ಪುಟ:Kannada-Saahitya.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಿಶ್ಚಿಂಳಿಯ ಕಥೆ ದೇವಿಯ ಎದೆಯ ಮೇಲೆ * ಜ್ಯೋತಿಪ್ರಭ ' ಎಂಬ ಒಂದು ಪದಕ ಸೂರ್ಯ ನಂತೆ ಕಾಂತಿಯುಕ್ತವಾಗಿ ಹೊಳೆಯುತ್ತಿತ್ತು. ಅದನ್ನು ಕಂಡು ಆನಂಗ ಸುಂದರಿ ಆಸೆಪಟ್ಟು ಅದನ್ನು ತಂದುಕೊಡಬೇಕೆಂದು ಅಲ್ಲೆ ಮಾಡಿ ಅಂಜನ ಚೋರನನ್ನು ಪ್ರಾರ್ಥಿಸಿದಳು. ಅವನು, “ಅದೊಂದನ್ನು ಬಿಟ್ಟು ಬೇರೆ ಏನನ್ನಾದರೂ ಕೇಳು, ತರುತ್ತೇನೆ. ಅದು ಬೇಡ. ಅದನ್ನು ತಂದರೆ, ಸದಾ ಅದನ್ನು ತೊಟ್ಟೇ ಇರಬೇಕು. ದೊರೆ ಕಂಡರೆ ಕೊಲ್ಲಿಸುತ್ತಾನೆ. ಅದರ ಹಂಬಲನ್ನು ಬಿಡು ” ಎಂದು ನಯದಿಂದ ಒಡಂಬಡಿಸಹೋದನು. ಸೂಳೆ ಕೇಳ್ಲಿಲ್ಲ. ತಂದುಕೊಟ್ಟ ತೀರಬೇಕೆಂದು ಹಟ ಹಿಡಿದಳು. ಮುನಿದು ಹಾಸಿಗೆಯಿಂದ ಕೆಳಕ್ಕುರುಳಿ ಬೀಳುವಂತೆ ಅವನನ್ನೆ ದೆದು, “ಪರದೇಶಿಯಾಗಿ ಬಂದ ನಿನ್ನಲ್ಲಿ ಒಂದೇ ಮನಸ್ಸಿನಿಂದ ಸ್ನೇಹಮಾಡಿ ಆದರಿಸಿದ್ದಕ್ಕೆ ನನಗೆ ಸಂತೋಷವುಂಟು ಮಾಡಿದೆ !” ಎಂದು ಮುಟ್ಟಿ ನುಡಿ ದಳು. ಅವಳ ಪ್ರೇಮವನ್ನು ಉಳಿಸಿಕೊಳ್ಳುವುದಕ್ಕಾಗಿ, “ಅದನ್ನು ನಿನಗೆ ತಂದುಕೊಡುತ್ತೇನೆ. ಅಂಜಬೇಡ ” ಎಂದು ನಂಬುಗೆ ಹೇಳಿ ಸಮಾಧಾನ ಗೊಳಿಸಿದನು. ಬಳಿಕ, 'ಕಳ್ಳನಿಗೆ ಬೆಳುದಿಂಗಳು ಸೊಗಸದು ' ಎಂಬಂತೆ ಶುಕ್ಲ ಪಕ್ಷ ಹೋಗುವವರೆಗೂ ಕಾದಿದ್ದು, ಕೃಷ್ಣ ಪಕ್ಷದ ಅಷ್ಟಮಿಯ ದಿನ ಲಲಿತಾoಗನು ಕಣ್ಣಿಗೆ ಅಂಜನ ಎಚ್ಚಿಕೊಂಡು ಆರನುನೆಯತ್ತ ನಡೆವನು. ಅದೃಶ್ಯನಾಗಿ ಒಳಹೊಕ್ಕು ಪದಕವನ್ನು ತೆಗೆದುಕೊಂಡು ಹೊರಬಿದ್ದನು. ಒಸ್ಸಿನಿಂದ ಮೈ ಮರೆತು ಬರುತ್ತಿರಲು ರತ್ನದ ಬೆಳಕು ಸುತ್ತಲೂ ಹರಡಿತು, ಬರಿಯ ಬೆಳಕು ನಡೆದು ಹೋಗುತ್ತಿರುವುದನ್ನು ಅಲ್ಲಿಯ ತಳಪನು ಕಂಡು ಕಳ್ಳಿ ನೆಂದರಿತು ಅವನ ಅತಿ ಜನ ವಿದ್ಯೆಯನ್ನು ಕೆಡಿಸಿ ಬೆನ್ನಟ್ಟಿ ಬಂದನು. - ಅಂಜನಚೋರನು ಭಯದಿಂದ ಪದಕವನ್ನೆ ಸೆದು ಕೋಟಿಯನ್ನು ವಿದ್ಯಾಧರ ಕರಣದಿಂದ ದಾಟ, ದೆಗಣಿಡುತ್ತ ಸ್ಮಶಾನದಲ್ಲಿ ಒಂದಾದ ಮರದ ಕೆಳಗೆ ಉರಿಯುವ ದೀಪವನ್ನು ಕಂಡು ಅಲ್ಲಿ ಬಂದನು. ಬಂದು ನೋಡಿದರೆ, ಮಳೆ ಮರದ ಕೊಂಬೆಯಲ್ಲಿ ನೂರೊಂದು ಕಾಲಿನ ಒಂದು ನಿಲುವನ್ನು ಕಟ್ಟಿದೆ ಕೆಳಗೆ ಬಗೆಬಗೆಯ ಮೂವತ್ತೆರಡು ಆಯುಧಗಳನ್ನು ನೆಟ್ಟಿದೆ ; ಒಬ್ಬ ಮನುಷ್ಯ ಅದನ್ನು ಪೂಜಿಸಿ ನೆಲುವಿನ ಮೇಲೆ ಹತ್ತಿ,