ಪುಟ:Kanakadasa darshana Vol 1 Pages 561-1028.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೦೮ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳಲ್ಲಿ ಜಾನಪದ ಅಂಶಗಳು ೭೦೯ ಮೂಲವಸ್ತುವನ್ನು ಆಯ್ಕೆಮಾಡಿಕೊಂಡಿರುವ ಕನಕದಾಸರು ಇಲ್ಲಿಯೂ ಒಳ್ಳೆಯ ಜಾಣೆಯನ್ನು ಮೆರೆದಿದ್ದಾರೆ. ಕಥಾಕುತೂಹಲದ ದೃಷ್ಟಿಯಿಂದ ಈ ಕಾವ್ಯ ಒಂದು ದೃಷ್ಟಿಯಿಂದ ರಂಜನೀಯವಾಗಿದ್ದರೆ ವರ್ಣನೆಗಳ ದೃಷ್ಟಿಯಿಂದ ಮತ್ತೊಂದು ಬಗೆಯಲ್ಲಿ ಕುತೂಹಲವನ್ನು ಕೆರಳಿಸುತ್ತದೆ. ಜನಜೀವನ ನಿರೂಪಣೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಕಾವ್ಯವೆನಿಸುತ್ತದೆ. ಇಲ್ಲಿ ಜಾನಪದದ ಪಾತ್ರವೇ ಪ್ರಮುಖವಾಗಿರುವುದರಿಂದ ಇದಕ್ಕೆ ಒಂದು ಹೊಸ ಆಯಾಮ ದೊರೆತಂತಾಗಿದೆ. 'ಮೋಹನ ತರಂಗಿಣಿ' ಎರಡು ಕಥೆಗಳು ಮೇಳವಿಸಿ ಆಗಿರುವ ಒಂದು ಕಾವ್ಯ, ಪ್ರದ್ಯುಮ್ಮ ರತಿಯರ ಕಥೆಯಿಂದ ಆರಂಭವಾಗಿ ಅನಿರುದ್ಧ ಉಷೆಯರ ಕತೆಯಲ್ಲಿ ಪರಿಸಮಾಪ್ತಿಯನ್ನು ಕಾಣುತ್ತದೆ. ಈ ಎರಡೂ ಕತೆಗಳು ರಾಕ್ಷಸ ಪಾತ್ರಗಳ ಪ್ರವೇಶದಿಂದ ಜನಪದ ಕಥೆಯ ಆವರಣವನ್ನು ಪಡೆದುಕೊಂಡು ಸಂಕೀರ್ಣ ಕತೆಗಳ ಗುಂಪಿನಲ್ಲಿ 'ಅತಿಮಾನುಷ ವರ್ಗದಲ್ಲಿ ಗುರುತಿಸಲ್ಪಡುತ್ತವೆ. ಪಕ್ಷಿಗಳು ಮರಿಗಳಿಗೆ ಗುಟುಕು ಕೊಡುವ ದೃಶ್ಯದಿಂದಲೇ ಕಾವ್ಯಕ್ಕೆ ಜನಪದ ಕಥೆಯ ನಡೆ ಸಾಧಿತವಾಗುತ್ತದೆ. ಮಕ್ಕಳಿಲ್ಲದ ರುಕ್ಕಿಣಿ ಪಕ್ಷಿಗಳಿಂದ ಸ್ಫೂರ್ತಿ ಪಡೆದು ಮಕ್ಕಳನ್ನು ಹಂಬಲಿಸುತ್ತಾಳೆ. ಮುಂದೆ ಪ್ರದ್ಯುಮ್ಮ ಜನನವಾಗುತ್ತದೆ. ಶಂಬರಾಸುರ ಆ ಮಗುವನ್ನು ಹಂಬಲಿಸುತ್ತಾಳೆ. ಮುಂದೆ ಪ್ರದ್ಯುಮ್ಮ ಜನನವಾಗುತ್ತದೆ. ಶಂಬರಾಸುರ ಆ ಮಗುವನ್ನು ಅಪಹರಿಸಿ ಆಕಾಶಮಾರ್ಗದಲ್ಲಿ ಕೊಂಡೊಯ್ಯುವಾಗ ಸಮುದ್ರಕ್ಕೆ ಎಸೆಯುತ್ತಾನೆ. ಮೀನೊಂದು ಆ ಮಗುವನ್ನು ನುಂಗಿ ಮುಂದೆ ಬೆಸ್ತನ ಕೈಗೆ ಸಿಗುತ್ತದೆ. ಶಂಬರಾಸುರನ ಅರಮನೆಗೇ ಆ ಮೀನನ್ನು ತಂದುಕೊಟ್ಟಾಗ ರತಿ ಆ ಮೀನಿನ ಅಡುಗೆ ಮಾಡಬೇಕಾಗುತ್ತದೆ. ಮೀನಿನ ಗರ್ಭದಲ್ಲಿದ್ದ ಮಗು ರತಿಯ ಕೈಗೆ ದೊರೆಯುತ್ತದೆ. ಯಾವ ಮಗು ಎಂದು ತಿಳಿಸದೆ ಶಂಬರಾಸುರನ ಅನುಮತಿ ಪಡೆದೇ ಮಗುವನ್ನು ರತಿ ಸಾಕುತ್ತಾಳೆ. ಅವನ ಅರಮನೆಯಲ್ಲೇ ಶತ್ರು ಬೆಳೆಯುತ್ತಾನೆ. ಮುಂದೆ ನಾರದಮುನಿಯಿಂದ ರಹಸ್ಯ ಬಯಲಾಗುತ್ತದೆ. ಶಂಬರಾಸುರ ಮತ್ತು ಮನ್ಮಥನಾದ ಪ್ರದ್ಯುಮ್ಮರ ನಡುವೆ ಯುದ್ಧ ನಡೆದು ಶಂಬರಾಸುರ ಹತನಾದ. ಮೊದಲನೆಯ ಭಾಗದ ಈ ಕಥಾ ಚೌಕಟ್ಟು ಜನಪದ ಸಂಕೀರ್ಣಕಥೆಯ ಎಲ್ಲ ಲಕ್ಷಣಗಳನ್ನೂ ಹೊಂದಿದೆ. ಜೊತೆಗೆ ಮುಂದೆ ತನ್ನನ್ನು ಕೊಲ್ಲುವನೆಂಬ ಭಯದಿಂದ ಮಗುವಿನ ಅಪಹರಣ, ಔದಾಸೀನ್ಯದಿಂದ ಸಮುದ್ರಕ್ಕೆ ಅಪಹೃತ ಮಗುವನ್ನು ಎಸೆಯುವುದು, ಮೀನು ಮಗುವನ್ನು ನುಂಗುವುದು, ಬೆಸ್ತ ಮೀನನ್ನು ಹಿಡಿದು ರಕ್ಕಸನಿಗೇ ಕೊಡುವುದು, ರಕ್ಕಸನಿಗೆ ಅರಿವಿಲ್ಲದೇ ಅವನ ನೆರಳಲ್ಲೇ ಮಗು ಬೆಳೆಯುವುದು, ತಾನೇ ಆ ಮಗುವಿಗೆ ಶಸ್ತ್ರಾಸ್ತ್ರಗಳ ತರಬೇತಿ ನೀಡುವುದು, ಆ ಮಗುವೇ ತನ್ನ ವೈರಿಯೆಂದು ತಿಳಿದು ಇಬ್ಬರ ನಡುವೆ ಯುದ್ಧವಾಗುವುದುಅಲ್ಲಿ ಕಥಾನಾಯಕನಿಂದ ರಕ್ಕಸನ ಮರಣ ಹೀಗೆ ಸುಖಾಂತವಾಗಿ ಕತೆ ಮುಕ್ತಾಯವಾಗುವುದು ಮುಂತಾದ ಆಶಯಗಳು (Motifs) ಈ ಕಥೆಯ ಹಂದರವನ್ನು ರಚಿಸುವುವು, ಅತಿಮಾನುಷ ವಿರೋಧಿ ಕತೆಗಳ ಸಾಲಿನಲ್ಲಿ ಇಂಥ ಕತೆಗಳು ಕನ್ನಡ ಜನಪದ ಕಥೆಗಳಲ್ಲಿ ಕಂಡುಬರುತ್ತವೆ. ಆದುದರಿಂದ ಪುರಾಣ ಮೂಲದಿಂದ ಕತೆಯನ್ನು ಆಯ್ಕೆಮಾಡಿಕೊಳ್ಳುವಲ್ಲಿಯೇ ಕನಕದಾಸರು