ಪುಟ:Kanakadasa darshana Vol 1 Pages 561-1028.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೩೬ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳಲ್ಲಿ ವಿಡಂಬನೆ ೭೩೭ ನಿರೀಕ್ಷಿಸುತ್ತಾರೆ. ಅವರು ವಿಧಿಬರಹವನ್ನು ನಂಬಿದವರಲ್ಲ, ದೈವಬಲವನ್ನು ನಂಬಿದವರು. ತಮ್ಮಂತೆ ತಾನು ನಂಬಿದ ದೈವವೂ ಋಜುಮಾರ್ಗದಲ್ಲಿರ ಬೇಕೆಂಬುದು ಅವರ ಅಭೀಷ್ಟೆ, ಅವರ ಬಹುಪಾಲು ಕೀರ್ತನೆಗಳಲ್ಲಿ ಪುರಾಣ ಪ್ರಸಿದ್ದ ಕಥನಗಳ ಪವಾಡ ಪ್ರಭಾವ ಪರಿಣಾಮಗಳ ಹುಸಿತನದ ಬಗೆಗೆ ಕಟಕಿಯಾಡುತ್ತಾರೆ. ಪುರುಷ-ಪ್ರಕೃತಿಯ ಸಮಾನತೆಯನ್ನು ದೈವಸ್ತರದಲ್ಲೂ ದರ್ಶಿಸುವ ವಿಶಾಲ ಮನೋಭಾವವನ್ನಿವರು ಪ್ರದರ್ಶಿಸುತ್ತಾರೆ. “ನಿನಗಿಂತ ಕುಂದೇನೋ ನಮ್ಮಮ್ಮ ಜಯಲಕ್ಷ್ಮಿ” (ಕೀ ೧೫) ಎನ್ನುವಲ್ಲಿ ಗಂಡು ಹೆಣ್ಣಿನ ಸಮಾನತೆಯ ಧೋರಣೆ ಹೆಡೆಬಿಚ್ಚಿದೆ. “ಆರು ಸಮಯಕ್ಕೊದಗಲಿಲ್ಲ ಮೋರೆಯನು ನೋಡುತ ಸುಮ್ಮನಿಹರೆಲ್ಲ” (ಕೀ. ೬೯) ಎಂಬ ಮಾತು ದೈವನಿರೀಕ್ಷೆಯ ಪರಿಯ ಅಸಹಾಯಕ ಪರಿಸ್ಥಿತಿಯನ್ನು ಎತ್ತಿ ಹಿಡಿದಿದೆ. ಸೇತುವೆಯ ಕಟ್ಟಿ ಲಂಕೆಗೆ ಹಾರಿ ಹನುಮಂತ ಖ್ಯಾತಿಯಿಂದಲಿ ರಾವಣನ ಕೊಲ್ಲಿಸಿ ಸೀತೆಯನು ತಂದು ಶ್ರೀರಾಮನಿಗೆ ಕೊಡಲವನ ಪ್ರೀತಿಯಲಿ ಕೌಪೀನ ಬಿಡಿಸಲಿಲ್ಲ ಹರಿಯು || ಇಲ್ಲೆಲ್ಲ ಕನಕರ ಭಕ್ತಿಜೀವನದ ಆರಂಭದ ತೊಳಲಾಟವಿದೆ. ನಿತ್ಯಕಾರ್ಯವನ್ನು ಹೊಸದೃಷ್ಟಿಯಿಂದ ಅಳೆಯುವ ಪರಿಯಿದೆ. ಇಷ್ಟಾದರೂ ಲೌಕಿಕದಲ್ಲಿ ಮುಳುಗಿ ತೇಲುವ ಜೀವವನ್ನು ಕಂಡು ರೇಗುತ್ತಾರೆ. ಹ್ಯಾಂಗೆ ನೀ ದಾಸನಾದಿ ಪ್ರಾಣಿ ಹ್ಯಾಂಗೆ ದಾಸನಾಗಿ ಹೀಂಗೆ ಸಂಸಾರದೊಳು ಮಂಗನಂದದಿ ಭವಭಂಗವ ಪಡುವವ || (ಕೀ. ಸಂ. ೧೦೭) ಇಲ್ಲಿ ಮಂಗನ ಸ್ವಭಾವ, ಸ್ವತಂತ್ರ ಪ್ರವೃತ್ತಿ, ಚಂಚಲತೆ, ಚಪಲತನವನ್ನು ಜೀವಿಗೆ ಸಾದೃಶ್ಯ ಕಲ್ಪಿಸಿರುವ ರೀತಿ ಪ್ರತಿಮಾತ್ಮಕವಾದ ಅರ್ಥಪರಂಪರೆ ಹೊರಹೊಮ್ಮಿಸುತ್ತದೆ. ತನ್ನ ಆದಿಯನ್ನರಿಯದೆ ತಲೆ ಹುಳಿತ ನಾಯಿಯಂತೆ ತಿರುಗುವ, ಹೊಟ್ಟೆಗಾಗಿ ಅಧಮರ ರಕ್ಷಣೆಗೆ ಮೊರೆ ಹೋಗುವ ಮಡದಿ ಮಕ್ಕಳನ್ನು ನಂಬುವ ಜೀವ-ಜೀವನಕ್ಕೆ ಸದ್ಗತಿ ದೊರೆಯುವುದಾದರೂ ಹೇಗೆಂದು ಕನಕರು ಇಲ್ಲಿ ಹಪಹಪಿಸುತ್ತಾರೆ. “ಸುತ್ತ ಕತ್ತಲ ಚಿಂತೆ ಮತ್ತೆ ಭಯದ ಭ್ರಾಂತಿ ಚಿತ್ತಜನಯ್ಯನು ದೊರೆವ ಬಗೆ ಕಾಣದೆ” ಒದ್ದಾಡುತ್ತಾರೆ. “ಗರುವತನ” ಹೊತ್ತು ಅಲೆವ “ಮಂಕುಜೀವ” ವನ್ನು ತಹಬದಿಗೆ ತರಲು ಯತ್ನಿಸುತ್ತಾರೆ. ಮುಂದೆ ಮನೆಮಠವನ್ನು ತೊರೆದು ದೈವದ ಹುಡುಕಾಟಕ್ಕೆ ತೊಡಗುವ ಕನಕದಾಸರಿಗೆ ದೈವಸಾಕ್ಷಾತ್ಕಾರ ಸುಲಭದಲ್ಲಿ ಆದಂತೆನಿಸುವುದಿಲ್ಲ. ಅಂಥ ಸಂದರ್ಭವೊಂದರಲ್ಲಿ ತೆಗೆದ ಉದ್ದಾರವಿದು : ಯಾಕಿಷ್ಟು ದಯವು ಇನಿತಿಲ್ಲ ಲೋಕಪಾವನ ಮೂರುತಿ ಬೇಕೆಂದು ನಿನ್ನ ಪಾದವ ನಂಬಿದವರ ಪರಾಕು ಮಾಡುವುದುಚಿತವೇ (ಕೀ. ಸಂ. ೪೩) ಕಂಡೂ ಕಾಣದಂತೆ ದೈವವನ್ನು ಮೃದುವಾಗಿ ಈ ಮಾತುಗಳು ಛೇಡಿಸುತ್ತವೆ. ಭಕ್ತನ ಬೇಡಿಕೆಯನ್ನು ಮನ್ನಿಸುವುದು ಭಗವಂತನ ಕರ್ತವ್ಯ. ಇಲ್ಲದಿದ್ದಲ್ಲಿ ದೇವರೆಂದು ಕರೆಸಿಕೊಳ್ಳುವ ಅರ್ಹತೆ ದೇವನಿಗೂ ಇಲ್ಲ. ಸಿದ್ದಿಯೂ ಯೋಗ್ಯತೆಯಿಂದಲೇ ಬಂದುದಾಗಿರಬೇಕೆಂಬ ಕನಕರ ವಾಂಛಯನ್ನು ನಾವಿಲ್ಲಿ ಕಾಣುತ್ತೇವೆ. ಬಹುಶಃ ಕ ನ ಕ ರಲ್ಲಿ ಈ ಬಗೆ ೦ರ ದೃಷ್ಟಿಕೋನಗಳು ಗಾಢವಾಗಿದ್ದುದರಿಂದಲೇ ಅವರು ದೇವರು ಎಂಬ ಭಾವುಕತೆಯನ್ನು ದಾಟಿ ದೈವವನ್ನು ಪ್ರಶ್ನಿಸುತ್ತಾರೆ, ವಿಡಂಬಿಸುತ್ತಾರೆ ; ಅವನಿಂದಲೂ ಶಿಸ್ತನ್ನು 111111111111111111111111111111111111111111111111111111111111111111111 111111111111111111111111111111111111111111111111111111111111111111 ಸಾಸಿರ ನಾಮದ ಒಡೆಯಾದಿಕೇಶವನ ಬೇಸರದೆ ಹೆಗಲ ಮೇಲಿರಿಸಿಕೊಂಡು ಆಕಾಶಮಾರ್ಗದಲಿ ಚರಿಸುವ ಗರುಡನಿಗೆ ನಾಸಿಕದ ಕೊನೆ ಡೊಂಕು ತಿದ್ದಲಿಲ್ಲ ಹರಿಯು || (ಕೀ, ಸಂ. ೭೧) ಸಹಾಯ ಮಾಡಿದವರನ್ನೇ ದೇವರು ಮರೆತು ಬಿಡುತ್ತಾನೆ. ಇನ್ನು ಸಾಮಾನ್ಯರ ಪಾಡೇನು? ಎಂಬ ಕೊಂಕು ಇಲ್ಲಿನದು. ಜವಾಬ್ದಾರಿ ತಪ್ಪಿಸಿಕೊಳ್ಳುವ ದೇವರು ಕನಕರ ದೃಷ್ಟಿಯಲ್ಲಿ ಅಪರಾಧಿಯೆ, ಕಾಯಬೇಕಾದವನು ಸದಾಕಾಲ ನಿದ್ರಾವಶನಾದರೆ ಹೊರಪ್ರಪಂಚದ ಅರಿವಾದರೂ ಅವನಿಗೇನು ತಿಳಿಯುತ್ತದೆ? “ಯಾಕೆ ನೀನಿಲ್ಲಿ ಪವಡಿಸಿದೆ ಹರಿಯೆ ಜಗದೀಶವಿಖ್ಯಾತ ಪಶ್ಚಿಮ ರಂಗನಾಥ” (ಕೀ. ೮೦) ಎಂಬ ಇಡೀ ಕೀರ್ತನೆಯಲ್ಲಿ ವಿಷ್ಣುವಿನ ದಶಾವತಾರ ಲೀಲೆಗಳ ಬಣ್ಣನೆಯಿದೆ. ಇದು ವರದಿಯಂತೆ ತೋರುವುದಾದರೂ ಭಕ್ತನ ಹೃದಯದ ಅಕ್ಕರೆಯ ಕಾಳಜಿಯ ಜೊತೆಗೆ ದೈವದ ನಿಲವಿನ ಬಗ್ಗೆ ವಿಷಾದಪೂರ್ಣ