ಪುಟ:Kannada-Saahitya.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಸಾಹಿತ್ಯ ಚಿತ್ರಗಳು

ವಿದ್ಯುಚ್ಚೋರನೆಂಬ ಋಷಿಯ ಕಥೆ

ಈ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಏದೇಹವೆಂಬುದು ನಾಡು, ಅಲ್ಲಿ ಮಿಥಿಳೆಯೆಂಬುದು ಪಟ್ಟಣ. ಅದನ್ನಾಳುವವನು ವಾಮರಥನೆಂಬ ಆತನ ಮಹಾದೇವಿ ಬಂಧುಮತಿಯೆಂಬವಳು, ವಿಷಯ ಭೋಗಗಳನ್ನು ಅನುಭವಿಸುತ್ತ ಸುಖವಾಗಿದ್ದರು.

ಆ ಪಟ್ಟಣದಲ್ಲಿ ಯಮದಂಡನೆಂಬವನು ತಳಾರ. ಅಲ್ಲಿ ವಿದ್ಯುಚ್ಚೋರನೆಂಬೊಬ್ಬ ಕಳ್ಳ, ಆ ಕಳ್ಳನು ಬಗೆಬಗೆಯ ತಸ್ಕರಶಾಸ್ತ್ರಗಳಲ್ಲಿ ಬಹು ಕುಶಲನಾದವನು. ಪಟ್ಟಣದ ಬೆಲೆ ಬಾಳುವ ವಸ್ತುಗಳನ್ನು ಇರು ಬೆಲ್ಲ ಕದಿಯುವನು. ಕದ್ದು, ಪಟ್ಟಣಕ್ಕೆ ಸ್ವಲ್ಪ ದೂರದಲ್ಲಿ ಒಂದು ಪರ್ವತ ವುಂಟು. ಅದರಲ್ಲಿ ದೊಡ್ಡದೊಂದು ಗುಹೆಯುಂಟು. ಇದರೊಳಗೆ ಕದ್ದ ವಸ್ತುಗಳನ್ನೆಲ್ಲ ಹೂಳಿಟ್ಟು ಗುಹೆಯ ಬಾಗಿಲನ್ನು ದೊಡ್ಡದೊಂದು ಶಿಲೆಯಿಂದ ಮುಚ್ಚಿ ಬರುವನು. ಹಗಲೆಲ್ಲ ಹಾಳು ದೇಗುಲದಲ್ಲಿ ಅಂಜನ ಎಚ್ಚಿ ವೇಷ ಮರಸಿಕೊಂಡಿರುವನು: ಮೈಯೆಲ್ಲ ತೊನ್ನು ; ಮುರುಟಿದ ಕೈಕಾಲುಗಳು ; ಮೂಗು ಒಳಕ್ಕಿಳಿದು ಲಸಿಗೆ ಸುರಿಯುವುದು ; ನೊಣ ಮುಸುರಿಕೊಂಡು ತನ್ನು ತಿರುವುವು; ನೋಡಿದವರೆಲ್ಲ ಹೇಸುವರು. ಹೀಗೆ ಏಕಾರ ವೇಷದಿಂದ ಮನೆಮನೆಗೂ ಅಲೆದು ಭಿಕ್ಷೆ ಬೇಡುತ್ತ, ತಾನು ತೊನ್ನನೆಂಬುದನ್ನು ತೋರಿಸಿಕೊಳ್ಳುತ್ತಿರುವನು. ಹಗಲೆಲ್ಲ ಹೀಗಿದ್ದು ರಾತ್ರಿಯಾದ ಮೇಲೆ ತನ್ನ ಸ್ವಾಭಾವಿಕವಾದ ಮೊದಲಿನ ದಿವ್ಯ ರೂಪನ್ನು ಕೈಕೊಂಡು ಪಟ್ಟಿ ಬಟ್ಟೆ ಯನ್ನುಟ್ಟು ಗಂಧ ಹಚ್ಚಿ ಹೂವು ಮುಡಿದು ಕರ್ಪೂರಸೇರಿಸಿವ ತಾಂಬೂಲ ವನ್ನು ಮೆಲ್ಲುತ್ತ ಸೂಳೆಗೇರಿಗಳಲ್ಲಿ ಸುಳಿಯುವನು, ಹಣವನ್ನು ವೆಚ್ಚ ಮಾಡಿ ಇಷ್ಟವಾದ ಭೋಗವನ್ನನುಭವಿಸುವನು, ಯಾರೂ ಅರಿಯದಂತಿದ್ದು ಅಧಿ ಕಾರಿಗಳು, ಸಾಮಂತರು, ಸೂಳೆಯರು ಮೊದಲಾದವರ ಧನವನ್ನೆಲ್ಲ ಕದ್ದು ಗವಿ ಸೇರಿಸುವನು.