ಪುಟ:Kanakadasa darshana Vol 1 Pages 561-1028.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೩೦ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳಲ್ಲಿ ವಿಡಂಬನೆ ೭೩೧ ಸೋರೆಯೊಳಗೆ ಮದ್ಯತುಂಬಿ ಮೇಲೆ ತುಳಸಿ ಪುಷ್ಪಮಾಲೆ ಗೀರು ಗಂಧ ಅಕ್ಷತೆಯ ಧರಿಸಿದಂತೆ || (ಕೀ, ೧೦೪) ಎಂಬ ರೀತಿಯವು. “ಈ ಜಗವೆಲ್ಲ ಈಶ್ವರಮಯ” ವೆಂದು ಅರಿತ ಮೇಲೆ ಆರೊಡನೆ ವೈರ? ಇದನ್ನರಿಯದೆ ದೇವರ ಹೆಸರುಗಳಿಗಾಗಿ ಹೋರಾಡುವ ವೇಷಧಾರಿ ಡಾಂಭಿಕದ ಬಾಹ್ಯಾಡಂಬರದ ದೊಂಬರಾಟವನ್ನು ನಿರ್ದಾಕ್ಷಿಣ್ಯವಾಗಿಲ್ಲಿ ಖಂಡಿಸಿದ್ದಾರೆ. ಅವರಲ್ಲಿನ ಮನದ ಕೊರತೆಯ, ಸತ್ಯದ ಕೊರತೆಯ ಅರಿವಿನ ಕೊರತೆಯ ಕಂಡು ಬೆರಗುಗೊಳ್ಳುತ್ತಾರೆ. ಇದು ಒಂದು ವರ್ಗದವರಿಗಷ್ಟೇ ಸೀಮಿತವಾದುದಲ್ಲ, ಎಲ್ಲ ವರ್ಗಕ್ಕೂ ಅನ್ವಯಿಸುತ್ತದೆ. ಇದನ್ನು ಕಂಡು ಕನಕದಾಸರು ವ್ಯಂಗ್ಯವಾಡಿದ್ದಾರೆ. ತೀರ್ಥವನು ಪಿಡಿದವರೆಲ್ಲ ತಿರುನಾಮಧಾರಿಗಳೆ ಜನ್ಮ ಸಾರ್ಥಕವಿಲ್ಲದವರೆಲ್ಲ ಭಾಗವತರೆ || ಮತ್ತು ಮೌಲ್ಯಶ್ರೇಣಿಗಳಲ್ಲಿ ನಾವು ಬದುಕುತ್ತಿದ್ದೇವೋ ಅದು ಇಂಥ ಉಲ್ಲೇಖಗಳ ಮೂಲಕ ನಮಗೆ ಗೋಚರವಾಗುತ್ತದೆ.”ಗಿ ಮುಂದುವರಿದು” ಪಿಸುಣಗಿನ್ನಧಿಕ ಹೊಲೆಯುಂಟೆ” ಎಂದು ಕನಕರು ಪ್ರಶ್ನಿಸುತ್ತಾರೆ. ಇಲ್ಲಿ “ಹೊಲೆಯ” ಪದ ಜಾತಿವಾಚಕವಲ್ಲ, ಕೃತ್ಯವಾಚಕ ಎಂಬುದನ್ನು ಗ್ರಹಿಸಬೇಕು ಹುಟ್ಟು-ಸಾವು ಎರಡೂ ಹೊಲೆಯನ್ನು ಆಧರಿಸಿಯೇ ನಿಲ್ಲುವಂಥದ್ದು ಎಂದು ವಾದಿಸುವ “ತೋಲಗುವರು ಕಡೆಕಡೆಗೆ ತಾ ಹೋಲೆ, ಹೊಲೆಯೆನುತ ಕಳವಳಿಸಿ ಮೂತ್ರದ ಬಿಲದೊಳಗೆ ಬಂದಿಹುದ ಕಾಣದೆ ಬರಿದೆ ಮನನೊಂದು ಜಲದೊಳಗೆ ಮುಳುಗಿದರೆ ತೋಲಗದು ಹೋಲಗೆಲಸವೀ ದೇಹದೊಳು ನೀ ನೆಲೆಸಿರಲು ಹೊಲೆಯುಂಟೆ” ಎಂಬ ವಾಕ್ಯವನ್ನು ನೋಡಿ. ಇಲ್ಲೆಲ್ಲಾ ಜಾತಿ ಜಾತಿಗಳಲ್ಲಿ ತಿರಸ್ಕೃತರಾದವರಿಗೂ ಪುರಸ್ಕಾರ ಕೊಟ್ಟದ್ದು ಕನಕರ ಹೆಮ್ಮೆ. ಈ ನಿಟ್ಟಿನಲ್ಲಿ ಉತ್ತಮರು ಆಚರಿಸುವ ಸಂಪ್ರದಾಯ ರೂಢಿಗತ ಪದ್ಧತಿಗಳಲ್ಲಿ ಕವಿ ಮೌಡ್ಯಗಳ ಮಹಾಪೂರವನ್ನು ಹೀನಮಾರ್ಗವನ್ನು ಕಾಣುತ್ತಾರೆಯೇ ಹೊರತು ಜನಪರ ಧೋರಣೆಯನ್ನಲ್ಲ. ಅಂಥ ರೀತಿ ರಿವಾಜುಗಳನ್ನು ಬೂಟಾಟಿಕೆಯ ನಡವಳಿಕೆಗಳನ್ನು ನವಿರಾದ ಹಾಸ್ಯದಿಂದ ಅಷ್ಟೇ ಮಾರ್ಮಿಕವಾಗಿ ಅಣಕಿಸುವುದನ್ನು ಕಾಣಬಹುದು. “ನೇಮವಿಲ್ಲದ ಹೋಮ ಇನ್ನೇತಕೆ” (ಕೀ ಸಂ. ೩೧) ಎಂದು ನೇರವಾಗಿ ಪ್ರಶ್ನಿಸುವ ಕನಕರು ಶ್ರದ್ದೆ ಆಸಕ್ತಿಯಿಲ್ಲದ ಕೇವಲ ಡಾಂಭಿಕತನದಲ್ಲಿ ವೃತ್ತಿಯನ್ನು ಪ್ರದರ್ಶಿಸುವುದನ್ನು ಟೀಕಿಸುವರು. ವಾರಕ್ಕೊಂದು ಉಪವಾಸ ಮಾಡುತ್ತ, ನೀರಲ್ಲಿ ಮುಳುಗು ಹಾಕುತ್ತ ಪಾಪ ಕಳೆಯುವ ಭ್ರಮೆಯಲ್ಲಿ ನಡೆದಾಡುವ ಮಂದಿ ನಾರಿಯರ ಸಂಗ ಬಿಡಲಾರದೆ ಒದ್ದಾಡುವ ರೀತಿ ಮಾತ್ರ ವಿಪರೀತ. ಇವರ ಪಾಲಿನ ಪೂಜೆ ಪುರಸ್ಕಾರಗಳು “ಕಳ್ಳರಿಗೆ ಕಳ್ಳನಂತೆ ಬೆಳ್ಳಕ್ಕಿಯಂದದಿ ಡಂಭ” (ಕೀ. ೭೮) ವಾಗಿ ಕಂಡಿದ್ದು ಸರಿಯೆ, ಏಕೆಂದರೆ ಇವರೆಲ್ಲ ಕಣ್ಣಿದ್ದು “ಗಾಣದೆತ್ತಿನಂತೆ ಕಣ್ಣು ಮುಚ್ಚಿ ಪ್ರದಕ್ಷಿಣೆ ಮಾಡಿ ಕಾಣದೆ ತಿರುಗುವ ವರ್ತನೆಯವರು. ಇವರ ಆಚಾರವಾದರೂ : ಗುಂಡುಮುಳುಕನ್ಹಕ್ಕಿಯಂತೆ ಕಂಡ ಕಂಡ ನೀರ ಮುಳುಗಿ ಮಂಡೆ ಶೂಲೆ ಬಾಹೋದ ಗತಿಯಕಾಣೆನೊ || (ಕೀ. ೭೮) ಮೂಗ್ಲಿಡಿದು ನೀರೊಳಗೆ ಮುಳುಗಿ ಜಪತಪವ ಮಾಡಿ ವೇದಶಾಸ್ತ್ರ ಪುರಾಣಗಳನೋದಿ ತಿಳಿದು ಬಾಗಿ ಪರಸ್ತ್ರೀಯರಿಗೆ ಭ್ರಮಿಸಿ ಕಣ್ಣಿಡುವಂಥ ನೀತಿ ತಪ್ಪಿದವರೆಲ್ಲ ದೇವ ಬ್ರಾಹ್ಮಣರೆ ಕೃಷ್ಣ || ಪಟ್ಟೆನಾಮವ ಬಳಿದು ಪಾತ್ರೆಯಲ್ಲಿ ಪಿಡಿದು ಗುಟ್ಟಿನಲಿ ರಹಸ್ಯವ ಗುರುತರಿಯದೆ ಕೆಟ್ಟಕೂಗನು ಕೂಗಿ ಬಗುಳಿ ಬಾಯಾರುವಂಥ ಹೊಟ್ಟೆಗುಡ ಮೃಗಗಳೆಲ್ಲ ಶ್ರೀ ವೈಷ್ಣವರೆ ಕೃಷ್ಣ || ಲಿಂಗ ಲಿಂಗದೊಳಗಿರುವ ಚಿನ್ಮಯವ ತಿಳಿಯದೆ ಲಿಂಗಾಂಗದಾ ನೆಲೆಯ ಗುರುತರಿಯದೆ | ಜಂಗಮ ಸ್ಥಾವರದ ಭಾವವನ್ನು ತಿಳಿಯದೆ ಭಂಗಿ ಮುಕ್ಕುಗಳೆಲ್ಲ ಲಿಂಗವಂತರಹರೆ || ೧ (ಸಂ) ಕಾ. ತ. ಚಿಕ್ಕಣ್ಣ `ಕನಕಕಿರಣ' ಬೆಂಗಳೂರು, ೧೯೮೨, ಪು. ೧೬೯. ಅಲ್ಲಾ ಖುದಾ ಎಂದು ಆತ್ಮದಲಿ ತಿಳಿಯದೆ ಮುಲ್ಲಶಾಸ್ತ್ರದ ನೆಲೆಯ ಗುರುತರಿಯದೆ