ಪುಟ:Kanakadasa darshana Vol 1 Pages 561-1028.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೧೪ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳಲ್ಲಿ ಜಾನಪದ ಅಂಶಗಳು ೭೧೫ ವಿಶಿಷ್ಟ ಸಂದರ್ಭಗಳಲ್ಲಿ ಸೋಬಾನೆಯ ಪದಗಳ ಬಳಕೆಯನ್ನು ಪ್ರಸ್ತಾಪಿಸದೆ ಕವಿಗೆ ತೃಪ್ತಿಯಿಲ್ಲ. ಮದುವೆಯ ವರ್ಣನೆಯನ್ನಂತೂ ಸಾಕಷ್ಟು ವಿವರವಾಗಿಯೇ ನೀಡುತ್ತಾರೆ ಕನಕದಾಸರು, ನಾಲ್ಕುದಿನದ ಮದುವೆ ನಡೆಯುತ್ತಿದ್ದ ಕಾಲ ಅದು. ನೆನ್ನೆ ಮೊನ್ನೆಯವರೆಗೆ ಈ ಪದ್ದತಿ ಜನಪದ ಜೀವನದಲ್ಲಿ ಕಂಡು ಬರುತ್ತಿತ್ತು. ಪ್ರದ್ಯುಮ್ಮನ ಮದುವೆ ನಾಲ್ಕು ದಿನ ನಡೆಯಬೇಕಿತ್ತು, ಆದರೆ ಎಲ್ಲ ಶಾಸ್ತ್ರಗಳನ್ನೂ ಒಂದೇ ದಿನಕ್ಕೆ ಆಳವಡಿಸಿ ಮದುವೆಯ ಕಾರ್ಯವನ್ನು ಅವರು ಮುಗಿಸಿದರು. ಮದುವೆಯ ವಿವರಗಳಂತೂ ಇಂದಿಗೂ ಉಳಿದ ಸಂಪ್ರದಾಯಗಳಾಗಿ ತೋರಿಬರುತ್ತವೆ : ನೆಟ್ಟನೆ ತೆರೆವಿಡಿದರು ಶಾಸ್ತ್ರವಿಧಿಯಿಂದ ಮೆಟ್ಟಕ್ಕಿಯ ಮೇಲೆ ನಿಲಿಸಿ ಶ್ರೇಷ್ಠರು ಮಂಗಳಾಷ್ಟಕದಿ ನಿರೀಕ್ಷಣೆ ಗೊಟ್ಟರು ದಂಪತಿಗಳಿಗೆ | (ಪು. ೧೯೦) ಸಾಚಾತನಕ್ಕೆ ಇವು ಒಳ್ಳೆಯ ನಿದರ್ಶನಗಳಾಗುತ್ತವೆ. ಜನಪದ ಸಾಹಿತ್ಯದಲ್ಲಿ ಸೋಬಾನೆಯ ಪದಗಳು ಒಂದು ಗಣ್ಯ ಸ್ಥಾನವನ್ನು ಪಡೆದುಕೊಳ್ಳುತ್ತವೆ. ಎಲ್ಲ ಮಂಗಳಕರ ಸಂದರ್ಭಗಳಲ್ಲೂ ಹೆಂಗಳೆಯರು ಸೋಬಾನೆಯನ್ನು ಹಾಡಿ ಆ ಸಂದರ್ಭಕ್ಕೆ ಒಂದು ಪವಿತ್ರ ಆವರಣವನ್ನು ಸೃಷ್ಟಿಸುತ್ತಾರೆ. ಮೋಹನ ತರಂಗಿಣಿಯಲ್ಲಿ ಈ ಸೋಬಾನೆಯ ಪ್ರಸ್ತಾಪ ಅನೇಕ ಕಡೆ ಬರುತ್ತದೆ : ಕೆಳದಿ ಕೇಳ್ ಮಾಣಿಕ್ಯದಾರತಿಗಳ ತಂದು ಬೆಳಗಿದರ್ ಪೊಂಬರಿವಾಣದಲಿ ಕಳಸ ಕನ್ನಡಿ ತಂದ ಗೋಪಿಯರ್ ಶೋಭನ ಗಳ ಪಾಡಿದರು ರಾಗದಲಿ || (ಪು. ೧೯೦) ಪ್ರದ್ಯುಮ್ಮ ಮತ್ತು ರತಿಯರ ಮದುವೆಯ ಸಂದರ್ಭದಲ್ಲಿ ಮಾಣಿಕ್ಯದ ಆರತಿಯನ್ನು ಬೆಳಗಿ ಕಳಸ ಕನ್ನಡಿ ಸಮೇತ ನಿಂತ ಗೋಪಿಯರು ಆ ಮಂಗಳ ಸನ್ನಿವೇಶಕ್ಕೆ ಅನುಗುಣವಾಗಿ ಸೋಬಾನೆಯನ್ನು ಪಾಡಿದರು. ಮುಂದೆ ಅನಿರುದ್ದ ಉಷೆಯರ ವಿವಾಹ ಸಂದರ್ಭವೂ ಬರುತ್ತದೆ. ಅಲ್ಲಿಯೂ ಸೋಬಾನೆಯ ಪ್ರಸ್ತಾಪ ಮಾಡಲು ಕವಿ ಮರೆಯುವುದಿಲ್ಲ. ನೋಡಿದರ್ ಆಗಮೋಕ್ತಿಯಲಿ ಬಾಸಿಂಗವ ಸೂಡಿದರ್ ತೊಂಡಿಲ ತಂದು ಪಾಡಿದ‌ ಪರಮ ಶೋಭನದಿಂದ ಮದುವೆಯ ಮಾಡಿದ‌ ಮಣಿಯ ಮಂಟಪದೆ | (ಪು. ೫೮೧) ಮದುವೆಯ ಸಂದರ್ಭವಲ್ಲದೆ ಇತರ ಶುಭ ಸಂದರ್ಭದಲ್ಲೂ ಸೋಬಾನೆಗಳನ್ನು ಹಾಡುತ್ತಿದ್ದರೆಂಬುದು ಈ ಕೆಳಗಿನ ಪದ್ಯಗಳಿಂದ ವ್ಯಕ್ತವಾಗುತ್ತದೆ ಬಾಣ ಪಂಚಕ ರತಿದೇವಿಗೆ ಪೊಂಬರಿ ಯಾಣದಿಂದಾರತಿ ಬೆಳಗೆ ಮಾಣದೆ ಧವಳ ಶೋಭನವ ಪಾಡಿದರು ಗೀ ರ್ವಾಣ ನಾರಿಯರ ಕೀಟ್ಟಿಡಿಸಿ || ಪ್ರದ್ಯುಮ್ಮ ರತಿಯರ ಮೆರವಣಿಗೆಯ ಸಂದರ್ಭದಲ್ಲಿ ಹೊಂಗಳಸ ಕನ್ನಡಿ ಹಿಡಿದ ವಾರನಾರಿಯರು ಧವಳ ಸೋಬಾನೆಗಳನ್ನು ಹಾಡಿದ ಮೋಹಕ ಚಿತ್ರ ಇದು. ಮಧುಪರ್ಕ ತಂಡುಲಾರೋಹಣ ಮೊದಲಾದ ವಿಧಿಯಿಂದಲಾ ಪುರೋಹಿತರು ವಧುವನನಲ ಸಾಕ್ಷಿಯೊಳಗೆ ಧಾರೆಯ ಪದುಮಾಕ್ಷರೆದರುತ್ಸವದಿ || (ಅದೇ) ಶೂರ್ಪಸಾಮುದ್ರಿಕ ಗುಡ ಮುಖ್ಯದಾನವ ವಿಪ್ರೋತ್ತಮರಿಗೆ ಕೊಟ್ಟು ದರ್ಪಕ ರತಿಗೂಡಿ ತಾಯಮಂದಿರ ಕೈ ತರ್ಪ ಸಂದರ್ಭವನೇನೆಂಬೆ | (ಅದೇ) ಪ್ರಣಯೋಪಚಾರಗಳಿಂದ ಸದ್ವಾದ್ಯಘೋ ಷಣೆಯಿಂದ ಧವಳ ಶೋಭನದೆ ಗುಣನಿಧಿ ಶ್ರೀಕೃಷ್ಣರಾಯರು ಸಕಲನಿ ಬೃಣಗೂಡಿ ಪೊಕ್ಕರಾಲಯವ || (ಅದೆ)