ಪುಟ:Kanakadasa darshana Vol 1 Pages 561-1028.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೧೬ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳಲ್ಲಿ ಜಾನಪದ ಅಂಶಗಳು ೭೧೭ ಮುತ್ತಿನ ಸೀಸೆಯೊಳೆಸೆವ ರತ್ನಂಗಳ ತೆತ್ತಿರ್ದ ಹಸಿಯ ವಿಷರದಿ ಪರ್ದ ದಂಪತಿಗಳ ವಿಗ್ರಹಂಗಳು ತೆತ್ತಿಸಿದಂತೆ ಶೋಭಿಸಿದವು ! (ಪು. ೧೯೧) ನೋಡಿದೊಡೊಂದೇ ದಿವಸಕ್ಕೆದೆ ದಿನನಾಲ್ಕ ಜೋಡಿಸಿ ವೈವಾಹವಿಧದಿ ಮಾಡಿದರ್ ಮಂಗಳೋತ್ಸವದಿಂದ ಹಣವನೀ ಡಾಡಿದ ಕೃಷ್ಣ ಬ್ರಾಹ್ಮಣರ್ಗ (ಅದೆ) ಸಡಗರದಿಂ ಕೃಷ್ಣ ಸರ್ವಜ್ಞ ಸಭೆಗೆ ಹೊ ನುಡುಗೊರೆಗಳನಿತ್ತು ಬೀಳ್ಕೊಟ್ಟ ಮಡದಿ ರುಕ್ಕಣಿಗೂಡಿ ಮದುಮಕ್ಕಳ ತಂದು ಪೊಡಮಡಿಸಿದರು ನಾರದಗೆ|| ಹೀಗೆ ಮದುವೆಯ ಯಾವ ವಿವರವನ್ನೂ ಬಿಡದೆ ಕಣ್ಣಿಗೆ ಕಟ್ಟುವ ಚಿತ್ರವನ್ನು ಬಿಡಿಸುತ್ತಾ ಸಾಗುತ್ತಾನೆ ಕವಿ. ಇದೊಂದು ಸೌರಾಷ್ಟ್ರದಲ್ಲಿ ನಡೆದ ದ್ವಾಪರಯುಗದಲ್ಲಿ ನಡೆದ ವಿವಾಹವಾಗಿರದೆ ಇಂದು ನಮ್ಮೆದುರೇ ಕರ್ನಾಟಕದಲ್ಲಿ ನಡೆದ ವಿವಾಹವಾಗಿ ತೋರುತ್ತದೆ. ಎಪ್ಪತ್ತು ವರುಷದ ಮುಪ್ಪಿನ ಹಾರುವಯ್ಯ ಮುತ್ತಿನ ಜನಿವಾರ ಕೊರಳಲ್ಲಿ ಹಾಕಿಕೊಂಡು ನಿಸ್ತಿಗೆ ಧಾರೆಎರೆದರು || ಎಂಬ ಚಿತ್ರವೊಂದನ್ನು ಜನಪದ ಗೀತೆ ನೀಡುತ್ತದೆ. ಪ್ರದ್ಯುಮ್ಮನ ಮದುವೆಯ ಸಂದರ್ಭದಲ್ಲಿಯೂ ಅಗ್ನಿಸಾಕ್ಷಿಯಾಗಿ ಪುರೋಹಿತರು ಪದುಮಾಕ್ಷನಿಗೆ ಧಾರೆ ಎರೆದ ಚಿತ್ರ ಲಭ್ಯವಾಗುತ್ತದೆ. ಮೆಟ್ಟಕ್ಕಿಯ ಮೇಲೆ ವಧೂವರರನ್ನು ನಿಲ್ಲಿಸುವುದು, ಅಡ್ಡ ತೆರೆ ಹಿಡಿಯುವುದು, ಹಸೆಯ ಮೇಲೆ ನಿಂತ ದಂಪತಿಗಳಿಗೆ ಸೇಸೆಯನ್ನು ಹಾಕುವುದು, ಪುರೋಹಿತರಿಗೆ ಹೊನ್ನ ಉಡುಗೊರೆ ನೀಡುವುದು, ಮದುಮಕ್ಕಳನ್ನು ಕರೆತಂದು ಗುರುಹಿರಿಯರ (ಇಲ್ಲಿ ನಾರದರಿಗೆ) ಪಾದಕ್ಕೆ ನಮಸ್ಕರಿಸುವಂತೆ ಮಾಡುವುದು-ಮುಂತಾದ ಸರ್ವ ವಿವರಗಳನ್ನೂ ಕನಕದಾಸರು ಇಲ್ಲಿ ಒದಗಿಸಿದ್ದಾರೆ. 