ಪುಟ:Kannada-Saahitya.pdf/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ಧನ್ವಂತರಿ, ವಿಶ್ವಾನುಲೋಮ ಜನಪದವೆಂಬ ನಾಡಿನಲ್ಲಿ ನಂದರನೆಂಬ ರಾಜಿಗೆ ಧನ್ವಂತರಿ ಯ:cಬ ಮಗನಿದ್ದನು. ರ:ಜ ಇರೋ ಹಿತನದ ಸೋಮಶರ್ಮನೆಂಬ ಬ್ರಾಹ್ಮಣನಿಗೆ ವಿಶ್ವಾಸವನೆಂಬ ಮಗನಿದ್ದನು. ಇವರಿಬ್ಬರಿಗೂ ಸ್ನೇಹ ಒಂದಾಗು ಹಾಲು ನೀರುಗಳ೦ತೆ ಹೊಂದಿಕೊಂಡಿದ್ದರು. ಇಬ್ಬರೂ ದುರ್ಜನರ ಸಹವಾಸದಿಂದ ಕೆಟ್ಟು ಹೋದರು. ಸೌಂದರ ಸೆಟ್ಟಯ ಸೋಮಶರ್ಮನೂ ಏನೇನು ಮಾಡಿದರೂ ಅವರ ದುಷ್ಟತನವನ್ನು ತಿದ್ದಲಾಗಲಿಲ್ಲ. ಕಡೆಗೆ ಇಬ್ಬರೂ ಮಕ್ಕಳನ್ನು ತೊರೆದುಬಿಟ್ಟರು. ಆ ದುಷ್ಟ ರು ತಂದೆ ತಾಯಿಗಳನ್ನು ಅಗಲಿ ಹೋಗಿ ಬೇರೆ ಇದ್ದರು. ಒಂದು ಸಲ ಅವರಿಬ್ಬರೂ ಅರಮನೆಗೆ ನುಗ್ಗಿ ದಿವ್ಯ ರತ್ನಗಳನ್ನು ಕದ್ದು ಹೊರ ಬರುತ್ತಿರುವಾಗ ತಳಾರನು ಅವರನ್ನು ಹಿಡಿದು ಅರಸನಿಗೆ ಒಪ್ಪಿಸಿದನು. ಆತ ಅವರನ್ನು ಕೊಲ್ಲಿಸದೆ ದೇಶ ಬಿಟ್ಟೋಡಿಸಿದನು. ತನ್ನ ಹೆಂಡತಿಯರನ್ನೂ ತಾಯಿಯರನ್ನೂ ಜೊತೆಯಲ್ಲಿ ಕರೆದುಕೊಂಡು ಅವರು ಗಜಪುರನೆಂಬ ಬೇರೊಂದು ಕಟ್ಟಣಕ್ಕೆ ಹೋಗಿ ನೆಲಸಿದರು. ಒಬ್ಬೊ ಬರೂ ಐನೂರು ಮಂದಿಗೆ ನಾಯಕರಾಗಿ ಪರದೇಶಗಳಲ್ಲಿ ಕದ್ದು ತಂದು ಭೋಗಗಳನ್ನನುಭವಿಸುತ್ತ ಸುಖವಾಗಿದ್ದರು. ಆಗ ವಿಶ್ವಾನುಭೋವನು ಧನ್ವಂತರಿಯನ್ನು ಕುರಿತು, “ ನಾನೊಂ ದನ್ನು ಕೇಳಿಕೊಳ್ಳುತ್ತೇನೆ. ಇಲ್ಲೆನ್ನದೆ ಒಪ್ಪಿಕೊಳ್ಳಬೇಕಣ್ಣಾ, ಅದೇ ನೆಂದರೆ ಮೊದಲಿನಂತೆ ಬಸದಿಗೆ ಹೋಗುವುದನ್ನೂ ನಿಷಿಗಳೊಡನೆ ಮಾತಾಡುವುದನ್ನೂ ಬಿಡು. ಏಕೆಂದರೆ ಅದರಿಂದ ನನ್ನು ಭೋಗಕ್ಕೆ ಜಿಡಿ” ಎಂದು ಒಡ-ಬಡಿಸಿ ಪ್ರತಿಜ್ಞೆ ಮಾಡಿಸಿದನು. ಒಂದು ದಿನ ಅವರಿಬ್ಬರೂ ಪಟ್ಟಣದಿಂದ ಹೊರಟು ಕೆರೆಗೆ ಹೋಗು ರುನಗ ಮದ್ದಾನೆಯೊಂದು ನಿರಂಕುಶವಾಗಿ ನುಗ್ಗಿ ಬರುತ್ತಿರಲು ಕಂಡು ಓಡತೊಡಗಿದರು. ಅತ್ತ ಇತ್ತ ಎಲ್ಲಿಯ ಬೇರೆ ಎಡೆಯಿಲ್ಲದ್ದರಿಂದ ಹತ್ತಿ ರದ, ಜಿನಾಲಯಕ್ಕೆ ಜೋಗಬೇಕಾಯಿತು, ಆನೆಯ ಭಯ ಕಳೆಯುವ ವರೆಗೂ ಇದ್ದು ಹೋಗಬೇಕೆಂದಿದ್ದರು. ಅಷ್ಟರಲ್ಲಿ ದೊಡ್ಡ ಮಳೆ ಬಂತು,