ಪುಟ:Kanakadasa darshana Vol 1 Pages 561-1028.pdf/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೪೦ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳಲ್ಲಿ ವಿಡಂಬನೆ ೭೪೧ ಬಡತನ ಬಹುಕೆಟ್ಟದ್ದು. ಇದು ಕರ್ಮಫಲ ಇದನ್ನು ಭುಜಿಸಿ ಸವೆಸುವುದೇ ಶ್ರೇಯಸ್ಕರ. ಇದನ್ನರಿಯದೆ ಅವರಿವರ ಮರೆಹೊಕ್ಕು ಹಲುಬುವುದರಿಂದ ಬಡತನ ಹೋಗದು. “ಕಳ್ಳತನ ಮಾಡಿ ಒಡಲು ಹೊರೆಯಲು ಬೇಡ” (ಕೀ. ೩೬), ಬಡತನ ಬಂದಾಗ ನೆಂಟರ ಬಾಗಿಲನು ಸೇರಬಾರದು” (ಕೀ, ೩೩), “ಸಿರಿಯ ಮೆಚ್ಚಿ ಮೆರೆಯದಿರು, ಬರಿದೆ ಹೊತ್ತು ಕಳೆಯದಿರು” (ಕೀ. ೩೨) ಮುಂತಾದ ಹೇಳಿಕೆಗಳನ್ನು ಬಡತನಕ್ಕೆ ಪೂರಕವಾಗಿರುವಂಥವು. ವಾಸ್ತವದಲ್ಲಿ “ಉದಯಾಸ್ತಮಾನವೆಂಬ ಎರಡು ಕೊಳಗವ ಮಾಡಿ ಆಯುಷ್ಯದ ರಾಸಿಯನು ಅಳೆಯಿರಯ್ಯಾ” (ಕೀ, ೨) ಎಂಬ ಅರಿವು ಬೇಕು. ಕಿರಿದಾದ ಬದುಕಿನ ಅವಧಿಯಲ್ಲಿ ಸತ್ಯವನ್ನು ಕಾಣುವ, ಜ್ಞಾನದ ಬೆಳೆಯ ಫಸಲು ತೆಗೆಯುವಂತಾಗಬೇಕು. ನಮ್ಮ ಸಂಗಡ ಬರುವುದು “ಕೀರ್ತಿ ಅಪಕೀರ್ತಿ ಎರಡೆ”. ಇಷ್ಟಕ್ಕಾಗಿ ಪರದಾಡುವ ಮಾನವರಿಗೆ ಕನಕದಾಸರ ಎಚ್ಚರಿಕೆಯ ಗಂಟೆ. ಎನ್ನದೆಂದು ತನ್ನದೆಂದು ಹೊನ್ನುಹೆಣ್ಣು ಮಣ್ಣಿಗಾಗಿ ಘನ್ನವಾಗಿ ಬಾಯಿ ಬಿಡುತ ಬಂದೆ ಮೋಹವಾ ಸನ್ನುತದಲ್ಲಿ ಪರಹಿತಾರ್ಥ ಮಾಡಿ ಪುಣ್ಯ ಪಡೆಯಿನಿತು ಮುಂದೆ ಕಿರುಕುಳದ ಕೂಪದಲಿ ಕೆಡಲುಬೇಡ | (ಕೀ. ಸಂ. ೬೬) ಈ ಮಾತುಗಳು ಸ೦ತನ ವಾಣಿಯಂತೆ ಜನ ಮನ ವನ್ನು ಜಾಗೃತಗೊಳಿಸುತ್ತದೆ. ಇದಕ್ಕಾಗಿ ಸತ್ಯವ್ರತ ಚಿತ್ತಶುದ್ದಿ ತನುಶುದ್ದಿ ಆತ್ಮನಿವೇದಕ ಶಕ್ತಿಗಳು ಬೇಕು, ಅಷ್ಟೆ, ಮನುಷ್ಯನನ್ನು ಹಾದಿ ತಪ್ಪಿಸುವುದು ಹಾಳು ಮಾಡುವುದು ಹಣ. ಇದು ಮಾನವನನ್ನು ಕುದ್ರನನ್ನಾಗಿಸುತ್ತದೆ, ಅಹಂಕಾರಿಯನ್ನಾಗಿಸುತ್ತದೆ; ಹೀನನನ್ನಾಗಿಸುತ್ತದೆ: ದೀನನನ್ನಾಗಿಸುತ್ತದೆ. ಇಷ್ಟೆಲ್ಲಾ ವ್ಯಂಜಿಸುವ ಜಾಗೃತಮನಸ್ಕರಾಗಿರುವ ಕನಕದಾಸರಿಗೆ ತಾವು ಬಾಳಿದ ಸಾಮಾಜಿಕ ಪರಿಸರದಿಂದ ಪಾರಾಗುವುದು ಸಾಧ್ಯವಾಗಿಲ್ಲ. ವರ್ಣವ್ಯವಸ್ಥೆಯ ಬಗ್ಗೆ ಅವರು ತೋರಿದ ಪ್ರತಿಭಟನೆಯ ಸೊಲ್ಲು ಬೆನ್ನು ಬಿಡದ ಕರ್ಮಸಿದ್ಧಾಂತವನ್ನೋ ಇಲ್ಲವೆ ಅರ್ಥವ್ಯವಸ್ಥೆಯ ಅಸಮಾನತೆಯನ್ನೋ ಕಂಡು ಆಡಿದ ಮಾತುಗಳಾಗಿ ತೋರುತ್ತದೇ ವಿನಾ ಬೇರೆಯಲ್ಲ. ಅವರೆಲ್ಲಾ ಜಿಜ್ಞಾಸೆಯು” ಸಿರಿಯು ಸ್ಥಿರವಲ್ಲ” ಎಂಬ ವ್ಯಾಖ್ಯಾನದ ಕಡೆಗೆ ಮೊಗಮಾಡಿ ನಿಲ್ಲುವುದರಲ್ಲೇ ತೃಪ್ತಿಪಟ್ಟುಕೊಳ್ಳುತ್ತದೆ. ಕನಕದಾಸರು ಹೆಣೆದುಕೊಂಡಿರುವ ಮಾನವ ಸಂಬಂಧಗಳನ್ನು ನವಿರಾಗಿ ವಿಡಂಬಿಸುವುದನ್ನು, ಮೂದಲಿಸುವುದನ್ನು ನೋಡಬಹುದು. “ಮಾನವ ಮನೆಯೊಳಗೆ ಇರಬಹುದೆ ಕೋವಿದರು” (ಕೀ. ೧೧೧) ಎಂಬ ಕೀರ್ತನೆಯೊಂದು ಮಾವನ ಮನೆಯಲ್ಲಿ ಅಳಿಯನಿಗೆ ಸಿಗುವ ಆತಿಥ್ಯದ ಪ್ರಮಾಣವನ್ನು ಅಪಹಾಸ್ಯದ ಮೂಲಕ ವ್ಯಂಜಿಸುತ್ತದೆ. ಒಂದೊಂದು ತಿಂಗಳು ಬಹುಮಾನ ನಡತೆಗಳು ಒಂದೆರಡು ತಿಂಗಳೊಳಗೆ ಹಿತವಾದನೆ ಒಂದೊಂದಭದ್ರನುಡಿ ಒಳಗೊಳಗೆ ಹುಟ್ಟಿದವು ಸಂದೇಹವೇಕೆ ಸಂಸಾರಿಗಳಿಗೆ || ನೆಂಟರು ಇನ್ನಷ್ಟುದಿನ ಇರಲಿ ಎನ್ನುವ ಭಾವನೆ ಇದ್ದಾಗಲೇ ಅವರು ಜಾಗವನ್ನು ಖಾಲಿ ಮಾಡುವುದು ಸೂಕ್ತ ಮತ್ತು ಜಾಣತನ. ಇಲ್ಲದಿದ್ದಲ್ಲಿ ಕುಡಿಯೊಡೆದ ಕುಹಕನುಡಿ ಹೆಮ್ಮರವಾಗಿ ಅವರ ಅಭಿಮಾನವನ್ನು ಸುಟ್ಟುಹಾಕಿ ಬಿಡುತ್ತದೆ. ಇಂಥ ಸಂದರ್ಭ ಕಂಡು ಕನಕದಾಸರು “ಭಾಮೆಯಳ ತಂದೆ ಮನೆಯಲಿ ಜೀವಿಪುದಕ್ಕಿಂತ ಸಾಯ್ತುದೇ ಲೇಸು” ಎಂಬ ಕಹಿಯನ್ನು ಪ್ರಕಟಿಸುತ್ತಾರೆ. ಅಲ್ಲದೆ ಹೀಗಿರುವುದಕ್ಕಿಂತ “ಗೋಪಾಳ ಲೇಸು” ಎಂದೂ ತೀರ್ಮಾನಿಸುತ್ತಾರೆ. ಮುಂದುವರಿದು : ಪರರ ಸೇರಲುಬಹುದು ಪತಿತರಲ್ಲಿರಬಹುದು ಕೊಲೆಪಾತಕರ ಗರಗಸಕೆ ಶಿರವೊಡ್ಡಬಹುದು ತರುಣಿಯಳನೆಳೆತಂದ ಮನೆಯ ವಾಸದಕ್ಕಿಂತ ತರುಗಿರಿ ಗುಹದಿ ಇದ್ದು ತಪಸಿಯಾಗಿರಬಹುದು || ಎಂದು ಹೇಳಿರುವುದು ಸರ್ವಕಾಲಕ್ಕೂ ಅನ್ವಯವಾಗುವಂಥದ್ದು. ಹೀಗೆಯೆ ಕಲಿಯುಗದ ಮಹಿಮೆಯನ್ನು ಹೇಳುವ ಕೀರ್ತನೆಯಲ್ಲಿ (ಕೀ, ೧೭೨) ಕಲಿಯುಗದ ವೈಪರೀತ್ಯಗಳ ಪಟ್ಟಿ ಇದೆ. ಅತ್ತೆ ಸೊಸೆಯಾಗಿ, ಸೊಸೆ ಅತ್ತೆಯಾಗಿ ಪರಸ್ಪರ ಶೋಷಿಸುವುದು, ಪತಿಗೆ ಹೆಂಡತಿಯ ಗಂಡನಾಗಿ ವರ್ತಿಸುವುದು, ನೀಚರೇ ಅರ್ಥ ಸಂಪನ್ನರಾಗಿ ಮೆರೆಯುವುದು, ಹೆಚ್ಚಿದ ವೈರಿವರ್ಗ ಮುಂತಾದ ವಿಚಿತ್ರವಾದರೂ ನಿಜಸಂಗತಿಗಳನ್ನು ಧ್ವನಿಪೂರ್ಣವಾಗಿ ವಿಡಂಬಿಸಿದ್ದಾರೆ. “ಅಪುತ್ರಸಸ್ಯ ಗತಿರ್ನಾಸ್ತಿ' ಎಂಬ ಆದ್ಯೋಕ್ತಿಯ ಅನಿವಾಯ್ಯತೆಯನ್ನು (ಕೀ, ೭೬) ಗ್ರಹಿಸಿ, 'ವಗ ನಿಂದ ಗ ತಿಯುಂಟೆ ಜಗದೊಳು ನಿಗ ವಾರ್ಥ ತತ್ತ್ವವಿಚಾರದಿಂದಲ್ಲದೆ' ಎಂದು ಪ್ರತಿಕ್ರಿಯಿಸುವ ಮೂಲಕ ರೂಢಿಗತ ನಂಬಿಕೆಯ ವಿರುದ್ದ ಸದ್ದು ಮಾಡುತ್ತಾರೆ. ಒಟ್ಟಿನಲ್ಲಿ ಕನಕದಾಸರು ಇಹವನ್ನು ತ್ಯಜಿಸಿ ಪರದತ್ತ ದಾಪುಗಾಲು ಹಾಕುವ ದಾರಿಯಲ್ಲಿ ತಮ್ಮ ಅನುಭವ-ಅನುಭಾವದ ಹೆಜ್ಜೆಗಳನ್ನು ಸಾಹಿತ್ಯಕ