ಪುಟ:Kanakadasa darshana Vol 1 Pages 561-1028.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೭೮ ಕನಕ ಸಾಹಿತ್ಯ ದರ್ಶನ-೧ ಕಿಂಡಿಯಲ್ಲಿ ನೋಡಿದ ಕವಿತೆಗಳು ೫೭೯ ರೀತಿ, ಕಾವ್ಯದ ವಸ್ತು ಇತ್ಯಾದಿಯೆಲ್ಲವೂ ಭಿನ್ನವಾದುದು. ಈ ಕಾಲದ ಸಾಹಿತ್ಯದಲ್ಲಿ ನಾಯಕರಿಗೆ ದೊರೆಯುವ ಸಮಾಧಾನ ಸಾರ್ವತ್ರಿಕ ಸಮಾಧಾನವೂ ಆಗಿರುವ ಸಂಭಾವ್ಯತೆಯಿದೆ. ಕನಕದಾಸರ ನಳ ಚರಿತ್ರೆಯಲ್ಲಿರುವ ಸಾಮಾನ್ಯ ಚಹರೆಯೆಂದರೆ-ಈ ರೀತಿಯ ಸಾಮಾನ್ಯ ಜನತೆಯ ಸ್ವಗುರುತು. ಇದು ಕೃತಿಯಾಳದಲ್ಲಿ ಬೇರು ಬಿಟ್ಟು, ಕೃತಿಯ ಒಟ್ಟು ಸಂಗತಿಗಳನ್ನು ನಿರೂಪಿಸುತ್ತದೆ. 'ನಳಚರಿತ್ರೆಯಲ್ಲಿ ಬರುವ 'ನಳ-ದಮಯಂತಿ'ಯರ ಸಂಕಟಗಳು ಒಂದು ಕಾಲಘಟ್ಟದ ಒಂದು ಸಂಸ್ಕೃತಿಯ ಸಂಕಟಗಳಾಗಿ ಬೇರುಬಿಡುವುದು. ಹೀಗೆ ವಿಜಯನಗರ ಕಾಲದ ಸನ್ನಿವೇಶದಲ್ಲಿ ಬಯಸಿದ ನಾಯಕ-ನಾಯಕಿಯರ ಸ್ಥಿತಿಯೇ ಹೀಗಿದೆ : ಕೃತಿ ಜಗತ್ತಿನಲ್ಲಿ ಸ್ವಾಯತ್ತವಾದ, ಆದರೆ ಕಾಲಬಯಸುವ ಸ್ಥಿತಿಯಲ್ಲಿ ಸಾರ್ವತ್ರಿಕವಾದ ಸಂಗತಿಯೂ ಕೂಡಾ ಇದಾಗಿದೆ.೧೯ ಈ ಮೊದಲೇ ಸೂಚಿಸಲಾಗಿರುವಂತೆ ಕನಕದಾಸರು 'ನಳಚರಿತ್ರೆ'ಯಂಥ ಕೃತಿಯಲ್ಲಿ ವಿಶಿಷ್ಟವಾಗಿ ಅನುಕರಣೆಯ ಕ್ರಿಯೆಯನ್ನು ಮಾಡುತ್ತಾರೆ. ಪ್ರಾಚೀನ ಜೀವನ ಮೌಲ್ಯದ ನಿರಂತರತೆಯು ಈ ರೀತಿಯ ಅನುಕರಣೆಯ ಒಂದು ಸ್ವರೂಪವಾಗಿ ನಳದಮಯಂತಿಯರ ಕತೆಯಲ್ಲಿ ರೂಪಿತವಾಗಿದೆ. ಇಲ್ಲಿ ಪ್ರತಿಪಾದಿತವಾಗಿರುವ ಪುಷ್ಕರನ ಕೇಡು ನಾಶವಾಗುವುದು ನಳನ ಉದಾತ್ತತೆಯಲ್ಲಿ. ಭಾರತೀಯ ಮೌಲ್ಯ ಇದನ್ನು ನಂಬಿಕೊಂಡು ಬಂದಿದೆ. ಇನ್ನೊಂದು ಕನಕದಾಸರು ಪ್ರತಿಪಾದಿಸುವುದು ಅರಸು