ಪುಟ:Kanakadasa darshana Vol 1 Pages 561-1028.pdf/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೫೨ ಕನಕ ಸಾಹಿತ್ಯ ದರ್ಶನ-೧ ಕನಕದಾಸರಲ್ಲಿ ಬಂಡಾಯದ ದನಿ ೭೫೩ ರಾಮನಲ್ಲಿ ತಮ್ಮನ್ನು ಕಂಡುಕೊಳ್ಳುವ ಕೃತಾರ್ಥತೆಗಾಗಿ ಕಾಯುತ್ತಿದ್ದಾರೆ. ಇದು ಒಟ್ಟಿಗೆ ರಾಗಿ ಮತ್ತು ಕನಕದಾಸರ ತಪಸ್ಸು ಅಥವಾ ಉನ್ನತ ಸಂಸ್ಕೃತಿಗೆ ಸಮಾನರಾಗಿ ಸ್ಪಂದಿಸುವ, ಬದುಕುವ ಹಠದ ಪ್ರತಿಭಟನೆ. ೩. ೩. ರಾಮಧಾನ್ಯ ಚರಿತ್ರೆ-ದೇಜಗೌ ಮತ್ತು ಚಿ. ಮೂ. ರಾಮಧಾನ್ಯ ಚರಿತ್ರೆಯ ಧ್ವನಿಯನ್ನು ಗುರುತಿಸುವಾಗ ನಾನು ಡಾ. ದೇ. ಜವರೇಗೌಡರು ಮತ್ತು ಡಾ. ಎಂ. ಚಿದಾನಂದ ಮೂರ್ತಿಯವರ ಧ್ವನಿ ವಿಶ್ಲೇಷಣೆಯನ್ನು ಪರಿಶಿಲಿಸದೆ ಮುಂದೆ ಹೋಗಲಾಗದು. ಬೇರೆಯವರು ಈ ನಿಟ್ಟಿನಲ್ಲಿ ಬರೆದಿದ್ದರೂ ಈ ಇಬ್ಬರ ಲೇಖನಗಳು ಗಮನಾರ್ಹವಾಗಿವೆ ಎಂಬ ಕಾರಣಕ್ಕೆ ಅವರು ನಡೆದ ಹೆಜ್ಜೆ ಗುರುತುಗಳ ಹಿಂದೆ ನಡೆದು ಹೋಗುವುದು ಒಳಿತೆಂದು ಭಾವಿಸಿದ್ದೇನೆ. ಡಾ. ದೇ. ಜವರೇಗೌಡರು ೧. ಕನಕದಾಸರ ಕುರಿತು “ಹರಿದಾಸ ಪರಂಪರೆಯ ಮತ್ತು ದಾಸ ಸಾಹಿತ್ಯದ ಅಶ್ವಿನೀ ದೇವತೆಗಳಲ್ಲೊಬ್ಬರೆಂದೂ, ಯುಗಪ್ರವರ್ತಕರೆಂದೂ, ಕ್ರಾಂತಿಕಾರಕರೆಂದೂ ಖ್ಯಾತನಾಮರಾದ ಕನಕದಾಸರು.......ಯಾವ ಮತವನ್ನೂ ದ್ವೇಷಿಸದೆ, ಯಾವ ಮತಕ್ಕೂ ಅಂಟಿಕೊಳ್ಳದೆ, ಸರ್ವಮತಗಳನ್ನು ಏಕಪ್ರಕಾರವಾಗಿ ಗೌರವಿಸುತ್ತ, ಆತ್ರೋದ್ದಾರ ಸಾಧನೆಯ ಗುಂಗಿನಲ್ಲಿ ದೀನದಲಿತರ ಯೋಗಕ್ಷೇಮವನ್ನು ಮರೆಯದೆ, ಭಕ್ತಿಸಂಬಂಧವಾದ ಕೀರ್ತನೆಗಳ ಜೊತೆಗೆ ಶ್ರೇಷ್ಠವಾದ ಕಾವ್ಯಗಳನ್ನು ರಚಿಸುವುದರ ಮೂಲಕ ಜನಸೇವೆ ಜನಾರ್ಧನ ಸೇವೆಗಳೆರಡನ್ನೂ ಯಶಸ್ವಿಯಾಗಿ ಕೈಕೊಂಡ ಸಾಧಕ ಶ್ರೇಷ್ಠರು” ಈ ಓರೆ ಕೋರೆ ಗಳು ಸಾಮಾನ್ಯರಿಗೆ ಗ್ರಹಿಕೆಯಾಗಿ ಅವರು ಎಚ್ಚತ್ತುಕೊಳ್ಳಬೇಕೆಂಬುದು ಅವನ ಗ್ರಹಿಕೆಯಾಗಿದೆ. “ಕರ್ತವ್ಯಪ್ರಜ್ಞೆ ಸತ್ಯನಿಷ್ಠೆ ಲೋಕಕಾರುಣ್ಯ, ನೈತಿಕಶ್ರದ್ದೆ, ಮೇಲಾಗಿ ಧರ್ಮ ಕೋಪ-ಇವು ಆ ವಿಡಂಬನೆಯ ಹಿಂದಿರುವ ಮೂಲಭೂತವಾದ ಪ್ರೇರಕ ಪ್ರವೃತ್ತಿಗಳು.” ಪೀಠಿಕೆಯಿಂದ : ಸಂ. ದೇ ಜವರೇಗೌಡ, ಪ್ರ : ಶ್ರೀ ಕನಕದಾಸ ನಾಲ್ಕನೆಯ ಶತಮಾನೋತ್ಸವ ರಾಜ್ಯ ಸಮಿತಿ, ೧೯೬೫. ಡಾ. ಎಂ. ಚಿದಾನಂದಮೂರ್ತಿಯವರು ೧. ಕನಕದಾಸರ ಕುರಿತು “.......