ಪುಟ:Kanakadasa darshana Vol 1 Pages 561-1028.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೭೬ ಕನಕ ಸಾಹಿತ್ಯ ದರ್ಶನ-೧ ಕಿಂಡಿಯಲ್ಲಿ ನೋಡಿದ ಕವಿತೆಗಳು ೫೭೭ ೩.ಕೃತಿಗಳಲ್ಲಿ ಬರುವ ಕ್ರಿಯೆಗಳನ್ನು ಒಂದು ನಿರ್ದಿಷ್ಟ ಸಂದರ್ಭಗಳ ಹಿನ್ನೆಲೆಯಲ್ಲಿ ಗುರುತಿಸಲು ಸಾಧ್ಯವಾಗುತ್ತದೆ. ಕನಕದಾಸರ 'ನಳಚರಿತ್ರೆಯಲ್ಲಿ ಬರುವ ದಮಯಂತಿಗೆ ಎದುರಾಗುವ ಶಬರನ ಸನ್ನಿವೇಶವನ್ನು ಇಲ್ಲಿ ಲಕ್ಷಿಸಬಹುದು. (ಪು ೫-೩೦ ; ೩೨) ದಮಯಂತಿಯ ಪಾತ್ರದ ಜೊತೆಯಲ್ಲಿಯೇ ಅಂತಸ್ಥಗೊಂಡಿರುವ ಪಾತಿವ್ರತ್ಯದ ಮಹಿಮೆಗೆ ಪೂರಕವಾಗಿಯೇ ಈ ಸನ್ನಿವೇಶದ ವಿವರಗಳು ಬರುತ್ತವೆ. ೪. 'ಮೋಹನ ತರಂಗಿಣಿ' ಮತ್ತು 'ನಳಚರಿತ್ರೆ' ಕೃತಿಗಳ ಒಟ್ಟು ಆಕೃತಿಯು ಒಂದೇ ಮಾದರಿಯನ್ನು ಹೋಲುತ್ತದೆ. ನಿರ್ದಿಷ್ಟ ಆರಂಭ, ಅನಂತರ ಸಮಸ್ಯೆಗಳನ್ನು ಎದುರಿಸುವುದು, ಖಳನಾಯಕನ ಹನನ, ಸುಖವಾಗಿ ಮುಗಿಯುವ ಈ ರೀತಿಯ ಕಥನ ಕ್ರಮ ಭಾರತೀಯ ಕಥೆಗಳ ಲಕ್ಷಣವೂ ಹೌದು, 'ಮಂಗಳ'ವನ್ನು ಕುರಿತು ಚಿಂತಿಸುವ ಮತ್ತು ಲೌಕಿಕದ ಎಲ್ಲಾ ಸಂಕಟಗಳಿಗೂ ಪರಮಾರ್ಥದ ಮೊರೆ ಹೋಗುವ ಭಾರತೀಯ ಸಮಾಜದ ರೀತಿ-ರಿವಾಜುಗಳಿಗೆ ಈ ರೀತಿಯ ಕ್ರಮ ಬಹಳಷ್ಟು ಹೊಂದಾಣಿಕೆಯಾಗುತ್ತದೆ. ಭವದಲ್ಲಿ ಎದುರಿಸುವ ಎಲ್ಲಾ ಸಮಸ್ಯೆಗಳೂ ಸಜ್ಜನಿಕೆಯನ್ನು ಬೆಳೆಸುತ್ತವೆ. ಮನುಷ್ಯನು ಉದಾತ್ತನಾಗುವುದು ತನ್ನ ಸಚ್ಚಾರಿತ್ರ್ಯದಿಂದ. ಈ ಸಚ್ಚಾರಿತ್ರ್ಯವು ಸಮಸ್ಯೆಗಳನ್ನು