ಪುಟ:Kannada-Saahitya.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಸಾಹಿತ್ಯ ಚಿತ್ರಗಳು ಅದನ್ನು ಕೊಯ್ಯಲಾರದೆ ಇಳಿಯುತ್ತಲೂ ಹತ್ತುತ್ತಲೂ ಇದ್ದಾನೆ. ಈ ಏಚಿತ್ರವನ್ನು ಕಂಡು ಆ೦ಜನಚೋರನು ಆ ಮನುಷ್ಯನನ್ನು , “ನೀನು ಯಾರು ? ನೀನು ಸಾಧಿಸುವ ಈ ವಿದ್ಯೆಯ ಹೆಸರೇನು ? ಯಾರು ಉಸ ದೇಶ ಮಾಡಿದರು ? ಹೇಳು, ಹೇಳದಿದ್ದರೆ ನಿನ್ನನ್ನು ಕೊಂದು ಹಾಕು ತೆನೆ' ಎಂದು ಸುರಗಿಯನ್ನು ಹಿಡಿದು ಅವನ ಗಂಟಲಿಗೆ ಒಡ್ಡಿದನು. ಆತ ಭಯಪಟ್ಟು “ನನ್ನ ಹೆಸರು ವರಸೇನ, ಈ ವಿದ್ಯೆಗೆ ಗಗನ ಗಾಮಿನಿಯೆಂದು ಹೆಸರು. ಜಿನದತ್ತಸೆಟ್ಟು ಇದನ್ನು ನನಗೆ ಉಪದೇಶ ಮಾಡಿದನು ” ಎಂದು ತಿಳಿಸಿದನು. ಲಲಿತಾಂಗನು, ಈ ಜಿನದತ್ತ ಸೆಟ್ಟಿ ದಯಾನಿಧಿ, ನಿರ್ಮಲಚರಿತ್ರ, ಆತನು ಉಪದೇಶಿಸಿದ ಮೇಲೆ ನಿನಗೆ? ಈ ಹೇಡಿತನ ? ನಾನಾಗಿದ್ದರೆ, ನೆಲುವಿನ ಕಾಲುಗಳನ್ನೆಲ್ಲ ಒಟ್ಟಿಗೆ ಕೊಯ್ದು ಬಿಡುತ್ತಿದ್ದೆ. ನೀನು ಹೀಗೆ ಇಳಿಯುತ್ತಲೂ ಹತ್ತುತ್ತಲೂ ಇರುವುದೇಕೆ ?” ಎಂದನು. “ಮನುಷ್ಯರ ಮನಸ್ಸನ್ನು ಹೇಗೆ ತಿಳಿಯುವುದು ? ಹಿಂದು ಮುಂದು ಯೋಚಿಸದೆ ದಡ್ಡತನದಿಂದ ನಾನಿದನ್ನು ಕೊಯ್ದು ಸತ್ತರೆ, ಕನಸಿನ ಬತ್ತಕ್ಕೆ ಎಚ್ಚತ್ತು ಗೋಣಿ ಹಿಡಿದ ಹಾಗಾಗುತ್ತದೆ. ಸತ್ತು ಸಿಕ್ಕುವ ಸ್ವರ್ಗ ಕ್ಕಿಂತ ಬದುಕಿ ಸಿಕ್ಕುವ ನರಕವೇ ಲೇಸು. ನಾನು ಸಾಗಿ” ಎಂದು ವರಸೇನ ಉತ್ತರ ಕೊಟ್ಟನು.

  • ಜಿನದತ್ತನ ಉತ್ತವ ಜನಭಕ್ತ ; ಸರ್ವಜೀವ ಹಿತಸಾಧಕ ; ವಾತ್ಸಲ್ಯ ರತ್ನಾಕರ. ಒಂದು ಇರುವೆಯ ಪ್ರಾಣಕ್ಕೂ ತಪ್ಪದವನು ನಿನಗೆ ತಪ್ಪುವನೆ ??” ಎಂದು ನುಡಿದು ಲಲಿತಾಂಗ ತಳರನ ಕೈಗೆ ಸಿಕ್ಕಿ ಸಾಯು ವುದಕ್ಕಿಂತ ಈ ಆಯುಧಗಳ ಮೇಲೆ ಬೀಳುವುದೆ ಮೇಲೆಂದು ನಿಶ್ಚಯಿಸಿ ವನು. ಬಳಿಕ, “ಕೊಡು ನನಗೆ ಆ ಮಂತ್ರವನ್ನು, ಬೇಗ ಕೊಡ ಬಿದ್ದರೆ ನಿನ್ನನ್ನು ದಿಕ್ಕುಗಳಿಗೆ ಬಲಿಹಾಕಿ ಬಿಡುತ್ತೇನೆ” ಎಂದು ಗರ್ಜಿಸಿ ದನು. ನರಸೇನ ಬೆಚ್ಚಿ ಜಿನದತ್ತ ಸೆಟ್ಟ ತನಗೆ ಹೇಗೆ ಹೇಳಿದ್ದನೋ ಹಾಗೆ ಅವನಿಗೆ ಮಂತ್ರವನ್ನು ಉಪದೇಶ ಮಾಡಿದನು.