ಪುಟ:Kannada-Saahitya.pdf/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

04 ಕನ್ನಡ ಸಾಹಿತ್ಯ ಚಿತ್ರಗಳು ಒಂದು ಸಲ ಕಳಿಂಗ ದೇಶಕ್ಕೆ ಕದಿಯ: ಹೋಗಿ ಆರು ತಿಂಗಳಿದ್ದು ಹಿಂದಿರುಗಿ ಬರುತ್ತಿದ್ದಾಗ ಧನ್ವಂತರಿಗೆ, “ ನಾನು ಹೆರರ ಹೆಂಡರಿಗೂ ಹಣಕೂ ಆಸೆಪಡು ಕಾಲ ಕಳೆದೆ. ನನ್ನ ಹೆಂಡರಿಗೂ ಹಣಕೂ ಆಸೆ ಪಡುವವರು ಯಾರಾದರೂ ಇರುವರೋ ಇಲ್ಲವೋ ನೋಡಬೇಕು. ಇದೊಂದು ಚೋದ್ಯ ” ಎನ್ನಿಸಿತು. ಊರಿಗೆ ಬಂದು ಕೆಲವು ಕಾಲ ವಿಲಾಸ ದಿಂದಿದ್ದು ಒಂದು ದಿನ ಪಯಣಿ ಹೊಗುವೆನೆಂದು ಹೇಳಿ ಮನೆಬಿಟ್ಟು ಹೊರೆ ಟನು. ಜಿನಮಂದಿರದಲ್ಲಿ ನಡುವಿರುಳಾಗುವವರೆಗೂ ಪೂಜೆಯನ್ನು ನೋಡು ತಿದ್ದು ತನ್ನ ಮನೆಗೆ ಬಂದನು. ವಿದ್ಯಾಬಲದಿಂದ ಬಾಗಿಲ ಕದವನ್ನು ತೆಗೆದು ಮೆಲ್ಲನೆ ಒಳಹೊಕ್ಕು ನೋಡಿದನು. ಹಾಸಿಗೆಯ ಮೇಲೆ ತನ್ನ ಹೆಂಡ ತಿಯ ಜೊತೆಯಲ್ಲಿ ಯಾರೋ ಮಲಗಿದ್ದದ್ದನ್ನು ಕಂಡು ಕೋಪವುಕ್ಕಿತು. ವ್ರತವನ್ನು ನೆನೆದು ಏಡಿ ಹಿಂದೆ ಸರಿದನು. ಅಷ್ಟರಲ್ಲಿ ಅವನ ಹೆಂಡತಿ ಎಚ್ಚತ್ತು “ ಸೆಕೆಯಾಗುತ್ತದೆ. ಅತ್ತೇ, ಅತ್ರ ಹೋಗಿ ” ಎಂದು ಹೊದಕೆಯನ್ನು ತೆಗೆದೆಸೆದಳು. ತಾಯಿ ಹೆಂಡತಿಯರಿಬ್ಬರನ್ನೂ ಕಂಡು ಧನ್ವಂತರಿ ಬೆರಗಾದನು. * ಮುನಿ ಕೊಟ್ಟ ವ್ರತವನ್ನು ನೆನೆದು ಒಳ್ಳೆಯದೆ ಆಯಿತು. ನೆನೆಯದೆ ಕೋಪದಿಂದ ಇರಿದಿದ್ದರೆ ತಾಯಿಯ ಗರ್ಭಿಣಿಯಾದ ಹೆಂಡತಿಯ ಸತ್ತು ನನಗೆ ಮಹಾ ಪಾತಕ ಸುತ್ತಿಕೊಳ್ಳುತ್ತಿತ್ತು. ಇಹ, ಪರ ಎರಡೂ ಕೆಡುತ್ತಿತ್ತು. ಎಲ್ಲ ವ್ರತಗಳಿಗಿಂತಲೂ ಈ ವ್ರತವೇ ಮೇಲು' ಎಂದು ಕೊಂಡನು. ಪರಮ ವೈರಾಗ್ಯವುಂಟಾಗಲು ಇದ್ದ ಹಣದಲ್ಲಿ ತಾಯಿಗೂ ಹೆಂಡತಿಗೆ ತಕ್ಕಷ್ಟನ್ನು ಕೊಟ್ಟು ಉಳಿದದ್ದನ್ನು ಬಡ ಶ್ರಾವಕರಿಗೂ ಜಿನ ಪೂಜೆಗೂ ಕೊಟ್ಟನು. ಬಳಿಕ ವರಧರ್ನು ಭಟ್ಟಾರಕರ ಬಳಿ ಹೋಗಿ ದೀಕ್ಷೆ ಕೊಡಬೇಕೆಂದು ಬೇಡಿದನು, ಅವರು, “ ಹುಟ್ಟಿದ ಕಡೆ ಹೊನ್ನು ಹೆಚ್ಚುತ್ತದೆ, ಹೋದ ಕಡೆ ತಪಸ್ಸು ಹೆಚ್ಚುತ್ತದೆ ಎಂದು ನಾಣ್ಣುಡಿಯಂಟು. ನೀನು ಇಲ್ಲಿ ತಪಸ್ಸು ಮಾಡ ಬೇಡ ” ಎಂದು ನುಡಿದು ತಮ್ಮ ಸಧರ್ಮಿಗಳಾದ ಶ್ರೀವರ್ಮ ಭಟ್ಟಾರಕ ರಿಂದ ದೀಕ್ಷೆ ಪಡೆಯು ಹೇಳಿ ಅವರಲ್ಲಿಗೆ ಕಳಿಸಿದರು. ಧನ್ವಂತರಿ ಮನೆಗೆ ಬಂದು, ವಿಶ್ಯಾನುಲೋಮನನ್ನು ತನ್ನಲ್ಲಿಗೆ ಕಳಿಸುವಂತೆ ತಾಯಿಗೆ ತಿಳಿಸಿ