ಮನೆತನದಲ್ಲಿ ಯಾವ ರೀತಿಯಲ್ಲಿ ಕೇಡು, ಒಳ್ಳೆಯತನ, ಇತ್ಯಾದಿ ನುಸುಳಿಕೊಂಡಿವೆ ಎನ್ನುವುದನ್ನು, ಹೀಗಾಗಿ, ಕನಕದಾಸರ ಕೃತಿಯಲ್ಲಿ ಲೌಕಿಕ ಮತ್ತು ಆಗಮಿಕದ ಸ್ಪಷ್ಟ ಸೂಚನೆಯೂ ಕೂಡಾ ಹುದುಗಿದೆ. ಲೌಕಿಕದಲ್ಲಿ ಇರುವ ಒಳ್ಳೆಯತನ ಉಳಿಯುತ್ತದೆ. ಕೇಡು ನಾಶವಾಗುತ್ತದೆ ಎನ್ನುವುದನ್ನು ನಂಬುವ ಕನಕದಾಸರ ವೈಚಾರಿಕ ನೆಲೆಯು ಈ ಮೂಲಕ ಪ್ರತಿಷ್ಠಾಪನೆಗೊಳ್ಳುತ್ತದೆ. ಕತೆಗಾರರಾದ ಕನಕದಾಸರು 'ಮೋಹನ ತರಂಗಿಣಿ' 'ನಳಚರಿತ್ರೆ' ಕೃತಿಯಲ್ಲಿ ನಾಯಕ-ನಾಯಕಿಯರ ಮೂಲಕ ಮೌಲ್ಯದ ವಿಜೃಂಭಣೆಯನ್ನು ಪ್ರತಿಪಾದಿಸುತ್ತಾರೆ. ಹಾಗಾಗಿ, ಈ ಕೃತಿಗಳಲ್ಲಿರುವ ಮುಖ್ಯ ಸಂಗತಿಗಳೆಂದರೆ : ಕತೆಗಾರರಾದ ಕನಕದಾಸರು, ಕತೆಯ ಸ್ವರೂಪ ಮತ್ತು ಅದನ್ನು ಒಪ್ಪುವ ಸಾಮಾಜಿಕರ ನಡುವೆ ಒಂದು ರೀತಿಯ ನಿರ್ದಿಷ್ಟ ಒಪ್ಪಂದವಿದೆ. ಸಾಮಾಜಿಕರಿಗಾಗಿ ಹೇಳುವ ಈ ರೀತಿಯ ಕತೆಯ ಚೌಕಟ್ಟು ಕೂಡಾ ಸಂವಹನಕ್ಕೆ ಅನುಕೂಲವನ್ನು ಕಲ್ಪಿಸುವಂತಹದು. ಆದರೆ ಕನಕದಾಸರು ಕೃತಿಗಳ ಮೂಲಕ ತಮ್ಮ ಸೂಚನೆಗಳನ್ನು ಸೂಚಿಸುವಾಗ, ಅವರ ಗ್ರಹಿಕೆಯು ವ್ಯಕ್ತಿಯಾಗಿ ಪ್ರಮುಖ್ಯತೆಯನ್ನು ಪಡೆದಿದೆ. ಸಾಮಾಜಿಕರು ನಂಬುವ ಮತ್ತು ಅವರ ಜೀವನಕ್ರಮಕ್ಕೆ ಅನುಸಾರವಾಗಿ ಕೃತಿಯ ಆದರ್ಶವು ಸೃಷ್ಟಿಯಾದಾಗ ಕೃತಿಯು ಬೇಗನೆ ತನ್ನನ್ನು ತಾನು ಬಿಟ್ಟು ಕೊಡುತ್ತದೆ. ಹನ್ನೆರಡನೆಯ ಶತಮಾನದ ಅನಂತರ ಕನ್ನಡದ ಸಾಹಿತ್ಯಕ್ಕೆ ಮೌಖಿಕ ಪರಂಪರೆಯ ಗುಣವೊಂದಿದೆ. ಈ ರೀತಿಯ ಮೌಖಿಕ ಪರಂಪರೆಯ ಗುಣವೊಂದಿರುವುದರಿಂದಲೇ ಇದಕ್ಕೆ ವಿವರಣಾತ್ಮಕಬಂಧವೂ ಸಾಧ್ಯವಾಯಿತು. ಕನಕದಾಸರ 'ನಳಚರಿತ್ರೆ', 'ಮೋಹನ ತರಂಗಿಣಿ' ಕೃತಿಗಳು ಈ ಬಗೆಯವು. ಈ ರೀತಿಯ ಕೃತಿಯ ನಾಯಕರಾಗಲೀ ಕೃತಿಯ ಆದರ್ಶವಾಗಲೀ ಜನಾಂಗದ ಆಸೆ, ಆಸಕ್ತಿಯನ್ನು ಈಡೇರಿಸುವಂತಿದ್ದರೆ ಸಾಮಾಜಿಕರು ಈ ರೀತಿಯ ಕೃತಿಯನ್ನು ಮೆಚ್ಚುತ್ತಾರೆ ಕೂಡಾ. ಕನಕದಾಸರ 'ಮೋಹನ ತರಂಗಿಣಿ' ಮತ್ತು 'ನಳಚರಿತ್ರೆ' ಎರಡೂ ಕೃತಿಗಳಿಗೂ ಒಂದು ಸೈದ್ದಾಂತಿಕ ಆದರ್ಶವಿದೆ. ಈ ಆದರ್ಶವನ್ನು ಕನಕದಾಸರು ಸಮಷ್ಟಿ ಪ್ರಜ್ಞೆಯ ಹಿನ್ನೆಲೆಯಲ್ಲಿ ಗ್ರಹಿಸುತ್ತಾರೆ. ಲುಕಾಕ್ಸನ ಪ್ರಕಾರ, ಈ ರೀತಿಯ ಕಾವ್ಯ ವಿಶಾಲವಾದ ಜಗತ್ತನ್ನು ಒಳಗೊಂಡಿದೆ. ಸಹಜವಾಗಿಯೇ ಈ ವಿಶಾಲ ಜಗತ್ತಿನಲ್ಲಿ ಕಾವ್ಯದ ನಿರೂಪಕ ಮತ್ತು ಕೇಳುಗ ಕ್ರಿಯಾತ್ಮಕವಾಗಿ ಮಿಲನ ಹೊಂದುತ್ತಾರೆ ಮತ್ತು ಘಟನೆಗಳಲ್ಲಿ ಭಾಗಿಯಾಗುತ್ತಾರೆ. ಕಾವ್ಯದ ಘಟನೆಗಳ ಜೊತೆಯಲ್ಲಿ ಓಡಾಡುವ ಕ್ರಿಯೆಯೂ ಒಂದು ಸಮಷ್ಟಿ ಪ್ರಜ್ಞೆಯ ನೆಲೆಯನ್ನು ಸೂಚಿಸುತ್ತದೆ.21 ಕಪಟರಾಳ ಕೃಷ್ಣರಾಯರು ಹೇಳಿರುವಂತೆ, “ಅಂತೂ ದಾಸ ಸಾಹಿತ್ಯವನ್ನು ಯಾವ ದೃಷ್ಟಿಯಿಂದ ನೋಡಿದರೂ ಅದಕ್ಕೆ ವೈಷ್ಣವ ಯತಿಗಳೇ ಮೂಲ ಕಾರಣವೆಂದೂ, ಆ ಯತಿಗಳಿಗೆ ರಾಜಾಶ್ರಯ ಕಾರಣಯೆಂದೂ ತಿಳಿಯುತ್ತದೆ.”22 ಇದರಿಂದಾಗಿ ಒಟ್ಟು ಸಾಮಾಜಿಕ ಬದಲಾವಣೆಯ ಪರಿಣಾಮವನ್ನು ಸೂಕ್ಷ್ಮವಾಗಿ ಗ್ರಹಿಸುತ್ತಿದ್ದ ಕನಕದಾಸರಿಗೆ 'ಮೋಹನ ತರಂಗಿಣಿ' 'ನಳಚರಿತ್ರೆಯಂಥಾ ಕೃತಿರಚನೆ ಸಾಧ್ಯವಾಗುತ್ತದೆ. ಇದೊಂದು ಚಾರಿತ್ರಿಕ ಬದಲಾವಣೆಯ ಹಿನ್ನೆಲೆಯಲ್ಲಿ ರೂಪಿತವಾದ ಸತ್ಯ. ವಿಸ್ತ್ರತ ಕ್ಯಾನ್‌ವಾಸುಳ್ಳ 'ಮೋಹನತರಂಗಿಣಿ' 'ನಳಚರಿತ್ರೆ' ಯಂತಹ ಕೃತಿಯನ್ನು ರಚಿಸಿದ ಕನಕದಾಸರು ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ.