ಪುಟ:Kanakadasa darshana Vol 1 Pages 561-1028.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೧೦ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳಲ್ಲಿ ಜಾನಪದ ಅಂಶಗಳು ಮೋಹನ ತರಂಗಿಣಿ ಮನ್ಮಥನ ಪ್ರಸಂಗ, ಶಂಬರಾಸುರ ವಧೆ ಮತ್ತು ಬಾಣಾಸುರ ವಧೆ ಎಂಬ ಮೂರು ಮುಖ್ಯ ಪ್ರಸಂಗಗಳನ್ನು ಒಳಗೊಂಡ ಒಂದು ಕಥಾಗುಚ್ಚ, ಇವೆಲ್ಲ ಯಕ್ಷಗಾನ ಪ್ರಸಂಗಗಳೂ ಆಗಿದ್ದು ಕನಕದಾಸರು ತಮ್ಮ ಕಾಲದಲ್ಲಿ ಪ್ರಚಲಿತ ವಿದ್ದ ಬಯಲಾಟದ ಪ್ರಸಂಗಗಳಿಂದ ಪ್ರಭಾವಿತರಾಗಿರಲು ಸಾಧ್ಯ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಕಥಾಸ್ವಾರಸ್ಯದ ದೃಷ್ಟಿಯಿಂದ ಹೀಗೆ 'ಮೋಹನ ತರಂಗಿಣಿ' ಗಮನಾರ್ಹವಾಗಿರುವುದೂ, ಅದರ ಸಮಗ್ರ ಶಿಲ್ಪ ಜಾನಪದೀಯ ಅಂಶಗಳನ್ನು ಅವಲಂಬಿಸಿರುವುದು ಅದರ ಒಂದು ಗುಣವಾದರೆ ಆ ಕಾವ್ಯದಲ್ಲಿ ವ್ಯಾಪಕವಾಗಿ ಹರಡಿಕೊಂಡಿರುವ ಜನಪದ ಜೀವನದ ವಿವರಗಳು ಮತ್ತೊಂದು ಪ್ರಧಾನ ಅಂಶವೆನಿಸುತ್ತದೆ. ಕನಕದಾಸರು ದ್ವಾಪರಯುಗದ ಕಥೆಯೊಂದನ್ನು ಸ್ವೀಕರಿಸಿದ್ದರೂ ಅದಕ್ಕೆ ಸಜೀವತೆಯನ್ನು ಕೊಡುವಲ್ಲಿ ತತ್ಕಾಲೀನ ಜನಜೀವನದ ರೀತಿನೀತಿಗಳನ್ನು ಧಾರಾಳವಾಗಿ ಎರಕಹೊಯ್ದು ಸುಂದರ ಪ್ರತಿಮೆಯಾಗಿ ಅದನ್ನು ಕಡೆದಿದ್ದಾರೆ. ಸ್ಕೂಲವಾದ ಮೂರ್ತಿಯ ಆಕೃತಿಗೆ ಬಗೆಬಗೆಯ ಅಲಂಕಾರಗಳ ಕುಸುರಿ ಕೆಲಸವನ್ನು ಮಾಡಿ ಆಕರ್ಷಕಗೊಳಿಸಿದಂತೆ ತಮ್ಮ ಕಾವ್ಯಕ್ಕೆ ಹೊಸ ಸತ್ವವನ್ನೂ ಸೌಂದರ್ಯವನ್ನೂ ಜನಜೀವನದ ಸಹಜ ಚಿತ್ರಣದಿಂದ ನೀಡಿದ್ದಾರೆ ಎನ್ನಬಹುದು. ತಮ್ಮ ಕಾಲದ ಕರ್ನಾಟಕದ ಪರಂಪರಾನುಗತ ಸಂಸ್ಕೃತಿಯ ವಿವಿಧ ಮಜಲುಗಳನ್ನು ಕಣ್ಣಿಟ್ಟುನೋಡಿ, ತಮ್ಮ ಸುತ್ತಣ ಪರಿಸರದಿಂದ ಪ್ರಭಾವಿತರಾಗಿ ಜನಪದ ಜೀವನದ ಆಚಾರವಿಚಾರಗಳನ್ನು, ಸಂಪ್ರದಾಯಗಳನ್ನು, ವಿವಿಧ ಕಸುಬುಗಳನ್ನು, ಜನಪದ ಕಲೆ ಸಾಹಿತ್ಯವನ್ನು, ಬೇಟೆ ಹಾಗೂ ವಿವಿಧ ವೃತ್ತಿಗಳನ್ನು ಹದವರಿತು ಬಳಸಿಕೊಂಡಿದ್ದಾರೆ. ಕೆರೆಕಟ್ಟೆಗಳ, ಅರವಟ್ಟಿಗೆಗಳ, ಗದ್ದೆಯ ಬಯಲುಗಳ ಮನೋಹರವಾದ ಪರಿಸರವನ್ನು ಕಾವ್ಯದ ಆರಂಭದಲ್ಲಿಯೇ ತಂದು, ಜನಜೀವನದ ನೆಮ್ಮದಿಯನ್ನೂ ಸಮೃದ್ಧಿಯನ್ನೂ ಮನದುಂಬಿ ಬಣ್ಣಿಸಿದ್ದಾರೆ. ಅವರು ಹೆಸರಿಸುವುದು ಸೌರಾಷ್ಟ್ರದ ವರ್ಣನೆಯಾದರೂ ಅದು ಸಹಜವಾಗಿ ಕರ್ನಾಟಕದ ಬದುಕೇ ಆಗಿದೆ. ಇಲ್ಲಿ ಕೆಲವು ನಿದರ್ಶನಗಳನ್ನು ಪರಿಶೀಲಿಸಬಹುದು. ದಾನಧರ್ಮ ಪರೋಪಕಾರಕ್ಕೆ ಹೆಸರಾದ ಸೌರಾಷ್ಟ್ರದಲ್ಲಿ ನೆ'ಧರ್ಮಿಷ್ಠರು ನಿರ್ಮಿತವನು ಮಾಡಿ ದಜವಟ್ಟಿಗೆಗಳೊಪ್ಪಿದವು ! (೨-೨೬) ಧರ್ಮಿಷ್ಠರಾದ ಜನ ಯಾತ್ರಾರ್ಥಿಗಳಿಗಾಗಿ ಅಲ್ಲಲ್ಲಿ ಅರವಟ್ಟಿಗೆಗಳನ್ನು ನಿರ್ಮಿಸಿ ದಾಹಶಮನವನ್ನು ಪೂರೈಸುವ ಪದ್ಧತಿ ಕರ್ನಾಟಕದ ಎಲ್ಲೆಡೆಯೂ ನಡೆದುಬಂದಿದೆ. ಈಗಲೂ ದೂರದ ತೀರ್ಥಕ್ಷೇತ್ರಗಳಿಗೆ, ಜಾತ್ರೆ ಉತ್ಸವಗಳಿಗೆ ಹೋಗುವ ಜನರಿಗಾಗಿ ಇಂಥ ಪುಣ್ಯಕಾರ್ಯಗಳನ್ನು ಎಸಗುತ್ತಾರೆ. ನೀರುಮಜ್ಜಿಗೆ, ಅಂಬಲಿ, ಪಾನಕ ಮುಂತಾದ ಪಾನೀಯಗಳನ್ನು ನೀಡಿ ಸಾರ್ಥಕ್ಯವನ್ನು ಪಡೆಯುತ್ತಾರೆ. ಅಡ್ಡೆಗಳಲ್ಲಿ ನೀರನ್ನು ಹೊತ್ತು ತಂದು ಅರವಟ್ಟಿಗೆಯಲ್ಲಿ ಸಂಗ್ರಹಿಸಿ ದಣಿದವರ ಬಾಯಾರಿಕೆಯನ್ನು ನಿವಾರಿಸುವ ಈ ಸಂಪ್ರದಾಯ ಜನಪದ ಸಂಸ್ಕೃತಿಯ ಒಂದು ಅಂಗ. ಕನಕದಾಸರ ಕಾಲಕ್ಕೆ ಇವು ಹೇರಳವಾಗಿಯೇ ಇರಬೇಕು. ಸೌರಾಷ್ಟ್ರದಲ್ಲಿ ಬಳಲಿ ಬಂದವರು ಅನ್ನಪಾನೀಯಗಳನ್ನು ಪಡೆದು ಸಂತೃಪ್ತರಾಗಿ ಮುಂದೆ ಹೋಗುತ್ತಿದ್ದರು ಎಂಬ ಚಿತ್ರವೊಂದು ಮನನೀಯವಾಗಿದೆ : ಸಲ್ಲಿಲಿತೋಭಯತಟದ ಸಾಲ್ಕರದೊಳು ಬೆಲ್ಲದ ಪಾನಕವೆಂದು ಅಲ್ಲದ ಕೆನೆಮೊಸರಶನವ ಕರೆಕರೆ ದೆಲ್ಲರಿಗುಣಬಡಿಸುವರು || (೨-೩೨) ಬೆಲ್ಲದ ಪಾನಕ, ಕೆನೆಮೊಸರನ್ನವನ್ನು ಕರೆಕರೆದು ಉಣಬಡಿಸಿದ ಉದಾರಿಗಳ ಚಿತ್ರ ಇದು. ಮುಂದೆ ವನಸಂಪತ್ತನ್ನು ವ್ಯವಸಾಯ ಸಂಪತ್ತನ್ನು ಅವರು ಬಣ್ಣಿಸುತ್ತಾರೆ. ಶಿವನ ಬಿಲ್ಲನ್ನು ಸಿಂಜಿನಿಯೆಂದು ಭಾವಿಸಿದಂತೆ ಬರಿಗಲ್ಲುಗಳಿಂದ ಕಟ್ಟಿದ 'ಕೆರೆಕಟ್ಟೆಗಳು ಅಲ್ಲಿದ್ದುವು. ಗದ್ದೆಯನ್ನು ಕಾಯುವ ಯುವತಿಯರ ಚೆಲುವೇನು ! ಕಬ್ಬಿನ ಕೋಲುಗಳನ್ನು ಹಿಡಿದು ಆ ಯುವತಿಯರು ಗಿಳಿಗಳು ಗದ್ದೆಗೆ ಮುತ್ತದಂತೆ ನೋಡಿಕೊಳ್ಳುತ್ತಿದ್ದರು. ಕುಡುಗೋಲಿನಿಂದ ಕಬ್ಬನ್ನು ಕತ್ತರಿಸುವ ಯುವಕರ ಗುಂಪು, ಮಳಲೊಟ್ಟಿನಂಥ ಸಕ್ಕರೆ, ಬೆಲ್ಲದ ಚೌಕುಗಳು, ಅಲೆಯ ಮನೆಗಳ ಮುಂದೆ ರಾಶಿರಾಶಿಯಾಗಿದ್ದುವು. ದಾಳಿಂಬ, ಖರ್ಜೂರ, ದ್ರಾಕ್ಷಿಗಳ ತೋಟಗಳು, ಹಲಸು, ನೇರಲ, ಮಾವು, ಬೇವು, ಆಲ, ಅರಳೆ, ಬಿಲ್ವ, ನೆಲ್ಲಿಗಳಿಂದ ಕೂಡಿದ ಸಮೃದ್ಧಿಯ ನಾಡಿನ, ಜನಪದ ಜೀವನದ ನೆಮ್ಮದಿಯ ಪ್ರತೀಕವಾಗಿ ಅಲ್ಲಿ ಕಂಡುಬಂದವು. ಕೆಬಾವಿಗಳಿಲ್ಲದಗ್ಗಡದೆಡೆಯಲ್ಲಿ ತೊಆಕಿ ನೀರ ಕಂಬಿಯೊಳ್ ತರಿಸಿ