ಪುಟ:Kannada-Saahitya.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉತ್ತರ ಕುಮಾರ ಕದನ ಕೊಡಗಿತೆಂದು ಕೌರವರು ತಕ್ಕ ಸಿದ್ಧತೆ ಮಾಡಿಕೊಂಡರು. ಸೇನೆಯನ್ನು ಎರಡು ಭಾಗಮಾಡಿ ಒಂದು ಅರ್ಜುನನನ್ನೆದುರಿಸಬೇಕೆಂದೂ ಮತ್ತೊಂದು ತುರುನಿಂಡಿನೊಡನೆ ದುರ್ಯೋಧನನ ನಾಯಕತ್ವದಲ್ಲಿ ಹಸ್ತಿನಾವತಿಗೆ ನಡೆಯು ಬೇಕೆಂದೂ ಗೊತ್ತಾಯಿತು, ಆ ಹಂತಿಕೆಯನ್ನರಿತು ಪಾರ್ಥನು ತನ್ನನ್ನೆದುರಿಸಿ ನಿಂಶ ಪಡೆಯನ್ನು ತಾಕದೆ ಕೊರಳಿ ನಡೆದು ಮೊದಲು ಕುರುರಾಯನ ಮೇಲೆ ನುಗ್ಗಿದನು. ತನ್ನ ಅಮೋಘ ಬಾಣಗಳಿಂದ ಆ ದಂಡನ್ನು ಬೆದರಿಸಿ ಗೋವು ಗಳನ್ನು ಬಿಡಿಸಿ ಹಿಂದಿರುಗಿಸಿದನು. ಬಳಿಕ ಕೌರವನ ಸೇನಾಸಾಗರವನ್ನು ಹೊಕ್ಕು ಕಲಕಿ ನೀರರೆಲ್ಲರಿಗೂ ತನ್ನ ಬಾಣದ ರುಚಿ ತೋರಿಸಿದನು. ಕಡೆಗೆ ಸಮ್ಮೋಹನಾಸ್ತ್ರವನ್ನು ಪ್ರಯೋಗಿಸಿ ಎಲ್ಲರೂ ಮೈ ಮರೆದೊರಗುವಂತ ಮಾಡಿದನು. ತರುವಾಯ ಉತ್ತರನೊಡನೆ ಕಥದಿಂದಿಳಿದು ಬಂದು ದೋಣ ಭೀಷ್ಮರ ಪಾದಗಳ ಮೇಲೆ ತಲೆಯಿಟ್ಟು ನಮಸ್ಕಾರ ಮಾಡಿದನು. ಉತ್ತರನು ಅರ್ಜುನನ ಸೂಚನೆಯನ್ನನುಸರಿಸಿ ದುರ್ಯೋಧನ ಕರ್ಣ ದುಶ್ಯಾಸನಾದಿ ವೀರರಿ ವಸ್ತಾ ಭರಣಗಳನ್ನು ಕಳಚಿ ತೆಗೆದುಕೊಂಡು ರಥದಲ್ಲಿ ಇಂದಿಟ್ಟನು. ಬಳಿಕ ಇಬ್ಬರೂ ರಥವನ್ನು ಹತ್ತಿ ಬನ್ನಿಯ ಪರದೆಡೆಗೆ ನಡೆದರು. ಅಲ್ಲಿ ಆಯುಧಗಳನ್ನಿಟ್ಟು ಅರ್ಜುನನು ತನ್ನ ದಿವ್ಯ ರಥವನ್ನು ಬಿಟ್ಟು ವಿರಾಟಪಟ್ಟಣದಿಂದ ತಂದಿದ್ದ ಹುಲುರಡನಕ್ಕೆ ಸಜ್ಜು ಮಾಡಿ ಮತ್ತೆ ಸಾರಥಿ ತನವನ್ನು ಅಳವಡಿಸಿಕೊಂಡನು, ನಗುನಗುತ್ತ ಉಾರನನ್ನು ಕುರಿತು, “ದೂತರನ್ನು ಕರೆದು ಇಂದಿನ ಕಾಳಗವನ್ನು ನೀನೆ ಗೆದ್ದು ದಾಗಿ ಸುದ್ದಿ ಕಳಿಸು. ನನ್ನ ವಿಚಾರವನ್ನು ಇಂದು ತಿಳಿಸಬೇಡ, ಈ ದಿನ ನಿನ್ನ ಪರಾಕ್ರಮವನ್ನು ಪ್ರಸಾರಮಾಡು. ಆ ರಸ ನಿನ್ನನ್ನೆ ಮನ್ನಿಸಲಿ, ಸುರಜನರೂ ಪರಿಜನರೂ ನಿನ್ನ ವಿಜಯದಿಂದ ಹರ್ಷಿತರಾಗಿ ತಣಿಯಲಿ ” ಎಂದು ತಿಳಿಸಿ ಅದಕ್ಕೆ ಶಿವನನ್ನು ಒಡಂಬಡಿಸಿದನು. ಇತ್ಯ ಸುಶರ್ಮನ ಕಾಳಗದಿಂದ ಹಿಂದಿರುಗಿದ ವಿರಾಟೇಶ್ವರನು ಅರಮನೆ ಯಲ್ಲಿ ಮಗನನ್ನು ಕಾಣದೆ, ನಪುಂಸಕನನ್ನು ಸಾರಥಿ ಮಾಡಿಕೊಂಡು ಅವನು ಕೌರವ ಸೇನೆಯ ಮೇಲೆ ನಡೆದನೆಂದು ಕೇಳಿ ಕಳವಳ ಪಡುತ್ತಿದ್ದನು, ಅಪ್ಪ, ರಲ್ಲಿ ಕರ್ಣ ದ್ರೋಣ ಭೀಷ್ಮಾದಿ ಕುರುಬಲವನ್ನೆಲ್ಲ ಗೆದ್ದು ಉತ್ತರ ಕುಮಾರ