ಕನಕದಾಸ ಮೇಲ್ವರ್ಗದ ಜನ ತನ್ನನ್ನು ಒಪ್ಪಿಕೊಳ್ಳುವ ಮುನ್ನ ಅವರಿಂದ ತಿರಸ್ಕಾರ ಅವಹೇಳನಗಳನ್ನು ಅನುಭವಿಸಿದನೆಂಬಲ್ಲಿ ಅನುಮಾನ ಕಾಣದು ಅವನ ಜಾತಿ ಪೆಡಂಭೂತದಂತೆ ಅವನ ಜೀವನದುದ್ದಕ್ಕೂ ಕಾಡಿದ್ದರೆ ಆಶ್ಚರ್ಯವಿಲ್ಲ. ಈ ಹಿನ್ನೆಲೆಯಲ್ಲಿ ಅವನ ರಾಮಧಾನ್ಯ ಚರಿತ್ರೆ ಕೃತಿಯ ವಸ್ತು ಬಹು ಅರ್ಥಪೂರ್ಣವಾಗಿ ತೋರುತ್ತದೆ.” ೨. ರಾಮಧಾನ್ಯ ಚರಿತ್ರೆಯ ಕುರಿತು * 'ರಾಗಿ' ಎಂಬ ಹೆಸರನ್ನು ಭಾಷಿಕವಾಗಿ ವಿವರಿಸಲು ಮತ್ತು ಅದು ಬಡಜನರ ಆಧಾರ ಎಂಬುದನ್ನು ಸ್ಥಾಪಿಸಲು ಹುಟ್ಟಿಕೊಂಡ ಪುರಾಣ (Myth) ಇದು ಎಂಬಲ್ಲಿ ಅನುಮಾನವಿಲ್ಲ. “ಈ ಕೃತಿಯ ಮಹತ್ವವನ್ನು ಮೂರು ಬಗೆಗಳಲ್ಲಿ ಗುರುತಿಸಬಹುದು. ೧. ಕನಕದಾಸರ ಆತ್ಮ ಚರಿತ್ರಾತ್ಮಕ ಕೃತಿಯಾಗಿ, ೨. ಅಲಿಗರಿ (allegory) ಕತೆಯಾಗಿ ೩. ವರ್ಗಹೋರಾಟವನ್ನು (class struggle) ಚಿತ್ರಿಸುವ ಕೃತಿಯಾಗಿ.” ಚಿದಾನಂದಮೂರ್ತಿಯವರ ಇನ್ನೂ ಕೆಲವು ಅಭಿಪ್ರಾಯಗಳನ್ನು ಕೆಳಗಿನಂತೆ ಸಂಗ್ರಹಿಸಬಹುದು. ೧. “ಎಲ್ಲ ಧಾನ್ಯಗಳಿಗಿಂತ ರಾಗಿಯೆ ಶ್ರೇಷ್ಠವೆಂಬ ರಾಮನ ತೀರ್ಮಾನ, ವ್ಯಾಸರಾಯರು ತಮ್ಮ ಶಿಷ್ಯರಲ್ಲೆಲ್ಲ ಕೆಳಜಾತಿಯ ಕನಕದಾಸನೇ ಶ್ರೇಷ್ಠ ಎಂದು ಎತ್ತಿ ಹಿಡಿದಿದ್ದನ್ನು ಸೂಚಿಸುವಂತೆ ತೋರುತ್ತದೆ.” ೨.'ಶೂದ್ರಾನ್ನವಾದ ರಾಗಿಯೊಡನೆ ಕನಕದಾಸನು ತನ್ನಂತಹ ಕುಲಹೀನರನ್ನು ಸಮೀಕರಿಸಿರುವಂತಿದೆ.' ೨. ರಾಮಧಾನ್ಯ ಚರಿತೆಯ ಕುರಿತು “ಇದೊಂದು ರೂಪಕ ಕತೆ (Allegory) ; ...............” “ಶತಶತಮಾನಗಳಿಂದ ಕಾಲಕಸವಾಗಿ ಹೇಯ ಜಂತುಗಳಂತೆ ಬಾಳುತ್ತಿರುವ ದಲಿತ ಜನರ, ಎಲ್ಲ ಯುಗಗಳ ಎಲ್ಲ ದೇಶಗಳ ನತದೃಷ್ಟ ನಿಮ್ಮ ಜನಾಂಗಗಳ ಪ್ರತಿನಿಧಿಯಾಗಿ, ನರೆದಲೆಗನಾಗಿ ದಾಸರು ಖಂಡನೆಯ ಖಡ್ಗವೆತ್ತಿದ್ದಾರೆ. “ಇದೊಂದು ಸುಂದರವಾದ ಮತ್ತು ಕಾಂತಿಯುತವಾದ ವಿಡಂಬನ ಕಾವ್ಯ, ಬಿಂಕಗುಳಿಗಳ ಮತಾಂಧರ ಮತ್ತು ಪಟ್ಟಭದ್ರ ಹಿತಾಸಕ್ತರ ಮೂಗುಕತ್ತಿ, ಅವರ ಓರೆಕೋರೆಗಳನ್ನು ತಿದ್ದಬೇಕೆಂಬುದೇ ಕವಿಯ ಪ್ರತಿಜ್ಞೆಯಾಗಿದೆ ; ಜೊತೆಗೆ