ಪುಟ:Kannada-Saahitya.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

fity ಮಾಡುತ್ತಿರುವುದೆಂದು ತಿಳಿದು ಹೂಡಿ ಹಿಡಿದಿದ್ದ ೬೦ಬನ್ನು ಎಳೆದು ಬಿಟ್ಟೆ, ಆಕ್ಷಣವೆ ಆ ಕಡೆಯಿಂದ ಆರ್ತನಾದ ಕೇಳ ಬಂತು. " ಶಂಕರಾ ! ಸದಾ ಶಿವಾ !' ಎಂದು ನೋಂದು ಕೂಗಿ ಯಾರೋ ಬಿದ್ದಂತಾಯಿತು. ಕೂಡಲೆ ಬಿಲ್ಲನ್ನಲ್ಲಿಯೇ ಎಸೆದ ಬಿಟ್ಟು ದನಿ ಬಂದ ಕಡೆಗೋಡಿದೆನು, ಅಲ್ಲಿ ನೆಲದ ಮೇಲೆ ಕಡೆದಿದ್ದ ಮುನಿಕುಮಾರನನ ಕಂಡೆನು ಕಂಡು ಎದೆ ಕದಡಿಹೋಯಿತು. ಸುತ್ತಿಕೊಂಡ ಸಾಸಕ್ಕೆ ಮನಸ್ಸು ಬೆದಬದನೆ ಬೆಂದು ಹೋಯಿತು. ನಡುನಡುಗುತ್ತ ಅವನನ್ನು ಮಾತಾಡಿಸಿದೆನು : 'ನೀನು ಯಾರು ? ನರನೋ, ನಿಶಾಚರನೋ? ನಿಜ ಹೇಳು " ಎಂದು ಕೇಳಿದನು. ಆತ, ನಾವು ನರರು ; ವೈಶ್ಯರು, ತೀರ್ಥಯಾತ್ರೆಗಾಗಿ ಸುತ್ತು ತಿದ್ದೆವು. ಯಾರಾದರೇನು ? ಇನ್ನು ನನಗೆ ಇಲ್ಲಿಯ ಮಣ ಹರಿಯಿತು. ನನಗೆ ಬಲು ಮುಪ್ಪಿನ ತಂದೆ ತಾಯಿಗಳಿದ್ದಾರೆ. ಅಲಸದೆ ಅವರ ಶುಶ್ರ ಮಾಡುತ್ತಿದ್ದೆ, ಅವರನ್ನು ಹೊತ್ತು ಎಲ್ಲ ತೀರ್ಥಕ್ಷೇತ್ರಗಳನ್ನೂ ದರ್ಶನ ಮಾಡಿಸಿದೆ. ಕಾಶಿಯೊಂದುಳಿಯಿತು. ಅವರನ್ನು ಕಾಶಿಗೆ ಕರೆದುಕೊಂಡು ಹೋಗಬೇಕೆಂದು ಮಾಡಿಕೊಂಡಿದ್ದೆ. ಆ ಸಂಕಲ್ಪ ನಿಲುಕದಾಯಿತು. * ದೈವಗತಿ ಬೇರೆ ಇತ್ತು” ಎಂದು ನೊಂದು ನುಡಿದನು. ಅವನೇ ತಾಂಡವ ಮುನಿ, ತಂದೆತಾಯಿಗಳ ಸೇವೆಯಲ್ಲಿ ತೊಡಗಿ ಹಣ್ಣು ಮುದುಕರಾದ ಅವರನ್ನು ಕಾವಡಿಯಲ್ಲಿ ರೂಪಿಸಿ ಹೊತ್ತು ತೀರ್ವ ಯಾತ್ರೆಯಲ್ಲಿ ತೊಳಲುತ್ತಿದ್ದನು. ಆ ರಾತ್ರಿ ಕಾಡಿನ ನಡುವೆ ಅವರು ನೀರು ಬೇಕನ್ನಲು ಕಾವಡಿಯನ್ನಿ ೪ಸಿ ಚರ್ಮದ ತಂಬಿಗೆಯನ್ನು ತೆಗೆದುಕೊಂಡು ನೀರು ಹುಡುಕುತ್ತ ಬಂದು ನನ್ನ ಬಾಣಕ್ಕೆ ಗುರಿಯಾಗಿದ್ದನು. ನನ್ನ ಮಾತಿನ ಸರಣಿಯಿಂನ ನಾನು ದೊರೆಯೆಂದು ತಿಳಿದನು. ನನ್ನ ಮನಸ್ಸಿನ ಸಂಕಟವನ್ನರಿತು, " ಏಕೆ ಚಿಂತಿಸುತ್ತೀಯೆ ? ಯಾರ ಆಯಸ್ಸನ್ನು ಯಾರು ಮುಗಿಸಬಲ್ಲರು ? ಆತ್ಮನಿಗೆ ಅಳಿವಿಲ್ಲ. ಮಾಯೆಯ ತೆರೆ ಆತ್ಮಜ್ಯೋತಿ ಯನ್ನು ಮರೆಮಾಡಿರುತ್ತದೆ, ಅಷ್ಟೆ. ಇದಕ್ಕೆ ಸೀನಳುಕಬೇಡ ” ಎಂದು ನನಗೆ ಸಮಾಧಾನ ಹೇಳಿದನು.

  • ಆಯ್ತಾ ರಾಜಾ, ಹಲವು ಮಾತೇಕೆ ? ನಮ್ಮ ತಾಯಿಯನ್ನು ಸಲಹು ; ತಾತನನ್ನು ಕಾಪಾಡು. ನಿನಗೆ ಅಕ್ಷಯ ಫಲ ದೊರೆಯುವುದು,