ಪುಟ:Kanakadasa darshana Vol 1 Pages 561-1028.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೪ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳಲ್ಲಿ ವಿಡಂಬನೆ ೭೨೫ ಪತ್ಯ ನೀ[ನಹೆ] ಹೆಣದ ಬಾಯಿಗೆ ತುತ್ತು ನೀನಹೆ ನಿನ್ನ ಜನ್ಮ ನಿರರ್ಥಕರವೆಂದ || ಸುದಿನವಾರಭ್ಯ ಮನುಜರು ಮತ್ತೆ ಕರವ ಹೊತ್ತು ಪಿಂಡವ ನಿತ್ತು [ತಪ್ಪದೆ ಮತ್ತೆ] ವಾಯಸಕುಲವ ಕರಕರದು ತುತ್ತನಿಡುವರು ಎ[ಳು] ದರ್ಭೆಗೆ ತೆತ್ತಿಗನು ನೀನಾದೆ ಕೀರ್ತಿಯ ಹೊತ್ತುಕೊಂಡೆ ದುರಾತ್ಮ ನಿನ್ನೊಳು ಮಾತದೇಕೆಂದ || ('ರಾ, ಚ' ೪೫-೪೬) ರಾಗಿಯ ಈ ಮಾತುಗಳಲ್ಲಿ ತುಂಬಿದ ಆತ್ಮಾಭಿಮಾನ, ಸರ್ವಕಾಲಕ್ಕು ಸರ್ವಜನರಿಗೂ ಬೇಕಾಗುವ ಅದರ ಅನಿವಾಯ್ಯತೆ, ಬಡವಬಲ್ಲಿದ ಉಪೇಕ್ಷೆಗೆ ಹೊರತಾದ ನಿರಹಂಕಾರಿ ಸ್ವಭಾವಗಳನ್ನು ದರ್ಶಿಸಬಹುದು. ಹಾಗೆಯೇ ಭತ್ತದ ನಿರ್ದಯ ಕುಟಿಲಾತ್ಮಕ ಬುದ್ದಿ, ಕೀರ್ತಿಶನಿಯ ಬೆಂಬತ್ತಿ ಹೋಗುವ ಲಜ್ಜಾಹೀನ ಮನೋಧೋರಣೆಗಳನ್ನೂ ತಿಳಿಯಬಹುದು. ಮುಂದೆ ರಾಮ ಅವೆರಡು ಧಾನ್ಯಗಳನ್ನು ಸೆರೆಹಾಕಿ ಮರುಪರೀಕ್ಷೆಗೊಡ್ಡುವುದು ; ಭತ್ತದ ಪೊಳ್ಳುತನ ರಾಗಿಯ ಗಟ್ಟಿತನ ಬೆಳಕಿಗೆ ಬರುವುದು ; ಕಪಿಲಮುನಿ ರಾಗಿಯನ್ನು “ಈತನೆ ಬಲ್ಲಿದನು ಆರೈದು ಸಲಹುವನಿನಗೆ ಸರಿಯುಂಟೆ” (ರಾಚ ೧೩೫) ಎಂದು ತೀರ್ಮಾನಿಸಿದ್ದು, ರಾಮ ಕನಲಿ, ಚಿಂತಿಸುವ ಭತ್ತಕ್ಕೆ ವಸ್ತುಸ್ಥಿತಿಯನ್ನು ಪರಿಚಯಿಸಿ, ಒಪ್ಪಿಸುವ ಮೂಲಕ ಸಮಾಧಾನ ಪಡಿಸುವುದು-ಹೀಗೆ ಕಥಾವಸ್ತು ಬೆಳೆದು ಮುಕ್ತಾಯವಾಗುತ್ತದೆ. ಕವಿಯ ಒಟ್ಟು ಆಶಯ ಲೋಕಕಲ್ಯಾಣವೇ ಆದ್ದರಿಂದ ರಾಗಿಯ ಮಹತ್ವವನ್ನು ಪ್ರಕಟಿಸುವಾಗಲೂ, ಭತ್ತವನ್ನೂ ಪೂರ್ಣರೂಪದಲ್ಲಿ ತಿರಸ್ಕರಿಸದೆ ಒಳಿತಿನ ತೆಕ್ಕೆಗೆ ತೆಗೆದುಕೊಳ್ಳುವ ದೂರದೃಷ್ಟಿ ಗೋಚರಿಸುತ್ತದೆ. ಆದ್ದರಿಂದಲೇ ಕನಕರಿಗೆ ವಿಡಂಬನೆಯಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಸಾಧ್ಯವಾಗಿದೆ. ಇಡೀ ಕಾವ್ಯ ಜಾತೀಯತೆ ಮತ್ತು ಅಸಮಾನತೆಯನ್ನು ಕ್ರಿಯಾತ್ಮಕವಾಗಿ ಸಾದರಪಡಿಸುತ್ತದೆ. ಇದಕ್ಕಾಗಿ ಕನಕದಾಸರು ಆಯ್ಕೆ ಮಾಡಿಕೊಂಡ ವಸ್ತು ಜನಪದರು ಬಲ್ಲಂತಹುದೆ. ಕಾರಣ ತನ್ನ ಸಂದೇಶ ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶ ಕವಿಯದು. ಹೀಗಾಗಿ ಚಿರಪರಿಚಿತ ಲೋಕದಲ್ಲೇ ಕವಿ ವ್ಯವಹರಿಸುತ್ತಾನೆ. ಆ ಮೂಲಕ ಬಡವರಲ್ಲಿ ಸುಪ್ತವಾಗಿರುವ ಮಾನವೀಯತೆಯನ್ನು ಮೆರೆಸಿ, ಅವರಲ್ಲಿ ಬೇರು ಬಿಟ್ಟಿರುವ ಹೀನಾಯ ಭಾವನೆಯನ್ನು ಮರೆಸಿ, ಶ್ರೀಮಂತರ ಕೊಬ್ಬನ್ನು ಮುರಿಯುವ ತಂತ್ರವನ್ನಿಲ್ಲಿ ಸಮರ್ಥವಾಗಿ ಯೋಜಿಸಿದ್ದಾನೆ. ಜನಪದರ ಆಡುನುಡಿಯೇ ಇಲ್ಲಿ ಬಳಕೆಯಾಗಿರುವುದೊಂದು ವಿಶೇಷ. ಏಕೆಂದರೆ ಒರಟು ಭಾಷೆ ಜಡ್ಡು ಹಿಡಿದ ಮನಸ್ಸನ್ನು ಭೇದಿಸಲು ಸರಿಯಾದ ಅಸ್ತ ಎಂಬ ನೈಜಭಾವನೆ ಕವಿಯದು. ಮನುಷ್ಯ ಒರಟು ನಡವಳಿಕೆಗೆ ಪ್ರತಿಕ್ರಿಯಿಸುವಷ್ಟು ಬೇಗ ಮೃದು ನಡವಳಿಕೆಗೆ ಬಾಗನು ಎಂಬ ಲೋಕಾನುಭವದ ಅರಿವೂ ಕವಿಗಿರುವುದನ್ನಿಲ್ಲಿ ಕಾಣಬಹುದು. ಆದ್ದರಿಂದಲೆ ಕನಕದಾಸರ ವಿಡಂಬನೆಯಲ್ಲಿ “ಕಹಿಯಿದೆ ವಿಷವಿಲ್ಲ, ಮೊನಚಿದೆ. ನೋವಿಲ್ಲ, ಹಠವಿದೆ ದ್ವೇಷವಿಲ್ಲ. ಕಾವಿದೆ ತಾಪವಿಲ್ಲ. ಕೋಪವಿದೆ ವೈರವಿಲ್ಲ, ಚುರುಕಿದೆ ಉರಿಯಿಲ್ಲ. ಎಲ್ಲಿಯೂ ಬ್ರಹ್ಮಶಿವರ ವೃತ್ತಿವಿಲಾಸರ ಮತಾಂಧತೆಯ ದೋಷ ಲೇಪವಿಲ್ಲ. ಕರ್ತವ್ಯ ಪ್ರಜ್ಞೆ ಸತ್ಯನಿಷ್ಠೆ, ಲೋಕ ಕಾರುಣ್ಯ, ನೈತಿಕಶ್ರದ್ಧೆ, ಧರ್ಮಕೋಪ-ಇವು ಆ ವಿಡಂಬನೆಯ ಹಿಂದಿರುವ ಮೂಲಭೂತವಾದ ಪ್ರೇರಕ ಪ್ರವೃತ್ತಿ” ಗಳಾಗಿ ಸಮಾಜದ ಕಣ್ಣು ತೆರೆಸುವ ಪ್ರಯತ್ನ ನಡೆಸುತ್ತದೆ. ಈ 'ರಾಮಧಾನ್ಯಚರಿತ್ರೆ' ಅಂದಿನ ವ್ಯವಸ್ಥೆಯ ತಾರತಮ್ಯಗಳಿಗೆ ಸಾಕ್ಷೀಭೂತವಾಗಿರುವಂತೆ ಕವಿಯ ಆತ್ಮಕಥೆಯೂ ಆಗಿದೆ ಎಂದು ತಿಳಿದಾಗ ಆ ವಿಡಂಬನೆಯ ವಸ್ತುವಿನ ಮೌಲ್ಯಕ್ಕೆ ವಿಶೇಷ ಅರ್ಥಪರಂಪರೆಗಳು ಸೃಷ್ಟಿಗೊಂಡುಬಿಡುತ್ತವೆ. ಹುಟ್ಟಿನಿಂದ ಶೂದ್ರನಾಗಿ, ಸಿದ್ದಿಯ ಮಾರ್ಗದಲ್ಲಿ, ಅವನು ಎದುರಿಸಿದ ಜಾತಿಯ ಪೆಡಂಭೂತದ ಬಾಧೆಯನ್ನಿದು ಖಚಿತಪಡಿಸುತ್ತದೆ. ಮಡುವುಗಟ್ಟಿದ್ದ ಆ ನೋವನ್ನು ಕವಿಮನ ಸಾಮಾನ್ಯ ಮಾತುಗಳಲ್ಲಿ ಕಲಾತ್ಮಕವಾಗಿಲ್ಲಿ ಕರಗಿಸಿದೆ. ಇಲ್ಲಿ ಕಥೆಯ ಕೇಂದ್ರ ಬಿಂದು ಯಾವುದೂ ಅಲ್ಲ. ಆದರೆ ಎಲ್ಲವೂ ಹೌದು. ಕಥಾನಾಯಕ ಯಾರೂ ಅಲ್ಲ ಎಲ್ಲರೂ ಹೌದು. ದೈವತ್ವ ಸಂಪಾದನೆ ಉನ್ನತವರ್ಗಕ್ಕೆ ಕಟ್ಟಿಟ್ಟ ಬುತ್ತಿಯಲ್ಲ. ಜೀವನ್ಮುಕ್ತನಿಗೆ ಅಂಟಿದ ನಂಟು ಅದು. ಸಾಧನೆಯ ಶ್ರಮದಿಂದ ಮಿಗಿಲಾಗಿ ಮಾನವೀಯ ತುಡಿತ ಮಿಡಿತಗಳಿಂದ ಯಾರೂ ದಕ್ಕಿಸಿಕೊಳ್ಳಬಹುದಾದುದು ಎಂಬ ಸಾರ್ವತ್ರಿಕ ಸಾರ್ವಕಾಲಿಕ ಜೀವನ ದರ್ಶನ ಪ್ರಸ್ತುತ ಕೃತಿಯಲ್ಲಿ ವ್ಯಕ್ತವಾಗುತ್ತದೆ. ೧.ದೇಜಗೌ (ಸಂ), 'ರಾಮಧಾನ್ಯ ಚರಿತ್ರೆ' * ಮುನ್ನುಡಿ, ಮೈಸೂರು, ೧೯೭೯. ಪು. ೧೦