ಪುಟ:Kannada-Saahitya.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ವಿಜಯಿಯಾಗಿ ಬರುತ್ತಿರುವನೆಂದು ದೂತರು ಬಂದು ಬಿನಯಿಸಿದರು. ಕೇಳಿ ದೊರೆ ಹಿಗ್ಗಿದನು, ಪಟ್ಟಣವನ್ನಲಂಕರಿಸಿ ಕುಮಾರನನ್ನು ಎದುರು ಗೊಂಡು ಕರೆತರಬೇಕೆಂದು ಅಪ್ಪಣೆ ಮಾಡಿದನು. ಕುರುಬಲವನ್ನು ಗೆದ್ದು ಬಂದ ವೀರಕುಮಾರನನ್ನು ನೋಡಲೆಂದು ಜನ ನೆರೆದು ನೂಕು ನುಗ್ಗಾಯಿತು, ಮಂಗಳ ವಾದ್ಯಗಳು ಭೋರ್ಗರೆದು ಮೊಳಗು ತಿರಲು ಮಂತ್ರಿಗಳು ಸಂಭ್ರಮದಿಂದ ಬಂದು ರಾಜಕುಮಾರನನ್ನು ಎದುರು ಗೊಂಡರು, ಸುಮಂಗಲಿಯರು ಮುತ್ತಿನಾರತಿಯೆತ್ತಿ ಸೇಸೆಯಿಕ್ಕಿದರು, ಪುರ ಜನರೆಲ್ಲರೂ ಗುಂಪುಗುಂಪಾಗಿ ಹರ್ಷದಿಂದು ಜಯಘೋಷ ಮಾಡು ತಿದ್ದರು. ಆದರೂ ಉತ್ತರನ ಮುಖದಲ್ಲಿ ಕಳೆಯಿಲ್ಲ, ಗೆಲವಿಲ್ಲ. ಬಿರುದುಗ್ಗ ಡಿಸಿ ಹೊಗಳುವ ಕೈವಾರಿಗಳಮೇಲೆ ಕೋಪಿಸುತ್ತ ಕತ್ತೆತ್ತದೆ ನೆಲದ ಮೇಲೆ ನೋಟ ನೆಟ್ಟು ದುಗುಡದ ಭಾರವನ್ನು ಹೊತ್ತು ಅರಮನೆಯನ್ನು ಸೇರಿದನು. ಅಲ್ಲಿ ತಂದೆ ಎದುರು ಬಂದು ಮಗನನ್ನು ' ಬಾಚಿ ತಬ್ಬಿ ಕೊಂಡನು, ಬಿಗಿಯಪ್ರಿ, “ಬಾ, ಮಗನೇ ! ನಸುಕುಲದ ಚಿಂತಾಮಣಿಯೇ ! ಕುರುರಾಯ ಮೋಹರ ಧೂಮಕೇತುವೆ ! ಕಂದ, ಬಾ” ಎಂದು ಮನದಣಿಯ ಕೊಂಡಾಡಿದನು, ಲಲನೆಯರು ಆರತಿ ಬೆಳಗಿ ನಿವಾಳಿ ತೆಗೆದರು. ಉತ್ತರಸಿಗೆ ಈ ಉಪಚಾರಗಳಿಂದ ಸುಖವಿಲ್ಲವಾಯಿತು. “ಅಪ್ಪಾ, ಸಾಕು. ಇದೆಲ್ಲ ನನಗೆ ಬರಿಯ ಬಯಲಾಡಂಬರ, ಈ ವೀರೋಪಚಾರ ನನಗೆಪ್ಪುದಿಲ್ಲ. ನಿಲ್ಲಿಸಿ ಬಿಡಿ ಎಂದನು. "ಅರಸನಿಗೆ ಆನಂದ ಮಿಗಿಲಾ ಯಿತು, “ದರ್ಪವುಳ್ಳವನಿಗೆ ಈ ಮಂಗಳ ಒಪ್ಪುವುದಿಲ್ಲವೆ ? ನಿಜವಾಗಿ ನೋಡಿದರೆ ಈ ಬಲ, ಈ ನಿಗರ್ವಿಕೆ, ಯಾರಿಗಿದೆ ?” ಎಂದು ಮಗ ನನ್ನು ಮತ್ತೆ ಪ್ರಶಂಸಿಸಿದನು, “ಮಗನೇ, ಕರ್ಣಾದಿ ವೀರರನ್ನೆಲ್ಲ ನೀ ನೊಬ್ಬನೆ ಗೆದ್ದು ಬಂದೆ, ಇಂಥ ಕಲಿತನ ಪೂರ್ವಪುರುಷರಲ್ಲಿ ಯಾರಿ ಗುಂಟು ? ಇಷ್ಟಾದರೂ ನಿನಗೆ ಅದೇಕೆ ದುಗುಡ ? ಹೆತ್ತವರಿಗೆ ಹರ್ಷವನ್ನು ತಂದೆ. ಎಂದು ಪ್ರೀತಿಯಿಂದ ಮುಖವನ್ನು ಹಿಡಿದೆತ್ತಿದನು. ಆಗ ಉತ್ತರ, “ಕಾದಿ ಗೆದ್ದವನು ಬೇರೊಬ್ಬ, ನಾನಲ್ಲ. ನಾನು ಸಾರಥಿ ಮಾತ್ರ, ನನಗೇಕಿಷ್ಟು ಮರ್ಯಾದೆ ? ನನ್ನನ್ನು ನಾಚಿಸಬೇಡಿ ! ಎಂದು ಬೇಡಿದನು, ಸಿರಾಟೇಶ್ವರನಿಗೆ ಅದು ನಿಜವಾಗಿ ತೋರಲಿಲ್ಲ, 'ಕಾದಿ