ಪುಟ:Kannada-Saahitya.pdf/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಇtuಳ ಕುಹಳಳ IS ದಾತ ನೀನು ; ಸಾರಥಿ ಆ ಬೃಹನ್ನಳೆ ವಾದ ಬೇಡ. ಮಗನೇ, ನಿನ್ನ ಪರಾಕ್ರಮವನ್ನು ನಾನು ಬಟ್ಟೆ ” ಎಂದು ಉಬ್ಬಿ ನುಡಿದನು. ನನಗೆ ಆ ದಿಟ್ಟತನವೆಲ್ಲ ಬರಬೇಕು ? ಬೆಂದದ್ದನ್ನು ಬೆದಕಿ ನೋಯಿಸಬೇಡಿ. ಈ ದಿನದ ಕಾಳಗವನ್ನು ಗೆದ್ದಾತ ಬೇರೊಬ್ಬನಿದ್ದಾನೆ. ನಾಳೆ ಬೆಳಗ್ಗೆ ಆತನನ್ನು ನಿಮ್ಮೆದುರಿಗೆ ಕರೆತಂದು ತೋರಿಸುತ್ತೇನೆ ” ಎಂದು ನಂಬಿಸಿ ನುಡಿದು, ತಂದೆ ಯನ್ನು ಬೀಳ್ಕೊಂಡು ತನ್ನರಮನೆಗೆ ಹೋಗಿ ಸೇರಿದನು. ಅರ್ಜುನನು ಉತ್ತರೆಯ ಮಂದಿರಕ್ಕೆ ಹೋಗಿ ರಣರಂಗದಿಂದ ತಾನು ತಂದಿದ್ದ ಉತ್ತಮಾಂಬರಗಳನ್ನೂ ವಿವಿಧ ರತ್ನಾಭರಣಗಳನ್ನೂ ಆಕಗೆ ಕೊಟ್ಟನು. ಅವನ್ನೆಲ್ಲ ಕಂಡು ಆಕೆ ಮಿಗಿಲಾಗಿ ಹಿಗ್ಗಿದಳು. ಆ ರಾತ್ರಿ ಪಾಂಡು ಕುಮಾರರೆಲ್ಲ ಒಟ್ಟುಗೂಡಿ ಆಲೋಚಿಸಿ ತಮ್ಮ ವೇಷಗಳನ್ನು ತೊರೆದು ಮರುದಿನ ಓಲಗದಲ್ಲಿ ಪ್ರಕಟವಾಗಿ ಕಾಣಿಸಿ ಕೊಂಡರು, ಉತ್ತರ ಕುಮಾರ ಉತ್ತರಗೋಗ್ರಹಣದ ವಿಜಯದ ನಿಜ ವನ್ನು ವಿವರಿಸಿ, ಪಾಂಡವರನ್ನು ತಂದೆಗೆ ತೋರಿಸಿ ಅವರನ್ನು ವಿರೋಚಿತ ವಾಗಿ ಗೌರವಿಸಿದನು. ಹಿನ್ನುಡಿ ಕಾಮಾಯಣ ಮಹಾಭಾರತಗಳು ಭಾರತೀಯ ಸಂಸ್ಕೃತಿಯ ಎರಡು ಕಣ್ಣುಗಳು ಸಾವಿರಾರು ವರ್ಷಗಳಿಂದ ಜನಕ್ಕೆ ಇವು ತಿಳಿವು ಕೊಟ್ಟು ಕಾಗೆ ಬೆಳಕಾಗಿ ಮರೆಯುತ್ತಿವೆ, ಭರತ ಖಂಡದ ಬೇರೆ ಬೇರೆ ಭಾಷೆಗಳೆಲ್ಲರೂ ಇವು ಪರಿವರ್ತನೆಯಾಗಿದ, ಅರಿಯದವರಿಂದ ಹಿಡಿದು ಮಹಾ ನಿದ್ವಾಂಸರವರೆಗೂ ಎಲ್ಲ ಜನಕ್ಕೂ ಇವು ಮೆಚ್ಚಿಕಯಾಗಿ ಆವರ ಜೀವನದ ಹಾಸು ಹೊಕ್ಕಾಗಿ ಹರಡಿವ. ಕನ್ನಡದಲ್ಲಿ ಮಹಾಭಾರತವನ್ನು ಬರೆದವರನ್ನೆಲ್ಲ ಪಂಪ, ನಾರಣಪ್ಪ-ಈ ಇಬ್ಬರು ತುಂಬ ಪ್ರಸಿದ್ದರು. ಇವರಿಬ್ಬರೂ ಒಬ್ಬರಿಗೊಬ್ಬರು ಸರಿಮಿಗಿಲಾದವರು, ಪಂದನ ಗ್ರಂಥ ಹಳಗನ್ನಡದಲ್ಲಿ ರಚಿಸಿರುವ ಚಂಪೂಕಾವ್ಯ, ನಾರಣಪ್ಪನು ರಚಿ ಸಿರುವುದು ನಡುಗನ್ನಡದ ಷಟ್ನದಿ ಕಾವ್ಯ. ಇವೆರಡೂ ನಮ್ಮ ಕನ್ನಡ ಭಾಷೆಯ ಸರ್ವೋತ್ಕೃಷ್ಟ ಗ್ರಂಥಗಳು.

  • ಪಂಪ ಭಾರತ' ತನ್ನ ಉತ್ತಮ ಗುಣಗಳಿಂದ ಉಳಿದ ಪೂರ್ವ ಕಾವ್ಯ ಗಳನ್ನೆಲ್ಲ ನರಸಿಬಿಟ್ಟಿತು. ಆದರೂ ಆದು ಜನಸಾಮಾನ್ಯದಲ್ಲಿ ಬಳಕೆಗೆ ಬರಲಿಲ್ಲ.