ಪುಟ:Kanakadasa darshana Vol 1 Pages 561-1028.pdf/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೫೮ ಕನಕ ಸಾಹಿತ್ಯ ದರ್ಶನ-೧ ಕನಕದಾಸರಲ್ಲಿ ಬಂಡಾಯದ ದನಿ ೭೫೯ ಅಕ್ಷತೆಗೆ ಮಂಗಳಕ್ಕೆ ಸಿರಿಗೆ ಸಂಪತ್ತಿಗೆ-ನಾನು ಚಂದನ ಸಮಾನ K ಗೋಹಾಲು ” ಹನುಮ ಸುರನದಿ ” x ಗರುಡ " _X ಹಂಸ ಕೋಗಿಲೆ ಸಿಡಿಲ ಘರ್ಜನೆಯಂತೆ ನುಡಿದನು ನರೆದಲೆಗ ಕಟ್ಟಿಗೆ-ನೀನು ಕುರಿಹಾಲು ಕಪಿ ಹದ್ದು ಬಕ ಕಾಗೆ. ಭಂಡ ಕಡುಜಡ ಸತ್ವಹೀನ ಬಡವರ ವಿರೋಧಿ ಪತ್ಯಾನ್ನ ಹೆಣದತುತ್ತು ನಿರರ್ಥಕ ಸೇವಕ ದುರಾತ್ಮ ಹುಲುಧಾನ್ಯ ನಿರ್ದಯಿ ಮಧುಪಾನ ದುರ್ಮತಿಗೇಡಿ ನಪುಂಸಕ ನರೆದಲೆಗನನ್ನು ಮುಂದಿಟ್ಟುಕೊಂಡು ಕನಕದಾಸರು ಇಲ್ಲಿ ಒಂದು ಧರ್ಮಯುದ್ಧವನ್ನೇ ಏರ್ಪಡಿಸಿದ್ದಾರೆ. ವಾಸ್ತವದಲ್ಲಿ ಕನಕದಾಸರು ಮೇಲುವರ್ಗದೊಡನೆ ನಡೆಸಿದ ಧರ್ಮಸಮಾನತೆಯ ಬಂಡಾಯ ಇದು. ತಾವು ಬದುಕಿದ್ದ ಕಾಲಘಟ್ಟದಲ್ಲಿಯ ಸಮಾನತೆ, ಮಾನ್ಯತೆ, ಯೋಗ್ಯತೆಗಳೆಂದರೆ ಧಾರ್ಮಿಕವಾಗಿ ಇತರರಿಗೆ ಸಮಾನ ಹಾಗೂ ಮಾನ್ಯನಾಗುವುದೇ ಆಗಿತ್ತು. ನಾವು ಈಗ ಪರಿಭಾವಿಸುವ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಸಮಾನತೆಯ ಮೌಲ್ಯಗಳು ಅಂದು ಹಣಿಕಿಯೆ ಇರಲಿಲ್ಲ. ಹಾಗಾಗಿ ಕನಕದಾಸರ ಸಂದರ್ಭ ಇವತ್ತಿನ ಸಮಾನತೆಯ ಸಂದರ್ಭಕ್ಕೆ ಸಮಾನ ನೆಲೆಯಲ್ಲಿ ತರ್ಕಿಸುವುದು ಯುಕ್ತವಾಗಲಾರದು. ವಚನ ಚಳುವಳಿಯ ಬಗ್ಗೆ ಮಾತನಾಡುವಾಗ ಬಸವಣ್ಣನವರು ಒಂದು ಧರ್ಮಕ್ಕೆ ಪ್ರತಿಯಾಗಿ ಮತ್ತೊಂದು ಧರ್ಮವನ್ನು ಒಂದು ಪೂಜೆಗೆ ಬದಲಾಗಿ ಮತ್ತೊಂದು ಪೂಜೆಯನ್ನು, ದಾರಕ್ಕೆ ಬದಲಾಗಿ ಭಾರಸಹಿತವಾದ ದಾರವನ್ನು ಯೋಚಿಸಿದರೆಂದೂ, ಆರೋಪ ಮಾಡುತ್ತೇವೆ. ಬಸವಣ್ಣನವರ ಅಥವಾ ವಚನ ಚಳುವಳಿಯ ಪರಿಮಿತಿ ಇದೇ ಆಗಿತ್ತೆಂದೂ. ವರ್ಗ ಸ್ವರೂಪದಲ್ಲಿ ಹುಟ್ಟಿದ ಚಳುವಳಿ ಈ ಪರಿಮಿತಿಯಿಂದಾಗಿ ಒಂದು ಜಾತಿಧರ್ಮವಾಗಿ ಮಾರ್ಪಟ್ಟಿತ್ತೆಂದೂ ಹೇಳುವುದುಂಟು. ಈ ಥರದ ಮಾತುಗಳು ಆ ಸಂದರ್ಭಕ್ಕೆ ಶೂನ್ಯವನ್ನು ಕುರಿತು ಆಡಿದಂತೆ ಆಗುತ್ತವೆ. ಇರುವ ಅವಕಾಶಗಳು ಮತ್ತು ಆದ್ಯತೆಗಳನ್ನು ಅವಲಂಬಿಸಿಯೆ ಮತ್ತೊಂದು ವ್ಯವಸ್ಥೆ ಮರುಹುಟ್ಟು ಪಡೆಯಬೇಕಾಗುತ್ತದೆಯೇ ಹೊರತು ಇಲ್ಲದವುಗಳಿಂದಲ್ಲ. ಕನಕದಾಸರ ಸಂದರ್ಭದಲ್ಲಿ ಕೂಡ ಉತ್ತಮ ಬದುಕು ಅಥವಾ ಪಾಯವೆಂದರೆ ಉತ್ತಮ ಧರ್ಮವೇ ಆಗಿತ್ತು. ಆ ಕಾರಣವಾಗಿಯೆ ಅವರು ಧಾರ್ಮಿಕ ಸಮಾನತೆ, ಕುಲಶ್ರೇಷ್ಟತೆ, ಮತಶ್ರೇಷ್ಠತೆ, ಕುಲಮಾನತೆ ಹಾಗೂ ಸ್ವೀಕೃತ ಕುಲಶೋಧನೆಯಲ್ಲಿ ತೊಡಗಿದರು. ಆದಿಕೇಶವನ ಭಕ್ತರಾದವರಿಗೆ ಯಾವ ಕುಲವೂ ಇಲ್ಲ, ಆದಿಕೇಶವನೆ ಎಲ್ಲ ಎಂಬ ಮಾತುಗಳನ್ನಾಡಿದರು. ರಾಮಧಾನ್ಯ ಚರಿತ್ರೆಯಲ್ಲಾಗಲೀ, ಅವರ ಕೀರ್ತನೆಗಳಲ್ಲಾಗಲಿ ಬ್ರಾಹ್ಮಣರನ್ನು ಅವರು ಭೂಸುರರು ಎಂದೇ ಕರೆಯುತ್ತಾರೆ. ಅವರಿಗೆ ಇರುವ ಅವಕಾಶಗಳನ್ನು ಎಂದೂ ಅವರು ಪ್ರಶ್ನಿಸುವುದಿಲ್ಲ. ಆ ಅವಕಾಶಗಳೂ ತಮಗೂ ಸೇರಿದವು ಎಂಬ ವಾದವೂ ಇಲ್ಲ. ತಾವೂ ಅವರಂತೆಯೆ ಶ್ರೇಷ್ಠರಾಗುವ ಹವಣಿಕೆ ಮಾತ್ರ ಇದೆ. ಈ ಬೇಡಿಕೆ ಒಬ್ಬ ಭಕ್ತನ ವಿನಯ ಸಂಪನ್ನನ ಬೇಡಿಕೆಗೆ ರಾಗಿ 'ರಾಘವ' ನಾಮ ಸಿಕ್ಕಿದ ಮೇಲೆ ಕೂಡ ಅದು ಪ್ರೀಹಿಯನ್ನು ಹೀನಾಯವಾಗಿ ಕಾಣುವುದಿಲ್ಲ. ಕರೆದು ಮಾತನಾಡಿಸುತ್ತದೆ, ಸಮಾನತೆಯನ್ನು ಹಂಚಿಕೊಳ್ಳುತ್ತದೆ. ತಲೆಬಾಗಿನಿಂದ ವೀಹಿಯನ್ನು ಶ್ರೀರಾಮ ಕೂಡ ಸಮಾಧಾನ ಮಾಡುತ್ತಾನೆ. ನಿನ್ನನ್ನು ನಿಂದಿಸಲಿಲ್ಲ ರಾಗಿಗೆ ಇರುವ ವಿಶೇಷ ಸಾಮರ್ಥ್ಯವನ್ನಷ್ಟೆ ತಾನು ಹೇಳಿದೆ, ನೀನು ಯಥಾವಿಧಿ ಸುರರಿಗೆ, ಭೂಸುರರಿಗೆ, ಪೂಜೆ ವ್ರತಗಳೆಂಬ