ಎದುರಿಸುವುದರ ಮೂಲಕ ಅರ್ಥವತ್ತಾಗುತ್ತದೆಯೆಂದು ಭಾರತೀಯ ಸಂಸ್ಕೃತಿಯ ಮುಖ್ಯಧಾರೆಯು ನಂಬುತ್ತದೆ. ಈ ರೀತಿಯ ಸಂಸ್ಕೃತಿಯ ಸೃಜನಶೀಲ ಸಾಹಿತ್ಯವು ಈ ಗುಣವನ್ನು ಬಹಳಷ್ಟು ಮೈಗೂಡಿಸಿಕೊಳ್ಳುತ್ತದೆ. ಕನಕದಾಸರು ಈ ರೀತಿಯ ತಾತ್ವಿಕ ನಂಬಿಕೆಯಿಂದಲೇ ಶಾಬ್ಲಿಕ ಮೆರಗನ್ನು ಕೊಟ್ಟು ಕೃತಿರಚನೆ ಮಾಡಿದ್ದರಿಂದ ಸಹಜವಾಗಿಯೇ ಕೃತಿಯಲ್ಲಿ ಭಾರತೀಯ ಸಂಸ್ಕೃತಿಯ ತಳಹದಿಯು ರೂಪಿತವಾಗಿದೆ. ಕನಕದಾಸರ 'ಮೋಹನ ತರಂಗಿಣಿ' ಮತ್ತು 'ನಳಚರಿತ್ರೆ' ಕೃತಿಯಲ್ಲಿ ಸೂಚಿತವಾದ ಆದರ್ಶದ ಜಗತ್ತು ಕೂಡಾ ಇದರೊಂದಿಗೆ ಮುಖ್ಯವಾದದ್ದು. ಕನಕದಾಸರ ಕಾಲಘಟ್ಟವೇ ಒಂದು ವಿಶಿಷ್ಟ ಸಾಮಾಜಿಕ ನಂಬಿಕೆಯನ್ನು ಪಥೀಕರಿಸಿಕೊಂಡು ಬೆಳೆದಿರುವಂಥದ್ದು. ಲೌಕಿಕದ ಎಲ್ಲಾ ಉದಾಹರಣೆಗಳೂ ಆಧ್ಯಾತ್ಮಿಕ ಚೌಕಟ್ಟನ್ನು ವಿವರಿಸುವ ಸೂಚನೆಗಳಾಗಿ ಬಂದ ಕಾಲಘಟ್ಟವದು. ಈ ರೀತಿಯ ಚಾರಿತ್ರಿಕ ಚಕ್ರದ ಸುತ್ತ ತಿರುಗಿದ ಈ ಕಾಲಘಟ್ಟದಲ್ಲಿ ಬಂದ ಹೆಚ್ಚಿನ ಕೃತಿಗಳು ಈ ರೀತಿಯ ಆದರ್ಶ ಲೋಕವನ್ನು ಚಿತ್ರಿಸುತ್ತವೆ! ಈ ಕಾಲಘಟ್ಟದ ಮುಖ್ಯ ಸಾಮಾಜಿಕ ತಿಳುವಳಿಕೆಯೆಂದರೆ-ಸಾಯುಜ್ಯ ಪದವಿಯನ್ನು ಪಡೆಯುವುದು.6 “ಸಾಯುಜ್ಯ' ಪದವಿಯನ್ನು ಪಡೆಯಲು ಭವವು ಯಾವ ಸಂಕಟಕ್ಕೂ ನಿಲುಕಬಹುದು ಎನ್ನುವ ತಾತ್ತಿಕ ಭಿತ್ತಿಯೆಡೆಗೆ ಹೊರಳುವ ಕಥಾನಕಗಳಲ್ಲಿ ಸಹಜವಾಗಿ ಭವದ ತೀವ್ರ ಸಿಲುಕಾಟವಿರುತ್ತದೆ. ಕನಕದಾಸರ ಚಿತ್ರಣದಲ್ಲಿ ಇದು ಸಹಜವಾಗಿ ಬರುತ್ತದೆ : ನಾಯಕ ಮತ್ತು ನಾಯಕಿಯರು ಭವದ ತೊಳಲಾಟಕ್ಕೆ ಸಿಕ್ಕಿ ನರಳುತ್ತಾರೆ. ಅವರಿಗೆ ವಿಸ್ತ್ರತವಾದ ಆದರ್ಶವೊಂದಿರುತ್ತದೆ. ಜನತೆಗೆ ದೊರೆತ ಹೊಸ ಆದರ್ಶದ ದೆಸೆಯಿಂದ ಇದು ಸಂಪ್ರಾಪ್ತವಾಗಿರಬೇಕು.? ಕತೆಯನ್ನು ಹೇಳುವಾಗ ತಾನೊಂದು ಪವಿತ್ರ ಕತೆಯನ್ನು ಹೇಳುತ್ತಿದ್ದೇನೆ ಎನ್ನುವುದನ್ನು ಪ್ರತಿಪಾದಿಸುವುದಕ್ಕೆ ಕನಕದಾಸರು “ನಳಚರಿತ್ರೆಯಲ್ಲಿ ಹೀಗೆ ಹೇಳುತ್ತಾರೆ. “ಈ ಕಥೆಯನಾಲಿಸುವ ಜನರಿಗೆ | ಅನೇಕ ಸುಖ ಸಾಮ್ರಾಜ್ಯ ಪದವಿಯ ನಾ ಕಮಲಲೋಚನನು ವರಪುರದರಸಪಾಲಿಸುವ” il (೯-೭೧) ಮತ್ತು ಮೇದಿನಿಯೊಳೀ ಪುಣ್ಯ ಚರಿತೆಯ ನಾದರಿಸಿ ಬರೆದೋದಿ ಕೇಳುವ ಸಾಧು ಸಜ್ಜನರಾದವರಿಗಹುದಖಿಳ ಕೈವಲ್ಯ ವೇದ ಗೋಚರ ಕೃಷ್ಣ ವರಪುರ ದಾದಿ ಕೇಶವನಮರ ವಂದಿತ ನಾದಿ ನಾರಾಯಣನು ಸಲಹುವನಖಿಳ ಸಜ್ಜನರ || (೯-೭೨) ಇಲ್ಲಿ ಪ್ರತಿಪಾದಿತವಾಗಿರುವ ಧ್ವನಿ ಮುಖ್ಯವಾಗಿ ಧಾತ್ಮಿಕವಾಗಿ ಇರುವಂಥದ್ದು, ಎರಡನೆಯದು ನಾಯಕ ಕೇಂದ್ರಿತ ಈ ಕೃತಿಯಲ್ಲಿ ಸಾಹಿತ್ಯಕ್ಕೆ ಕಾಲಮಾನಕ್ಕೆ ಅನುಸಾರವಾಗಿ ಪಾವಿತ್ರ್ಯದ ಸೋಂಕು ತುಂಬಿದೆ. ಅಂದರೆ ವಿಜಯನಗರ ಕಾಲದ ಕನ್ನಡ ಸಾಹಿತ್ಯದ ಪ್ರಕ್ರಿಯೆಯೆಂದರೆ ಅದು ನೈತಿಕ ಪ್ರಸರಣವನ್ನೇ ಸಾಮಾನ್ಯ ಉದ್ದೇಶವನ್ನಾಗಿ ಹೊಂದಿರುವುದು.18 ಆಂಶಿಕವಾಗಿ ಉಲ್ಲೇಖಿಸಬೇಕೆಂದರೆ, ಈ ಕಾಲಘಟ್ಟದ ಸಾಹಿತ್ಯ ಅದಕ್ಕಿಂತ ಹಿಂದಿನ ಸಾಹಿತ್ಯ ಪ್ರಕಾರಕ್ಕಿಂತ ಭಿನ್ನವಾದುದು. ಸಾಹಿತ್ಯದ ಚೌಕಟ್ಟು, ಕಾವ್ಯವನ್ನು ಪ್ರಸ್ತಾವಿಸುವ