ಪುಟ:Kanakadasa darshana Vol 1 Pages 561-1028.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೮ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳಲ್ಲಿ ವಿಡಂಬನೆ ೭೨೯ ಬೇರುಬಿಟ್ಟ ರೂಢಿಗತ ಸಂಪ್ರದಾಯಗಳು, ಜಾತಿ ಮತ ವ್ಯವಸ್ಥೆಗಳು, ಬಡವಬಲ್ಲಿದ, ಮೇಲು-ಕೀಳೆಂಬ ತಾರತಮ್ಯ, ಹಳಸಲು ಮೌಲ್ಯಗಳು, ಬದುಕಿನ ಆಡಂಬರ ಮೊದಲಾದ ವಿಚಾರಗಳನ್ನು ವಿಡಂಬಿಸಿರುವ ರೀತಿ ಅನನ್ಯವಾದುದು. ಹೀಗೆ ಮಾಡುವಾಗ ಇವರು ವಾಸ್ತವತೆಯ ಕಠೋರ ಸತ್ಯವನ್ನು ಪರಿಣಾಮಕಾರಿಯಾಗಿ ಅನಾವರಣಗೊಳಿಸುವ ಮೂಲಕ ಮಾನಸಿಕ ಕ್ಷೇಶವನ್ನು ಒರೆಗೆ ಹಚ್ಚುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ. ಶೂದ್ರ ಕನಕರನ್ನು ಅಂದಿನ ಸಮಾಜ ಅವರ ಪಾಂಡಿತ್ಯ ಪ್ರತಿಭೆ ಅನುಭಾವಗಳ ಪ್ರಭಾವವನ್ನು ಕಂಡೂ ಮುಕ್ತವಾಗಿ ಸ್ವೀಕರಿಸಲು ಮುಂದಾಗಲಿಲ್ಲ, ಇದಕ್ಕೆ ಕೊಡುವ ಕಾರಣ ಒಂದೇ ಒಂದು, ಜಾತಿ. ಇದು ಕನಕದಾಸರನ್ನು ಆಳವಾಗಿ ಬಾಧಿಸಿತು. ಶೋಷಿತ ವರ್ಗದ ನೋವಿನ ದನಿಯ ಅರಿವೂ ಮೂಡಿತು. ತತ್ಪರಿಣಾಮವಾಗಿ ಅವರ ಸಾತ್ವಿಕ ರೋಷ ಎಚ್ಚೆತ್ತು, ಅಂಥ ಉಪ್ಪರಿಗೆಯ ಜನರ ಡೊಂಬರಾಟವನ್ನು ಕಂಡು ಕೆಂಡ ಕಾರುತ್ತದೆ ; ಮಾತು ಮಾತಿಗೆ ಹರಿಯ ನಿಂದಿಸಿ ಸ ರ್ವೊತ್ತಮ ಶಿವನೆಂದು ಸಾಧಿಸಿ ಧಾತು ಗ್ರಂಥಗಳೆಲ್ಲ ತೋರಿಸಿ ವೇ ದಾಂತ ಪ್ರಮಾಣಗಳಾರಿಸಿ ಸೋತು ಸಂಕಟಪಟ್ಟು ನೀತಿ ಹೇಳುವ ಕೆಟ್ಟಜಾತಿಗಳಿಗಲ್ಲದೆ (ಕೀರ್ತನೆ ಸಂ. ೩೯) ಕೇವಲ ವೇದಾಗಮಗಳನ್ನು ಉದ್ದರಿಸುತ್ತ, ನೈತಿಕ ಬಲವಿಲ್ಲದೆ, ಶೀಲಗೆಟ್ಟ ಮೇಲ್ವರ್ಗದ ಜನ ಜಾತಿಯ ಬಗ್ಗೆ ನೀತಿ ಹೇಳುವ ಮೂರ್ಖ ಸಾಹಸವನ್ನಿಲ್ಲಿ ಮಾಡುತ್ತಾರೆ. ಜಾತಿಯ ನಿರ್ಣಯ ಜ್ಞಾನದಿಂದಾಗಬೇಕು ; ಭಕ್ತಿಯಿಂದಾಗಬೇಕು; ಸತ್ಯದಿಂದಾಗಬೇಕೇ ಹೊರತು ಹೊಲಸು ದೇಹ ಹಾಗೂ ಮನವನ್ನು ಮುಂದಿಟ್ಟುಕೊಂಡು ಅಲ್ಲ, ಏಕೆಂದರೆ ಆತ್ಮ, ಜಿತೇಂದ್ರಿಯತ್ವ ಯಾರ ಸೊತ್ತೂ ಅಲ್ಲ. ಇದೆಲ್ಲ ಸಾಧನೆಗೆ ಸಂಬಂಧಿಸಿದ್ದು, ಹಾಗೆ ನೋಡಿದರೆ ಕುಲದ ನೈಜ ಅರ್ಥವೇ ಮೇಲ್ವರ್ಗದವರಿಗೆ ತಿಳಿದಿಲ್ಲ. ಅವರ ಈ ಆಶಯ ಸರ್ವವ್ಯಾಪಿಯೂ ಸರ್ವಗ್ರಾಹಿಯೂ ಆಗಿ ನಮಗೆ ಹೀಗೆ ಕಾಣಸಿಗುತ್ತದೆ : ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರ || ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ ಅಟ್ಟು ಉಣ್ಣದ ವಸ್ತುಗಳಿಲ್ಲ ಗುಟ್ಟು ಕಾಣಿಸ ಬಂತು ಹಿರಿದೇನು ಕಿರಿದೇನು ನೆಟ್ಟನೆ ಸರ್ವಜ್ಞನ ನೆನಕಂಡ್ಯ ಮನುಜ || ಜಲವೆ ಸಕಲ ಕುಲಕ್ಕೆ ತಾಯಲ್ಲವೆ ಜಲದ ಕುಲವನೇನಾದರು ಬಲ್ಲಿರ | ಜಲದ ಬೊಬ್ಬುಳಿಯಂತೆ ಸ್ಥಿರವಲ್ಲವೀ ದೇಹ ನೆಲೆಯನರಿತು ನೀ ನೆನೆಕಂಡ್ಯ ಮನುಜ || ಹರಿಯೇ ಸರ್ವೋತ್ತಮ, ಹರಿಯೇ ಸರ್ವೆಶ್ವರ ಹರಿಮಯವೆಲ್ಲವೆನುತ ತಿಳಿದು || ಸಿರಿಕಾಗಿನೆಲೆಯಾದಿಕೇಶವರಾಯನ ಚರಣಕಮಲವ ಕೀರ್ತಿಸುವನೆ ಕುಲಜ || (ಕೀರ್ತನೆ, ಸಂ. ೧೬೭) ಪಂಪ 'ಕುಲಂ ಕುಲಮಲ್ತು ಚಲಂ ಕುಲಂಗುಣಂ ಕುಲಂ ಅಭಿಮಾನಮೊಂದೆ ಕುಲಂ ಅಣು ಕುಲಂ' ಎಂದಿರುವುದನ್ನಿಲ್ಲಿ ನೆನಪಿಸಿಕೊಳ್ಳಬಹುದು. ಜನಪ್ರಿಯವಾದ ಈ ಕೀರ್ತನೆಯಲ್ಲಿಯೂ ಪಂಪನ ಧ್ವನಿ ಪ್ರತಿಧ್ವನಿಗೊಂಡಿದೆ. ಹುಟ್ಟಿನ ಮೂಲದಲ್ಲಾಗಲಿ ಬದುಕಿನ ರಹಸ್ಯದಲ್ಲಾಗಲಿ ಹಿರಿದು ಕಿರಿದು ಭಾವ ಸಲ್ಲದು. ನೀರಿನ ಗುಳ್ಳೆಯಂತೆ ಅನಿಶ್ಚಿತವಾದುದು ಅಶಾಶ್ವತವಾದುದು ದೇಹ, ಅಮರತ್ವ ಲಭ್ಯವಾಗುವುದು ಹರಿಯ ಕೀರ್ತನೆ ಮಾತ್ರದಿಂದ. ಇಂದು ಇದ್ದು ನಾಳೆ ಹೋಗುವ ಈ ದೇಹವ ಹೊತ್ತ ಮನುಷ್ಯ ಅಸ್ಪಶ್ಯನಂತೆ ವರ್ತಿಸುವುದು. ಕುಲದ ಆಧಾರದ ಮೇಲೆ ವ್ಯವಹಾರ ನಡೆಸುವುದು ಕನಕರ ದೃಷ್ಟಿಗೆ ಅಸಹ್ಯವಾಗಿ ಅಮಾನುಷವಾಗಿ ತೋರುತ್ತದೆ. ಆದ್ದರಿಂದಲೇ ಕುಲದ ಬಗೆಗಿನ ಕನಕರ ಈ ನುಡಿಮುತ್ತುಗಳೂ ಎಲ್ಲಾ ಕಾಲಕ್ಕು ಮೌಲ್ಯವಾಗಿ ಉಳಿಯುವಂಥವು. ಜೊತೆಗೆ ಈ “ಕೀರ್ತನೆಯ ಉಲ್ಲೇಖ ನಮ್ಮ ಸಾಮಾಜಿಕ ಚಿಂತನೆಯ ಸ್ವರೂಪವನ್ನು ಪ್ರಕಟಿಸಲು ನೆರವಾಗುತ್ತದೆ. ಯಾವ ಮೌಲ್ಯವ್ಯವಸ್ಥೆ - +೧ ಪಂಡಿತ ಬಿ. ಶಿವಮೂರ್ತಿ ಶಾಸ್ತ್ರೀ, ಡಾ. ಕೆ. ಎಂ. ಕೃಷ್ಣರಾವ್ ಸಂಪಾದಿತ ಕನಕದಾಸರ ಕೀರ್ತನೆಗಳು' ಕೃತಿಯಲ್ಲಿ ಬರುವ ಕೀರ್ತನೆಗಳ ಸಂಖ್ಯೆಯನ್ನೇ ಲೇಖನಕ್ಕೆ ಬಳಸಿಕೊಳ್ಳಲಾಗಿದೆ.