ಪುಟ:Kannada-Saahitya.pdf/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ಲಾಗಲಿಲ್ಲ. ಆಗ ಆತನು ಮಿಥ್ಯಾತ್ವವನ್ನು ಬಿಟ್ಟು ಸಮೃಷ್ಟಿಯಾದನು. ಆಚ್ಯುತೇಂದ್ರನು ಬಂದು ನನಗೆ ನಮಸ್ಕಾರ ಮಾಡಿ, 4 ಸರ್ವ ದಿನ ಗಳಲ್ಲಿ ಆಕೃತ್ರಿಮ ಚೈತ್ಯಾಲಯಗಳಿಗೆ ಹೋಗಿ ಬರಲು ಸಹಕಾರಿಯಾಗು ಇದೆ ; ತೆಗೆದುಕೊಳ್ಳಿ” ಎಂದು ಪ್ರಾರ್ಥಿಸಿ ಒಡಂಬಡಿಸಿ ಈ ಗಗನಗಾಮಿನೀ ವಿಯನ್ನು ಕೊಟ್ಟು ದೇವಲೋಕಕ್ಕೆ ಹೋದನು. ವಾತ್ಸಲ್ಯದಿಂದ ನಾನಿ ದನ್ನು ನಮ್ಮ ದೇವಸ್ಥಾನದ ಮಣಿ ವರಸೇನನಿಗೆ ಕೊಟ್ಟೆನು, -ಹೀಗೆಂದು ಜಿನದತ್ತ ಸೆಟ್ಟ ಹೇಳಲು ಕೇಳಿ ಲಲಿತಾಂಗನು ಬೆರಗಾ ದನು. “ ಈತ ಕಿರುಕುಳ ಮನುಷ್ಯ, ಇವನಿಗೆ ದೇವತೆಗಳೂ ಎರಗಿದ ಕೆಂದರೆ, ಧರ್ಮಕ್ಕಿಂತ ದೊಡ್ಡದೇನೂ ಇಲ್ಲ” ಎಂದು ನಿಶ್ಯಂಕನಾಗಿ ನಂಬಿ ದನು. ನಂಬಿ ಜೈನ ದೀಕ್ಷೆ ಪಡೆದು ತಪಸ್ಸು ಮಾಡಿ ಮುಕ್ತನಾದನು. ಹಿನ್ನುಡಿ ಇದು ಧರ್ಮಾಮೃತವೆಂಬ ಗ್ರಂಥದಲ್ಲಿನ ಒಂದು ಕಥೆ, “ ಧರ್ಮವನ್ನು ಕೈಕೊಂಡು ನಡಸುವವನು ಸಂದೇಹ ಬಡಬಾರದು' ಎಂಬುದನ್ನು ಈ ಕಥೆಯಲ್ಲಿ ಒತ್ತಿ ಹೇಳಿದೆ. ಇದೇ ರೀತಿ ಜೈನ ಧರ್ಮದ ಮುಖ್ಯಾಂಶಗಳನ್ನೆಲ್ಲ ಈ ಗ್ರಂಥದಲ್ಲಿ ಒಂದೊಂದು ಕಥೆಯಲ್ಲಿ ವಿವರಿಸಿದೆ. - ಧರ್ಮಾಮೃತವನ್ನು ಬರೆದವನು ನಯಸೇನ, ಇವನು ಕ್ರಿ.ಶ. ೧೨ನೆಯ ಶತ ಮಾನದಲ್ಲಿದ್ದು, ಕನ್ನಡದಲ್ಲಿ ಸಂಸ್ಕೃತವನ್ನು ಬೆರಸುವುದನ್ನು ಇವನೊಪ್ಪುವು ದಿಲ್ಲ ; ಶುದ್ಧ ಕನ್ನಡದಲ್ಲಿ ಬರೆಯಬೇಕೆನ್ನುತ್ತಾ ನ. ಜನರಲ್ಲಿ ರೂಢಿಯಾಗಿರುವ ಸಂಸ್ಕೃತ ಮಾತುಗಳನ್ನೂ ಗಾದೆಗಳನ್ನೂ ಸೇರಿಸಿಕೊಂಡು ಕನ್ನಡದ ಬಳಿಕ ಮಾತಿನ ಶೈಲಿಯಲ್ಲಿ ಸಾಮಾನ್ಯ ಜನರಿಗೆ ಅರ್ಥವಾಗುವಂತೆ ತಾನು ಗ್ರಂಥರಚನೆ ಮಾಡಿದ್ದಾನೆ. ಇಂಥ ಗ್ರಂಥದಲ್ಲಿ ಬೇರೆ ಮತಧರ್ನುಗಳ ವಿಮರ್ಶೆ ಬರುವುದು ಸಹಜ, ಬರ ದಾಗ ಜನರ ಮನ ನೋಯುವಂತ ಕಟುವಾಗಿ ಬರೆಯದ ಜೈನಧರ್ಮದ ಪ್ರಭಾವ ದನ್ನು ಎತ್ತಿ ತೋರಿಸುವುದನ್ನು ಮಾತ್ರ ಗುರಿಯಾಗಿಟ್ಟು ಕೊಂಡಿದ್ದಾನೆ. ಸುಲಭ ಶೈಲಿಯ ಈ ಗ್ರಂಥ ಈ ಕಾಲದಲ್ಲಿ ಜನರಂಜಕವಾಗಿತ್ತೆಂದು