ಪುಟ:Kannada-Saahitya.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ನಾರಣಪ್ಪನು ರಚಿಸಿದ ( ಗದುಗಿನ ಭಾರತ' ವಾದರೂ, ಈಗ ಕನ್ನಡ ನಾಡಿನ ಹಳ್ಳಿ ಹಳ್ಳಿಯಲ್ಲೂ ನೆಪಳಗುತ್ತಿದೆ. ಸಾಧಾರಣ ಜನವನ್ನು ಸಲ್ಲಿಸುತ್ತ, ಪಂಡಿತ ರನ್ನು ತಲೆದೂಗಿಸುತ್ತ ಎಲ್ಲರಿಗೂ ಮೆಚ್ಚಾಗಿದೆ. - ಕನ್ನಡ ಭಾರತ ' ಎಂದು ರಸಲಾಗಿದೆ ನಾರಣಪ್ಪ' ಸಂಸನಂತೆ ಮಹಾ ಪಂಡಿತ ; ಜನರನಂತೆ ದೊಡ್ಡ ಭಕ್ತ, ಇವನ ಭಾರತ ಭಕ್ತಿ ರಸದ ಆಗಾಧ ಪ್ರವಾಹವಾಗಿದೆ. ಇದನ್ನು ಓದುವವರೂ ಕಳುವವರೂ ಭಕ್ತಿಯು ಪುಣ್ಯ ಜಲದಲ್ಲಿ ಒಂದು ಪುನೀತರಾಗುತ್ತಾರೆ. ಗದು ಗಿನ ನೀರನಾರಾಯಣನ ಕಿಂಕರನಾಗಿ ಕಾವ್ಯ ರಚನೆ ಮಾಡಿದ್ದಾನೆ. 1 ನೀರ ನಾರಾಯಣನೆ ಕವಿ, ತಾನು ಬರೆಯುವವನು ಮಾತ್ರ' ಎಂದು ಬಿನ್ನಯಿಸಿ ' ಕೊಂಡಿದ್ದಾನ. - ಇಲ್ಲಿ ಎತ್ತಿ ಕೊಟ್ಟಿರುವ ಉತ್ತರಕುಮಾರನ ಕಥೆ ಗದುಗಿನ ಭಾರತದಲ್ಲಿ ಏವರಿಸಿರುವ ಉತ್ತರ ಗೋಗ್ರಹಣ ವೃತ್ತಾಂತದ ಸಂಗ್ರಹ. ಉತ್ತರಕುಮಾರನ ವಿಷಯವನ್ನು ಇಷ್ಟು ರಸವತ್ತಾಗಿ ಚಿತ್ರಿಸಿರುವವನು ನಾರಣಪ್ಪನೊಬ್ಬನ, ಪಂಪ ಭಾರತದಲ್ಲಾಗಲಿ ಸಂಸ್ಕೃತದ ಮೂಲ ಮಹಾಭಾರತದಲ್ಲಾಗಲಿ ಈ ಕಥೆ ಇಷ್ಟು ಸ್ವಾರಸ್ಯವಾಗಿ ಬಂದಿಲ್ಲ. ಇಲ್ಲಿ ಹಾಸ್ಯವನ್ನು ನಿರೂಪಿಸಿರುವಷ್ಟು ಸ್ವಾರಸ್ಯವಾಗಿಯೆ ನಾರಣಪ್ಪ ಬೇರೆ ಕಡೆಗಳಲ್ಲಿ ಶೃಂಗಾರ, ನೀರ ಮೊದಲಾದ ಉಳಿದ ರಸಗಳನ್ನೂ ನಿರೂಪಿಸಿದ್ದಾನೆ. - r ಕುಮಾರ ವ್ಯಾಸ ' ಎಂಬುದು ನಾರಣಪ್ಪನ ಕಾವ್ಯ ನಾಮ. ಈತನು ಗದು ಗಿನ ಹರ ಇರುವ 1 ಕೋಳಿವಾಡ ' ಎಂಬ ಊರಿನ ಕರಣಿಕರ ವಂಶದವ ನಂತ, ಗದುಗಿನ ವೀರನಾರಾಯಣ ಸ್ವಾಮಿಯ ದೇವಸ್ಥಾನದಲ್ಲಿ ಭಾರತವನ್ನು ರಚಿಸಿದನಂತೆ. ಈತನ ಜೀವನಕ್ಕೆ ಸಂಬಂಧಿಸಿದ ಯಾವ ವಿವರವೂ ಸ್ಪಷ್ಟವಾಗಿ ಗೊತ್ತಿಲ್ಲ. ಈತನಿದ್ದದ್ದು ಕ್ರಿ.ಶ. ೧೫ ನೆಯ ಶತಮಾನದಲ್ಲಿ ; ವಿಜಯನಗರದ ವೈಭವದ ಕಾಲದಲ್ಲಿ, ಆತನು ಕಂಡ ಕನ್ನಡ ನಾಡಿನ ಶೌರ್ಯ ಧೈರ್ಯ ಸಾಹಸ ಸಂಪತ್ತು ಗಳ ಚಿತ್ರವೇ ಕನ್ನಡ ಭಾರತದಲ್ಲಿ ಮೂಡಿ ಬಂದಿದೆಯೆನ್ನಬಹುದು. * ಪಂಪ, ಹರಿಹರ, ನಾರಣಪ್ಪ - ಈ ಮೂವರೂ ಕನ್ನಡದ ವರ ಕವಿಗಳು, ಈ ದವರೂ ಪ್ರಪಂಚದ ಮಹಾಕವಿಗಳೊಡನೆ ಸರಿಸಮಾನವಾಗಿ ಗೌರವಕ್ಕೆ ಅರ್ಹರಾಗಿರುವರು,