ಪುಟ:Kanakadasa darshana Vol 1 Pages 561-1028.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೦೬. ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳಲ್ಲಿ ಜಾನಪದ ಅಂಶಗಳು ೭೦೭ ಪ್ರಯೋಗಿಸುತ್ತಾರೆ : ಮಾಣಿಕವು ಕೋಡಗನ ಕೈಯಲ್ಲಿ ಇದ್ದಂತೆ (ಮಂಗನ ಕೈಲಿ ಮಾಣಿಕ್ಯ ಕೊಟ್ಟಂತೆ) ಕೋಣನಿದಿರಿಗೆ ಕಿನ್ನರಿಯ ಮೀಟಿದಂತೆ (ಕೋಣನ ಮುಂದೆ ಕಿನ್ನರಿ ನುಡಿಸಿದಂತೆ) ಕಾಣದವನಿಗೆ ಕನ್ನಡಿಯ ತೋರಿಸಿದಂತೆ (ಕುರುಡನಿಗೆ ಕನ್ನಡಿಹಿಡಿದಂಗೆ) ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಧಾರಾಳವಾಗಿ ಸೂರೆಮಾಡಿರುವ ಜನಪದ ಮಟ್ಟುಗಳು, ಹಾಡಿನ ಲಯಗಳು, ಗಾದೆಗಳು, ಸಂಪ್ರದಾಯಗಳು ಜನಪದ ಜೀವನದ ವಿವಿಧ ಸ್ತರಗಳು. ಅವರು ತಮ್ಮ ಪರಿಸರಕ್ಕೆ ಎಷ್ಟು ಋಣಿ ಎಂಬುದನ್ನು ತೋರಿಸುತ್ತವೆ. ಅವರ ಕೀರ್ತನೆಗಳು ಕೇವಲ ಕೇಶವ ಭಕ್ತಿಪ್ರಸಾರದ ನಿರ್ಜಿವ ರಚನೆಗಳಾಗಿರದೆ ಜನಪದ ಜೀವನದ ನಾಡಿಮಿಡಿತವನ್ನು ನಮ್ಮ ಹೃದಯಕ್ಕೆ ಮುಟ್ಟಿಸುವ ಜೀವಂತ ಗೀತೆಗಳೂ ಆಗಿವೆ. ಧರಣೀಶರೆಂಬ ನರಪ್ರತಿಮಗಳನಳವಡಿಸಿ ನರನ ಹಯರಥದ ವಾಘಯ ಸೂತ್ರವಿಡಿದು ಓದುವನು ನಾರದನು ವಾದ್ಯಕಾರನು ಶಂಭು ಬಾದರಾಯಣನೆ ಕತೆಗಾರನು || ಹೀಗೆ ಗೊಂಬೆಯಾಟದ ಎಲ್ಲ ಸ್ತರಗಳನ್ನೂ ವಿವರವಾಗಿಯೇ ಕನಕದಾಸರು ಹೇಳಿದ್ದಾರೆ. ಕತೆಗಾರ(ಭಾಗವತ), ವಾದ್ಯಗಾರ, ನರಪ್ರತಿಮೆಗಳು, ಮಾಯದ ಐದು ತೆರೆಗಳು, ಅದರಲ್ಲಿ ಪುರವೀಧಿಯ ಚಿತ್ರ ಮುಂತಾದ ಅಂಶಗಳು ಕನಕರು ಗೊಂಬೆಯಾಟವನ್ನು ತಮ್ಮ ಊರಿನಲ್ಲೇ ಬಾಲ್ಯದಿಂದಲೇ ನೋಡಿ ಹಿಗ್ಗಿರಬೇಕೆಂಬ ಅಂಶವನ್ನು ಸ್ಪಷ್ಟಪಡಿಸುತ್ತವೆ. ಈ ಗೊಂಬೆಯಾಟವನ್ನು ಸೂತ್ರದಗೊಂಬೆಯಾಟವೆಂದು ತಿಳಿದವರು ಹೇಳಿದರು. ಗ್ರಾಮೀಣರ ಬಾಯಲ್ಲಿ ಅದು “ಪುತ್ಥಳಿಗೊಂಬೆಯಾಟವಾಗಿದೆ. ಪುಲಿ ಎಂಬ ಸಂಸ್ಕೃತ ಶಬ್ದ ಕನ್ನಡದ 'ಗೊಂಬೆ'ಯೊಡನೆ ಇಲ್ಲಿ ಸೇರಿರುವುದು ಗಮನಾರ್ಹ. ಈಗಲೂ ಗ್ರಾಮಾಂತರ ಪ್ರದೇಶದಲ್ಲಿ ಇದು 'ಪುತ್ಥಳಿಗೊಂಬೆಯಾಟವೆ. ಕನಕದಾಸರು ತಮ್ಮ ಕೀರ್ತನೆಯಲ್ಲಿ ಈ ಶಬ್ದ ಪ್ರಯೋಗ ಮಾಡಿದ್ದಾರೆ : ಪುತ್ಥಳಿಬೊಂಬೆಯ ಚಿತ್ರದಿ ಬರೆದರೆ - ಮುತ್ತನು ಕೊಟ್ಟರೆ ನುಡಿದೀತೆ || ಕನಕದಾಸರ ಕೀರ್ತನೆಗಳಲ್ಲಿ ಒಂದು ಕಡೆ “ಕೇಳಿಕೆ' ಎಂಬ ಪ್ರಯೋಗವಿದೆ. ನಾಟಕಕ್ಕೆ ಸಂಬಂಧಪಟ್ಟಂತೆಯೇ ಈ ಶಬ್ದವನ್ನು ಅವರು ಪ್ರಯೋಗಿಸಿದ್ದಾರೆ. ಬೆಂಗಳೂರು ಜಿಲ್ಲೆಯ ಪೂರ್ವಪ್ರದೇಶಗಳಲ್ಲಿ ಕೋಲಾರ ಜಿಲ್ಲೆಯಲ್ಲಿ ಯಕ್ಷಗಾನ ಬಯಲಾಟಗಳನ್ನು ಕೇಳಿಕೆ' ಎಂದೇ ಕರೆಯುತ್ತಾರೆ. ಯಕ್ಷಗಾನಗಳನ್ನು 'ಆಟ' ಎನ್ನಲಾಗುತ್ತದೆ. ಬಯಲಿನಲ್ಲಿ ಆಡುವ ಆಟ ಬಯಲಾಟ. ಈ 'ಕೇಳಿಕಾ', ಕೇಳಿಕೆಯಾಗಿ ಉಳಿದು ಬಂದಿದೆ. ಇದೊಂದು ಅಪೂರ್ವವಾದ ಉಲ್ಲೇಖವೇ ಸರಿ. ಜನಪದ ಸಂಸ್ಕೃತಿಯನ್ನು ಹೀರಿ ಬೆಳೆದ ಕನಕದಾಸರು ಸಹಜವಾಗಿ ತಮ್ಮ ಭಾಷೆಯಲ್ಲಿ ಜಾನಪದ ಮುದ್ರೆಯನ್ನು ಒತ್ತಿದ್ದಾರೆ. 'ಮಿಣಿ”, “ಊರೂಟ', “ಕುಂಟೆ', 'ರಂಟೆ', 'ಗುಂಡು ಮಿಣಿಕು ಹಕ್ಕಿ' ಮುಂತಾದ ಶಬ್ದಗಳನ್ನು ಅವಲೋಕಿಸಿದರೇ ಸಾಕು ಜನಪದ ಭಾಷೆಯ ಅಪೂರ್ವ ಪ್ರಯೋಗಗಳು ಹೇಗೆ ಕೀರ್ತನೆಗಳಲ್ಲಿ ದಾಖಲಾಗಿ ನಮಗೆ ಖುಷಿಕೊಡುತ್ತವೆ ಎಂಬುದು ಸ್ಪಷ್ಟವಾಗುತ್ತದೆ. ಸಾಕಷ್ಟು ಜನಪ್ರಿಯ ಗಾದೆಗಳನ್ನೂ ಕನಕದಾಸರು ಕನಕದಾಸರು ಕೀರ್ತನಕಾರರಾಗಿ ಒಳ್ಳೆಯ ಸ್ನಾನವನು ಪಡೆದುಕೊಳ್ಳುವಂತೆಯೇ ಕವಿಯಾಗಿಯಾಗಿಯೂ ಗಮನಾರ್ಹ ಕೃತಿಗಳನ್ನು ರಚಿಸಿದ್ದಾರೆ ಎಂಬುದನ್ನು ಹಿಂದೆಯೇ ನೋಡಿದೆವು. 'ಹರಿಭಕ್ತಿಸಾರ'ವನ್ನು ಬಿಟ್ಟರೆ 'ರಾಮಧಾನ್ಯಚರಿತೆ', 'ನಳಚರಿತ್ರೆ' ಮತ್ತು 'ಮೋಹನ ತರಂಗಿಣಿ-ಈ ಮೂರು ಕಾವ್ಯಗಳೂ ಕಥಾ ವೈವಿಧ್ಯದ ದೃಷ್ಟಿಯಿಂದ ಗಮನಾರ್ಹವಾಗಿವೆ. ರಾಮಧಾನ್ಯಚರಿತೆ ಒಂದು ರೀತಿಯ ಜಾನಪದ ಆವರಣದ ಹಿನ್ನೆಲೆಯಲ್ಲಿ ರಚಿತವಾಗಿ 'ರಾಗಿ' ಮತ್ತು 'ಭ'ಗಳ ನಡುವಿನ ಸ್ಪರ್ಧೆಯನ್ನು ಆಧಾರವಾಗಿಟ್ಟುಕೊಂಡಿದೆ. ವಸ್ತುದೃಷ್ಟಿಯಿಂದ ಇದೊಂದು ವಿನೂತನ ಕೃತಿ. “ನಳಚರಿತ್ರೆ' ಮಹಾಭಾರತದ ಉಪಾಖ್ಯಾನವಾಗಿದ್ದು, ರೇಖಾರೂಪದ ಮೂಲಕಥೆಯನ್ನು ಕನಕದಾಸರು ಆರಿಸಿಕೊಂಡು ಒಂದು ಸ್ವತಂತ್ರ ಕಾವ್ಯವನ್ನಾಗಿ ಬೆಳೆಸಿದ್ದಾರೆ. ಈ ಎರಡೂ ಕಾವ್ಯಗಳಲ್ಲಿ ಜಾನಪದ ಅಂಶಗಳು ವಿಶೇಷವಾಗಿ ಕಾಣದಿದ್ದರೂ ಕಥನಕಲೆಯ ದೃಷ್ಟಿಯಿಂದ ಸಹೃದಯರ ಮನಸ್ಸನ್ನು ಗೆದ್ದು ಕೊಳ್ಳುತ್ತವೆ. ಕನಕದಾಸರ ಮೂರು ಕಾವ್ಯಗಳಲ್ಲಿ 'ಮೋಹನ ತರಂಗಿಣಿ' ಜಾನಪದ ಅಂಶಗಳನ್ನು ದಟ್ಟವಾಗಿ ಹೊಂದಿರುವ ಕೃತಿಯಾಗಿದೆ. ಭಾಗವತ ಪುರಾಣದಿಂದ | 2