ಪುಟ:Kanakadasa darshana Vol 1 Pages 561-1028.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೪೨ ಕನಕ ಸಾಹಿತ್ಯ ದರ್ಶನ-೧ ಕೃತಿಗಳಲ್ಲಿ ಮೂಡಿಸಿದ್ದಾರೆ. ಇವರ ಕೀರ್ತನೆಗಳಲ್ಲಿ ಕಂಡು ಬರುವ ವಿಡಂಬನೆಯೆ ಒಂದು ತೂಕವಾದರೆ, ವಿಡಂಬನೆಯ ಕೃತಿಯೆಂದೇ ಹೆಸರಾಗಿರುವ 'ರಾಮಧಾನ್ಯಚರಿತ್ರೆ'ಯೆ ಇನ್ನೊಂದು ತೂಕವಾಗಿ ಗಮನಾರ್ಹವಾಗುತ್ತವೆ. ಇಲ್ಲೆಲ್ಲ ನಿಚ್ಚಳವಾಗಿ ತಾವು ಬದುಕನ್ನು ಕಂಡುಂಡ ಬಗೆಯನ್ನು ಇವರು ಬಣ್ಣಿಸುತ್ತಾರೆ. ಹಾಗೆ ಮಾಡುವಾಗಲೆಲ್ಲ ಅವರ ಮಾತುಗಳಲ್ಲಿ ಅಭಿವ್ಯಕ್ತಿಯಲ್ಲಿ ವಿಡಂಬನೆ ಹಾಸು ಹೊಕ್ಕಾಗಿರುವುದು ಗೋಚರವಾಗುತ್ತದೆ. ವಿಡಂಬನೆಯೆ ಕನಕದಾಸರ ಕಾವ್ಯಶಕ್ತಿಯ ಜೀವಸೆಲೆ ಎಂದರೆ ಉತ್ತೇಕ್ಷೆಯಲ್ಲ. ಅಷ್ಟರಮಟ್ಟಿಗೆ ನುಡಿಕಾಕನ್ನು ನೋಡಿದ್ದಕ್ಕೆಲ್ಲ ಕನಕದಾಸರು ಬಳಸುತ್ತಾರೆ. ಇಷ್ಟು ಸಾಂದ್ರವಾಗಿ ವಿಡಂಬನಕ್ರಿಯೆ ಕಾವ್ಯವಾಗಿರುವುದು ಕನ್ನಡ ಸಾಹಿತ್ಯದಲ್ಲಿ ಅಷ್ಟೇಕೆ ವಿಶ್ವಸಾಹಿತ್ಯದಲ್ಲಿ ದೊರೆಯುವ ವಿರಳ ಉದಾಹರಣೆಗಳಲ್ಲಿ ಇದೂ ಒಂದು. ಕನಕದಾಸರಲ್ಲಿ ಬಂಡಾಯದ ದನಿ ಡಾ. ಹಿ. ಶಿ. ರಾಮಚಂದ್ರೇಗೌಡ ೧. ೧ ಕನಕದಾಸರು ಕನಕದಾಸರು ಕಾವ್ಯಮಾತ್ರವೆ, ದಾಸರು ಮಾತ್ರವೆ, ತಿಮ್ಮಪ್ಪ ಮಾತ್ರವೆ, ಆಗದಿರುವ ಕಾರಣಕ್ಕೆ ಅವರ ಬಗ್ಗೆ ಪುನಃ ಪುನಃ ಆಲೋಚಿಸಬೇಕಾಗುತ್ತದೆ. ಇದು ಕನಕದಾಸರ ಪುನರ್ ಚಿಂತನೆ ಎಂದರೆ ಅವರು ಅದಕ್ಕೆ ಬಹಳಮಟ್ಟಿಗೆ ವಸ್ತುವಾಗಿದ್ದಾರೆ ಎಂಬುದೆ ಆಗಿದೆ. ಭಾರತೀಯ ಸಾಮಾಜಿಕ ಸಂದರ್ಭದಲ್ಲಿ ಹೀಗೆ ಕನಕದಾಸರು ಪುನರ್‌ಚಿಂತನೆಗೆ ಕಾರಣರಾಗುತ್ತಾರೆ ಎಂದರೆ ಅವರಲ್ಲಿ ಬೆಳೆಯುತ್ತಿರುವ ಘರ್ಷಣೆಗಳಿವೆ ಎಂದು ಅರ್ಥ. ಈ ಪರಿಸ್ಥಿತಿಯ ಮೇಲೆ ಕನಕದಾಸರು ಎರಡು ಸ್ಥಿತಿಯಲ್ಲಿ ನಮಗೆ ಗೋಚರಿಸುವರು : ೧. ಕನಕದಾಸರೆಂಬ ಅವರ ಚಾರಿತ್ರಿಕ-ಸಾಮಾಜಿಕ ಲೋಕೋಕ್ತಿ. ಇದು ಕನಕದಾಸರ ಜೀವನ ಮತ್ತು ಕಾವ್ಯಕ್ಕೆ ಸಂಬಂಧಿಸಿದ ಮಿಥ್ ಮತ್ತು ರಿಯಾಲಿಟಿಗೆ ಸೇರಿದ್ದು. ೨. ಕನಕದಾಸರ ಸಾಂಸ್ಕತಿಕ-ಧಾರ್ಮಿಕ ಅವಸ್ಥಾಂತರ, ಇದು ಅವರೇ ಒಡ್ಡಿಕೊಂಡ ಅವರ ಸಂಸ್ಕೃತೀಕರಣಕ್ಕೆ ಸಂಬಂಧಿಸಿದ ಪ್ರಕ್ರಿಯೆಗೆ ಸೇರಿದ್ದು. ಈ ಎರಡರ ಮಧ್ಯೆಯ ಪ್ರತಿಭಟನೆ ಮತ್ತು ಸ್ವೀಕರಣ ಸ್ಥಿತಿಯೆ ನಮಗಿಂದು ದೊರೆಯುತ್ತಿರುವ ಕನಕದಾಸರು, ಅಥವಾ ಅವರ ಕಾವ್ಯಗಳ ರೂಪದ ಅಭಿವ್ಯಕ್ತಿ. ೧. ೨. ಕನಕರ ಜೀವನ-ಕಾವ್ಯ ವೈರುಧ್ಯ ತುಲನೆ ಕನಕದಾಸರ ಬಂಡಾಯ ದನಿಯನ್ನು ಗುರುತಿಸಲು ಅವರ ಕಾವ್ಯಗಳಷ್ಟೆ ಸಾಕಾಗದು. ಅವರ ಬಂಡಾಯಕ್ಕೆ ಪ್ರೇರಣೆಯಾಗಿದ್ದ ಅಂಶಗಳನ್ನು, ಅವು ಐತಿಹ್ಯ