ಪುಟ:Kanakadasa darshana Vol 1 Pages 561-1028.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೩೮ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳಲ್ಲಿ ವಿಡಂಬನೆ ೭೩೯ ವಿಡಂಬನೆಯ ಝಳಪಿದೆ. ಜಗತ್ತು ಅರಾಜಕತೆಯಲ್ಲಿ ನಲುಗುವಾಗ ನಿಶ್ಚಿಂತನಾಗಿ ನಿದ್ರಿಸುವ ದೇವರ ಸೋಂಬೇರಿತನ ಕರ್ತವ್ಯಹೀನತೆಯನ್ನು ಕಟುವಾಗಿ ವಿಮರ್ಶಿಸುತ್ತಾರೆ ಕನಕದಾಸರು. ಇದರಿಂದಾಗಿಯೇ ದೇವರೂ ಕನಕರಿಗೆ ಆದರ್ಶಪ್ರಾಯವೆನಿಸುವುದಿಲ್ಲ. ಗಾಂಭೀರವಿಲ್ಲದ ಕೃಷ್ಣ ಗೋಪಿಕಾ ಸ್ತ್ರೀಯರೊಂದಿಗೆ ಆಡಿದ ಚೆಲ್ಲಾಟವಾಡಿದವನು (ಕೀ, ೧೪೯), ಎತ್ತಿದ ಅವತಾರಗಳಲ್ಲೆಲ್ಲ ಸೂತ್ರಧಾರನಾಗಿ ಮೋಸದಿಂದ ಲೋಕವನ್ನು ನಿಯಂತ್ರಿಸಿದವನು, ಇವನ ಮಾತೂ ನಟನೆಯಾಗುತ್ತದೆ-ಎಂದೆಲ್ಲ ಆರೋಪಿಸುವ ಕನಕದಾಸರು ಕಣ್ಣಿಗೆ ಹರಿಯ ಮಹಿಮೆಯನ್ನು ಅಳೆಯುವುದು ಸುಲಭವಲ್ಲ ಎಂಬ ವಸ್ತುಜ್ಞಾನವು ಇದೆ. “ಮುತ್ತು ಬಂದಿದೆ ಕೇರಿಗೆ ಜನರು ಕೇಳಿ ಭಕ್ತಿಯುಳ್ಳವರೆಲ್ಲ ಕಟ್ಟಿಕೊಳ್ಳಿ ಸೆರಗಿನಲ್ಲಿ” (ಕೇ. ೧೩೯) ಎಂದು ಹೇಳುವಲ್ಲಿ ಮುತ್ತಿನ ಪರಿಶುದ್ಧತೆ, ನಿರ್ಮಲತೆ, ಭಕ್ತಿಯ ಅನನ್ಯಲಾಭವನ್ನು ಸಾಂಕೇತಿಸಲಾಗಿದೆ. ಕವಿಯ ಸಾದೃಶ್ಯಜ್ಞಾನ, ಚಾತುರ್ಯ ಉಕ್ತಿ ಮೋಹಕವಾಗಿ ಮನಸೆಳೆಯುತ್ತದೆ. ಇಷ್ಟಾದರೂ ಯಾರನ್ನು ನಂಬುವಂತಿಲ್ಲ, ಆಶ್ರಯಿಸುವಂತಿಲ್ಲ ಏಕೆಂದರೆ ಜನಕೆ ಹಿತದವನೆಂದು ನಂಬಬಹುದೇ ಹಿಂದೆ ತನಯ ಪ್ರಹ್ಲಾದನಿಗೆ ಪಿತ ಮುನಿದನು ಜನನಿಯೇ ರಕ್ಷಿಪಳೆಂತೆಂಬೆನೆ ತಿಳಿದು ಆ ಕುಂತಿ ತನಯ ರಾಧೇಯನಿಗೆ ಎರಡೆಣಿಸಿದ ಮೇಲೆ || (ಕೀ. ಸಂ. ೧೧೪) ಹೆತ್ತ ತಾಯಿ, ಹುಟ್ಟಿಸಿದ ತಂದೆಗಿಂತ ಹತ್ತಿರದವರಾರೂ ಇಲ್ಲ ಅವರು ಮುಳಿಯುವುದು ವಿಸಂಗತಿ ಆದರೂ ವಾಸ್ತವ ಸತ್ಯ. ಬರುವ ಎಡರು ಯಾರಿಂದಲೂ, ಯಾವ ರೂಪದಿಂದಲಾದರೂ ಬರಬಹುದು. ಪ್ರೇರಣೆಯಷ್ಟೇ ಮುಖ್ಯವಾಗಿ ದೈವಪರ ಚಿಂತನೆಯಲ್ಲಿ ತೊಡಗಿ ಸಾಧನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದೇ ಕ್ಷೇಮಕರವೆಂದು ಭಕ್ತರಿಗೆ ಕನಕರ ಸಂದೇಶವಾಚನ. ಭಕ್ತನ ಸಾಧನೆಗೆ ಅಡ್ಡಿಯಾಗುವುದು ಸಂಸಾರ. ಇದು ಕನಕದಾಸರನ್ನು ಕಾಡಿದ್ದಿದೆ. ಇವರಿಗೆ ಸಂಸಾರದ ಬಗ್ಗೆ ಒಂದು ಬಗೆಯ ನಿಷ್ಠುರ ತಿರಸ್ಕಾರವಿದೆ. ಎಲ್ಲಿಯೂ ಪ್ರಗತಿಪರ ನಿಲುವು ಕಾಣಸಿಗದು. ಸಂಸಾರದಲ್ಲಿದ್ದು ಮೋಕ್ಷವನ್ನು ಸಂಪಾದಿಸಬಹುದೆಂದು ವಚನಕಾರರು ಸ್ಪಷ್ಟಿಕರಿಸಿದ್ದರೆ, ಕನಕರು ಸಂಸಾರ ಮುಕ್ತತೆಯನ್ನು ಪ್ರಯಾಸಪೂರ್ವಕವಾಗಿ ಒಪ್ಪಿದಂತೆ ತೋರುತ್ತದೆ. ಇವರು ಬದುಕನ್ನು ದೊಡ್ಡದಾಗಿ ಗ್ರಹಿಸುವ ಹಿಂದೆ ನೈಜತೆಯ ಕೊರತೆ ಇದೆ ಎಂದೇ ಹೇಳಬೇಕಾಗುತ್ತದೆ. ಆಧುನಿಕ ಮನಸ್ಸಿಗೆ ಈ ಧೋರಣೆಯನ್ನು ಸಾರಾಸಗಟಾಗಿ ಒಪ್ಪುವುದು ಕಷ್ಟವಾಗುತ್ತದೆ. ಸಂಘಜೀವನಕ್ಕೆ ಹೊರತಾಗಿ ಮಾನವ ಜೀವಿಸಲಾರ ಅಲ್ಲವೆ? ಅದರಲ್ಲೂ ಸತಿಯ ಪಾತ್ರದ ಬಗ್ಗೆ ಕನಕದಾಸರಿಗೆ ಕಸಿವಿಸಿ ಗುಮಾನಿಗಳಿರುವುದನ್ನು ನೋಡಿದರೆ ಅಚ್ಚರಿಯಾಗುತ್ತದೆ : ಮಂಡಲದೊಳಗೊಬ್ಬ ಜಾರಸ್ತೀಯಳು ತನ್ನ ಗಂಡನರಿಕೆಯಿಂದ ವ್ಯಭಿಚಾರಗೈಯೆ ಮಂಡಲ ಪತಿಯು ಶೋಧಿಸಿ ಹಿಡಿದೆಳೆತಂದು ಚಂಡಿ ಮಾಡಲು ಬೆದರುವಳೆ (ಕೀ. ಸಂ. ೫೦) ಗುರುಬಂಧು ಬುಧಜನರು ನಿಂತಗ್ನಿಸಾಕ್ಷಾಗಿ ಕರವಿಡಿದು ಧಾರೆಯನೆರೆದುಕೊಂಡ ತರುಣಿ ಇನಿಯನ ಹರಣ ಹೋಗಲು ತಾ ಕಂಡು ಬರುವುದಕ್ಕಂಜಿ ದಾರುಗತಿಯೆಂಬುವಳು (ಕೀ, ಸಂ. ೭೦) ಪತಿವ್ರತೆಯರೆಂಬುವರು ಶತಸಹಸ್ರಕೆ ಒಂದು ಮಿತಿಮೀರಿ ಇಹರಯ್ಯ ಇತರ ಜನರು ಮತಿಗೆಟ್ಟು ಮನಸೋತು ಅನ್ಯಪುರುಷರ ಕೂಡಿ ಗತಿಗೆಟ್ಟು ಪೋಗುವರು ಪರಲೋಕ ತೊರೆದು (ಕೀ, ಸಂ. ೧೭೨) ಇವುಗಳು ಹೆಣ್ಣಿನ ಸ್ಥಾನಮಾನ ಮತ್ತು ಅಂದಿನ ಸಮಾಜದ ಧೋರಣೆಯನ್ನು ತಿಳಿಸುತ್ತವೆ. ಇಲ್ಲೆಲ್ಲ ಹೆಣ್ಣಿನ ಮನಸ್ಥಿತಿಯನ್ನು ಕನಕರು ರೋಚಕವಾಗಿ ವಿಡಂಬಿಸಿದ್ದಾರೆ ಎಂದುಕೊಂಡೂ ಹೆಣ್ಣಿನ ಬಗ್ಗೆ ಅವರ ಸಾಂಪ್ರದಾಯಿಕ ದೃಷ್ಟಿಕೋನವನ್ನು ಇವು ಪ್ರಶ್ನಿಸುವಂತೆ ಮಾಡುತ್ತವೆ. “ಸತಿಯಿಲ್ಲದ ಸಂಪದವು ಏಕೆ” ಎಂದು ಕೇಳುವ ಮಾತೂ ಕೇವಲ ಹೇಳಿಕೆಯಾಗುತ್ತದೆ. ಕೊನೆಗೆ ಆ ಸತಿಗೆ “ಪತಿಯ ಗತಿ'ಯೆಂದು, ಪತಿಯ ನೆರಳಲ್ಲಿ ಅವನಾಜ್ಞೆಗೆ ಕಾದು ನಿಲ್ಲಬೇಕೆಂದು ತಾಕೀತು ಮಾಡುವುದನ್ನು ನೋಡಿದರೆ ಮೂಲಭೂತವಾದ ಅವರ ನಿಲವು ಯಾವ ರೀತಿಯದು ಎಂದು ನಿಚ್ಚಳವಾಗುತ್ತದೆ ; ಇಹವನ್ನು ಗ್ರಹಿಸುವ ಅವರ ದೃಷ್ಟಿಯನ್ನು ಗುಮಾನಿಯಿಂದ ಸ್ತ್ರೀ ವರ್ಗ ನೋಡುವಂತಾಗುತ್ತದೆ.