ಪುಟ:Kanakadasa darshana Vol 1 Pages 561-1028.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೫೦ ಕನಕ ಸಾಹಿತ್ಯ ದರ್ಶನ-೧ ಕನಕದಾಸರಲ್ಲಿ ಬಂಡಾಯದ ದನಿ ೭೫೧ ನಡತೆ, ವಿಶಿಷ್ಟಾರ್ಥದಲ್ಲಿ ವಚನಚಳುವಳಿ, ಸರಳಾರ್ಥದಲ್ಲಿ ದಾಸಪಂಥ ಬಂಡಾಯ ಪ್ರವೃತ್ತಿಗಳು. ವಚನ ಚಳುವಳಿ ದೈವತ್ವದ ಪ್ರೌಢಿಮೆ ಮತ್ತು ಸಮಗ್ರೀಕರಣಕ್ಕೆ ಸಂಬಂಧಿಸಿದ್ದರೆ ದಾಸಪಂಥ ದೈವತ್ವದ ಸರಳೀಕರಣ ಮತ್ತು ಪಂಥ ಸ್ವಭಾವಕ್ಕೆ ಸೀಮಿತವಾಗಿದೆ. ಎರಡೂ ನಿರೀಶ್ವರ ವಾದಕ್ಕೆ ಪ್ರತಿಭಟನೆಗಳಾದರೂ ವಚನ ಚಳುವಳಿ ಸಾಮಾಜಿಕ-ಸಾಂಸ್ಕೃತಿಕ ಸಮಾನತೆಯ ಆಧಾರದ ಮೇಲೆ ಹುಟ್ಟಿಕೊಂಡದ್ದು. ದಾಸಪಂಥ ಸರಳ 'ಸಂಸ್ಕೃತೀಕರಣ' ಪ್ರಕ್ರಿಯೆಗಳಲ್ಲಿ ಒಂದು. ಕನಕದಾಸರ ಪ್ರತಿಭಟನೆ-ಬಂಡಾಯವನ್ನು ಈ ಪರಿವೇಶದ ಒಳಗೆ ನೋಡಬೇಕಾಗುತ್ತದೆ. ತನ್ನೊಳಗೆ ಮತ್ತು ಇತರ ಮೇಲು ಜಾತಿಯ ಶಿಷ್ಟರೊಳಗೆ ಕನಕದಾಸರು ಹೇಗೆ ಉನ್ನತವಾದರು, ಅದಕ್ಕಾಗಿ ಅವರು ಹೇಗೆ ಘರ್ಷಿಸಿದರು ಎಂಬುದೇ ಅವರ ಬಂಡಾಯ ಪ್ರವೃತ್ತಿ, ವಿವೇಚಿಸುತ್ತಾ ಹೋದಾಗ ನಮ್ಮ ಭಾವನೆ, ಸಂಸ್ಕೃತಿ, ಸ್ಥಿತಿಗಳೆಲ್ಲ ಕ್ರೂರ ಅಸಹಜ ಮತ್ತು ಅಪಕ್ವವಾಗಿ ಬಿಡುತ್ತವೆ. ವಾಸ್ತವದಲ್ಲಿ ನವನಾಗರೀಕರಾದ ನಾವು ಮಾಡುತ್ತಿರುವ ದುರಂತವನ್ನು ಹಿಂದಿನ ಸಮಾಜ ಆಗಗೊಡಲಿಲ್ಲ. ಅದು ಸಹಜವಾಗಿ ತನ್ನ ಇತಿಮಿತಿಯಲಿ ನೈಸರ್ಗಿಕ ಸಾಮಾಜಿಕ ಪ್ರಕ್ರಿಯೆಗೆ ಅವಕಾಶ ಬಿಟ್ಟುಕೊಟ್ಟಿತು. ಪ್ರತಿಭಟನೆಯನ್ನು ಅಂತರಿಕವಾಗಿಯೆ ಉಳಿಸಿಕೊಂಡಿತು. ಕನಕದಾಸರು ಮತ್ತು ಕುವೆಂಪು ಮಾಡಿದ್ದು ಸಹ ಇದನ್ನೆ, ಬೇರೆ ಅನೇಕ ಕವಿಗಳು ಬದುಕಿನಲ್ಲಿ ಸಂಘರ್ಷವೇ ಇಲ್ಲ : ಬೆಳವಣಿಗೆಯೆ ಇಲ್ಲ ಎಂದು ಬರೆದದ್ದು. ಬದುಕಿದ್ದು ಉಂಟು. ಅವರ ಸ್ಥಿತಿಯಲ್ಲಿ ನಾವು ಕನಕದಾಸರನ್ನಾಗಲಿ, ಕುವೆಂಪು ಅವರನ್ನಾಗಲೀ ನೋಡಲು ಸಾಧ್ಯವಿಲ್ಲ. ಬದುಕುತ್ತಲೆ, ಬರೆಯುತ್ತಲೆ ಜೀವನ ಸಂಘರ್ಷದ ಅವಶ್ಯಕತೆಯನ್ನು ದರ್ಶಿಸಿದವರು. ಕನಕದಾಸರು ಕೆಲವೇ ನಿರ್ದಿಷ್ಟ ಘಟ್ಟಗಳಲ್ಲಿ ಘರ್ಷಿಸಿದ್ದಾರೆ. ಕುವೆಂಪು ತಮ್ಮ ಬದುಕಿನ ನಿರಂತರತೆಯಲ್ಲಿ ಘರ್ಷಿಸುತ್ತಾ ಹೋದವರು, ಏಕಲವ್ಯ, ಶಂಬೂಕ, ಹನುಮಂತ ಕೊನೆಗೆ ರಾವಣ ಹೀಗೆ ಹಲವರು ಸಂಘರ್ಷದಲ್ಲಿ, ವಯಸ್ಸಿನಲ್ಲಿ, ಸಾಧನೆಯಲ್ಲಿ ಹೊಸ ಬದುಕನ್ನು ಸೃಷ್ಟಿಸಿದವರು. ಕನಕದಾಸರಲ್ಲಿ ಇವರೆಲ್ಲರ ಮೂಲ ಧಾತುವೆನ್ನುವಂತೆ ರಾಗಿ ಆ ಕೆಲಸವನ್ನು ಮಾಡಿದೆ. ಶಂಬೂಕ ತಪಸ್ಸು ಮಾಡುವುದು, ಏಕಲವ್ಯ ಏಕಾಂಗಿಯಾಗಿ ಸಿದ್ಧನಾಗುವ ತಪಸ್ಸಿಗೂ ರಾಗಿ ತನ್ನ ಪರೀಕ್ಷೆಗಾಗಿ ಆರು ತಿಂಗಳು ಹಗೇವಿನಲ್ಲಿ ಕಾಯುವುದೂ ಬೇರೆ ಬೇರೆ ಅಲ್ಲ. ಇವು ಒಂದೇ ಪರಂಪರೆಯ ಬೇರೆ ಬೇರೆ ಕಾಲದ ಪ್ರತಿಭಟನೆಗಳು, ಉನ್ನತಿಯ ಸಾಧನೆ ಬಹುಮುಖವಾಗ ದೆ ಭಾರ ತೀ೦ರು ಮನೆದ' ರ್ಮದ೦ತೆ ಊರ್ಧ್ವಮುಖವಾಯಿತು ಎಂಬ ಪರಿಮಿತಿಯನ್ನು ಬಿಟ್ಟರೆ 'ರಾಗಿ'-'ರಾವಣ' ಪೂರ್ಣತ್ವಕ್ಕಾಗಿ ನಡೆದ ಪ್ರತಿಭಟನೆ-ಬಂಡಾಯ ಮುಂದುವರಿದಿದೆ. ವಚನಕಾರರ ಮಟ್ಟದ ಮೌಲಿಕ ಪ್ರತಿಭಟನೆ ಕನಕದಾಸರದು ಆಗಲಿಲ್ಲವಾದರೂ ದಾಸಪಂಥದವರ ಪರಿಸ್ಥಿತಿಯಲ್ಲಿ ಕನಕದಾಸರ ಪ್ರತಿಭಟನೆ ದೊಡ್ಡದು ಎಂದೇ ಹೇಳಬೇಕು. ೩. ೨. ರಾಮಧಾನ್ಯ ಚರಿತ್ರೆ - ಬಂಡಾಯ ಕನಕದಾಸರ ಬಂಡಾಯ ಪ್ರವೃತ್ತಿಗೆ ಮಾದರಿಯಾಗಿ ರಾಮಧಾನ್ಯ ಚರಿತ್ರೆಯನ್ನು ಹಲವು ವಿದ್ವಾಂಸರು ಉಲ್ಲೇಖಿಸುವರು. ಕನಕದಾಸರ ಕೀರ್ತನೆಗಳಲ್ಲಿ ಕೂಡ ಕೆಲವು ಅವರನ್ನು ಬಂಡಾಯಗಾರರನ್ನಾಗಿ ಪ್ರತಿನಿಧಿಸಿವೆ ಎಂದೂ ಹೇಳಲಾಗಿದೆ. ಬಂಡಾಯ ಹೀಗೆ ಬೇರೆ ಬೇರೆ ಭಾಗಗಳಲ್ಲಿ, ಇರುವುದು ಅಪೇಕ್ಷಣೀಯವಲ್ಲ. ಅದು ಒಬ್ಬ ವ್ಯಕ್ತಿಯ ಅಥವಾ ಒಂದು ಕೃತಿ ಅಖಂಡತೆಯಲ್ಲಿ ಸಂಭವಿಸಿದ್ದಾಗಿರಬೇಕು. ಈ ದೃಷ್ಟಿಯಿಂದ ನೋಡಿದಾಗ ಕನಕದಾಸರ ಹುಟ್ಟುಬದುಕೇ ಒಂದು ಬಂಡಾಯ ಪ್ರವೃತ್ತಿ ಎಂಬುದನ್ನು ನಾನು ಈ ಮೊದಲು ತಿಳಿಸಿದ್ದೇನೆ. ಅವರ ಕಾವ್ಯರೂಪದ ಬಂಡಾಯ ಯಾವ ಸ್ವರೂಪದ್ದು ಎಂಬುದಕ್ಕೆ 'ರಾಮಧಾನ್ಯ ಚರಿತ್ರೆ'ಯನ್ನೂ, ಅವರ ದಾಸತ್ವ ಉನ್ನತಿಯ ಸಂದರ್ಭದಲ್ಲಿ ಕೀರ್ತನೆಗಳಲ್ಲಿ ಹೇಗೆ ಬಂಡಾಯ ವ್ಯಕ್ತವಾಗಿದೆ ಎಂಬುದನ್ನಷ್ಟೆ ಇಲ್ಲಿ ಪರೀಕ್ಷಿಸಬೇಕಾಗಿದೆ. ಕನಕದಾಸರ ಮೂರು ಕಾವ್ಯ ಕೃತಿಗಳಲ್ಲಿ ರಾಮಧಾನ್ಯ ಚರಿತ್ರೆಯೂ ಒಂದು. ಮೋಹನ ತರಂಗಿಣಿ ಕೃಷ್ಣಚರಿತ್ರೆಯಾದರೆ ರಾಮಧಾನ್ಯ ಚರಿತ್ರೆ ರಾಮ ಮತ್ತು ರಾಮತ್ವವನ್ನು ಪಡೆಯುವ ರಾಗಿಯ ಪುರಾಣ ಅಥವಾ ಚರಿತ್ರೆ, ರಾಮ ಪ್ರಕ್ರಿಯೆ ನಾನಾ ಹಂತಗಳಲ್ಲಿ ಬೆಳೆಯುವುದರ ರೂಪಕವಾಗಿ ವ್ಯಕ್ತಿತ್ವ ಧರಿಸಿದೆ. ಕಥೆಯ ಬಹಳ ಭಾಗ ರಾಮನದೇ ಆದರೂ ಅದು ರಾಗಿಯ ರಾಮದೀಕ್ಷೆಗಾಗಿಯೆ ಹೆಣೆಯಲ್ಪಟ್ಟಿದ್ದು, ರಾಮ-ರಾಗಿ-ಕನಕದಾಸರು ಈ ಕೃತಿಯ ಅಖಂಡತೆಯೊಳಗೆ ಬೇರುಬಿಟ್ಟು ಬೆಳೆದಿದ್ದಾರೆ. ರಾಗಿ ಮತ್ತು ಕನಕದಾಸರು ೩. ೧. ಬಂಡಾಯ ಒಂದು ಪ್ರವೃತ್ತಿಮಾತ್ರ ಬಂಡಾಯ ಒಂದು ಪದ್ಧತಿಯೂ ಅಲ್ಲ ಮೌಲ್ಯವೂ ಅಲ್ಲ, ಅದೊಂದು ಪ್ರವೃತ್ತಿ, ಗತಿಶೀಲತೆಯನ್ನು ಕಳೆದುಕೊಂಡ ಮತ್ತು ಚಲನಶೀಲ ಸಮಾಜವೊಂದರ ನಿರೀಕ್ಷಣೆಯ ಮಧ್ಯೆ ತಾತ್ಕಾಲಿಕವಾಗೊ, ಬಹಳಕಾಲದವರೆಗೆ ಹುಟ್ಟಿದ ಒಂದು