ಪುಟ:Kannada-Saahitya.pdf/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಿತ್ಯ೦ಕಳು ಕಘ ಮಳೆ ನಿಲ್ಲುವಷ್ಟರಲ್ಲಿ ಹೊತ್ತು ಮುಳುಗಿ ಕೊಟಿಯ ಬಾಗಿಲು ಹಾಕಿತು. ಆ ಮಹಾ ಪ್ರತಿಜ್ಞರಿಬ್ಬರೂ ರಾತ್ರಿ ಅಲ್ಲಿಯೇ ತಂಗಬೇಕಾಯಿತು. ತನ್ನ ಪ್ರತಿಜ್ಞೆಯನ್ನು ನೆನೆದು ಕಿವಿಗೆ ಹತ್ತಿ ಗಿಣಗಿಕೊಂಡು ಮಲಗಿದರು. ಆ ಬಸದಿಯಲ್ಲಿ ವರಧರ್ಮ ರೆಂಬ ಮುನಿಗಳು ಉಪವಾಸವಿದ್ದ ಭವ್ಯ ಜನಕ್ಕೆ ಧರ್ಮಬೋಧೆ ಮಾಡುತ್ತಿದ್ದರು. ಧನ್ವಂತರಿಗೆ ಎಚ್ಚರವಾಯಿತು. ವಿಶ್ವಾನುಲೋಮನನ್ನು ತಡವರಿಸಿ ನೋಡಿ ಅವನು ನಿದ್ದೆಯಲ್ಲಿ ಮೈಮರೆ ತಿರುವನೆಂದರಿತು ಕಿವಿಯ ಹತ್ತಿಯನ್ನು ತೆಗೆದು ಆಲಿಸಿದನು, “ ಧರ್ಮವನ್ನು ಮನಸ್ಸಿನಿಂದ ಕೇಳಲೊಲ್ಲದವನೆ ಕಿರಿಯ, ಆಯಿ ಲ್ಲದವನ ಬರಿಯ ” ಎಂಬ ಉಪದೇಶದ ಮಾತು ಕಿವಿಗೆ ಬಿತ್ತು. ಅವನಿಗೆ ಕರ್ಮ ಸವೆಯುವ ಕಾಲ ಒದಗಿ ಬಂದಿತ್ತು, ಅವನು ಭಟ್ಟಾರಕರ ಹತ್ತಿರ ಹೋಗಿ, “ ನನ ಗೊಂದು ವ್ರತವನ್ನು ಬಯಪಾಲಿಸಿ: ” ಎಂದು ಬೇಡಿಕೊಂಡನು. ದಿವ್ಯ ಜ್ಞಾನಿಗಳಾದ ಭಟಾರರು ಅವನು ಸನ್ಮಾರ್ಗಕ್ಕೆ ತಿರುಗುವನೆಂದರಿತರು. * ನಿತ್ಯವೂ ತರಟು ತಲೆಯನ್ನು ಕಂಡಲ್ಲದೆ ಊಟ ಮಾಡಬೇಡ " ಎಂದರು. ಹಾಗೆ ಮಾಡುವೆನೆಂದು ಧನ್ವಂತರಿ ವ್ರತ ತೊಟ್ಟನು. ಕೆಲವು ದಿವಸ ಕಳೆಯಿತು, ಒಂದು ದಿನ ಧನ್ವಂತರಿ ಊಟಕ್ಕೆ ಬಂದು ಕುಳಿತಾಗ ತಟಕ್ಕನೆ ಪ್ರತದ ನೆನಪಾಯಿತು. ಆ ದಿನ ವ್ರತವನ್ನು ಮರ ತದ್ದಕ್ಕೆ ನಾಚಿ ಎದ್ದನು. ಪಕ್ಕದ ಮನೆಯ ಕುಂಬಾರ ತರಟು ತಲೆಯವನು. ಅವನನ್ನು ನೋಡಹೋದನು. ಅವನು ಮನೆಯಲ್ಲಿರಲಿಲ್ಲ. ಹುಡುಕುತ್ತ ಮಣ್ಣ ಗುಂಡಿಯ ಬಳಿ ಹೋದನು, ದೂರದಲ್ಲಿ ಅವನ ಬೋಳು ತಲೆಯನ್ನು ಕಂಡು, “ ಕಂಡೆ ! ” ಎಂದು ಕೂಗಿ ಹಿಂದಕ್ಕೆ ಬಂದು ಊಟಮಾಡಿದನು, ಅದೇ ಹೊತ್ತಿನಲ್ಲಿ ಕುಂಬಾರನಿಗೆ ಹೂಳಿದ್ದ ನಿಧಿಯೊಂದು ಕಾಣಿಸಿತ್ತು. ಅದನ್ನೇ ಧನ್ವಂತರಿ ಕಂಡನೆಂದು ತಿಳಿದು ಕುಂಬಾರ ಭಯಪಟ್ಟು ನಡು ರಾತ್ರಿ ಯಲ್ಲಿ ಅದನ್ನು ತಂದೊಪ್ಪಿಸಿದನು. ಮುನಿಯ ಮಾತಿನಿಂದ ಇಷ್ಟಾಯಿತೆಂದು ನೆನೆದು ಧನ್ವಂತರಿ ಕುಂಬಾರನಿಗೆ ಸಾಕಾಗುವಷ್ಟನ್ನು ಕೊಟ್ಟು ಕಳಿಸಿ ನಿಧಿ ಯನ್ನು ತಾನಿಟ್ಟುಕೊಂಡನು. ಮರುದಿನ ಬಸದಿಗೆ ಹೋಗಿ ಭಟಾರರಿಗೆ ತನ್ನ ಲಾಭವನ್ನು ತಿಳಿಸಿ ಮತ್ತೊಂದು ವ್ರತವನ್ನು ಬೇಡಿದನು. ಅವರು, “ ಹಸರಯದ ಹಣ