ವೈಶಿಷ್ಟ್ಯವನ್ನು ಮರೆದಿದ್ದಾರೆ. ಎರಡನೆಯ ಕಥೆ ಪ್ರದ್ಯುಮ್ಮನ ಮಗನಾದ ಅನಿರುದ್ಧನಿಗೆ ಸಂಬಂಧಪಡುತ್ತದೆ. ಇದು ಬಾಣಾಸುರನ ಕಥೆ, ಬಾಣಾಸುರನ ಮಗಳು ಉಷೆ ಶ್ರೀಗೌರಿಯ ವರವನ್ನು ಪಡೆಯುವುದು, ತನ್ನ ಕನಸಿನಲ್ಲಿ ಕಂಡ ಸುಂದರಪುರುಷನನ್ನೇ ಅವಳು ಪತಿಯಾಗಿ ಪಡೆಯುವ ಬಗ್ಗೆ ತಿಳಿಸುವುದು, ಪ್ರದ್ಯುಮ್ಮ ಉಷೆಯ ಕನಸಿನಲ್ಲಿ ಕಾಣಿಸಿಕೊಂಡು ರತಿಸುಖದಲ್ಲಿ ಅವಳೊಡನೆ ಬೆರೆಯುವುದು, ಅನಂತರ ಕನಸಿನಲ್ಲಿ ಕಂಡ ದಿವ್ಯ ಪುರುಷನನ್ನು ಹುಡುಕಿಬರಲು ಉಷೆಯ ಸಖಿ-ಚಿತ್ರಲೇಖೆ ಹೊರಡುವುದು. ಲೋಕಲೋಕಗಳನ್ನೆಲ್ಲ ಸುತ್ತಿ ಎಲ್ಲ ಸುಂದರ ಪುರುಷರ ಭಾವಚಿತ್ರವನ್ನು ತರುವುದು, ಅದರಲ್ಲಿ ಅನಿರುದ್ಧನ ಚಿತ್ರವನ್ನು ಗುರುತಿಸಿ ಉಷೆ ಅವನನ್ನು ಬಯಸುವುದು, ಚಿತ್ರಲೇಖೆ ತನ್ನ ಮಾಯಾವಿದ್ಯೆಯಿಂದ ದ್ವಾರಕೆಗೆ ಹೋಗಿ ಅನಿರುದ್ಧನನ್ನು ತನ್ನ ಬೆನ್ನಮೇಲೆ ಕೂರಿಸಿಕೊಂಡು ಆಕಾಶಮಾರ್ಗದಲ್ಲಿ ಬರುವುದು. ರಹಸ್ಯವಾಗಿ ಉಷೆ ಮತ್ತು ಅನಿರುದ್ದರು ಗಾಂಧರ್ವ ವಿವಾಹ ಮಾಡಿಕೊಂಡು ಅಲ್ಲಿಯೇ ಉಳಿಯುವುದು. ಈ ರಹಸ್ಯ ಬಾಣಾಸುರನಿಗೆ ತಿಳಿದು ಅವರಿಬ್ಬರ ನಡುವೆ ಯುದ್ದ ನಡೆದು ಬಾಣಾಸುರನ ವಧೆಯಾಗುವುದು-ಮುಂತಾದ ವಿವರಗಳನ್ನೊಳಗೊಂಡ ಈ ಕಥೆಯೂ ಸಹ ಅತಿಮಾನುಷ ವಿರೋಧಿ ಹಾಗೂ ರಮ್ಯಕಥೆಯ ಆವರಣವನ್ನು ಪಡೆದುಕೊಂಡಿದೆ. ಕಥೆ ಎಲ್ಲಿಯದೇ ಆದರೂ ಕನಕದಾಸರು ಆಯ್ಕೆಮಾಡಿಕೊಂಡ ಕಥಾವಸ್ತು ನೇರವಾಗಿ ಜಾನಪದದ ಆಶಯಗಳೊಡನೆ ಆಸಕ್ತಿಯನ್ನು ಕೆರಳಿಸುತ್ತದೆ. ಹೀಗೆ ಅತ್ಯಂತ ಸ್ವಾರಸ್ಯವಾದ ಸಂಕೀರ್ಣ ಕಥೆಗಳನ್ನು ಆಯ್ತು ಕನಕದಾಸರು ಮನೋಜ್ಞವಾದ ಕಾವ್ಯವೊಂದನ್ನು ರಚಿಸಿದ್ದಾರೆ. ಜಾನಪದ ಆವರಣ ಈ ಕಾವ್ಯಕ್ಕೆ ಒಂದು ಸೊಗಸಾದ ಹಿನ್ನೆಲೆಯನ್ನು ಒದಗಿಸಿದೆ ಎಂಬುದು