ಪುಟ:Kanakadasa darshana Vol 1 Pages 561-1028.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೩೨ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳಲ್ಲಿ ವಿಡಂಬನೆ ೭೩೩ ಜಳು ಕೂಗನು ಕೂಗಿ ಬಗುಳಿ ಬಾಯಾರುವಂಥ ಕಳ್ಳ ತುರುಕರಿಗೆಲ್ಲ ವೀರಸ್ವರ್ಗವುಂಟೆ ಕೃಷ್ಣ || - (ಕೀ, ಸಂ. ೧೨೬) ಇಲ್ಲಿ ತಿಳಿಹಾಸ್ಯದ ಮೂಲಕ ವಿವಿಧ ವರ್ಗದವರ ಮತೀಯ ಆಚರಣೆಯನ್ನು ಕನಕರು ವಿಡಂಬಿಸಿದ್ದಾರೆ. ದೈವ ಸಾಕ್ಷಾತ್ಕಾರದ ಮಾರ್ಗವನ್ನರಿಯದೆ ಒದ್ದಾಡುವ ಜನರಿಗೆ ಇವೆಲ್ಲ ಪರಿಕರಗಳು ಅಗತ್ಯವಾಗುತ್ತವೆ. ಇವರೆಲ್ಲ ಭಕ್ತವೇಷ ತೊಟ್ಟ ಮುಖವಾಡದ ಜನರು. ಇವರ ವೇಷದಂತೆ ಇವರ ಪದ್ದತಿಗಳೂ ಕೂಡ ಇರುತ್ತವೆ. ಎಲ್ಲ ಧರ್ಮದ ಮೂಲಸಾರ “ಅಹಿಂಸೋ ಪರಮೋ ಧರ್ಮಃ” ಎಂಬುದು ವಿಪರ್ಯಾಸದ ಸಂಗತಿ ಎಂದರೆ ಶಾಸ್ತಾದಿಗಳೂ ಹಿಂಸೆ, ಬಲಿಪೂಜೆಯನ್ನು ಒಪ್ಪಿಕೊಂಡಿರುವುದು. ಇದನ್ನು ಗಮನಿಸಿದ ಕನಕರು, “ಕ್ಷೀಣಶಾಸ್ತಾರ್ಥವನು ಪರಿಗ್ರಹಿಸಿ ನಿಖಿಲ ಕುರಿಕೋಣಗಳ ತಲೆಯ ಚೆಂಡನು ಕುಟ್ಟಿಸಿ ಪ್ರಾಣಹತ್ಯವ ಮಾಳ್ಳುದಾವ ಸತ್ಕರ್ಮವೋ” (ಕೀ, ೧೩೨) ಎಂದು ನೋಯುತ್ತಾರೆ. ದೈವದ ತೃಪ್ತಿಗಾಗಿ ಬತ್ತವ ಮೆರವಣಿಗೆ ಮಾಡುವುದು, ಸಿಡಿಯೇರುವುದು, ಕೊರಳಲ್ಲಿ ತೊಗಲ ಬಿಲ್ಲೆಗಳನ್ನು ಕಟ್ಟಿಕೊಳ್ಳುವುದು, ಕೊಂಡ ಹಾಯ್ದುದು (ಕೀ. ೧೩೨) ಮೊದಲಾಗಿ ಕೂರ ವಿಕೃತ ಆಚರಣೆ ಮಾಡುವುದನ್ನು ಖಂಡಿಸುತ್ತಾರೆ, ಕೋಪಗೊಳ್ಳುತ್ತಾರೆ. ಇದರಿಂದ ದೈವತೃಪ್ತಿಯಾಗಲಿ ಮುಕ್ತಿಯ ನೆಲೆಯಾಗಲಿ ಕನಸಾಗುತ್ತದೆ ಎಂಬ ವಾಸ್ತವತೆಯನ್ನು ಪ್ರತಿಬಿಂಬಿಸುತ್ತಾರೆ. ಇವೆಲ್ಲ ಅಂದಿನ ಸಮಾಜದ ಸಾಂಸ್ಕೃತಿಕ ದಾಖಲೆಗಳಾಗಿ, ಮೂಢನಂಬಿಕೆಯ ಪಳೆಯುಳಿಕೆಗಳಾಗಿ ಗೋಚರಿಸುತ್ತವೆ. ಮತಧರ್ಮಗಳು ಜನರನ್ನು ಭಾವುಕರನ್ನಾಗಿಸುತ್ತವೆ. ಜನರು ಅವಕ್ಕೆ ಭಯ ಭಕ್ತಿಯಿಂದ ಸ್ಪಂದಿಸುತ್ತಾರೆ. ಇವರ ದೌರ್ಬಲ್ಯವನ್ನು ಉತ್ತಮರು ಬಹು ಸುಲಭವಾಗಿ ಶೋಷಿಸುತ್ತಾರೆ ; ಪೋಷಿಸಿ ಬೆಳೆಸುತ್ತಾರೆ. ತಮ್ಮ ಸ್ವಾರ್ಥನಿಲುವಿಗೆ, ನೀಚತನಕ್ಕೆ ಮತೀಯ ಲೇಪವನ್ನು ಬಳಿದು ಆಕರ್ಷಿಸುತ್ತಾರೆ. ಇವರೊಡ್ಡಿದ ಬಲೆಗೆ ಎಳೆಮೀನಾಗಿ ಕೆಳವರ್ಗದವರು ಸಿಲುಕಿ ಬಿಡುತ್ತಾರೆ. ಅಷ್ಟರ ಪ್ರಮಾಣದಲ್ಲಿ ವೃತ್ತಿಪರರಾಗಿ ತಮ್ಮ ಕೆಲಸವನ್ನು ಮೇಲುಜಾತಿಯವರು ಸಾಧಿಸಿ ತೋರಿಸುತ್ತಾರೆ. ಅಂಥವರನ್ನು ಕನಕದಾಸರು ವಿಡಂಬಿಸಿರುವುದು ಮನೋಹರವಾಗಿದೆ : ಮಂಡೆ ಬೋಳು ಮಾಡಿ ನಾವು ಉಂಡೆಯನು ಬರೆದು ಕೆಡಸಿ ಕಂಡ ಕಂಡವರ ಕೂಡಿ ಭಂಡ ಜನ್ಮ ಹೊರೆಯುವವಗೆ || ಅವರಿವರ ಕೈಯ ನೋಡಿ ಹ ಲವು ಕೆಲವು ಮಾತನಾಡಿ ಹಲವು ಹಂಬಲಿಸಿ ದಿನವ ಕಳೆದು ಉಳಿದು ಬಾಳುವಗೆ || (ಕೀ. ೧೯೧) ಮೇಲುನೋಟಕ್ಕೆ ವಿಡಂಬನೆಯ ಚೂಪಾಗಲಿ ಕೊಂಕಾಗಲಿ ಇಲ್ಲಿಲ್ಲ. ಆದರೆ ಅಧ್ಯಾಹಾರ ಮಾಡಿಕೊಂಡಾಗ ಅದರ ಸೊಗಸು ಇಮ್ಮಡಿಸುತ್ತದೆ. ಸ್ವಭಾವೋಕ್ತಿಯೇ ಸೌಂದರ್ಯ ಇಲ್ಲಿ. ಈ ಕಲೆಗಾರಿಕೆ ಎಂಥವರನ್ನೂ ಸೆರೆ ಹಿಡಿಯುತ್ತದೆ. “ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ” (ಕೀ, ೧೬೭) ಎಂದು ಪ್ರಾರಂಭವಾಗುವ ಕೀರ್ತನೆಯೂ ಅಷ್ಟೇ, ಲೋಕದ ವಿವಿಧ ವೇಷಗಳ ಮೂಲವನ್ನು ಮುಖಕ್ಕೆ ರಾಚಿದಂತೆ ತಿಳಿಸುತ್ತದೆ ಮಾತ್ರವಲ್ಲ ನಮ್ಮ ಜೀವನಕ್ರಮದ ಭಾಷಿಕ ದಾಖಲೆಯಾಗಿ ಗಮನಾರ್ಹವಾಗುತ್ತದೆ. ಉದಾಹರಣೆಗೆ ಶೆಟ್ಟಿಯ ಜೀವನ ಕ್ರಮವೊಂದನ್ನು ನೋಡಿ. ಒಡೆದ ಮಡಕೆ ತಂದು ಅರೆದು ನಾಮವ ಮಾಡಿ ಕೊಡುವೆ ನೀ ಕಾಸಿಗೆ ಒಂದೊಂದನು ಒಡಲು ತುಂಬಿ ಮಿಕ್ಕ ಅನ್ನವ ಮಾರಿಸಿ ಒಡವೆಯ ಗಳಿಸುವ ಕಡುಲೋಭಿಶೆಟ್ಟಿ || (ಕೀ, ಸಂ. ೩೮) ಹೊಟ್ಟೆ ಹೊರೆಯುವುದಕ್ಕೆ ಯಾವ ತಂತ್ರವನ್ನು ಬೇಕಾದರೂ ಅನುಸರಿಸುತ್ತಾರೆ ಎಂಬುದಕ್ಕಿದು ನಿದರ್ಶನವಾಗಿದೆ. ವಿಡಂಬನೆಯಲ್ಲೂ ವ್ಯಂಗ್ಯದ ಮಿಂಚನ್ನು ನಿಷೇಧ ಕ್ರಿಯಾರೂಪದಲ್ಲಿ ಬಳಸಿರುವುದು ಕನಕದಾಸರ ವಿಡಂಬನಾ ಶೈಲಿಯ ಒಂದು ವಿಶೇಷ. ಶ್ರುತಿಶಾಸ್ತ್ರ ಪುರಾಣಗಳ ಓದುವನೆ ಶೂದ್ರ ಅತಿಥಿಗಾದರಿಸುವವನೆ ಅತಿಲುಬ್ಬನು ಪ್ರತಿದಿವಸ ಸಂಧ್ಯಾನವನು ಮಾಡುವನೆ ಪಾಪಿ ಪತಿಯಾಜ್ಞೆಯಿಂದಿಹಳೆ ಪರಮಪಾತಕಿಯು || (ಕೀ, ಸಂ. ೨೨೫) ಒಂದೆಡೆ ಲೋಕವ್ಯವಹಾರದ ಬಗ್ಗೆ ರೋಷ, ಇನ್ನೊಂದಡೆ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಬೇಕಾದ ಮಾರ್ಗದರ್ಶನ-ಏಕಕಾಲದಲ್ಲಿ ಎರಡು ಆಶಯಗಳ ಬೆಸುಗೆ ಇಲ್ಲಿನದು. ಆದರೆ ಇಂಥ ಕೀರ್ತನೆಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