'ಮೋಹನ ತರಂಗಿಣಿ'ಯ ಅತ್ಯಂತ ಗಮನಾರ್ಹವಾದ ಜಾನಪದ ಅಂಶಗಳಲ್ಲಿ ಜನಪದ ಕಲೆಗಳು', 'ಜನಪದ ಕ್ರೀಡೆಗಳು', 'ಜನಪದ ವಾದ್ಯಗಳು' ಮತ್ತು 'ಜನಪದ ಅಡುಗೆಗಳಿಗೆ ಸಂಬಂಧಪಟ್ಟ ವಿವರಗಳು ಗಮನಾರ್ಹವಾಗಿವೆ. ಜಲಕ್ರೀಡೆಯ ಪ್ರಸಂಗದಲ್ಲಿ ಕ್ರೀಡಾಮಂಟಪಕ್ಕೆ ಬಂದ ಶ್ರೀಕೃಷ್ಣ ಅದರ ಶಿಲ್ಪ ವೈಭವಕ್ಕೆ ಬೆರಗಾಗುತ್ತಾನೆ. ಚಿನ್ನದ ಪಾತ್ರೆಗಳನ್ನು ಹಿಡಿದು ನರ್ತಿಸುವ ಪುತ್ಥಳಿಗಳ ದೃಶ್ಯವೊಂದನ್ನು ಪ್ರಸ್ತಾಪಿಸುತ್ತಾರೆ. ಈಗಲೂ ಉತ್ತರ ಕನ್ನಡ ಮತ್ತು ಬೆಳಗಾಂ ಭಾಗಗಳಲ್ಲಿ ಕೊಡಗಳನ್ನು ಹಿಡಿದು ನರ್ತಿಸುವ ಸ್ತ್ರೀಯರ ಹಾಗೂ ಪುರುಷರಮೇಳಗಳು ಕಂಡುಬರುತ್ತವೆ. ಸಿದ್ದಿಯರಲ್ಲಿ ಈ ಕೊಡದ ನೃತ್ಯ ತುಂಬ ಜನಪ್ರಿಯ. ಇಂಥ ನೃತ್ಯವೊಂದು ಕನಕದಾಸರ ಗಮನಕ್ಕೆ ಬಂದಿರಲು ಸಾಧ್ಯ. ಕೋಲಾಟ ಕರ್ನಾಟಕದಾದ್ಯಂತ ಕಂಡುಬರುವ ಕಲೆ. ಇದರ ಪ್ರಸ್ತಾಪವನ್ನೂ ಇಲ್ಲಿ ಮಾಡಲಾಗಿದೆ. ಬಾಣಾಸುರನ ಒಡೋಲಗದಲ್ಲಿ ಕಡಗ ಪೆಂಡೆಗಳನ್ನು ಧರಿಸಿದ ನಟರು, ಮದ್ದಳೆಗಾರರು, ತಾಳದವರು, ಗೀತವಾದ್ಯ ವಿದ್ಯೆಯನ್ನು ಬಲ್ಲವರ ವಿವರ ಬರುತ್ತದೆ. ಅನಿರುದ್ಧನ ಬೇಟೆಯ ಸಂದರ್ಭದಲ್ಲಿ ಬೇಡಿತಿಯರ ಕುಣಿತದ ಬಣ್ಣನೆಯನ್ನು ಕವಿ ನೀಡುತ್ತಾರೆ. ಕಲ್ಲುಬಂಡೆಗಳ ಮೇಲೆ ದುಮ್ಮಿಕ್ಕಿ ನೃತ್ಯಮಾಡುವ ಬೇಡತಿಯರನ್ನು ಅನಿರುದ್ದ ಕುತೂಹಲದಿಂದ ನೋಡುತ್ತಾನೆ. ಮದ್ದಾನೆಯ ದಂತದ ಒನಕೆಯನ್ನು ಮಾಡಿಕೊಂಡು ಅವರು ಬಿದಿರಕ್ಕಿಯನ್ನು ಕುಟ್ಟುತ್ತಾರೆ. ಹಾಗೆ ಕುಟ್ಟುವಾಗ 'ಸುದ್ದಿ' ಹಾಡನ್ನು ಒಯ್ಯಾರದಿಂದ ಹೇಳುತ್ತಾರೆ. ಸುದ್ದಿ ಪೂರಿತಕಾಮ ಸುದ್ದಿ ಸದ್ಗುಣಧಾಮ ಸುದ್ದಿ ಸುರೇಂದ್ರ ಲಲಾಮ ಸುದ್ದಿ ಸಾರ್ವರಭೌಮ ಸುದ್ದಿ ರಾಘವರಾಮ ಸುದ್ದಿ ಸಾಸಿರ ಪುಣ್ಯನಾಮ || 'ಸುದ್ದಿ' ಕಟ್ಟುವ ಪದಕ್ಕೆ ಸಂಬಂಧಿಸಿದ ಸೊಲ್ಲು. ಆ ಸೊಲ್ಲನ್ನು ಅಳವಡಿಸಿ ಕೃಷ್ಣ ನಾಮವನ್ನು ಭಜಿಸುವ ಸಂದರ್ಭವನ್ನು ಕಲ್ಪಿಸಲಾಗಿದೆ. ಜನಪದ ಭಕ್ಷ್ಯಭೋಜ್ಯಗಳ ಬಗ್ಗೆಯೂ 'ಮೋಹನ ತರಂಗಿಣಿ' ಅಪಾರ ವಿವರಗಳನ್ನು ನೀಡುತ್ತದೆ. ಜೇನು ಸಕ್ಕರೆ ಕ್ಷೀರ ರಸವಪ್ಪ ಫೇಣಿ ಸು ಖಿನುಂಡೆ ವಡೆಗಾರಿಗೆಯ ನಾನಾ ಭಕ್ಷ ಭೋಜ್ಯಂಗಳ ಪರಮಸು ಮಾನದೆ ಬಡಿಸಿದರೊಲಿದು || (ಪು. ೫೪)