನಪದ ಜೀವನ ಬಗೆಗಳನ್ನು ಅತ್ಯಂತ ನೈಜವಾಗಿ ಚಿತ್ರಿಸುವ ರೀತಿ ಮೆಚ್ಚುವಂತಿದೆ. ಅಂಗಡಿಗಳನ್ನು ಹೂಡಿ ವ್ಯಂಗ್ಯ ಮಾತುಗಳಾಡಿ ಭಂಗಬಿದ್ದು ಗಳಿಸುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ಕುಂಟೆ ತುದಿಗೆ ಕೊರಡುಹಾಕಿ ಹೆಂಟೆಮಣ್ಣು ಸಮಮಾಡಿ ರಂಟೆ ಹೊಡೆದು ಬೆಳೆಸುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಕೊಟ್ಟಣವ ಕುಟ್ಟಿಕೊಂಡು ಕಟ್ಟಿಗೆಯ ಹೊತ್ತುಕೊಂಡು ಕಷ್ಟಮಾಡಿ ತಿಂಬುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ತಾಳ ದಂಡಿಗೆ ಶ್ರುತಿಮೇಳ ತಂಬೂರಿಗೊಂಡು ಸೂಳೆಯಂತೆ ಕುಣಿಯುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ -ಹೀಗೆ ಬದುಕಿಗಾಗಿ ಬಗೆಬಗೆಯಲ್ಲಿ ಹೋರಾಡುವ ಚಿತ್ರಗಳನ್ನು ನೀಡುವಲ್ಲಿ ಆಯಾ ಕಸುಬುಗಳ ವೈಶಿಷ್ಟ್ಯವನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. 'ಕುಂಟೆ', 'ಹೆಂಟೆ, ರಂಟೆ' ಮೊದಲಾದ ವ್ಯವಸಾಯ ಸಂಬಂಧವಾದ ಶಬ್ದಗಳನ್ನು ಬಳಸುವಲ್ಲಿ ಇವರು ಇತರ ದಾಸರಿಗಿಂತ ಹೇಗೆ ಭಿನ್ನವಾದ ಅನುಭವಗಳನ್ನು ತಂದುಕೊಡುತ್ತಾರೆ ಎಂಬುದನ್ನು ಗಮನಿಸಬಹುದಾಗಿದೆ. 'ರೆಂಟಿ' ಅನೇಕ ಜೊತೆ ಎತ್ತುಗಳನ್ನು ಕಟ್ಟಿ ಹೊಲವನ್ನು ಹದಗೊಳಿಸುವ ಒಂದು ಮಾರಿನೇಗಿಲು. ಉತ್ತರ ಕರ್ನಾಟಕದ ಈ ವ್ಯವಸಾಯ ಸಾಧನವನ್ನು ಕನಕದಾಸರು ಬಲ್ಲವರಾಗಿದ್ದಾರೆ. ಈ ಮೇಲಿನ ವ್ಯವಸಾಯದ ವಿವರಗಳ ಜೊತೆಗೆ 'ಕೊಟ್ಟಣ ಕಟ್ಟುವ', 'ಕಟ್ಟಿಗೆ ಮಾರಿ' ಜೀವಿಸುವ, ತಾಳತಂಬೂರಿ ದಂಡಿಗೆಗಳೊಡನೆ ಸೂಳೆಯರು ಮೇಳ ನಡೆಸುವ, ಕಲ್ಲುದೊಣ್ಣೆ ಹಿಡಿದು ಹಳ್ಳದಲ್ಲಿ ಕಾದುಕುಳಿತು ಕಳ್ಳತನಮಾಡುವ ಬಗೆಬಗೆಯ ಜೀವನ ವೃತ್ತಾಂತಗಳನ್ನು ತಮ್ಮ ಕೀರ್ತನೆಯಲ್ಲಿ ಸೆರೆಹಿಡಿದಿದ್ದಾರೆ. ಕನಕದಾಸರು ಕೀರ್ತನೆಗಳಲ್ಲಿ ಅನೇಕ ಜನಪದಗೀತೆಗಳ ಮಟ್ಟುಗಳನ್ನು ನೇರವಾಗಿ ಬಳಸಿಕೊಂಡಿರುವುದನ್ನು ಕಾಣಬಹುದಾಗಿದೆ : ಅಹುದಾದರಹುದೆನ್ನಿ ಅಲ್ಲವಾದರಲ್ಲವೆನ್ನಿ ಬಹುಜನರು ನೆರೆತಿಳಿದು ಪೇಳಿಮತ್ತಿದನು ಎಂಬ ಪಲ್ಲವಿ, ನೇರವಾಗಿ ಅಹುದ್ದೇಳಿರಣ್ಣ ನೀವಲವೇಳಿರೊ ಬಲ್ಲಂಥ ಜಾಣರು ತಿಳಿದ್ದೇಳಿರೊ ಎಂಬ ಜನಪದ ಗೀತೆಯ ಸಂಬಂಧವನ್ನು ಪಡೆದುಕೊಳ್ಳುತ್ತದೆ. ಎಲ್ಲಿ ನೋಡಿದರಲ್ಲಿ ರಾಮ-ಇದ ಬಲ್ಲ ಜಾಣರ ದೇಹದಲ್ಲಿ ನೋಡಣ್ಣ ಎಂಬ ಪಲ್ಲವಿಯ ಮೇಲಿನ ಸಾಲುಗಳ ಜೊತೆಗೆ ಹೊಂದಿ ಕೊಳ್ಳುವುದಲ್ಲದೆ ತತ್ತ್ವಪದವೊಂದರ ನೆನಪನ್ನು ತರುತ್ತದೆ. ಊರಿಗೆ ಬಂದರೆ ದಾಸಯ್ಯ | ನಮ್ಮ ಕೇರಿಗೆ ಬಾ ಕಂಡ್ಯ ದಾಸಯ್ಯ || ಎಂಬ ಪಲ್ಲವಿ ತಮ್ಮ ಆರಾಧ್ಯದೈವವಾದ ಕೇಶವನನ್ನು ತನ್ನ ಬಳಿಗೆ ಬರಮಾಡಿಕೊಳ್ಳುವ ಬಗೆಯನ್ನು ಸೂಚಿಸುತ್ತದೆ. ಇದು ಕೋಲಾಟದ ಪದದ ಜಾಯಮಾನವನ್ನು ತನ್ನ ಲಯದಲ್ಲಿ ಹೊಂದಿದ್ದರೆ “ಕೇರಿ ಕೇರಿ ತಿರುಗುತಾನೆ ನಮ್ಮ ಕೇರಿಗೇಕೆ ಬರವಿ' ಎಂಬ ಕೋಲಾಟ ಪದದ ಭಾವವನ್ನೆ ಅಭಿವ್ಯಕ್ತಿಸುತ್ತದೆ. ಕಿನ್ನರಜೋಗಿಯೊಬ್ಬನನ್ನು ಮುಗ್ಧಹೆಣ್ಣೂಬ್ಬಳು ತನ್ನ ಕೇರಿಗೆ ಬರುವಂತೆ ಹಾರೈಸುವ, ಹಂಬಲಿಸುವ ಚಿತ್ರ ಇಲ್ಲಿ ಬರುತ್ತದೆ.